ಪ್ರತಿಯೊಂದು ಅವಿಭಕ್ತ ಕುಟುಂಬಗಳ ಹಾಗೆ ಕಾಂಗ್ರೆಸ್‌ ಕುಟುಂಬದಲ್ಲೂ ಯಾವುದೂ ಸರಿಯಾಗಿಲ್ಲ. ಒಮ್ಮೆ ಒಬ್ಬ ಸೊಸೆ ಮುನಿಸಿಕೊಂಡು ತನ್ನದೇ ಹೊಸ ಕುಟುಂಬ ಮಾಡಿಕೊಂಡರೆ, ಇನ್ನೊಮ್ಮೆ ಮಗ ಬೇರೆ ಜಾತಿಯವಳೊಂದಿಗೆ ಮದುವೆ ಮಾಡಿಕೊಂಡು ಪ್ರೀತಿಯ ಸಂಬಂಧ ಮುರಿದುಕೊಳ್ಳುತ್ತಾನೆ. ಮತ್ತೊಮ್ಮೆ ಸೋದರ ಬೇರೆ ಅಂಗಡಿ ತೆರೆದು ಅವಿಭಕ್ತ ಕುಟುಂಬಕ್ಕೇ ಸವಾಲೊಡ್ಡತೊಡಗುತ್ತಾನೆ. ಅವಿಭಕ್ತ ಕುಟುಂಬ ನಡೆಸಿಕೊಂಡು ಹೋಗುವುದು ಎಷ್ಟು ಕಠಿಣ ಕೆಲಸವೆಂದರೆ, ರಾಜಕೀಯ ಪಕ್ಷ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ ಪಕ್ಷ ನಡೆಸಿಕೊಂಡು ಹೋಗುವಷ್ಟು, ಅದು ಬಹುದೊಡ್ಡ ಮನೆ, ಇಲ್ಲಿ ಒಬ್ಬೊಬ್ಬರ ಕಾಲುಗಳು ಒಂದು ಕಡೆ, ಪರಿಸ್ಥಿತಿ ಗಂಭೀರ ಆದರೆ ಹೆಸರು ಇನ್ನೂ ಇದೆ.

ಪಂಜಾಬ್‌ ನಲ್ಲಿ ಕ್ಯಾ. ಅರವಿಂದರ್‌ ಸಿಂಗ್‌ ರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತು ಹಾಕುವುದು, ಗೋವಾದಲ್ಲಿ ಮಾಜಿ ಮಂತ್ರಿ ಹೊರಟು ಹೋಗುವುದು ಅಥವಾ ಉತ್ತರ ಭಾರತದ ವ್ಯಾಪಾರ ಭಾರತೀಯ ಜನತಾ ಪಾರ್ಟಿಯ ವಶವಾಗುವುದು ಈ ಅವಿಭಕ್ತ ಕುಟುಂಬಕ್ಕೆ ಸವಾಲೇ ಸರಿ. ಆದರೆ ಈ ಕುಟುಂಬದಲ್ಲಿ ಒಂದಿಷ್ಟು ಅಂಟಿನ ನಂಟು ಇದೆಯೆಂದರೆ, ಅದು ಅವಿಭಕ್ತ ಕುಟುಂಬ ಮಾರುಕಟ್ಟೆಯನ್ನು ಸದಾ ಜಾಗೃತ ಸ್ಥಿತಿಯಲ್ಲಿರುತ್ತದೆ, ತಾನಿದ್ದೀನೆಂದರೆ, ಏನಾದರೂ ಆಗಿಯೇ ಆಗುತ್ತದೆ ಹಾಗೂ ಹೊಸಬರಾರೂ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಆಗಲಾರದು.

