ಮಗುವಿನ ಜನನದ ಬಳಿಕ ಅಪೌಷ್ಟಿಕತೆಯ ದುಷ್ಪರಿಣಾಮ ತಾಯಿ ಹಾಗೂ ಮಗು ಇಬ್ಬರ ಮೇಲೂ ಉಂಟಾಗುತ್ತದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಹಾಗೂ ಆ ಬಳಿಕ ಉಂಟಾಗುವ ಅಪೌಷ್ಟಿಕತೆ ಮಗುವಿಗೆ ಅತ್ಯಂತ ಘಾತಕವಾಗಿ ಪರಿಣಮಿಸಬಹುದು. ಅದನ್ನು ತಡೆಯುವುದು ಅತ್ಯಂತ ಅವಶ್ಯಕ.
ಗರ್ಭಾವಸ್ಥೆಯಲ್ಲಿ ಅಪೌಷ್ಟಿಕತೆಗೆ ಕಾರಣ
ಇದರ ಎಲ್ಲಕ್ಕೂ ಮೊದಲ ಹಾಗೂ ಮುಖ್ಯ ಕಾರಣವೆಂದರೆ ಸ್ತನ್ಯಪಾನ. ಮಗುವಿಗೆ ಹಾಲುಣಿಸುವ ತಾಯಿಗೆ ದಿನಕ್ಕೆ 1000 ಕ್ಯಾಲೋರಿ ಶಕ್ತಿಯ ಅಗತ್ಯವಿರುತ್ತದೆ. ಬಹಳ ಮಹಿಳೆಯರಿಗೆ ಸರಿಯಾದ ಡಯೆಟ್ ಚಾರ್ಟ್ ಬಗ್ಗೆ ಗೊತ್ತಿರುವುದಿಲ್ಲ ಅಥವಾ ಅದರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾರೆ. ಈ ಕಾರಣದಿಂದ ಅವರು ನಿರ್ಜಲೀಕರಣ ವಿಟಮಿನ್ ಅಥವಾ ಮಿನರಲ್ ಕೊರತೆ ಅನುಭವಿಸುತ್ತಾರೆ. ಇಲ್ಲಿ ಒಮ್ಮೊಮ್ಮೆ ರಕ್ತಹೀನತೆಯ ಸಮಸ್ಯೆಗೂ ತುತ್ತಾಗುತ್ತಾರೆ. ಇದನ್ನು `ಪೋಸ್ಟ್ ನೇಟ್ ಮಾಲ್ ನ್ಯೂಟ್ರಿಷನ್’ ಅಥವಾ ಹೆರಿಗೆ ಬಳಿಕದ ಅಪೌಷ್ಟಿಕತೆ ಎಂದು ಕರೆಯುತ್ತಾರೆ.
ಮಗುವಿಗೆ ಹಾಲುಣಿಸುವುದರಿಂದ ತಾಯಿಗೆ ಹೆಚ್ಚು ಹಸಿವಾಗುತ್ತದೆ. ಆಕೆ ಸಾಮಾನ್ಯ ಪೋಷಕಾಂಶ ಇರದೇ ಇರುವ ಇಲ್ಲವೇ ಆರೋಗ್ಯಕರ ಆಗಿರದ ಆಹಾರ ಸೇವಿಸುತ್ತಿರಬೇಕು. ಬಾಯಿಗೆ ರುಚಿ ಎನ್ನಿಸುವ ಆಹಾರ ಪದಾರ್ಥದಲ್ಲಿ ವಿಟಮಿನ್ ಹಾಗೂ ಮಿನರಲ್ಸ್ ಕೊರತೆ ಇರುತ್ತದೆ. ಅದರಿಂದಾಗಿ ತಾಯಿ ಅಪೌಷ್ಟಿಕತೆಗೆ ತುತ್ತಾಗುತ್ತಾಳೆ.
