ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸಿನ ಪತಾಕೆ ಹಾರಿಸುತ್ತಿರುವುದುರ ಹೊರತಾಗಿಯೂ, ಈಗಲೂ ದೇಶದ ಅರ್ಧದಷ್ಟು ಜನತೆಗೆ ಪ್ರಗತಿಯ ದಾರಿಯಲ್ಲಿ ಸಾಗಲು ಅಡೆತಡೆ ಉಂಟಾಗುತ್ತಿರುವುದೇಕೆ?
`ಅಮ್ಮಾವ್ರ ಗಂಡ’ ಎಂಬ ಗಾದೆ ಮಾತನ್ನು ಜನರು ಸಾಮಾನ್ಯವಾಗಿ ತಮಾಷೆಗಾಗಿ ಬಳಕೆ ಮಾಡುತ್ತಾರೆ. ಅಂದಹಾಗೆ ಮಹಿಳೆಯರನ್ನು ಇಡೀ ವಿಶ್ವವೇ ಎರಡನೇ ದರ್ಜೆಯರಂತೆ ಪರಿಗಣಿಸುತ್ತದೆ. ಅಲ್ಲಿ ಪುರುಷನೇ ಮನೆಯ ಯಜಮಾನನಾಗಿರುತ್ತಾನೆ. ಆದರೆ ನಿಮಗೆ ಒಂದು ವಿಷಯ ಕೇಳಿ ಆಶ್ಚರ್ಯ ಆಗಬಹುದು, ಆ ಪ್ರದೇಶದಲ್ಲಿ ಪುರುಷರು ಮಹಿಳೆಯರ ಗುಲಾಮರೇ ಆಗಿರುತ್ತಾರೆ.
`ವಿಮನ್ ಓವರ್ ಮೆನ್’ ಎಂಬ ತತ್ವದಂತೆ ಈ ಭಾಗದ ಅಧಿಕಾರ ಕೂಡ ಒಬ್ಬ ಮಹಿಳೆಯ ಕೈಯಲ್ಲಿಯೇ ಇದೆ. ಈ `ಅದರ್ ವರ್ಲ್ಡ್ ಕಿಂಗ್ಡಮ್’ 1996ರಲ್ಲಿ ಯೂರೋಪಿಯನ್ ದೇಶ `ಝೆಕ್ ರಿಪಬ್ಲಿಕನ್’ನ ಒಂದು ಫಾರ್ಮ್ ಹೌಸ್ ನಲ್ಲಿ ಸೃಷ್ಟಿಯಾಯಿತು. ಈ ದೇಶದ ರಾಣಿ ಪೆಟ್ರಿಸಿಯಾ (ಪ್ರಥಮ) ಆಗಿದ್ದು, ಬಾಹ್ಯ ಜಗತ್ತು ಇದುವರೆಗೂ ಆಕೆಯ ಮುಖ ನೋಡಿಲ್ಲ.
ಈ ದೇಶದ ಮೂಲ ನಾಗರಿಕರು ಕೇವಲ ಮಹಿಳೆಯರು. ಅಲ್ಲಿ ಪುರುಷರು ಇದ್ದಾರೆ. ಆದರೆ ಅವರು ಗುಲಾಮರ ರೀತಿಯಲ್ಲಿ ಇರುತ್ತಾರೆ. ಜಗತ್ತಿನಲ್ಲಿ ಇಂತಹದೊಂದು ದೇಶ ಇದೆಯೆಂದು ಇದು ಸಾಬೀತುಪಡಿಸುತ್ತದೆ.
ಭಾರತದ ಮಣಿಪುರ ರಾಜ್ಯದ ಇಂಫಾಲದಲ್ಲಿ `ಇಮಾ ಬಾಜಾರ್’ ಬಹುದೊಡ್ಡ ಮಾರುಕಟ್ಟೆ. ಅದನ್ನು ಮಣಿಪುರದ ಲೈಫ್ ಲೈನ್ ಎಂದೂ ಕರೆಯಲಾಗುತ್ತದೆ. ಈ ಮಾರುಕಟ್ಟೆಯ ವಿಶೇಷತೆ ಏನೆಂದರೆ ಇಲ್ಲಿನ ಹೆಚ್ಚಿನ ಅಂಗಡಿಗಳು ಮಹಿಳೆಯರದೇ ಆಗಿವೆ. ಖರೀದಿದಾರರು ಕೂಡ ಮಹಿಳೆಯರೇ ಆಗಿರುತ್ತಾರೆ.
4000ಕ್ಕೂ ಹೆಚ್ಚು ಅಂಗಡಿಗಳಿರುವ ಆ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು, ಬಟ್ಟೆ, ದಿನಸಿ ಸಾಮಗ್ರಿಗಳು ಹೀಗೆ ಎಲ್ಲ ಪ್ರಕಾರದ ಅಂಗಡಿಗಳಿವೆ. ಇಲ್ಲಿನ ಯಾವುದೇ ಅಂಗಡಿಯಲ್ಲಿ ಪುರುಷರಿಗೆ ಕೆಲಸ ಮಾಡಲು ಅನುಮತಿ ನೀಡಲಾಗುವುದಿಲ್ಲ.