ಈ ಕುಟುಂಬದಲ್ಲಿ ಜಾತಿ ಧರ್ಮದ ಭೇದಭಾವ ಇಲ್ಲವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ನ ಭವಿಷ್ಯ ಅಷ್ಟೊಂದು ಕೆಟ್ಟದೆಂದು ಅನಿಸುವುದಿಲ್ಲ. ಏಕೆಂದರೆ ಬೇರೆ ಅವಿಭಕ್ತ ಕುಟುಂಬ ಮಂದಿರ ನಿರ್ಮಿಸಿ ಮಾರುಕಟ್ಟೆಯನ್ನು ಲೂಟಿ ಮಾಡಿದೆ. ಅದು ಮುಂದೇನೊ ಇದೆ. ಆದರೆ ಮಂದಿರ ಹಣ ಸ್ವಾಹಾ ಮಾಡುತ್ತದೆ, ಅದು ಏನೂ ಕೊಡುವುದಿಲ್ಲ. ಹೀಗಾಗಿ ಜನ ಒಂದಷ್ಟು ನಿರಾಶರಾಗಿದ್ದಾರೆ.

ಭಾರತೀಯ ಜನತಾ ಪರಿವಾರದಲ್ಲಿ ಪುರೋಹಿತಶಾಹಿ ಎಷ್ಟು ಪ್ರಬಲವಾಗಿದೆಯೆಂದರೆ, ಅಲ್ಲಿ ಮಹಾಪುರೋಹಿತನದ್ದೇ ದರ್ಬಾರು ಇಲ್ಲವೇ ಆ ಇಬ್ಬರದ್ದು, ಕೇವಲ ಇಬ್ಬರು, ಮಹಾ ಶಿಷ್ಯರದ್ದು. ಉಳಿದವರೆಲ್ಲ ಕುಟುಂಬದ ವ್ಯಾಪಾರದ ಲಾಭ ಪಡೆಯಬಹುದು. ಆದರೆ ಮುಟ್ಟಲಾಗದು. ಇಲ್ಲದಿದ್ದರೆ ಅವರನ್ನು ಮೇನಕಾ ವರುಣ್‌ ಗಾಂಧಿ ಹಾಗೆ ಹೊರಗಿನ ಕೋಣೆಯಲ್ಲಿ ಕೂರಿಸಲಾಗುತ್ತದೆ.

ಈ ಭಾರತೀಯ ಪಾರ್ಟಿ ಪರಿವಾರದ ಕೊಡುಗೆ ಕೂಡ ಏನಿಲ್ಲ. ಅಲ್ಲಿ ಚಿಟ್‌ ಫಂಡ್‌ ಕಂಪನಿಗಳ ಹಾಗೆ ಭಾರಿ ಬಡ್ಡಿಯ ಕನಸು ತೋರಿಸಲಾಗುತ್ತದೆ. ಅದರ ಬಲದ ಮೇಲೆ ಒಂದಿಷ್ಟು ವಿಮಾನಗಳನ್ನು, ಭವನಗಳನ್ನು ನಿರ್ಮಿಸಲಾಯಿತು.

joint-family-2

ಆದರೆ ಅದರ ಹಿಂದೆ ಮನೆಯ ಆಸ್ತಿ, ಸಂಪತ್ತು ಮಾರಲಾಗುತ್ತಿದೆ. ಈ ಅಂಗಡಿಗೆ ಗ್ರಾಹಕರು ಹೆಚ್ಚು. ಆದರೆ ಒಳ್ಳೆಯ ಪ್ಯಾಕಿಂಗ್ ನಲ್ಲಿ ಅವರಿಗೆ ಹಳಸಿದ, ಕೆಟ್ಟುಹೋದ, ಚಲಾವಣೆಯಾಗದ ಸರಕು ಸಿಗುತ್ತಿದೆ. ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಈ ಪರಿವಾರದಲ್ಲಿ ಯಾರೊಬ್ಬರಿಗೂ ವ್ಯಾಪಾರ ಮಾಡಲು ಬರುವುದಿಲ್ಲ. ಎಲ್ಲರೂ ಭಜನೆ ಪೂಜೆಯಲ್ಲಿ ಮಗ್ನರಾಗಿರುತ್ತಾರೆ.

