ಸರ್ನೇಮ್ ಹೆಸರಿನಲ್ಲಿ ಪ್ರೆಶರ್ಇಲ್ಲ

ತಾಪಸಿ ಪನ್ನು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಪ್ರೆಸ್‌ ಮೀಟ್‌ ಗಳಲ್ಲಿ ಮನಸ್ಸು ಬಿಚ್ಚಿ ಮಾತನಾಡುತ್ತಾಳೆ. ಒಂದು ಚಿತ್ರ ಯಶಸ್ವಿ ಅಥವಾ ಫ್ಲಾಪ್‌ ಆದದ್ದರ ಪ್ರೆಶರ್‌ ಎಷ್ಟರ ಮಟ್ಟಿಗೆ ಹೊರುತ್ತೀರಿ ಎಂದಾಗ, ಆಕೆ ನಸುನಗುತ್ತಾ, ನಾನಂತೂ ಬಾಲಿವುಡ್‌ ನ ಯಾವ ಸ್ಟಾರ್‌ ಪರಿವಾರಕ್ಕೂ ಸೇರಿದವಳಲ್ಲ. ಹೀಗಾಗಿ ಕುಟುಂಬದ ಪ್ರೆಸ್ಟೀಜ್‌, ಹೆಸರು ಉಳಿಸಬೇಕೆಂಬ ಘನವಾದ ಪ್ರೆಶರ್‌ ಏನೂ ಇಲ್ಲ. ನಾನು 100% ಪ್ರಾಮಾಣಿಕಳಾಗಿ ನನ್ನ ಕೆಲಸ ಮಾಡ್ತೀನಿ, ಮುಂದೆಯೂ ಮಾಡುತ್ತಿರುತ್ತೀನಿ ಎಂದಳು. ಶಭಾಷ್‌ ತಾಪಸಿ, ಯಾವ ಗಾಡ್‌ ಫಾದರ್‌ ಇಲ್ಲದೆಯೇ ಬಾಲಿವುಡ್‌ ನಲ್ಲಿ ಸ್ಥಾನ ಭದ್ರಪಡಿಸಿ ಕೊಳ್ಳುವುದು ಗೌರಿಶಂಕರ ಗಿರಿಯನ್ನೇರುವುದಕ್ಕಿಂತ ಕಡಿಮೆಯೇನಲ್ಲ.

ಮರಳಿ ಬಂದ ಸುಷ್ಮಿತಾ

SUSMITA

`ದಿಲ್ ‌ಬರ್‌ ದಿಲ್ ಬರ್‌…..’ ಹಾಡಿನಿಂದ ಪಡ್ಡೆಗಳ ಎದೆಗೆ ಕಿಚ್ಚಿಟ್ಟು ಕುಣಿಸಿದ ಹೆಣ್ಣು ಸುಷ್ಮಿತಾ, ದೊಡ್ಡ ಗ್ಯಾಪ್‌ ನಂತರ ಬೆಳ್ಳಿ ತೆರೆಗೆ ಮತ್ತೆ ಮರಳಿದ್ದಾಳೆ. ಇವಳ ಹಿಂದಿನ ಯಶಸ್ವಿ ಚಿತ್ರಗಳು ನೆನಪಾದರೂ ಕೊನೆಯದಾಗಿ ಈಕೆ ನಟಿಸಿದ ಚಿತ್ರವೇ ನೆನಪಾಗದು. ಇದೀಗ ತನ್ನ ಫಿಟ್‌ ನೆಸ್‌ ವಿಡಿಯೋಸ್‌ ಮತ್ತು ರಾಂಪ್‌ ವಾಕ್‌ ಮೂಲಕ ಆಕೆ ತನ್ನ ಅಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಇತ್ತೀಚೆಗೆ ಆಕೆ ಫೇಸ್‌ ಬುಕ್‌ ನಲ್ಲಿ ಒಂದು ಪೋಸ್ಟ್ ಹಾಕಿ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾಳೆ. ಆಕೆ ಹೇಳಿದ್ದು, ಕಳೆದ 10 ವರ್ಷಗಳಿಂದ ಅಭಿಮಾನಿಗಳಾಗಿ ನೀವು ತೋರಿದ ಪ್ರೀತಿಗೆ ನಾನು ಚಿರಋಣಿ.