ಈ ಮಾರುಕಟ್ಟೆ ಸ್ಥಾಪನೆಯಾದದ್ದು 1786ರಲ್ಲಿ. ಆಗ ಮಣಿಪುರದ ಬಹುತೇಕ ಪುರುಷರು ಚೀನಾ ಮತ್ತು ಬರ್ಮಾದಲ್ಲಿ ನಡೆಯುತ್ತಿದ್ದ ಯುದ್ಧದಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಆ ಸಂದರ್ಭದಲ್ಲಿ ಮಹಿಳೆಯರೇ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದರು. ಅವರು ಮನೆಯಿಂದ ಹೊರಗೆ ಬಂದು ಅಂಗಡಿಗಳನ್ನು ಇಟ್ಟುಕೊಂಡು ಹಣ ಗಳಿಸಿದರು. ಈ ರೀತಿಯಿಂದಾಗಿ ಸಾಮಾಜಿಕ ವ್ಯವಸ್ಥೆಯಲ್ಲಾದ ಬದಲಾವಣೆ ಪರಂಪರೆಯಾಗಿ ಪರಿವರ್ತನೆಯಾಯಿತು.
ಸಮಾಜದ ರಚನೆ
ಅಂದಹಾಗೆ, ನಾವು ಯಾವ ಸಮಾಜದಲ್ಲಿ ವಾಸಿಸುತ್ತೇವೆ, ಅದರ ರಚನೆ ಕೂಡ ನಮ್ಮಿಂದಲೇ ಆಗಿದೆ. ಜೀವನವನ್ನು ಸುಲಭಗೊಳಿಸಲು, ಒಂದೇ ರೀತಿಯದ್ದಾಗಿಸಲು, ಬೇರೆ ಅಗತ್ಯಗಳಿಗನುಸಾರ ಮನುಷ್ಯನು ಸಮಾಜದ ರೀತಿನೀತಿಗಳು ಹಾಗೂ ಪರಂಪರೆಯನ್ನು ಹುಟ್ಟುಹಾಕಿದರು. ಮಹಿಳೆಯರು ಹಾಗೂ ಪುರುಷರ ಪಾತ್ರಗಳ ಬಗ್ಗೆ ನಿರ್ಧರಿಸಲಾಯಿತು. ಪುರುಷರು ದೈಹಿಕವಾಗಿ ಬಲಿಷ್ಠರಾಗಿದ್ದುದರಿಂದ ಅವರಿಗೆ ಬಾಹ್ಯ ಕೆಲಸ ಹಾಗೂ ಹಣಸಂಪತ್ತು ಕ್ರೋಢೀಕರಿಸುವ ಜವಾಬ್ದಾರಿ ವಹಿಸಿಕೊಡಲಾಯಿತು. ಮಹಿಳೆಯರು ಮಕ್ಕಳಿಗೆ ಜನ್ಮ ಕೊಡುವುದರಿಂದ ಅವರಿಗೆ ಮಕ್ಕಳ ಪಾಲನೆ ಪೋಷಣೆ ಮತ್ತು ಮನೆ ನಿರ್ವಹಣೆಯ ಜವಾಬ್ದಾರಿ ಹೊರಿಸಲಾಯಿತು.
ಆದರೆ ಇದರರ್ಥ ಮಹಿಳೆ ಮತ್ತು ಪುರುಷರಲ್ಲಿ ಹುಟ್ಟಿನಿಂದಲೇ ಯಾವುದಾದರೂ ಅಂತರ ಇರುತ್ತದೆ ಎಂದಲ್ಲ, ಅವರು ಎಲ್ಲದರಲ್ಲೂ ಸಮಾನರು. ಸಮಾಜವೇ ಅವರ ಸ್ವಭಾದಲ್ಲಡಗಿದ ಗುಣ ಹಾಗೂ ಪಾತ್ರಗಳಿಂದಲೇ ನೀವು ಇಂತಿಂಥ ಜವಾಬ್ದಾರಿ ನಿಭಾಯಿಸಿ ಎಂದು ಸೂಚಿಸುತ್ತದೆ.
ಹುಡುಗಿಯರು ಅಧಿಕ ಸಂವೇದನಾಶೀಲ ಹಾಗೂ ಬುದ್ಧಿಕೌಶಲ ಇಟ್ಟುಕೊಂಡು ಹುಟ್ಟುತ್ತಾರೆಂದಲ್ಲ. ಅದೇ ರೀತಿ ಹುಡುಗರು ಅಧಿಕಾರ ಗುಣ ಮತ್ತು ಶಕ್ತಿ ಪಡೆದು ಹುಟ್ಟುತ್ತಾರೆಂದೇನಿಲ್ಲ. ಬಾಲ್ಯದಿಂದಲೇ ಸಮಾಜ ಅವರಿಗೆ ಈ ರೀತಿಯ ಶಿಕ್ಷಣ ನೀಡಿ ಬೆಳಸುತ್ತದೆ.