ಭಾರತೀಯ ಜನತಾ ಪರಿವಾರ ಸಾಕಷ್ಟು ಪಾರ್ಟಿ ನೀಡಿತು. ಸಾಕಷ್ಟು ಬಣ್ಣ ಸುಣ್ಣ ಮಾಡಿ ಮನೆಯನ್ನು ಹೊಳೆಯುವಂತೆ ಮಾಡಿತು, ಹೆಸರೇನೋ ಆಯಿತು. ಆದರೆ ಕಾಂಗ್ರೆಸ್‌ ನ ಬಿರುಕುಬಿಟ್ಟ ಮನೆಯ ಹಾಗೆ, ದೊಡ್ಡ ಗೋಡೆಯನ್ನು ನಿರ್ಮಿಸಲಿಲ್ಲ. 1707ರಲ್ಲಿ ಮೊಘಲ್ ಸಾಮ್ರಾಜ್ಯ ಪತನಗೊಂಡರೂ, ಕೆಂಪು ಕೋಟೆ 1857ರ ತನಕ ದೇಶದ ಮುಂದಾಳತ್ವ ನಡೆಸಿತು. ಆಂಗ್ಲರು ನಿರ್ಮಿಸಿದ್ದ ಕೊಲ್ಕತ್ತಾ, ಮುಂಬೈನಲ್ಲಿ ಆ ಬಲ ಇರಲಿಲ್ಲ. 1947ರಲ್ಲಿ ಕೆಂಪುಕೋಟೆ ಕಟ್ಟಡ ಪುನಃ ಸ್ವಾತಂತ್ರ್ಯದ ಗುರುತಾಯಿತು.

ಕಾಂಗ್ರೆಸ್‌ ಪರಿವಾರ ಹಾಗೂ ಭಾರತೀಯ ಜನತಾ ಪರಿವಾರ ಈ ಎರಡರಲ್ಲೂ ಈಗ ನೇತೃತ್ವದ ಕೊರತೆ ಇದೆ. ಒಂದರಲ್ಲಿ ಸಾಕ್ಷರರಿದ್ದಾರೆ, ಇನ್ನೊಂದರಲ್ಲಿ ಶ್ರೀಮಂತ ಅಂಧ ಭಕ್ತರು. ಮಾರುಕಟ್ಟೆಯಲ್ಲಿ ಇಬ್ಬರ ಅಂಗಡಿಗಳು ಇವೆ, ವ್ಯಾಪಾರವಿದೆ. ಆದರೆ ಗ್ರಾಹಕರು ಇಬ್ಬರಿಂದಲೂ ಸಂತೃಪ್ತಿಯಿಂದಿಲ್ಲ.

ಕಾಂಗ್ರೆಸ್‌ ಪರಿವಾರದಲ್ಲಿ ಇತ್ತೀಚೆಗೆ ಪುನರ್ನಿರ್ಮಾಣ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ಈ ಕುಟುಂಬದಿಂದ ಚೆಲ್ಲಾಪಿಲ್ಲಿಯಾದವರಿಂದಲೇ ದೊಡ್ಡ ಸವಾಲು ಎದುರಾಗಿದೆ. ಇದರ ಮುಖ್ಯಸ್ಥೆ ಸೋನಿಯಾ ಗಾಂಧಿ ತಿಳಿವಳಿಕೆಯುಳ್ಳವರು. ಉದಾರ ಮನೋಭಾವದವರು, ಅನುಭವಿಗಳು ಆದರೆ ಅನಾರೋಗ್ಯಪೀಡಿತರು. ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ್ ‌ಇನ್ನೂ ಕೈಕಾಲು ಹೊಡೆಯುತ್ತಿದ್ದಾರೆ.

ಭಾರತೀಯ ಜನತಾ ಪರಿವಾರದ ಆಂತರಿಕ ಸ್ಥಿತಿ ಇನ್ನೂ ಕೆಟ್ಟದ್ದಾಗಿದೆ. ಅಲ್ಲಿ ಪುರೋಹಿತರು ದೂರ ಕುಳಿತು ಆದೇಶ ನೀಡುತ್ತಿರುತ್ತಾರೆ. ಮುಖಂಡನಿಗೆ ಮಾತೇ ಬಂಡವಾಳ. ಎರಡನೇ ಕ್ರಮಾಂಕದ ಮುಖ್ಯಸ್ಥ ಸ್ವಲ್ಪ ದರ್ಪದ ಸ್ವಭಾವದವನು. ಲಖಿಮ್ ಪುರ ಕಿರಿಯ ಸಂಸದ ಹಾಗೂ ಅವರ ಮಗನ ಹಾಗೆ ಉಗ್ರ.