ಇನ್ನು ಮುಂದೆ ನಿಮ್ಮ ನಿರೀಕ್ಷೆ ಮುಗಿಯುಲಿದೆ. ನಂಬಲರ್ಹ ಮೂಲಗಳ ಪ್ರಕಾರ, ಈಕೆ ಇಷ್ಟರಲ್ಲೇ ಬಾಲಿವುಡ್‌ ನ ಚಿತ್ರದಲ್ಲಿ ಕಾಣಿಸಲಿದ್ದಾಳೆ!

ಆಯುಷ್ಮಾನ್ಜಾಡಿನಲ್ಲೇ ಕಾರ್ತಿಕ್

kartik (1)

`ಪ್ಯಾರ್‌ ಕಾ ಪಂಚ್‌ ನಾಮಾ-2′ ಚಿತ್ರದಿಂದ `ಪತಿ ಪತ್ನಿ ಜೌರ್‌ ವೋ’ ಚಿತ್ರದವರೆಗೂ (ಅದರಲ್ಲಿ `ಗೆಸ್ಟ್ ಇನ್‌ ಲಂಡನ್‌’ ಬಿಟ್ಟು) ಕಾರ್ತಿಕ್‌ ನ ಎಲ್ಲಾ ಚಿತ್ರಗಳೂ ಗಲ್ಲಾ ಪೆಟ್ಟಿಗೆಯಲ್ಲಿ ಲಾಭ ಗಳಿಸಿವೆ. ಇದುವರೆಗೂ ಆಯುಷ್ಮಾನ್‌ ಖುರಾನಾ ಮಾತ್ರವೇ ಇಂಥ ಜಾದೂ ಮಾಡಬಲ್ಲವನಾಗಿದ್ದ. ಬಹುಶಃ ಕಾರ್ತಿಕ್‌ ಆರ್ಯನ್‌ ಸಹ ಆಯುಷ್ಮಾನ್‌ ನ ಜಾಡಿನಲ್ಲೇ ಮುಂದುವರಿಯುತ್ತಿದ್ದಾನೆ ಎನಿಸುತ್ತದೆ. ಇವರಿಬ್ಬರ ಮುನ್ನುಗ್ಗುವ ವೇಗ ಗಮನಿಸಿದರೆ ಖಾನ್‌ ಗಳು, ಕುಮಾರರು, 80ರ ದಶಕದ ಸ್ಟಾರ್‌ ಗಳು ಇವರಿಂದ ಕಲಿಯಬೇಕಿದೆ. ಅವರುಗಳು ಈಗಲೂ ಸಹ ಮೆಗಾ ಬಜೆಟ್‌ ನ ಚಿತ್ರಗಳ ವ್ಯಾಮೋಹದಿಂದ ಇನ್ನೂ ಹೊರಬಂದಿಲ್ಲ.