ಜವಾಬ್ದಾರಿಗಳು ಏಕೆ ಹಂಚಲ್ಪಟ್ಟವು?
ಈ ನಿಟ್ಟಿನಲ್ಲಿ ಹೆಸರಾಂತ ಮಾನವ ಶಾಸ್ತ್ರಜ್ಞ ಮತ್ತು ಸಮಾಜ ವಿಜ್ಞಾನಿ ಮಾರ್ಗರೇಟ್ ಮಾಂಡ್ ರ ಅಧ್ಯಯನ ಸಾಕಷ್ಟು ರೋಚಕವಾಗಿದೆ. ಅವರು ಇಡೀ ವಿಶ್ವದ ಬೇರೆ ಬೇರೆ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಅಧ್ಯಯನ ಮಾಡಿದಾಗ, ಅಲ್ಲೆಲ್ಲ ಪುರುಷರದೇ ಪ್ರಾಬಲ್ಯ ಹಾಗೂ ಮಹಿಳೆ ಮತ್ತು ಪುರುಷರ ಜವಾಬ್ದಾರಿಗಳು ಹಂಚಿಕೆಯಾಗಿವೆ ಎನ್ನುವುದು ಖಾತ್ರಿಯಾಯಿತು.
ಸಂಶೋಧನೆಯ ಸಂದರ್ಭದಲ್ಲಿ ಅವರಿಗೆ ಕೆಲವು ಪಂಗಡಗಳ ಸಾಮಾಜಿಕ ವ್ಯವಸ್ಥೆಯಲ್ಲಿ ಅಪರೂಪದ್ದೆನ್ನಬಹುದಾದ ಕೆಲವು ಸಂಗತಿಗಳು ಗೋಚರಿಸಿದವು, 1935ರಲ್ಲಿ ಪ್ರಕಾಶನಗೊಂಡ ಅವರ ಪುಸ್ತಕ ಸೆಕ್ಸ್ ಟೆಂಪರ್ ಮೆಂಟ್ ಇನ್ ಥ್ರೀ ಪ್ರಿಮಿಟಿವ್ ಸೊಸೈಟೀಸ್ ‘ನಲ್ಲಿ 3 ಪಂಗಡಗಳ ವಿವರಣೆ ಇದ್ದು, ಅಲ್ಲಿ ಸ್ತ್ರೀ-ಪುರುಷರ ಪಾತ್ರಗಳು ಬೇರೆಬೇರೆಯಾಗಿ ವಿಂಗಡಿಸಲ್ಪಟ್ಟಿವೆ.
ನ್ಯೂ ಗಯಾನಾ ಐಲ್ಯಾಂಡ್ ನ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಅರಾಪೇಶ ಎಂಬ ಪಂಗಡದಲ್ಲಿ ಮಹಿಳೆ ಹಾಗೂ ಪುರುಷರ ಪಾತ್ರಗಳು ಹೆಚ್ಚು ಕಡಿಮೆ ಸಮಾನವಾಗಿವೆ. ಮಕ್ಕಳ ಪಾಲನೆ ಪೋಷಣೆಯಲ್ಲಿ ಇಬ್ಬರ ಪಾತ್ರ ಸಮಾನವಾಗಿವೆ. ಕೃಷಿ ಚಟುವಟಿಕೆಯಲ್ಲಿ ಇಬ್ಬರೂ ಸೇರಿಯೇ ಕೆಲಸ ಮಾಡುತ್ತಾರೆ. ಸ್ತ್ರೀಪುರುಷರ ನಡುವೆ ಅಂತರವಿತ್ತು. ಆದರೆ ಅದು ಪಾರಂಪರಿಕ ಯೋಚನೆಯಿಂದ ಭಿನ್ನವಾಗಿತ್ತು.
ಪುರುಷರು ಮಾನಸಿಕವಾಗಿ ಡಿಫರೆಂಟ್ ಹಾಗೂ ಕಡಿಮೆ ಜವಾಬ್ದಾರಿ ಪಡೆದವರಾಗಿದ್ದರು. ಅವರು ಅಡುಗೆ ತಯಾರಿಸುವ ಮನೆ ಸ್ವಚ್ಛಗೊಳಿಸು ಹಾಗೂ ಮಕ್ಕಳನ್ನು ನಿರ್ವಹಿಸುವ ಕೆಲಸ ಮಾಡುತ್ತಿದ್ದರು. ಮಹಿಳೆಯರು ಹೆಚ್ಚು ತರ್ಕಬದ್ಧ, ಬುದ್ಧಿ ಕೌಶಲ ಹಾಗೂ ಡಾಮಿನೆಂಟ್ ಆಗಿದ್ದರು.