ನೀವು ಕೂಡ ಅವಿಭಕ್ತ ಕುಟುಂಬದಲ್ಲಿದ್ದರೆ, ಅದರಲ್ಲಿ ಬಿರುಕುಗಳ ಕಾಣಿಸಿಕೊಂಡಿದ್ದರೆ ಈ ಪಾರ್ಟಿಗಳತ್ತ ಒಮ್ಮೆ ದೃಷ್ಟಿ ಬೀರಿ. ಅವುಗಳಿಂದ ನಿಮಗೆ ಬಹಳಷ್ಟು ಕಲಿಯಲು ಸಿಗುತ್ತದೆ. ಅದನ್ನು ತಿಲಕಧಾರಿಗಳಾಗಲಿ ಕಪ್ಪು ಕೋಟಿನವರಾಗಲಿ ಹೇಳಲು ಸಾಧ್ಯವಿಲ್ಲ. ನಿಮ್ಮ ದೃಷ್ಟಿಯನ್ನು ಚಿಕ್ಕ ಅಂಗಡಿಗಳ ಮೇಲೂ ಹರಿಸಿ. ಪ್ರತ್ಯೇಕ ಮನೆಯಲ್ಲಿರುವುದು ಸರಿಯೇ ಅಥವಾ ತುಂಬಿದ ಮನೆಯಲ್ಲಿರುವುದು, ಅಲ್ಲಿ ಕೊನೆಯತನಕ ಯಾರಾದರೂ ಜೊತೆಗಿರುತ್ತಾರೆ.

ಆಘಾತದ ಅರಿವು ಆರಂಭ

ಮತದಾನದ ಹಕ್ಕಿನ ಆಧಾರದ ಮೇಲೆ ಸದ್ಯದ ಸರ್ಕಾರದಂತಹ ಹಠಮಾರಿ ಮತ್ತು ಅಹಂಕಾರಿಗೆ ತಕ್ಕ ಪಾಠ ಕಲಿಸಬಹುದು ಎಂಬುದನ್ನು ವಿಧಾನಸಭೆಯ ಉಪಚುನಾಣೆಯ 30 ಹಾಗೂ ಲೋಕಸಭೆಯ 3 ಕ್ಷೇತ್ರಗಳು ತೋರಿಸಿಕೊಟ್ಟಿವೆ. ಅದು ಪ್ರತಿ 48 ಗಂಟೆಗೊಮ್ಮೆ ಡೀಸೆಲ್ ‌ಮತ್ತು ಪೆಟ್ರೋಲ್ ದರವನ್ನು ಹೆಚ್ಚಿಸುತ್ತಾ ಹೊರಟಿತ್ತು. ಅದು ಒಮ್ಮೆಲೆ ಜಾಗೃತಗೊಂಡು ಕೇಂದ್ರದ ಎಕ್ಸೈಜ್‌ ಡ್ಯೂಟಿಯನ್ನು ಕಡಿಮೆಗೊಳಿಸಿತು. ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರ್ಕಾರಗಳು ವ್ಯಾಟ್‌ ಕಡಿಮೆ ಮಾಡಿದವು. ಪ. ಬಂಗಾಳ, ಹಿಮಾಚಲ ಪ್ರದೇಶ, ರಾಜಾಸ್ಥಾನ, ಹರಿಯಾಣ, ದಾದ್ರಾ ನಗರ, ಹೀಲಿಗಳಲ್ಲಿ ಬಿಜೆಪಿಗೆ ಭಾರಿ ಪೆಟ್ಟು ಬಿತ್ತು.