ರಣವೀರ್ಸಿಂಗ್ ಹೊಸ ಚಿತ್ರದ ಜೋಶ್

Jayeshbhai

ಇತ್ತೀಚಿನ ದಿನಗಳಲ್ಲಿ ಯಾವ ಹೀರೋ ದೊಡ್ಡ ಧಮಾಕಾ ಮಾಡುತ್ತಿದ್ದಾನೆ ಎಂದರೆ ಅದು ರಣವೀರ್‌ ಸಿಂಗ್‌ ಮಾತ್ರ! ಆತನ ಇತ್ತೀಚಿನ ಚಿತ್ರ `ಗಲಿ ಬಾಯ್ಸ್’ಗೆ ಪ್ರಶಸ್ತಿ ಸಹ ಸಿಕ್ಕಿತು. ಇಷ್ಟು ಮಾತ್ರವಲ್ಲ, ಅವನ ಮುಂದಿನ ಹೊಸ ಚಿತ್ರಗಳಾದ `1983, ಜಯೇಶ್‌ ಭಾಯಿ ಜೋರ್‌ ದಾರ್‌’ಗಳಿಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗಷ್ಟೆ ಈತ `ಜಯೇಶ್‌ ಭಾಯಿ’ ಚಿತ್ರದ ಫಸ್ಟ್ ಲುಕ್‌ ರಿಲೀಸ್‌ ಆದಾಗ ಈ ಚಿತ್ರದ ಕುರಿತಾಗಿ ಅಭಿಮಾನಿಗಳ ಹುಚ್ಚುಹೊಳೆಯೇ ಹರಿಯಿತು. ಈ ಹೊಸ ವರ್ಷ ಮಿಸ್ಟರ್‌ ಮಿಸೆಸ್‌ ರಣವೀರ್‌ ಸಿಂಗ್‌ ಇಬ್ಬರೂ ಮಿಂಚಲಿದ್ದಾರೆ ಅನ್ಸುತ್ತೆ. ದೀಪಿಕಾಳ ಹೊಸ ಚಿತ್ರ `ಛಪಾಕ್‌’ಗೂ ಸಹ ಅಭಿಮಾನಿಗಳು ಇಷ್ಟೇ ಉತ್ಸಾಹ ತೋರುತ್ತಿದ್ದಾರೆ.

ಮಿಂಚಲಿದ್ದಾರೆ ಟಿವಿ ಸ್ಟಾರ್ಸ್

manav-gohil-jash-&-ganesh-acharya

ಕಿರುತೆರೆಯ ಜನಪ್ರಿಯ ತಾರೆ ಮಾನ್‌ ಗೋಹಿಲ್ ‌ಇದೀಗ ಕೊರಿಯೊಗ್ರಾಫರ್‌ ಗಣೇಶ್‌ ಆಚಾರ್ಯರ ಸ್ಟೆಪ್ಸ್ ಗೆ ಹೆಜ್ಜೆ ಹಾಕಲಿದ್ದಾನೆ. ಅಸಲಿಗೆ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಸಿಂಗರ್‌ ಝರಾ ತಮ್ಮ ಹೆಸರನ್ನು ಮ್ಯೂಸಿಕ್‌ ವಿಡಿಯೋ `ಛಲ್ಲಾ ಡೈಮಂಡ್‌ ದಾ’ನ್ನು ಮುಂಬೈನಲ್ಲಿ ರಿಲೀಸ್‌ ಮಾಡಿದರು. ಇದರಲ್ಲಿ ಮಾನ್‌ ಗಣೇಶ್‌ ಇಬ್ಬರೂ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಹಿಟ್‌ ಆದರೆ ಮಾನ್‌ ಮತ್ತೆ ತಮ್ಮ ಅಭಿಮಾನಿಗಳ ಮನದಲ್ಲಿ ಹೊಸ ಹೆಜ್ಜೆ ಇರಿಸಿ, ರಂಜಿಸಲಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ಹೇಳಿಕೊಳ್ಳುವಂಥ ಹೊಸ ಕಾರ್ಯಕ್ರಮಗಳೇನಿಲ್ಲ, ಹೀಗಾಗಿ ಕಲಾವಿದರೇ ಹೀಗೆ ಹೊಸದಾಗಿ ಟ್ರೈ ಮಾಡುತ್ತಿದ್ದಾರೆ.

ಝೀ ರಿಶ್ತೆ ಅವಾರ್ಡ್ಸ್

Shabir-Ahluwalia-and-Sriti-Jha (1)