ಲಿಂಗ ಸಮಾನತೆಯ ಉದಾಹರಣೆಗಳು
19ನೇ ಶತಮಾನದಲ್ಲಿ ಇಸ್ರೇಲ್ ನ ಕಿಬುಟ್ಸ್ ಎಂಬ ಸಮುದಾಯ ಲಿಂಗ ಸಮಾನತೆಗೆ ಒಂದು ಒಳ್ಳೆಯ ಉದಾಹರಣೆಯಾಗಿದೆ. ಆಗ ಔದ್ಯಮಿಕ ಕ್ರಾಂತಿಗಿಂತ ಮೊದಲಿನ ದಿನಗಳು. ಅಲ್ಲಿನ ಜನರು ಕೃಷಿ ಕೆಲಸಗಳನ್ನು ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಈ ಸಮುದಾಯದ ಮಹಿಳೆಯರು ಅಡುಗೆ ಮಾಡುವುದು, ಮಕ್ಕಳ ನಿರ್ವಹಣೆ ಮುಂತಾದ ಕೆಲಸಗಳನ್ನು ಮಾಡಲು ಪುರುಷರಿಗೆ ಪ್ರೋತ್ಸಾಹ ಕೊಡುತ್ತಿದ್ದರು.
ಅದರ ಜೊತೆಗೆ ತಾವು ಆ ಕೆಲಸ ಮಾಡುತ್ತಾರೆ. ಇದರ ಜೊತೆ ಜೊತೆಗೆ ಪುರುಷರು ಮಾಡುವ ಕೆಲಸಗಳಾದ ಧಾನ್ಯ ಉತ್ಪಾದನೆ, ಮನೆಯ ಸುರಕ್ಷತೆ ಈ ಎಲ್ಲವನ್ನೂ ಪುರುಷರಿಬ್ಬರೂ ಸೇರಿಯೇ ಮಾಡುತ್ತಾರೆ. ಅವರು ಪ್ರತಿದಿನ ಅಥವಾ ವಾರಕ್ಕೊಮ್ಮೆ ತಮ್ಮ ಕೆಲಸಗಳನ್ನು ಬದಲಿಸುತ್ತಿದ್ದರು. ಸ್ತ್ರೀಪುರುಷರಿಬ್ಬರೂ ಕೆಲಸ ಕಾರ್ಯಗಳನ್ನು ಮಾಡಲು ಇದರಿಂದ ಸಹಾಯವಾಗುತ್ತಿತ್ತು. ಈಗಲೂ ಇಸ್ರೇಲ್ ನಲ್ಲಿ 200ಕ್ಕೂ ಹೆಚ್ಚು ಕಿಬುಟ್ಸ್ ಸಮುದಾಯದವರು ವಾಸಿಸುತ್ತಿದ್ದು, ಲಿಂಗ ಸಮಾನತೆಯ ಆಧಾರದ ಮೇಲೆ ಸಾಮಾಜಿಕ ವ್ಯವಸ್ಥೆ ನಿಂತಿದೆ.
ಈ ರೀತಿಯ ಸಾಮಾಜಿಕ ವ್ಯವಸ್ಥೆಯನ್ನು ಆದರ್ಶವೆಂದು ಹೇಳಬಹುದು. ಆದರೆ ವಾಸ್ತವದಲ್ಲಿ ಇಂತಹ ಉದಾಹರಣೆಗಳು ಸಿಗುವುದು ಕಡಿಮೆ. ಇಡೀ ಜಗತ್ತಿನ ಪರಿಸ್ಥಿತಿ ಏನಾಗಿದೆ ಎಂದರೆ, ಮಹಿಳೆಯರು ಮನೆ, ಮಕ್ಕಳ ನಿರ್ವಹಣೆ ಮಾಡಬೇಕು ಹಾಗೂ ಪುರುಷರು ಹೊರಗಿನ ಜವಾಬ್ದಾರಿ ನಿಭಾಯಿಸಿ ಹಣ ಗಳಿಸಿ ತರಬೇಕು. ಇದರಿಂದ ಪುರುಷರಲ್ಲಿ ವರ್ಚಸ್ವೀ ಭಾವನೆ ಮನೆ ಮಾಡುತ್ತ ಹೋಯಿತು. ಕುಟುಂಬ ಹಾಗೂ ಸಮಾಜದಲ್ಲಿ ಮಹಿಳೆಯರನ್ನು ಎರಡನೇ ದರ್ಜೆಯವರಂತೆ ಕಾಣಲಾಯಿತು. ಅವರು ನಾಲ್ಕು ಗೋಡೆಗಳ ಮಧ್ಯೆ ಬಂಧಿಗಳಂತಾದರು. ಪುರುಷರು ಮಾತ್ರ ಮನೆಯ ಮುಖ್ಯಸ್ಥರಾಗುತ್ತ ಹೋದರು.
