ನಾವು ಯಾರಿಗೇನು ಕಡಿಮೆ? :

ಅಲ್ಮಾ, ನೋಯಿ, ರೋಜನ್ನಾ, ಆರಾ ಫಿಲಿಪೀನ್ಸ್ ಫಿಲ್ಮ್ ಪೋರ್ನ್‌ ಸ್ಟಾರ್‌ ಗಳ ಪೈಪೋಟಿಗೆ ಸೇರುವ ಹೊಸ ನಟಿಯರು. ಅಲ್ಲಿನ ಚಿತ್ರರಂಗ ಸದಾ ಹೊಸ ಹೊಸ ಮುಖಗಳನ್ನೇ ಅರಸುತ್ತಿರುತ್ತದೆ. ಪೋರ್ನ್‌ ಎಂದಾಕ್ಷಣ ಬ್ಯಾಡ್‌ ಲೈನ್‌ ಎಂದುಕೊಳ್ಳಬಾರದು, ಬಿಂದಾಸ್‌ ಆದ ಯಾರೇ ಆಗಲಿ, ತಮ್ಮ ದೇಹದ ಬಗ್ಗೆ ಹೆಮ್ಮೆಪಡುವವರು ಈ ಫೀಲ್ಡ್ ಪ್ರಯತ್ನಿಸಬಹುದು. ಭಾರತೀಯ ಹುಡುಗಿಯರು ಈ ನಿಟ್ಟಿನಲ್ಲಿ ಇನ್ನೂ ಮಡಿವಂತಿಕೆ ಬಿಟ್ಟಿಲ್ಲ, ಆದರೆ ಯಾವ ಫಿಲ್ಮ್ ಫೀಲ್ಡ್ ಇರಲಿ, ವಿದೇಶೀ ನಟಿಯರಿಗೆ ಹೆಚ್ಚಿನ ಆದರ ತೋರುತ್ತದೆ.

ಭೂಮಿಗೆ ಬಂದಿರುವ ಕೋಪ :

 

ಕೋವಿಡ್‌ ಗಿಂತಲೂ ಮನುಕುಲಕ್ಕೆ ಭಾರೀ ಭಯಂಕರ ಆಗಲಿದೆ ಹೆಚ್ಚುತ್ತಿರುವ ಭೂ ತಾಪಮಾನ. ಕಾನ್ಫರೆನ್ಸ್ ಆಫ್‌ ಪಾರ್ಟೀಸ್‌ ಇತ್ತೀಚೆಗೆ ಗ್ಲಾಸ್ಕೋ ನಗರದಲ್ಲಿ ನಡೆಸಿದ ಸಮ್ಮೇಳನದಲ್ಲಿ ದೊಡ್ಡ ಕ್ರಾಂತಿಯೇ ನಡೆಯಿತು, ಆದರೆ ಇದರಿಂದ ದೊಡ್ಡ ಪರಿವರ್ತನೆ ಆಗಲಿದೆಯೇ.... ಯಾರು ಬಲ್ಲರು? ಇಂದಿನ ದುರಾಸೆ ಹಿಡಿದ ನಾಗರಿಕರು ಮುಂದಿನ ತಮ್ಮ ಮೊಮ್ಮಕ್ಕಳು, ಮರಿಮಕ್ಕಳ ಪೀಳಿಗೆಗಾಗಿ ತ್ಯಾಗ ಮಾಡಲು ಕಿಂಚಿತ್ತೂ ಸಿದ್ಧರಿಲ್ಲ! ದಿನೇ ದಿನೇ ಹೆಚ್ಚುತ್ತಿರುವ ಕಾಂಕ್ರೀಟ್‌ ಕಟ್ಟಡಗಳು, ಅನಗತ್ಯ ಉತ್ಪಾದನೆ ನಿಲ್ಲಿಸುವುದೂ ಇಲ್ಲ, ಬದಲಿಗೆ ಗ್ಲೋಬಲ್ ವಾರ್ಮಿಂಗ್‌ ಹೆಚ್ಚುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿರುತ್ತೇವೆ. ಮುಂದೆ ನೀವು ಪ್ಯಾರಿಸ್‌ ಗೆ ಹೋದಾಗ, ಅಲ್ಲಿ ಐಫೆಲ್ ‌ಟವರ್‌ ಬಳಿ ಸೆಲ್ಛಿ ಕ್ಲಿಕ್ಕಿಸಿಕೊಳ್ಳಬಹುದೆಂಬ ಯಾವ ಗ್ಯಾರಂಟಿಯೂ ಇಲ್ಲ, ಅಷ್ಟು ವಾಯು ಮಾಲಿನ್ಯದ ಹೊಗೆ ಇದೆ! ನಮ್ಮ ರಾಷ್ಟ್ರದ ರಾಜಧಾನಿ ಇದಕ್ಕೆ ಮತ್ತೊಂದು ಉದಾಹರಣೆ.