ಝೀ ರಿಶ್ತೆ ಅವಾರ್ಡ್ಸ್ ಫಂಕ್ಷನ್‌ ನಲ್ಲಿ ಇಡೀ ಝೀ ಹಿಂದಿ ವಾಹಿನಿಯ ಕುಟುಂಬದವರೆಲ್ಲ ನೆರೆದಿದ್ದರು. ಕಾರ್ಯಕ್ರಮದ ಡೆಸ್ಟಿನೇಶನ್ ಆಗಿತ್ತು. ಇಲ್ಲಿ ಝೀ ಟಿವಿ ಸೆಲೆಬ್ಸ್ ಬೊಂಬಾಟ್‌ ಸೂಪರ್‌ ಡೂಪರ್‌ ಪರ್ಫಾರ್ಮೆನ್ಸ್ ನೀಡಿದರು. ಅದು ಶಬ್ಬೀರ್ ಅಹ್ಲೂವಾಲಿಯಾ ಸ್ಮೃತಿ ರವರ ರೊಮ್ಯಾಂಟಿಕ್‌ ಡ್ಯಾನ್ಸ್ ಅಥವಾ ಡ್ರಾಮಾದಿಂದ ತುಂಬಿದ `ಬಹೂ V/S ಬೇಟಿಯಾಂ’ ಇರಲಿ, ಕರಣ್‌ ಪ್ರೀತಾ, ಧೀರಜ್‌ ಧೂಪರ್‌ ಶ್ರದ್ಧಾ ಆರ್ಯರ ಸಖತ್‌ ಮಾದಕ ಕುಣಿತಗಳಿರಲಿ, ಪ್ರೇಕ್ಷಕರಿಗೆ ಭರಪೂರ ಮನರಂಜನೆಯ ರಸದೌತಣವಿತ್ತು. ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಪಾಪ್ಯುಲರ್‌ ಜೋಡಿ ಅವಾರ್ಡ್‌ ಗೆ ಅಭಿಪ್ರಜ್ಞಾ, ಕರಣ್‌ ಪ್ರೀತಾ, ಮಲ್ಹಾರ್‌ ಕಲ್ಯಾಣಿಯವರ ನಡುವೆ ಅಂತಿಮ ಹಣಾಹಣಿ ನಡೆದಿತ್ತು. ಪಾಪ್ಯುಲರ್‌ ಮೇಲ್ ‌ಫೀಮೇಲ್ ‌ಪಾತ್ರಗಳ ಅವಾರ್ಡ್‌ ಗಾಗಿಯೂ ಘೋರ ಪೈಪೋಟಿ ನಡೆಯಿತು. ನಿಮ್ಮ ನೆಚ್ಚಿನ ತಾರೆಯರಿಗೂ ಅವಾರ್ಡ್‌ ಬಂತೇ…..?

ಫ್ರಾಂಚೈಸ್ಇದ್ದರೆ ವಿಶ್ವಾಸ ಇದೆ

ajay

ಇತ್ತೀಚೆಗೆ ಬಾಲಿವುಡ್‌ ನಲ್ಲಿ ರೀಮೇಕ್‌ ಜೊತೆಗೆ ಫ್ರಾಂಚೈಸ್‌ ದರ್ಬಾರ್‌ ಕೂಡ ಜೋರಾಗಿದೆ. ಸಲ್ಮಾನ್‌, ಅಜಯ್‌ ದೇವಗನ್‌, ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌, ಆಯುಷ್ಮಾನ್‌ ಖುರಾನಾರಂಥ ತಾರೆಯರು ತಮ್ಮ ಎರಡನೇ ಪ್ರಾಜೆಕ್ಟ್ಸ್ ಕೈಕೊಟ್ಟಾಗೆಲ್ಲ, ವಾಪಸ್‌ ಮರಳಲು ತಮ್ಮ ಹಿಟ್‌ ಪ್ರಾಂಚೈಸ್‌ ಗಳ ಮೇಲೆಯೇ ವಿಶ್ವಾಸವಿಡುತ್ತಾರೆ. ನಂಬಲರ್ಹ ಮೂಲಗಳ ಪ್ರಕಾರ ಈ ರೀತಿ ಐಡಿಯಾ ಮಾಡಿದ ಕಾರಣದಿಂದಾಗಿ ಅಮೀರ್‌ ಶಾರೂಖ್‌ ರಿಗೆ ವಿಶೇಷ ನಷ್ಟ ಏನೂ ಆಗಿಲ್ಲ. ಏಕೆಂದರೆ ಇವರಿಬ್ಬರೂ ತಮ್ಮ ಹಿಟ್ ಚಿತ್ರಗಳ ಸರಣಿ ಮುಂದುವರಿಸುವ ಯೋಚನೆ ಮಾಡಿಲ್ಲ. ಸಲ್ಮಾನ್‌ ಈ ಬಾಬತ್ತಿನಲ್ಲಿಯೂ ಗೆದ್ದಿದ್ದಾನೆ, ಹೀಗಾಗಿ ಖಾನ್‌ ತ್ರಯರಲ್ಲಿ ಬಾಕ್ಸ್ ಆಫೀಸ್‌ ನಲ್ಲಿ ಇನ್ನೂ ಗಟ್ಟಿಯಾಗಿ ಉಳಿದಿದ್ದಾನೆ.