ಹೆರಿಗೆಗೂ ಮುಂಚೆ ಹಾಗೂ ಆ ಬಳಿಕ ಪ್ರೀನೆಟ್ ವಿಟಮಿನ್ ಸೇವನೆ ಅತ್ಯಂತ ಅವಶ್ಯ. ಪ್ರೀನೆಟ್ ವಿಟಮಿನ್ ಅಂದರೆ ಫಾಲಿಕ್ ಆ್ಯಸಿಡ್ ನೀರಿನಲ್ಲಿ ವಿಲೀನಗೊಂಡು ದೇಹದಿಂದ ಹೊರಟು ಹೋಗುತ್ತದೆ. ಈ ಕಾರಣದಿಂದ ಮಹಿಳೆಯರು ಹೆರಿಗೆಯ ಬಳಿಕ ರಕ್ತಹೀನತೆಯ ಸಮಸ್ಯೆಗೆ ತುತ್ತಾಗುತ್ತಾರೆ.
ಮಗುವಿನ ಜನನದ ಬಳಿಕ ಅಪೌಷ್ಟಿಕತೆಯ ಕಾರಣದಿಂದ ಮಹಿಳೆಯರು ಪೋಸ್ಟ್ ಪಾರ್ಟಮ್ ಡಿಪ್ರೆಶನ್ ಗೆ ತುತ್ತಾಗುತ್ತಾರೆ. ಮಗುವಿನ ಜನನದ ಬಳಿಕ ಅವರಲ್ಲಿ ಭಾವನಾತ್ಮಕ ಬದಲಾವಣೆ ಉಂಟಾಗುತ್ತದೆ. ಆ ಕಾರಣದಿಂದ ಖಿನ್ನತೆಯ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದ ಮಹಿಳೆಯರು ಸರಿಯಾಗಿ ಆಹಾರ ಸೇವನೆ ಮಾಡುವುದಿಲ್ಲ ಹಾಗೂ ಅಪೌಷ್ಟಿಕತೆಗೆ ತುತ್ತಾಗುತ್ತಾರೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಬಹುತೇಕ ಎಲ್ಲ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಆ ತೂಕ ಕಡಿಮೆ ಮಾಡಿಕೊಳ್ಳಲು ಕೆಲವು ಬಗೆಯ ಆಹಾರ ತ್ಯಜಿಸುತ್ತಾರೆ. ಹೀಗಾಗಿ ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ಗರ್ಭಾವಸ್ಥೆಯ ಬಳಿಕ ತೂಕವನ್ನು ನಿಧಾನವಾಗಿ ಕಡಿಮೆಗೊಳಿಸಲು ಪ್ರಯತ್ನಿಸಿ. ಇಲ್ಲದಿದ್ದರೆ ಅಪೌಷ್ಟಿಕತೆಗೆ ತುತ್ತಾಗುವ ಸ್ಥಿತಿ ಉಂಟಾಗಬಹುದು.
ಹೆರಿಗೆಯ ಬಳಿಕ ಸಾಮಾನ್ಯವಾಗಿ ಮಹಿಳೆಯರು ಸರಿಯಾಗಿ ನಿದ್ರಿಸಲು ಆಗುವುದಿಲ್ಲ. ನಿದ್ರೆ ಪೂರ್ತಿ ಆಗದಿರುವುದಕ್ಕೆ ದೇಹದಲ್ಲಿ ಪೋಷಕಾಂಶಗಳು ಹೀರಲ್ಪಡುವುದಿಲ್ಲ. ಈ ಕಾರಣದಿಂದ ಅವರು ಅಪೌಷ್ಟಿಕತೆಗೆ ತುತ್ತಾಗುತ್ತಾರೆ.
