ಬ್ಯೂಟಿ ಪಾರ್ಲರ್‌ ನ ಕೆಮಿಕಲ್ಸ್ ಯುಕ್ತ ಚಿಕಿತ್ಸೆ ಕೇವಲ ಬಾಹ್ಯ ಸೌಂದರ್ಯ ವರ್ಧನೆಗೆ ನೆರವಾಗಬಹುದು. ಒಮ್ಮೊಮ್ಮೆ ಇದು ಚರ್ಮಕ್ಕೆ ಹಾನಿ ಸಹ ಉಂಟು ಮಾಡಬಲ್ಲದು. ಆದರೆ ನೈಸರ್ಗಿಕ ಆರೈಕೆ ಚರ್ಮಕ್ಕೆ ಒಳಗಿನಿಂದ ಆಂತರಿಕ ಕಾಂತಿ ತುಂಬಿಸಿ, ಅದನ್ನು ಮೃದು ಮತ್ತು ಯೌವನಭರಿತ ಆಗಿಸುತ್ತದೆ. ಇಂಥ ನಳನಳಿಸುವ ಮೈ ಕಾಂತಿ ಅದೂ ನೈಸರ್ಗಿಕವಾಗಿ ಹೇಗೆ ಪಡೆಯುವುದೆಂದು ಈ ಫ್ರೂಟ್‌ ಫೇಸ್‌ ಪ್ಯಾಕ್‌ ಗಳಿಂದ ತಿಳಿಯೋಣವೇ?

ಬಾಳೆಹಣ್ಣಿನ ಪ್ಯಾಕ್‌ : ಬಾಳೆಹಣ್ಣು ಧಾರಾಳ ಆ್ಯಂಟಿ ಆಕ್ಸಿಡೆಂಟ್ಸ್ ತುಂಬಿರುವ ಹಣ್ಣು. ಇದರಿಂದ ತಯಾರಾದ ಪ್ಯಾಕ್‌ ಚರ್ಮದ ಡ್ರೈನೆಸ್‌ ಹೊಡೆದೋಡಿಸಿ ಅದನ್ನು ಬಲು ಮೃದುಗೊಳಿಸುತ್ತದೆ. ಇದರ ಪ್ಯಾಕ್‌ ತಯಾರಿಸಲು 1-2 ಚೆನ್ನಾಗಿ ಕಳಿತ ಬಾಳೆಹಣ್ಣು ತೆಗೆದುಕೊಂಡು ಮಸೆಯಿರಿ. ಇದಕ್ಕೆ ಜೇನುತುಪ್ಪ, ಆಲಿವ್ ‌ಆಯಿಲ್ ‌ಬೆರೆಸಿಕೊಂಡು ಮುಖಕ್ಕೆ ನೀಟಾಗಿ ಸರಿಡಿ. 10-12 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಪರಂಗಿ ಹಣ್ಣಿನ ಪ್ಯಾಕ್‌ : ಪರಂಗಿಹಣ್ಣು ಆ್ಯಂಟಿ ಆಕ್ಸಿಡೆಂಟ್‌. ಫ್ಯಾಮಿನಾಯ್ಡ್ಸ್, ಮಿನರಲ್ಸ್ ನಿಂದ ಸಮೃದ್ಧ ಆಗಿದೆ. ಇದು ನ್ಯಾಚುರಲ್ ಆ್ಯಂಟಿ ಏಜಿಂಗ್‌ ಆಗಿದೆ. ಇದರ ಪ್ಯಾಕ್‌ ತಯಾರಿಸಲು, ಇದರ ತಿರುಳನ್ನು ತೆಗೆದು ಅದಕ್ಕೆ ಜೇನು, ನಿಂಬೆರಸ, ಮುಲ್ತಾನಿ ಮಿಟ್ಟಿ ಬೆರೆಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಈ ಪ್ಯಾಕ್‌ ಚರ್ಮಕ್ಕೆ ಮೃದುತ್ವ ನೀಡುವುದಲ್ಲದೆ, ಡೆಡ್‌ ಸ್ಕಿನ್‌ ತೊಲಗಿಸಿ ಚರ್ಮದ ಆಂತರಿಕ ಭಾಗವನ್ನೂ ಸ್ಮೂತ್‌ ಗೊಳಿಸುತ್ತದೆ.

ಸ್ಟ್ರಾಬೆರಿ ಪ್ಯಾಕ್‌ : ಇದರಿಂದ ತಯಾರಾದ ಪ್ಯಾಕ್‌ ಚರ್ಮಕ್ಕೆ ತಗಲುವ ಸೂರ್ಯನ ತೀಕ್ಷ್ಣ ಕಿರಣಗಳ ಬಾಧೆ ತಪ್ಪಿಸುತ್ತದೆ. ಇದರ ಪ್ಯಾಕ್‌ ತಯಾರಿಸಲು, ಇದರ ರಸ ಸಿದ್ಧಪಡಿಸಿ, ಅದಕ್ಕೆ ಯೋಗರ್ಟ್‌ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಈ ಪ್ಯಾಕ್‌ ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುತ್ತದೆ.

ಕಲ್ಲಂಗಡಿ ಹಣ್ಣಿನ ಪ್ಯಾಕ್‌ : ಕಲ್ಲಂಗಡಿ ಹಣ್ಣಿನಲ್ಲಿ ಧಾರಾಳ ನೀರಿನಂಶ ಅಡಗಿರುವುದರಿಂದ, ಚರ್ಮಕ್ಕೆ ಆಂತರಿಕ ಮೃದುತ್ವ ನೀಡಿ, ಅದರ ಡ್ರೈನೆಸ್‌ ಓಡಿಸುತ್ತದೆ. ಇದರ ಪ್ಯಾಕ್‌ ತಯಾರಿಸಲು ಮೊದಲು ಇದರ ರಸ ಸಿದ್ಧಪಡಿಸಿ. ಇದಕ್ಕೆ ಯೋಗರ್ಟ್‌ ಮತ್ತು ಹಾಲಿನ ಪುಡಿ ಬೆರೆಸಿ ಮುಖಕ್ಕೆ ಹಚ್ಚಬೇಕು. 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಆರೆಂಜ್ಫೇಸ್ಪ್ಯಾಕ್‌ : ಆರೆಂಜ್‌ ವಿಟಮಿನ್‌ `ಸಿ’ಯಿಂದ ಸಮೃದ್ಧವಾಗಿರುವುದರಿಂದ ಚರ್ಮವನ್ನು ಧಾರಾಳ ಹೈಡ್ರೇಟ್ ಗೊಳಿಸುತ್ತದೆ. ಜೊತೆಗೆ ಚರ್ಮವನ್ನು ಆಳವಾಗಿ ಶುಚಿಗೊಳಿಸುತ್ತದೆ. ಇದರ ಪ್ಯಾಕ್‌ ತಯಾರಿಸಲು, ಇದರ ರಸ ಸಿದ್ಧಪಡಿಸಿ ಅದಕ್ಕೆ ಯೋಗರ್ಟ್‌ ಮತ್ತು ಗುಲಾಬಿ ಜಲ ಬೆರೆಸಿ ಮುಖಕ್ಕೆ ಸವರಿ 20 ನಿಮಿಷ ಬಿಟ್ಟು ಮುಖ ತೊಳೆಯಿರಿ.

ಮೋಹಿನಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