ಮತ್ತೊಮ್ಮೆ ಮರಳಲಿರುವ ಫುಕ್ರೆ

fukrey

ಹನೀ, ಭೋಲಿ ಪಂಜಾಬನ್‌, ಝಫರ್‌, ಚೂಚಾ ಚಿತ್ರಗಳಲ್ಲಿ ಪ್ರೇಕ್ಷರನ್ನು ನಗುವಿನಿಂದ ತೇಲಿಸಿದ ಜೋಡಿಗಳು ಈಗ ಮತ್ತೊಂದು ಅಂಥದೇ ಸಾಹಸಕ್ಕೆ ಕೈ ಹಾಕಿದ್ದಾರೆ. ಅಸಲಿಗೆ `ಫುಕ್ರೆ, ಫುಕ್ರೆ ರಿಟರ್ನ್ಸ್’ ಚಿತ್ರಗಳ ಬೊಂಬಾಟ್‌ ಯಶಸ್ಸಿನ ನಂತರ ಈ ಫ್ರಾಂಚೈಸಿ ನಿರ್ಮಾಪಕರು ಇದರ 3ನೇ ಭಾಗಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ಮೀಡಿಯಾ ಜೊತೆ ವಿಷಯ ಹಂಚಿಕೊಂಡ ಈ ನಿರ್ಮಾಪಕರು, ಇದರ ಹಿಂಟ್‌ ನೀಡಿದರು. ಹೀಗಾದರೆ ಹೀರೋ ಪುಲಕಿತ್‌ ಸಾಮ್ರಾಟ್‌ ಗೆ ಜಾಕ್‌ ಪಾಟ್‌ ಹೊಡೆದಂತೆ! ಏಕೆಂದರೆ ಆತನಿಗೆ ಗರ್ಲ್ ಫ್ರೆಂಡ್‌ ಆಗಿರುವ ಈ ಸರಣಿಯ ನಾಯಕಿ ಕೃತಿ ಕರ್ಬಾಂಧಾಳನ್ನು ಊರು ಸುತ್ತಿಸುವುದನ್ನು ಬಿಟ್ಟರೆ ಸದ್ಯಕ್ಕೆ ಬೇರೇನೂ ಕೆಲಸವಿಲ್ಲ.

ರಿಯಲ್ ಆ್ಯಕ್ಷನ್ಹೀರೋ ವಿದ್ಯುತ್

veedyut

ಬಾಲಿವುಡ್‌ ನಲ್ಲಿ ಆ್ಯಕ್ಷನ್‌ ಚಿತ್ರಗಳು ನಡೆಯುವುದೇ ಹೃತಿಕ್‌, ಟೈಗರ್‌ ಶ್ರಾಫ್‌ ರಂಥ ನಟರಿಂದ. ಆ ಸರಣಿಗೆ ಇದೀಗ ಹೊಸ ಸೇರ್ಪಡೆ, ಕಟ್ಟುಮಸ್ತಾದ ಮೈಕಟ್ಟಿನ ವಿದ್ಯುತ್‌. ಈತ ಕೇವಲ ಚಿತ್ರಗಳಲ್ಲಿ ಮಾತ್ರವೇ ಆ್ಯಕ್ಷನ್‌ ಮೋಡ್‌ ನಲ್ಲಿ ಇರುತ್ತಾನೆಂದಲ್ಲ, ರಿಯಲ್ ಲೈಫ್‌ ನಲ್ಲೂ ಆ್ಯಕ್ಷನ್‌ ಕುರಿತಾಗಿ ಆತನ ಆಸಕ್ತಿ ಅಪಾರ. ವಿದ್ಯುತ್‌ ಒಬ್ಬ ಟ್ರೇನ್ಡ್ ಮಾರ್ಶಲ್ ಆರ್ಟ್‌ ಆರ್ಟಿಸ್ಟ್. ಅದರಲ್ಲೂ ಈತ ಭಾರತೀಯ ಮಾರ್ಶಲ್ ಆರ್ಟ್‌ ಆದ ಕಲರಿಪಟ್ಟುವನ್ನು 3 ವರ್ಷದವನಿದ್ದಾಗಿನಿಂದಲೇ ಕಲಿತಿದ್ದಾನೆ. ಹೀಗಾಗಿ ಆಂಗ್ಲ ಚಿತ್ರಗಳಲ್ಲಿನ ಹಾಗೆ ಈತ ಮಾಡುವ ಆ್ಯಕ್ಷನ್‌ ಸೀನ್‌ ಗಳನ್ನು ಬೇರಾರೂ ಖಂಡಿತಾ ಮಾಡಲಾರರು.