ಮಗುವಿಗೆ ಅಪಾಯಕಾರಿ
ಗರ್ಭಿಣಿಯರಲ್ಲಿ ಅಪೌಷ್ಟಿಕತೆಯ ದುಷ್ಪರಿಣಾಮ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ಆಗುತ್ತದೆ. ಈ ಕಾರಣದಿಂದ ಮಗುವಿನ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಹುಟ್ಟುವಾಗ ಅದರ ತೂಕ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಿಯಲ್ಲಿ ಅಪೌಷ್ಟಿಕತೆ ಐಯುಜಿಆರ್ ಅಂದರೆ ಇಂಟ್ರಾಯುಟರಿನ್ ಗ್ರೋಥ್ ರಿಸ್ಟ್ರಿಕ್ಷನ್ ಮತ್ತು ಜನನದ ಸಂದರ್ಭದಲ್ಲಿ ಕಡಿಮೆ ತೂಕದ ದುಷ್ಪರಿಣಾಮ ಬೀರುತ್ತದೆ. ಅದರಿಂದ ಬೇರೆ ಕೆಲವು ದುಷ್ಪರಿಣಾಮಗಳು ಆಗಬಹುದು. ಉದಾಹರಣೆಗೆ ಹುಟ್ಟು ತೊಂದರೆ, ಮೆದುಳಿಗೆ ಹಾನಿ, ಕೆಲವು ಅಂಗಗಳು ಸರಿಯಾಗಿ ಬೆಳವಣಿಗೆ ಆಗದಿರುವುದು, ಕೆಲವು ಮಕ್ಕಳು ಹುಟ್ಟುತ್ತಲೇ ಅಳುವುದಿಲ್ಲ. ಇಂತಹ ಶೇ.50 ಪ್ರಕರಣಗಳಲ್ಲಿ ಐಯುಜಿಆರ್ ಕಾರಣವಾಗಿರುತ್ತದೆ.
ಮಗುವಿನ ಮುಂದಿನ ಜೀವನಕ್ಕೆ ತೊಂದರೆ
ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಿಗೆ ಪೋಷಕಾಂಶದ ಕೊರತೆ ಉಂಟಾದರೆ ಹುಟ್ಟು ಮಗು ಭವಿಷ್ಯದಲ್ಲಿ ಈ ಕೆಳಕಂಡ ರೋಗಗಳನ್ನು ಎದುರಿಸಬೇಕಾಗಿ ಬರಬಹುದು :
ಆಸ್ಟಿಯೋಪೊರೊಸಿಸ್, ಕ್ರಾನಿಕಲ್ ಕಿಡ್ನಿ ಫೇಲ್ಯೂರ್, ಟೈಪ್ 2 ಡಯಾಬಿಟಿಸ್, ಮೆಲಿಟಸ್, ಕ್ರಾನಿಕ್ ಅಬ್ ಸ್ಟ್ರಾಕ್ಟಿವ್ ಲಂಗ್ಸ್ ಡಿಸೀಸ್, ರಕ್ತದಲ್ಲಿ ಲಿಪಿಡ್ಸ್ ನ ಇಂಫೋರ್ಡ್ ಎನರ್ಜಿ ಹೋವೆಲ್ ಯೂಸೈಸಿಸ್ (ದೇಹ ತನ್ನಷ್ಟಕ್ಕೆ ತಾನೇ ಎನರ್ಜಿ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಗದಿರುವುದು), ಯಾವ ಮಕ್ಕಳು ಹುಟ್ಟುವಾಗ ಕಡಿಮೆ ತೂಕ ಹೊಂದಿರುತ್ತಾರೊ ಅವರ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ.
ಗರ್ಭಾವಸ್ಥೆಯ ಮೊದಲು, ಹೆರಿಗೆಯ ಸಂದರ್ಭದಲ್ಲಿ ಹಾಗೂ ಹೆರಿಗೆಯ ಬಳಿಕ ಪೋಷಕಾಂಶಗಳ ಕೊರತೆಯ ಪರಿಣಾಮ ಕೆಳಕಂಡಂತೆ ಇರಬಹುದು. ಶಾಲೆಯಲ್ಲಿ ಅವರ ಕಲಿಕೆ ನಿಧಾನವಾಗಿರಬಹುದು. ಬೆಳವಣಿಗೆ ಸರಿಯಾಗಿ ಇಲ್ಲದೆ ಇದ್ದರೆ ಅವರ ಶಕ್ತಿ ಕೂಡ ಅಷ್ಟಕ್ಕಷ್ಟೆ.