ಕಳೆದ ಕೆಲವು ದಶಕಗಳಿಂದ ಪರಿಸ್ಥಿತಿ ಬದಲಾಗಿದೆ. ಅದೆಷ್ಟೋ ಮಹಿಳೆಯರು ತಮ್ಮ ಕುಟುಂಬ, ದೇಶದ ಹೆಸರನ್ನು ಬೆಳಗಿಸಿದ್ದಾರೆ. ಕ್ರೀಡೆ, ವೈದ್ಯಕೀಯ, ಎಂಜಿನಿಯರಿಂಗ್, ಪರ್ವತಾರೋಹಣದಂತಹ ಕ್ಷೇತ್ರಗಳೇ ಆಗಿರಬಹುದು. ಅಭಿನಯ, ಬರವಣಿಗೆ, ಶಿಕ್ಷಣ, ವೈದ್ಯಕೀಯ, ಕಾನೂನು ಹಾಗೂ ಕಲೆಯ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಹಿರಿಮೆ ಮೆರೆದಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಶೀತಲ್ ಹೀಗೆ ಹೇಳುತ್ತಾರೆ, ಸ್ತ್ರೀ ಹಾಗೂ ಪುರುಷರು ಜೈವಿಕ ರೂಪದಲ್ಲಿ ಬೇರೆ ಬೇರೆ ಎನ್ನುವುದು ನಿಜ, ಆದರೆ ಸಾಮಾಜಿಕ ಭೇದವನ್ನು ಸಾಮಾಜೀಕರಣದ ಕ್ರಿಯೆಯ ಮುಖಾಂತರ ಉತ್ಪನ್ನ ಮಾಡಲಾಗುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸ್ಥಿತಿ ಎರಡನೇ ದರ್ಜೆ ನಾಗರಿಕನಂತಿದೆ. ಇದು ಪ್ರತಿಯೊಂದು ದೇಶದಲ್ಲೂ, ಕ್ಷೇತ್ರದಲ್ಲೂ ಆಗುತ್ತಿದೆ. ಮಹಿಳೆ ತನ್ನ ಹಕ್ಕುಗಳಿಗಾಗಿ ಬಹು ದೀರ್ಘ ಹೋರಾಟ ಮಾಡಿದ್ದಾಳೆ. ಆದರೆ ಈಗಲೂ ಪರಿಸ್ಥಿತಿ ಸಾಕಷ್ಟು ಸುಧಾರಣೆಗೊಂಡಿಲ್ಲ. ಪ್ರತಿಯೊದು ಹಂತದಲ್ಲೂ ಮಹಿಳೆಯ ಹೋರಾಟ ನಿರಂತರವಾಗಿ ಮುಂದುವರಿದಿದೆ.
ಸ್ವಾವಲಂಬಿ ಮಹಿಳೆ ಕೂಡ ಶೋಷಿತೆ
ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೂ ಆಕೆ ತನ್ನ ಕೆಲಸದ ಸ್ಥಳದಲ್ಲಿ ಬಗೆಬಗೆಯ ಶೋಷಣೆ, ಅವಮಾನಗಳಿಗೆ ತುತ್ತಾಗುತ್ತಿದ್ದಾಳೆ. ಖೇದದ ಸಂಗತಿಯೆಂದರೆ, ನಮ್ಮ ಸಮಾಜದಲ್ಲಿ ಪಕ್ಷಪಾತದ ಧೋರಣೆ ಒಂದು ಪರಂಪರೆಯಂತೆ ಮುಂದುವರಿಯುತ್ತಿದೆ. ಮನೆ, ಆಫೀಸ್ ಅಥವಾ ರಸ್ತೆ ಹೀಗೆ ಎಲ್ಲೆಲ್ಲೂ ಮಹಿಳೆ ಪುರುಷನಿಂದ ಶೋಷಣೆಗೊಳಗಾಗಬಹುದು. ಅವಳನ್ನು ದುರ್ಬಲ ಎಂದು ಭಾವಿಸಿ ಶೋಷಣೆಗೀಡು ಮಾಡಬಹುದು.
ಈ ಕುರಿತಂತೆ ಶೀತಲ್ ಹೀಗೆ ಹೇಳುತ್ತಾರೆ, “ಮಹಿಳೆಯರಿಗೆ ಸಮಾನತೆ ದೊರಕಿಸಿಕೊಡಬೇಕೆಂದರೆ ಮಹಿಳೆಯರೇ ಸ್ವತಃ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು, ಸಕಾರಾತ್ಮಕ ಹೆಜ್ಜೆ ಇಡಬೇಕು. ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕಿದೆ. ಅವರು ತಮ್ಮ ಸ್ವತಂತ್ರ ಅಸ್ತಿತ್ವ ಕಂಡುಕೊಳ್ಳುವುದು ಹಾಗೂ ಅದನ್ನು ಖಾಯಂ ಆಗಿ ಮುಂದುವರಿಸಲು ಸ್ವಾವಲಂಬಿಯಾಗುವುದು ಅತ್ಯವಶ್ಯ.”