ಒಂದು ವೇಳೆ ಸರ್ಕಾರ ಚಾರ್‌ ಧಾಮ್, ರಾಮಮಂದಿರ, ಕಾಶ್ಮೀರ, ನಾಗರಿಕ ತಿದ್ದುಪಡಿ ಮಸೂದೆ ಮುಂತಾದವುಗಳ ಮುಖಾಂತರ ನಾಗರಿಕರ ಮನೆಗಳಲ್ಲಿ ಊಟ ಮಾಡಲು ಯಶಸ್ವಿಯಾಗಿದ್ದರೆ, 2-3 ವರ್ಷಗಳಲ್ಲಿ ದೇಶದಲ್ಲಿ ಹಸಿವಿನಿಂದ ಸಾವು ಉಂಟಾಗುತ್ತಿತ್ತು. ಭಾರತ ಸರ್ಕಾರಕ್ಕೆ ಪ್ರಸ್ತುತ ತನ್ನ ಪ್ರತಿಷ್ಠೆ ಕಾಯ್ದುಕೊಳ್ಳಲು, ಮೂಢನಂಬಿಕೆ ಪಸರಿಸಲು ಹಾಗೂ ತನ್ನ ಐಷಾರಾಮಿಗಳಿಗೆ ಖರ್ಚು ಮಾಡುವುದರ ಹೊರತು ಬೇರೇನೂ ಕಾಣಿಸುವುದಿಲ್ಲ.

ಸರ್ಕಾರ ಕೋವಿಡ್‌ ನ್ನು ಎದುರಿಸಲು ವ್ಯಾಕ್ಸಿನೇಷನ್‌ ನ ಶ್ರೇಯಸ್ಸನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತದೆ. ಅದೂ ಕೂಡ ಏಕೆಂದರೆ, ಈ ಸರ್ಕಾರ ಬರುವುದಕ್ಕಿಂತ ಮುಂಚೆ ಈ ದೇಶದಲ್ಲಿ ಔಷಧಿ ಉದ್ಯಮ ತನ್ನ ಅಸ್ತಿತ್ವ ಕಂಡುಕೊಂಡಿತ್ತು.

ಕೋವಿಡ್‌ ಹದ್ದು ಮೀರಿದಾಗ ಸರ್ಕಾರದ ಸ್ಥಿತಿ ಅಯೋಮಯವಾಗಿತ್ತು. ಅದೇ ಸರ್ಕಾರದ ಬಂಡವಾಳವನ್ನು ಬಯಲು ಮಾಡಿತು. ಆ ಬಳಿಕ ಸರ್ಕಾರ, ಆಕ್ಸಿಜನ್‌ ನಿರ್ಮಿಸುವ ಕಾರ್ಖಾನೆ ಸ್ಥಾಪನೆ ಮಾಡಲಿಲ್ಲ, ಜನತೆಯ ತೆರಿಗೆಯಿಂದ ಹಣ ಕಸಿದುಕೊಂಡು ಅದನ್ನು ಅವರಿಗಾಗಿ ವಿನಿಯೋಗಿಸಲಿಲ್ಲ. ಧರ್ಮದ ಅಂಗಡಿಗಳು ಚೆನ್ನಾಗಿ ನಡೆಯುವಂತೆ ವಿಶಾಲಲಾದ ವಿಮಾನಗಳನ್ನು ಖರೀದಿಸಲು, ಭವ್ಯ ಕಟ್ಟಡ ನಿರ್ಮಿಸಲು ಬಳಸಿಕೊಂಡಿತು. ಅದರ ಉಪಯೋಗ ಧರ್ಮದ ಗುತ್ತಿಗೆದಾರರಿಗೆ ಆಗುತ್ತದೋ ಇಲ್ಲವೋ, ಅದರ ಸಮರ್ಥನೆಯ ಮೇರೆಗೆ ಗೆದ್ದ ಶಾಸಕರು ಸಂಸದರಿಗೆ ಆಗುತ್ತದೆ. ಹೆಚ್ಚುತ್ತಿರುವ ನಿರುದ್ಯೋಗ, ದುಬಾರಿಯಾಗುತ್ತಿರುವ ಶಿಕ್ಷಣ, ಗೃಹಬಳಕೆ ವಸ್ತುಗಳ ಬೆಲೆಯೇರಿಕೆ, ಅಸುರಕ್ಷಿತ ಭಾವನೆಯ ಬಗ್ಗೆ ಸರ್ಕಾರ ಏನೂ ಮಾಡುತ್ತಿಲ್ಲ. ದೇಶದ ಜೈಲುಗಳು ಕೂಡ ಸರ್ಕಾರದ ಬಂಡವಾಳ ಬಯಲು ಮಾಡುವುದರಿಂದ ತುಂಬುತ್ತಿವೆ. ಕೊಲೆಗಡುಕರು, ಲೂಟಿಕೋರರಿಂದ ಅಲ್ಲ, ಭಗವಾ ಧ್ವಜದಡಿ ದೇಶದ ಎಲ್ಲ ಉಪದ್ರವಿಗಳು ಜಮೆಗೊಳ್ಳುತ್ತಿದ್ದಾರೆ. ಆದರೆ ಸರ್ಕಾರ ಅವರಿಗೆ ಹಣವನ್ನಷ್ಟೇ ನೀಡುತ್ತಿಲ್ಲ. ಅವರಿಗೆ ರಕ್ಷಣೆ ಕೂಡ ನೀಡುತ್ತಿದೆ. ಏಕೆಂದರೆ ಅವರಿಗೆ ಇರುವುದು ಮೋಜಿನ ಭರವಸೆ.