ನರ್ವಸ್ ಆಗುವುದು ಕಾಮನ್ಬಿಡಿ

salmaan

ಸಲ್ಮಾನ್‌ ನ `ದಬಂಗ್‌’ ಚಿತ್ರದಲ್ಲಿ ಕಿಚ್ಚ ಸುದೀಪ್‌ ನ ಎಂಟ್ರಿ ಸ್ಯಾಂಡಲ್ ವುಡ್‌ ಗೆ ರಸದೌತಣ ನೀಡಲಿದೆ. ಹೀಗಾಗಿ ಇದರ ಡಬಲ್ಡ್ ಕನ್ನಡ ವರ್ಷನ್‌ ಕೂಡ ಬಿಡುಗಡೆಯಾಯ್ತು. ಇದರಲ್ಲಿನ ಡೆಬ್ಯು ನಾಯಕಿ ಸಾಯಿ ಮಾಂಜ್ರೇಕರ್‌, ಪ್ರಮೋಶನ್‌ ಈವೆಂಟ್‌ ನಲ್ಲಿ ತುಸು ನರ್ವಸ್ ಆಗಿದ್ದಳು. ಇದಕ್ಕೆ  ಕಾರಣ….. ತಾನು ಸಲ್ಮಾನ್‌ ಜೊತೆ ಮೊದಲ ಸಲ ನಾಯಕಿ ಆಗಿದ್ದೇನೆಂದು ಇವಳು ನರ್ವಸ್ ಆಗಿದ್ದಳಾ ಅಥವಾ ಸಲ್ಮಾನ್‌ ನ ಡೆಬ್ಯು ನಾಯಕಿಯರಿಗಾದ ಗತಿಯೇ ಮುಂದೆ ತನಗೂ ಆದೀತೆಂಬ ಆತಂಕವೇ? ಅದೇ ದಿಟವಾದರೆ, ಈಕೆ ನರ್ವಸ್ ಆಗುವುದರಲ್ಲಿ ಅರ್ಥವಿದೆ. ಈಗ ಸೋನಾಕ್ಷಿಯ ಗತಿಯನ್ನೇ ನೋಡಿ. ದಬಂಗ್‌ ಚಿತ್ರದ ಫ್ರಾಂಚೈಸಿಯ ಭಾಗವಾಗದಿದ್ದರೆ, ಜನ ಇಷ್ಟು ಹೊತ್ತಿಗೆ ಅವಳನ್ನು ಮರೆತೇ ಬಿಡುತ್ತಿದ್ದರೇನೋ! ಆಲ್ ದಿ ಬೆಸ್ಟ್ ಸಾಯಿ!

ಹಿಟ್ಅರಸುತ್ತಿರುವ ಇಮ್ರಾನ್ಹಶ್ಮಿ

2 (2)