ಒಂದು ವಾಸ್ತವ ಸಂಗತಿಯೆಂದರೆ, ಬಲಿಷ್ಠರೇ ದುರ್ಬಲರನ್ನು ಶೋಷಣೆ ಮಾಡುತ್ತಾರೆ. ಯಾರೊಬ್ಬರೂ ನಮ್ಮ ಮೇಲೆ ಅನ್ಯಾಯ ಮಾಡುವಂತಹ ಯೋಚನೆ ಕೂಡ ಮಾಡದಂತೆ ನಮ್ಮನ್ನು ನಾವು ಏಕೆ ಗಟ್ಟಿಗೊಳಿಸಿಕೊಳ್ಳಬಾರದು?
ಪುರುಷ ಪ್ರಾಬಲ್ಯದ ಸಾಮಾಜಿಕ ರಚನೆಯನ್ನು ಬಹಿಷ್ಕಾರ ಮಾಡುತ್ತ, ಅನೇಕ ಮಹಿಳೆಯರು ತಮ್ಮ ಅಸ್ತಿತ್ವವನ್ನು ಖಾಯಂಗೊಳಿಸಿಕೊಂಡು ಸಮಾಜದ ಮುಂದೆ ಉತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಿದ್ದಾರೆ.
ಹೈದರಾಬಾದ್ ನ ವಾರಂಗ್ ನ ಜ್ಯೋತಿ ರೆಡ್ಡಿ 1989ರಲ್ಲಿ ದಿನಕ್ಕೆ 5 ರೂ. ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರು ಅಮೆರಿಕದ ಒಂದು ಕಂಪನಿಯ ಸಾಫ್ಟ್ ವೇರ್ ಸಲ್ಯೂಷನ್ಸ್ ನ ಸಿಇಓ ಆಗಿ ಕೋಟ್ಯಂತರ ಬಿಸ್ ನೆಸ್ ನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಮಹಿಳೆಯರ ವಿರುದ್ಧ ಕೆಂಡ ಕಾರುತ್ತಿದ್ದ ಸಮಾಜದ ನಡುವೆಯೇ ಜ್ಯೋತಿ ರೆಡ್ಡಿ ಉನ್ನತ ಸ್ಥಾನಕ್ಕೆ ಪಾರಂಪರಿಕ ಸಮಾಜ ವ್ಯವಸ್ಥೆಯಿಂದ ಹೊರಬರುವುದು ಕಠಿಣ, ಆದರೆ ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸಿದರು. ಅದಕ್ಕಾಗಿ ನಮ್ಮ ಸಾಮರ್ಥ್ಯವನ್ನು ಗುರುತಿಸುವ ಅಗತ್ಯವಿದೆ.
ಪ್ರೇರಣೆ ಅತ್ಯಗತ್ಯ
ಪುರುಷ ದೈಹಿಕವಾಗಿ ಬಲಶಾಲಿ, ಮಹಿಳೆ ದುರ್ಬಲಳಾಗಿರುತ್ತಾಳೆ ಎಂದೆಲ್ಲ ಹೇಳಲಾಗುತ್ತದೆ. ಆದರೆ ಕೆಲವು ಮಹಿಳೆಯರು ಅದನ್ನು ತಪ್ಪು ಎಂದು ತಮ್ಮ ಕರ್ತೃತ್ವದ ಶಕ್ತಿಯ ಮೂಲಕ ಸಾಬೀತುಪಡಿಸಿದರು.
48 ವರ್ಷದ ಸೀಮಾ ರಾವ್ ಕೂಡ ಅಂಥದೇ ಓರ್ವ ಸಾಹಸಿ ಮಹಿಳೆ. ಸೆವೆಂಥ್ ಡಿಗ್ರಿ ಬ್ಲ್ಯಾಕ್ ಬೆಲ್ಟ್ ಹೋಲ್ಡರ್, ಕಾಂಬೆಟ್‌ಶೂಟಿಂಗ್ ಇನ್ ಸ್ಪೆಕ್ಟರ್, ಫೈರ್ ಫೈಟರ್, ಸ್ಕೂಬಾ ಡ್ರೈವರ್ ಮತ್ತು ರಾಕ್ ಕ್ಲೈಂಬಿಂಗ್ ನಲ್ಲಿ ಎಚ್‌ಎಂಇ ಮೆಡಲಿಸ್ಟ್ ಸೀಮಾರಾವ್ ಕಳೆದ 20 ವರ್ಷಗಳಲ್ಲಿ ಭಾರತೀಯ ಸೈನಿಕರಿಗೆ ತರಬೇತಿ ನೀಡುತ್ತಿದ್ದಾರೆ. ಅವರು ಭಾರತದ ಏಕೈಕ ಮಹಿಳಾ ಕಮಾಂಡೊ ಟ್ರೇನರ್ ಆಗಿದ್ದಾರೆ.