ಆಟದ ಮಜವೇ ಬೇರೆ :

timthumb

 

ಚಳಿಗಾಲದಲ್ಲಿ ಸ್ಕೇಟಿಂಗ್‌ ನ ಮಜವೇ ಮಜಾ! ಹೀಗಾಗಿ ಸ್ಕೇಟಿಂಗ್‌ ಡ್ಯಾನ್ಸ್ ಸ್ಪರ್ಧೆಗಳೂ ಶುರುವಾಗಿವೆ. ಇಟಲಿಯ ಟೊರಿನೋ ನಗರದಲ್ಲಿ ಸುಂದರ ಉಡುಗೆ ಧರಿಸಿದ ಜೋಡಿಗಳು, ಅಲ್ಲಿ ನೆರೆದಿದ್ದ ವೀಕ್ಷಕರು ಮಾತ್ರವಲ್ಲದೆ, ಆನ್‌ ಲೈನ್‌ ನ ಲಕ್ಷಾಂತರ ಜನರೂ ನೋಡಿ ಬೆರಗಾಗುವಂತೆ ಮಾಡಿದರು. ಕೋವಿಡ್‌ ರಿಂದ ಬೇಸತ್ತಿದ್ದ ಜನಕ್ಕೆ ಇಂಥ ಮನರಂಜನೆ ಖಂಡಿತಾ ಬೇಕಿತ್ತು. ಬಳುಕು ಹಂಸಗಳಂತೆ, ಐಸ್‌ ನಲ್ಲಿ ಜಾರುತ್ತಾ ಇವರುಗಳು ದೋಷರಹಿತ ಪ್ರದರ್ಶನ ನೀಡಿದರು. ಭಾರತದಲ್ಲಿ ಈ ಪಾಟಿ ಥಂಡಿ ಇಲ್ಲ, ಕೃತಕ ಐಸ್‌ ಮೂಲಕ ಇದನ್ನು ಏರ್ಪಡಿಸಲು ಕೋಟ್ಯಂತರ ಖರ್ಚಾಗುತ್ತದೆ, ಹೀಗಾಗಿ ಈ ಕಲೆ ನಮಗೆ ಅಪರಿಚಿತ.

ಮೇಕಪ್ಅತ್ಯಗತ್ಯ :

forpressrelease.com618af0f6e7b0fora

ಓರಾ ಡೀ ಓರಾ ಇಟಲಿಯ ಬ್ರಾಂಡ್‌ ಆಗಿದ್ದು, ಸ್ಕಿನ್‌ ಕೇರ್‌ ನ ಉತ್ಪನ್ನಗಳ ಹೊಸ ಸಂಗ್ರಹ ಲಾಂಚ್ ಮಾಡಿದೆ. ಇದು ದುಬಾರಿ ಎಂಬುದೇನೋ ನಿಜ, ಇದರಿಂದ ಸಹಜವಾಗಿ ಗ್ಲೋ ಹೆಚ್ಚುವುದಾದರೆ, ಪಾರ್ಟಿಯಲ್ಲಿ ಎಲ್ಲರ ಹೊಟ್ಟೆ ಉರಿಸುವ ಭಾಗ್ಯ ನಿಮಗೆ ಸಿಕ್ಕಿದರೆ, ಹಣ ಯಾವ ಲೆಕ್ಕ?

ಕ್ರೀಡೆಯಲ್ಲೂ ಭೇದಭಾವ :

GettyImages-1351520425

ಆಫ್ರಿಕಾ ದೇಶವಾದ ಉಗಾಂಡಾದ ಆ್ಯನೆಟ್‌ ನಗೇಸಾ ಮಹಿಳಾ ಅಥ್ಲೀಟ್‌ ಆಗಿದ್ದು, ತಾನು ಅವಮಾನಗೊಳ್ಳುವಂಥ ಟೆಸ್ಟ್ ಗಳನ್ನು ಎದುರಿಸಬೇಕಾಗುತ್ತದೆ ಎಂದು ದೂರುತ್ತಾಳೆ, ಕಾರಣ ಅವಳಲ್ಲಿ ಹೆಚ್ಚಾಗಿರುವ ಮೇಲ್ ಹಾರ್ಮೋನ್ಸ್! ಅಥ್ಲೀಟ್‌ ಅಸೋಸಿಯೇಷನ್‌ ಗೊಣಗುವುದೆಂದರೆ, ಹೆಂಗಸರ ಇಂಥ ಮೇಲ್ ‌ಹಾರ್ಮೋನ್ಸ್ ಅವರನ್ನು ಬೂಸ್ಟ್ ಮಾಡಿ ಬೇರೆ ಹೆಂಗಸರಿಗಿಂತ ಹೆಚ್ಚು ಸಶಕ್ತರನ್ನಾಗಿಸುತ್ತದಂತೆ! ಗಂಡಸರಂಥ ಹೆಂಗಸರು ಎಂಬ ಲೇಬಲ್ ಅಂಟಿಸಿ ಇಂಥವರ ಕೆರಿಯರ್‌ ಗೇ ಇತಿಶ್ರೀ ಹಾಡಿಬಿಡುತ್ತದೆ. ಇನ್ನೊಂದೆಡೆ ಮೆಡಿಕಲ್ ಟೆಸ್ಟ್ ಹೆಸರಿನಲ್ಲಿ (ಇಂಥವರಿಗೆ ಮಾತ್ರ) ಇವರನ್ನು ವಿವಸ್ತ್ರಗೊಳಿಸಿ, ಇವರು ಗಂಡಸರಲ್ಲ ತಾನೇ ಎಂದು ಬಗೆಬಗೆಯಲ್ಲಿ ಪರೀಕ್ಷಿಸುವುದು ನೈತಿಕವಾಗಿ ಎಷ್ಟು ಸರಿ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