ಉಪಚುನಾವಣೆ ನೀಡಿದ ಆಘಾತವನ್ನು ಈ ಹಿಂದೆ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಸೋಲು ಕೂಡ ನೀಡಿರಲಿಲ್ಲ. ಒಂದು ವೇಳೆ ಮಹಿಳೆಯರಿಗೆ ತಮ್ಮ ಕುಟುಂಬವನ್ನು ಕಾಪಾಡಿಕೊಳ್ಳಲೇಬೇಕಿದ್ದರೆ ಸರ್ಕಾರದ ಗುಣಗಾನ ಮಾಡುವುದನ್ನು ನಿಲ್ಲಿಸಬೇಕು. ಸರ್ಕಾರ ಯಾವುದೇ ಇರಲಿ, ಯಾವುದೇ ಪಕ್ಷದ್ದಿರಲಿ, ಮೊದಲು ಅದರ ಕೊರತೆಗಳನ್ನು ಗಮನಿಸಿ. ಪ್ರತಿಯೊಂದು ಸರ್ಕಾರ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತದೆ. ಜನರ ಒತ್ತಡವಿದ್ದಲ್ಲಿ ಮಾತ್ರ ರಸ್ತೆ, ಶಾಲೆ, ಆಸ್ಪತ್ರೆ, ಕಾರ್ಖಾನೆ ಮುಂತಾದವುಗಳ ಸ್ಥಾಪನೆ ಸಾಧ್ಯವಾಗುತ್ತದೆ.

ನಿಸರ್ಗದೊಂದಿಗೆ ಚೇಷ್ಟೆ

ನಗರವಾಸಿಗಳ ಕಪಿಮುಷ್ಟಿಯಿಂದ ಮುಕ್ತಿ ಪಡೆಯುವ ಅಪೇಕ್ಷೆ ಹಾಗೂ ಧರ್ಮದ ಅಂಗಡಿಕಾರರ ಭಕ್ತಿಯ ಹೆಸರಿನಲ್ಲಿ ಲೂಟಿ ಮಾಡುವ ಲಾಲಸೆಯ ಅಭ್ಯಾಸದ ಒಟ್ಟಾರೆ ಪರಿಣಾಮ ಹಿಮಾಲಯದ ವಿಕಾಸದ ಹೆಸರಿನಲ್ಲಿ ನಡೆಯುತ್ತಿರುವ ರಸ್ತೆಗಳು ಹಾಗೂ ಮರಗಳ ಹನನವಾಗಿದೆ. ಅಲ್ಲಿ ಒಂದಿಷ್ಟು ಮಳೆಯಾದರೂ ಸಾಕು ಭೂಕುಸಿತ ಉಂಟಾಗುತ್ತದೆ. ಪರ್ವತಗಳ ಇಳಿಜಾರನ್ನು ಬಳಸಿಕೊಂಡು ನಿರ್ಮಿಸಿದ ರಸ್ತೆಗಳು ಮುಚ್ಚಿಬಿಡುತ್ತವೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಇಚ್ಛೆ ಪ್ರತಿಯೊಂದು ಪರ್ವತ ಪ್ರದೇಶಕ್ಕೂ ಇದೆ. ಏಕೆಂದರೆ ಇದರಿಂದ ಹೆಚ್ಚುವರಿ ಆದಾಯ ಬರುತ್ತದೆ.