ಮೂವರು ಸಹೋದರಿಯರಲ್ಲಿ ಮೂರನೆಯವರಾದ ಸೀಮಾ ರಾವ್ ತಂದೆ ಸ್ವಾತಂತ್ರ್ಯ ಹೋರಾಟಗಾರರು. ಅವರ ಪ್ರೇರಣೆಯಿಂದ ಸೀಮಾರ ಮನಸ್ಸಿನಲ್ಲಿ ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಪ್ರೇರಣೆ ದೊರೆಯಿತು. ಹಾಗಾಗಿ ಅವರು ಮೆಡಿಕಲ್ ಲೈನ್ ಬಿಟ್ಟು ಸ್ವಯಂಪ್ರೇರಣೆಯಿಂದ ಕಮಾಂಡೋ ಟ್ರೇನರ್ ಆದರು. ಈವರೆಗೆ ಅವರು 2000ಕ್ಕೂ ಹೆಚ್ಚು ಸೈನಿಕರಿಗೆ ತರಬೇತಿ ನೀಡಿದ್ದಾರೆ.
ಸೀಮಾ ರಾವ್ ಗೆ ಪತಿ ದೀಪಕ್ ರಾವ್ ರ ಬೆಂಬಲ ಸದಾ ಸಿಗುತ್ತಿರುತ್ತದೆ. ಮನೆ, ಕುಟುಂಬ ಹತ್ತು ಹಲವು ಜವಾಬ್ದಾರಿಗಳ ನಡುವೆ ಈ ರೀತಿಯ ಕೆಲಸ ಮಾಡುವುದು ಅಸಾಧ್ಯವೇ ಸರಿ.
ಸೀಮಾ ರಾವ್ ಹೇಳುತ್ತಾರೆ, “ನಾನು ನನ್ನ ಪತಿ ಪರಸ್ಪರ ಸಮ್ಮತಿಯಿಂದ ನಾವು ಸಂತಾನ ಪಡೆಯದಿರಲು ನಿರ್ಧರಿಸಿದೆ. ಕೆಲಸದ ಪ್ರಯುಕ್ತ ನಾವು ಸದಾ ಹೊರಗಡೆಯೇ ಇರಬೇಕಾಗುತ್ತದೆ. ವರ್ಷದಲ್ಲಿ 8 ತಿಂಗಳು ಪ್ರವಾಸ ಮಾಡುತ್ತೇನೆ. ಇಂತಹ ಸ್ಥಿತಿಯಲ್ಲಿ ನಾನು ಎಲ್ಲವನ್ನೂ ಮ್ಯಾನೇಜ್ ಮಾಡುವುದು ಕಷ್ಟ. ಗಂಡ ನನ್ನ ಭಾವನೆಗಳನ್ನು ಗೌರವಿಸಿದರು. ಹೀಗಾಗಿ ನಾನು ನಿಶ್ಚಿಂತೆಯಿಂದ ಕೆಲಸ ಮಾಡುವುದು ಸಾಧ್ಯವಾಗಿದೆ.
“ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ಜೀವನದಲ್ಲಿ ಮದುವೆ ಮಾಡಿಕೊಳ್ಳುವುದು ಹಾಗೂ ಮಕ್ಕಳನ್ನು ಹೆರುವುದು, ಮನೆ ಸಂಭಾಳಿಸುವುದು ಅವಶ್ಯಕ ಎಂದು ತಿಳಿಸಿ ಹೇಳಲಾಗಿರುತ್ತದೆ. ಆದರೆ ಇದರರ್ಥ ಮಹಿಳೆ ಬೇರೆ ಕೆಲಸ ಮಾಡುವುದಿಲ್ಲ ಎಂದಲ್ಲ. ನಾನು ಫೀಲ್ಡ್ ಗೆ ಹೋದಾಗ ಸೈನಿಕರ ಕಣ್ಣಲ್ಲಿಯೇ ಒಂದು ಪ್ರಶ್ನೆ ಇರುವುದನ್ನು ನಾನು ಕಾಣುತ್ತೇನೆ. ಒಬ್ಬ ಮಹಿಳೆ ನಮಗೆ ತರಬೇತಿ ನೀಡಬಹುದೆ? ಎಂದು. ಆದರೆ ನಾನು ಅವರಿಗೆ ಕಲಿಸುವ ಮುನ್ನ ನಾನೇ ಅವರಿಗೆ ಅದನ್ನು ಮಾಡಿ ತೋರಿಸುತ್ತೇನೆ. ಹೀಗಾಗಿ ಅವರ ಪ್ರಶ್ನೆಗೆ ಉತ್ತರ ಅಲ್ಲಿಯೇ ದೊರಕುತ್ತದೆ.”