ತಾಯಿಗೆ ಏನೇನು ಸಮಸ್ಯೆ?
ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯರಿಗೆ ಪೋಷಕಾಂಶದ ಕೊರತೆ ಉಂಟಾದರೆ, ಅಕಾಲಿಕ ಹೆರಿಗೆ, ಗರ್ಭಪಾತದಂತಹ ಸಮಸ್ಯೆಗಳು ಆಗಬಹುದು. ಇದರ ಹೊರತಾಗಿ ಸೋಂಕು, ರಕ್ತಹೀನತೆ, ಸುಸ್ತು, ಆಸ್ಚಿಯೊಪೊರೊಸಿಸ್ ನ ಸಮಸ್ಯೆ ಆಗಬಹುದು.
ಅಪೌಷ್ಟಿಕತೆಯನ್ನು ಹೇಗೆ ತಡೆಯುವುದು?
ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆಯನ್ನು ತಡೆಯಬಹುದಾಗಿದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತರಕಾರಿ, ಹಣ್ಣು, ನೀರು, ಪ್ರೋಟೀನ್, ಕೊಬ್ಬು, ನಾರಿನಂಶ, ಕಾರ್ಬೋಹೈಡ್ರೇಟ್ ಮುಂತಾದವನ್ನು ಸೇವಿಸಬೇಕು. ಯಾವ ಮಹಿಳೆಯರು ಗರ್ಭ ಧರಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರೊ ಅವರು ಪ್ರೀನೇಟ್ ವಿಟಮಿನ್ಸ್ ಸೇವನೆ ಶುರು ಮಾಡಬೇಕು. ಇದರ ಹೊರತಾಗಿ ಆರೋಗ್ಯಕರ ಆಹಾರ ಸೇವಿಸಬೇಕು. ಹೆರಿಗೆಯ ಬಳಿಕ ವಿಟಮಿನ್ಸ್ ಸೇವನೆ ಮಾಡುತ್ತಿರಬೇಕು. ಇದರಿಂದ ತಾಯಿ ಹಾಗೂ ಮಗು ಇಬ್ಬರ ಆರೋಗ್ಯ ಚೆನ್ನಾಗಿರುತ್ತದೆ.
ಪೋಷಕಾಂಶ ಸಂಬಂಧಿ ಅಗತ್ಯಗಳು
ಕಬ್ಬಿಣಾಂಶ : ದೇಹದಲ್ಲಿ ಹಿಮೋಗ್ಲೋಬಿನ್ ತಯಾರಾಗಲು ಕಬ್ಬಿಣಾಂಶ ತುಂಬಾ ಮುಖ್ಯ. ಅದು ಕೆಂಪು ರಕ್ತ ಕಣದಲ್ಲಿ ಕಂಡುಬರುತ್ತದೆ. ಕೆಂಪು ರಕ್ತಗಣಗಳು ದೇಹದೆಲ್ಲೆಡೆ ಆಮ್ಲಜನಕ ಪೂರೈಸಲು ನೆರವಾಗುತ್ತವೆ. ಒಂದು ವೇಳೆ ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾಗಿಬಿಟ್ಟಲ್ಲಿ ದೇಹದ ಎಲ್ಲ ಅಂಗಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಆಗುವುದಿಲ್ಲ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೆ ಮಹಿಳೆ ರಕ್ತಹೀನತೆಗೆ ತುತ್ತಾಗುತ್ತಾಳೆ. ಆಗ ಆಕೆಯ ದೇಹದಲ್ಲಿ ರೋಗದೊಂದಿಗೆ ಹೋರಾಡುವ ಶಕ್ತಿ ಉಳಿದಿರುವುದಿಲ್ಲ.