ಪ್ರವಾಸಿಗರು ಸುತ್ತಾಡಲೆಂದು ಬರಲಿ ಅಥವಾ ಧರ್ಮಪ್ರಚಾರಕ್ಕೆಂದು ಅಥವಾ ಪುಣ್ಯಾರ್ಜನೆಗೆಂದು, ಪ್ರತಿಯೊಬ್ಬರೂ ಬಗೆಬಗೆಯ ಸೌಲಭ್ಯಗಳನ್ನು ಅಪೇಕ್ಷಿಸುತ್ತಾರೆ. ಅವರಿಗೆ ತಾವಿಳಿದುಕೊಂಡ ಹೋಟೆಲ್ ‌ತನಕ ರಸ್ತೆ ಬೇಕು ಹಾಗೂ ಧರ್ಮದ ಐಷಾರಾಮಿ ಅಂಗಡಿಗಳಿಗೂ ಕೂಡ.

ಇದರ ಫಲಶೃತಿ ಮರಗಳ ಹನನ, ಜಮೀನು ಸಮತಟ್ಟು ಮಾಡಿ ನಿರಂತರ ಪರ್ವತಗಳ ಸೌಂದರ್ಯ ಹಾಳುಗೆಡವಲಾಗುತ್ತಿದೆ. ಮೊದಲು ರಾತ್ರಿ ಹೊತ್ತು ಪರ್ವತಗಳಲ್ಲಿ ಗಾಢ ಅಂಧಃಕಾರ ಇರುತ್ತಿತ್ತು. ಈಗ ಅಲ್ಲಿ ವಿದ್ಯುತ್‌ ಬೆಳಕು ಗೋಚರಿಸುತ್ತದೆ. ಪರ್ವತಗಳ ನೈಸರ್ಗಿಕ ಸೌಂದರ್ಯ ಈಗ ಹಳೆಯ ಫೋಟೋಗ್ರಾಫ್‌ ನಲ್ಲಿ ಕಂಡುಬರುತ್ತದೆ.

ಶಿಮ್ಲಾ, ನೈನಿತಾಲ್‌, ಮಸ್ಸೂರಿ, ಡಾರ್ಜಿಲಿಂಗ್‌ ಈಗ ದೆಹಲಿ, ಮುಂಬೈನಂತಾಗಿಬಿಟ್ಟಿವೆ. ಹಾಗೆಂದೇ ಜನರು ಪ್ರವಾಸಿ ಸ್ಥಳಗಳಿಗೆ ಧಾವಿಸುತ್ತಾರೆ. ಅದರ ಲಾಭ ಪಡೆಯಲೆಂದೇ ಧರ್ಮದ ಅಂಗಡಿಕಾರರು ವೈಷ್ಣೋದೇವಿ, ಕೇದಾರ್‌ ನಗರ, ಬದ್ರೀನಾಥ್‌, ಚಾರ್ ಧಾಮ್ ಯಾತ್ರಾ, ಗಂಗೋತ್ರಿ, ಯಮುನೋತ್ರಿ ಅಭಿವೃದ್ಧಿಪಡಿಸಿದರು. ಏಕೆಂದರೆ ನಗರ ಜೀವನಕ್ಕೆ ಬೇಸತ್ತು ಬಂದವರಿಂದ ಧರ್ಮದ ಹೆಸರಿನಲ್ಲಿ ಭಾರಿ ಮೊತ್ತ ವಸೂಲಿ ಮಾಡಲು ಸಾಧ್ಯವಾಗಬೇಕು.