ಬಾಲಿವುಡ್‌ ನ ಪರ್ಫೆಕ್ಟ್ ಕಿಸ್ಸರ್‌ ಇಮ್ರಾನ್‌ ಹಶ್ಮಿ ಇತ್ತೀಚೆಗಂತೂ ಒಂದಾದರೂ ತನ್ನ ಚಿತ್ರ ಹಿಟ್‌ ಆಗಲಿ ಎಂದು ತುದಿಗಾಲಲ್ಲಿ ಕಾಯುತ್ತಿದ್ದಾನೆ. ಬಹಳ ದಿನಗಳಿಂದ ಈತನ ಕೆರಿಯರ್‌ ಗ್ರಾಫ್‌ ಡೋಲಾಯಮಾನವಾಗಿದೆ. ಇವನ ಚಿಕ್ಕಪ್ಪ ಮಹೇಶ್‌ ಭಟ್ ಈತನನ್ನು ಮರೆತೇಬಿಟ್ಟಂತಿದೆ. ಇರಲಿ, ಇಮ್ರಾನ್‌ ಗೆ ಈಗ ತನ್ನ ಮುಂದಿನ ಚಿತ್ರಗಳಾದ `ದಿ ಬಾಡಿ, ಚೆಹ್ರೆ’ ಕುರಿತು ಬಹಳ ನಿರೀಕ್ಷೆ ಇದೆ. ಈ ಎರಡೂ ಚಿತ್ರಗಳಲ್ಲಿ ಈತ ಹಿಂದಿನ ಮಹಾರಥರಾದ ಅಮಿತಾಭ್‌, ರಿಷಿ ಕಪೂರ್‌ ಜೊತೆ ನಟಿಸುತ್ತಿದ್ದಾನೆ. ಇತ್ತೀಚೆಗೆ ಶೂಟಿಂಗ್‌ ಮಧ್ಯೆ ಫ್ಯಾನ್ಸ್ ಕಾಟದಿಂದಾಗಿ ಈತ `ಚೆಹ್ರೆ’ ಚಿತ್ರದ ಶೂಟಿಂಗ್‌ ನ್ನು ದೆಹಲಿಯಲ್ಲಿ ಅನಿವಾರ್ಯ ನಿಲ್ಲಿಸಬೇಕಾಯಿತು.

ಭೋಜ್ಪುರಿ ಚಿತ್ರಗಳಲ್ಲಿ ಇಷ್ಟೂ ಇಲ್ಲದಿದ್ದರೆ

Bhojpuri-Ho-Aur-1

ಆಮ್ರಪಾಲಿ ದುಬೆ ಹಾಗೂ ನಿರ್ಹುಲಾ ಜೋಡಿ ಅಂದ್ರೆ ಭೋಜ್‌ ಪುರಿ ಚಿತ್ರಗಳಲ್ಲಿ ಸಿಹಿ ಮಿಠಾಯಿ ತರಹ, ಡಿಮ್ಯಾಂಡ್‌ ಹೆಚ್ಚು, ಹಿಟ್‌ ಗ್ಯಾರಂಟಿ. ಅಂದಹಾಗೆ ಇವರ ರಿಯಲ್ ಲೈಫ್‌ ಕೆಮಿಸ್ಟ್ರಿ ಸಹ ಸಾಕಷ್ಟು ಜಬರ್ದಸ್ಚ್ ಎನಿಸಿದೆ. ಇತ್ತೀಚೆಗೆ ಈ ಜೋಡಿ ಲಂಡನ್‌ ನಲ್ಲಿ ರಜೆ ಕಳೆಯುತ್ತಿದ್ದಾರೆ. ತಮ್ಮ ಬೆಸ್ಟ್ ಪೋಸ್‌ ಗಳ ಫೋಟೋಗಳನ್ನು ಫೇಸ್‌ ಬುಕ್‌ ಗೆ ಶೇರ್‌ ಮಾಡುತ್ತಿದ್ದಾರೆ. ಆಮ್ರಪಾಲಿಯ ಮೋಡಿಯಂತೂ ಹೇಳತೀರದು, ಆಕೆಯ ಒಂದು ಕಣ್ಣೋಟಕ್ಕಾಗಿ ಪಡ್ಡೆಗಳು ಚಡಪಡಿಸುತ್ತಾರೆ. ಭೋಜ್‌ ಪುರಿ ಚಿತ್ರ ರಿಲೀಸ್‌ ಆಯ್ತು ಎಂದರೆ ಅದರಲ್ಲಿ ಇವಳು ಇರಲೇಬೇಕು. ಹೀಗೆ ಇಂಡಸ್ಟ್ರೀಯಲ್ಲಿ ಈಕೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾಳೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