ಪ್ರೀನೇಟ್ ವಿಟಮಿನ್ : ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕಂದನಿಗೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ ದೊರಕಬೇಕೆಂದು ಗರ್ಭಿಣಿಯರಿಗೆ ಪ್ರೀನೇಟ್ ವಿಟಮಿನ್ಸ್ ತೆಗೆದುಕೊಳ್ಳುವ ಸಲಹೆ ನೀಡಲಾಗುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಪ್ರೀನೇಟ್ ವಿಟಮಿನ್ಸ್ ಸೇವಿಸುವ ಅಗತ್ಯ ಕಂಡುಬರುವುದಿಲ್ಲ. ಹಾಗಾಗಿ ಎಲ್ಲಿಯವರೆಗೆ ವಿಟಮಿನ್ಸ್ ಸೇವಿಸುವುದನ್ನು ಮುಂದುವರಿಸಬೇಕು ಎಂದು ನಿಮ್ಮ ವೈದ್ಯರಿಗೆ ಕೇಳಿ ನೋಡಿ.
ಒಮೇಗಾ 3 ಫ್ಯಾಟಿ ಆ್ಯಸಿಡ್ : ಮಗುವಿಗೆ ಜನನ ನೀಡಿದ ಬಳಿಕ ಸ್ತನ್ಯಪಾನ ಮಾಡಿಸುವ ಮಹಿಳೆಯರು ಒಮೇಗಾ 3 ಫ್ಯಾಟಿ ಆ್ಯಸಿಡ್ ನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಸೋಯಾ, ಅಖರೋಟ್, ಸಿಹಿಗುಂಬಳ ಬೀಜ, ಅಗಸೆ ಬೀಜ ಇವುಗಳಲ್ಲಿ ಒಮೇಗಾ 3 ಫ್ಯಾಟಿ ಆ್ಯಸಿಡ್ಸ್ ಹೇರಳವಾಗಿರುತ್ತದೆ.
ಕ್ಯಾಲ್ಶಿಯಂ : ಮಹಿಳೆಗೆ ಜೀವನದ ಪ್ರತಿಯೊಂದು ಹಂತದಲ್ಲಿ ಕ್ಯಾಲ್ಶಿಯಂ ಸೂಕ್ತ ಪ್ರಮಾಣದಲ್ಲಿ ಬೇಕೇಬೇಕು. ಇದಕ್ಕಾಗಿ ಹಾಲು, ಹಾಲಿನ ಉತ್ಪನ್ನಗಳು, ಹಸಿರು ಸೊಪ್ಪುಗಳು, ಕ್ಯಾಲ್ಶಿಯಂ ಪೋರ್ಟಿಫೈಡ್ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಹೆರಿಗೆಯ ಬಳಿಕ ವಿಶೇಷ ಸಲಹೆ : ಮಹಿಳೆಯರಿಗೆ ಆರಂಭದ ದಿನಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಆರೋಗ್ಯಕರ ಆಹಾರದ ಬಗ್ಗೆ ಗಮನ ಕೊಡಲು ಆಗುವುದಿಲ್ಲ ಹಾಗೂ ಗೊತ್ತಿದ್ದೊ ಗೊತ್ತಿಲ್ಲದೆಯೋ ಹೈಕ್ಯಾಲೋರಿ ಆಹಾರಗಳನ್ನು ಸೇವಿಸುತ್ತಿರುತ್ತಾರೆ. ಈ ಅವಧಿಯಲ್ಲಿ ಅವರು ಹಣ್ಣು ತರಕಾರಿ, ಬೇಯಿಸಿದ ಮೊಟ್ಟೆ, ದ್ರಾಕ್ಷಿ, ಬಾಳೆಹಣ್ಣು, ಕ್ಯಾರೆಟ್, ಒಣದ್ರಾಕ್ಷಿ ಹಾಗೂ ಇತರೆ ಡ್ರೈಫ್ರೂಟ್ಸ್ ಸೇವಿಸಬೇಕು.