ಭಾಜಪಾ ಪರಿವಾರ ಈ ವ್ಯಾಪಾರಿ ಪ್ರವೃತ್ತಿ ಹೆಚ್ಚಿಸಲು ಎಲ್ಲಿ ರಸ್ತೆ ನಿರ್ಮಿಸಬಾರದೊ, ಅಲ್ಲಿ ರಸ್ತೆ ನಿಮಿಸುತ್ತಿದೆ. ದುರ್ಬಲ ಪರ್ವತಗಳಲ್ಲಿ ಸುರಂಗ ನಿರ್ಮಿಸುತ್ತಿದೆ. ಮರಗಳ ಹನನ ಮಾಡುತ್ತಿದೆ. ಅಲ್ಲಿಂದ ಕುಡಿಯುವ ನೀರು ವರ್ಷವಿಡೀ ಮೈದಾನ ಪ್ರದೇಶಕ್ಕೆ ತಲುಪುತ್ತಿತ್ತು. ಇದರ ಪರಿಣಾಮ ಈಗ ಪ್ರವಾಸಿ ಕೇಂದ್ರಗಳು ತುಂಬಿ ತುಳುಕುತ್ತಿವೆ. ಪರ್ವತಗಳನ್ನು ರೆಸಾರ್ಟ್‌ ಆಗಿ ಪರಿವರ್ತಿಸಲಾಗುತ್ತಿದೆ. ಮಂದಿರಗಳನ್ನು ಹುಡುಕಲಾಗುತ್ತಿದೆ. ಪರ್ವತ ಪ್ರದೇಶದ ದೇವಿದೇವರನ್ನು ಹಣ ಸೆಳೆಯುವ ಯಂತ್ರವಾಗಿಸಲಾಗುತ್ತಿದೆ.

ಭಾಜಪಾ ಪರಿವಾರದ ಸರ್ಕಾರಗಳು ಮಂದಿರವನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ಹಿಮಾಲಯ ಪರ್ವತಗಳಿಗೆ ಯಾವ ರೀತಿಯ ಹಾನಿ ಉಂಟು ಮಾಡುತ್ತಿವೆಯೋ, ನಿಸರ್ಗ ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳುತ್ತಿದೆ. ಮಳೆ ಈಗ ದಾಖಲೆ ಬರೆಯುತ್ತಿದೆ ಮತ್ತು ಅದು ತನ್ನೊಂದಿಗೆ ಪರ್ವತಗಳನ್ನು ಕೊಚ್ಚಿಕೊಂಡು ಹೋಗುತ್ತಿದೆ. ಹಿಂದೊಮ್ಮೆ ಅತ್ಯಂತ ಸಣ್ಣ ಗಾತ್ರದಲ್ಲಿ ಋತುಮಾನದ ನದಿ ಇರುತ್ತಿತ್ತು. ಅಲ್ಲೀಗ ಮಳೆ ನೀರಿಗೆ ಸಮುದ್ರದಂತಹ ಅಬ್ಬರ ಕಾಣಿಸುತ್ತಿದೆ.

ಪ್ರವಾಸ ಒಳ್ಳೆಯದೇ. ಮನೆಯಿಂದ ಹೊರಗೆ ಎಲ್ಲಿಗಾದರೂ ಹೋಗುವುದು ಆರೋಗ್ಯಕ್ಕೆ ಹಿತಕರ. ಆದರೆ ಈಗ ಪ್ರವಾಸಿ ತಾಣಗಳು ಆರೋಗ್ಯಕ್ಕೆ ಹಾನಿಕರ ಹಾಗೂ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್, ಹೋಟೆಲು‌ಗಳ ಅಭಾವ, ಅದಕ್ಕೆ ಮಿಗಿಲಾಗಿ ಮಳೆಯ ಅಟಾಟೋಪದ ಭೀತಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