ಒಂದೇ ಸಲಕ್ಕೆ ಹೆಚ್ಚು ಆಹಾರ ಸೇವಿಸಬೇಡಿ : ಒಂದೇ ಸಲಕ್ಕೆ ಹೊಟ್ಟೆ ತುಂಬ ಸೇವಿಸದೆ ಮೇಲಿಂದ ಮೇಲೆ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾ ಇರಬೇಕು. ಇದರಿಂದ ದಿನವಿಡೀ ಎನರ್ಜಿ ಉಳಿಯುತ್ತದೆ. ಹೊಟ್ಟೆ ತುಂಬಾ ಊಟ ಮಾಡಿದಾಗ ಅದು ಪಚನವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚು ಆಹಾರ ಸೇವನೆಯಿಂದ ತಾಯಿಗೆ ಪರಿಪೂರ್ಣ ನಿದ್ರೆಯೂ ಆಗದು. ಹಾಗಾಗಿ ಆಗಾಗ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದು ಒಳ್ಳೆಯದು.
ಡೀಹೈಡ್ರೇಶನ್ ನಿಂದ ಬಚಾವಾಗಿ : ಹೆರಿಗೆಯ ಸಂದರ್ಭದಲ್ಲಿ ಮಹಿಳೆಯ ದೇಹದಿಂದ ಸಾಕಷ್ಟು ದ್ರವ ಪದಾರ್ಥಗಳು ಹೊರಟು ಹೋಗುತ್ತವೆ. ಹೀಗಾಗಿ ಈ ಅವಧಿಯಲ್ಲಿ ಡೀಹೈಡ್ರೇಶನ್ ಬಗ್ಗೆ ವಿಶೇಷ ಗಮನ ಕೊಡಿ. ಡೀಹೈಡ್ರೇಶನ್ ನಿಂದ ತಾಯಿಗೆ ನಿಶ್ಶಕ್ತಿ ಹಾಗೂ ಹೆಚ್ಚು ದಣಿವಿನ ಅನುಭವ ಉಂಟಾಗುತ್ತದೆ.
ಹೆರಿಗೆಯ ಬಳಿಕ ಪೋಷಣೆ ಹಾಗೂ ತೂಕ ಇಳಿಕೆ : ಹೆರಿಗೆಯ ಬಳಿಕ ಮಹಿಳೆಯರು ತಕ್ಷಣವೇ ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಆ ಕಾರಣದಿಂದ ಸೂಕ್ತ ಆಹಾರ ಸೇವನೆ ಮಾಡುವುದಿಲ್ಲ. ಸ್ತನ್ಯಪಾನದಿಂದ ತೂಕ ತಂತಾನೇ ಕಡಿಮೆಯಾಗುತ್ತದೆ. ಸ್ತನ್ಯಪಾನ ಮಾಡಿಸುವ ಮಹಿಳೆಗೆ ದಿನಕ್ಕೆ 300 ಹೆಚ್ಚುವರಿ ಕ್ಯಾಲೋರಿಯ ಅವಶ್ಯಕತೆ ಉಂಟಾಗುತ್ತದೆ. ಹೀಗಾಗಿ ವೈದ್ಯರ ಸಲಹೆಯ ಮೇರೆಗೆ ವ್ಯಾಯಾಮ ಮಾಡಿ ಮತ್ತು ಹೆಚ್ಚುವರಿ ಕ್ಯಾಲೋರಿಯ ಸೇವನೆಯಿಂದ ರಕ್ಷಿಸಿಕೊಳ್ಳಿ.
– ಡಾ. ಶೃತಿ ಶರ್ಮ