ದೈಹಿಕವಾಗಿ ಫಿಟ್ ಆಗಿರಲು ಸೀಮಾ ರಾವ್ ವಾರದಲ್ಲಿ 2 ದಿನ 5 ಕಿ.ಮೀ.ನಷ್ಟು ದೂರ ನಡೆಯುತ್ತಾರೆ. 2 ಸಲ ಜಿಮ್ ಗೆ ಹೋಗಿ ವೆಯ್ಟ್ ಲಿಫ್ಟಿಂಗ್ ಕೂಡ ಮಾಡುತ್ತಾರೆ. ಫೈಟಿಂಗ್, ಬಾಕ್ಸಿಂಗ್, ಕುಸ್ತಿ ಆಡುತ್ತಾರೆ. ಅವರು ತಮಗಿಂತ ಎರಡು ಪಟ್ಟು ತೂಕದ ವ್ಯಕ್ತಿ ಹಾಗೂ ತಮ್ಮ ಅರ್ಧದಷ್ಟು ವಯಸ್ಸಿನ ವ್ಯಕ್ತಿಯ ಜೊತೆ ಫೈಟ್ ಮಾಡುತ್ತಾರೆ.
ತಮ್ಮ ದಿನಚರಿಯ ಬಗ್ಗೆ ಸೀಮಾ ಹೀಗೆ ಹೇಳುತ್ತಾರೆ, “ತರಬೇತಿ ಅವಧಿಯಲ್ಲಿ ನನ್ನ ದಿನ ಬೆಳಗ್ಗೆ 5ಕ್ಕೇ ಆರಂಭವಾಗುತ್ತದೆ. 6 ರಿಂದ 7ರ ತನಕ ಮೊದಲ ಸೆಶನ್, 9 ರಿಂದ 1ರತನಕ ಶೂಟಿಂಗ್ ಹಾಗೂ ಸಂಜೆ 5 ರಿಂದ ಪಿಕ್ಚರ್ಸ್, ಡೆಮೊ ಇರುತ್ತದೆ. ಕ್ಲೋಸ್ ಕ್ವಾರ್ಟರ್ ಬ್ಯಾಟ್ ಸೆಶನ್ ರಾತ್ರಿ 9 ಗಂಟೆ ತನಕ ನಡೆಯುತ್ತಿರುತ್ತದೆ.”
ಸೀಮಾರಿಗೆ ಹಲವು ಪ್ರಶಸ್ತಿಗಳು ಬಂದಿವೆ. ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಯಾವ ಹುಡುಗಿಯರಿಗೆ ಮುಂದೆ ಸಾಗುವ ಆಸಕ್ತಿ ಇದೆಯೋ ಅವರು ತಮ್ಮನ್ನು ತಾವು ಬಲಿಷ್ಠಗೊಳಿಸಿಕೊಳ್ಳಬೇಕಾಗುತ್ತದೆ. ಈ ಕೆಲಸವನ್ನು ನಾನು ಮಾಡಿಯೇ ಮಾಡುತ್ತೇನೆ ಎಂದು ತೀರ್ಮಾನಿಸ ಬೇಕು. ಆಗ ನಿಮ್ಮನ್ನು ಯಾರೊಬ್ಬರೂ ತಡೆಯುವುದಿಲ್ಲ.
– ವಾರಿಜಾ ವಿನೋದ್
ರಾಷ್ಟ್ರೀಯ ಅಪರಾಧ ಬ್ಯೂರೋದ ಅಂಕಿ ಅಂಶಗಳ ಪ್ರಕಾರ, ಮಹಿಳೆಯರ ಬಗೆಗಿನ ಕ್ರೂರತೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅಪರಾಧವಾಗಿದೆ. ಪ್ರತಿ 34 ನಿಮಿಷಕ್ಕೆ ಒಬ್ಬ ಮಹಿಳೆಯ ಬಲಾತ್ಕಾರ ಘಟಿಸುತ್ತಿದೆ. ಪ್ರತಿ 43 ನಿಮಿಷಕ್ಕೆ ಒಬ್ಬ ಮಹಿಳೆಯ ಅಪಹರಣ ನಡೆಯುತ್ತಿದೆ.`ಆಕ್ಸ್ ಫೇಮ್ ಇಂಡಿಯಾದ ವತಿಯಿಂದ ನಡೆಸಲಾದ ಒಂದು ಸಮೀಕ್ಷೆಯಲ್ಲಿ ಭಾರತದಲ್ಲಿ ಶೇ.70ರಷ್ಟು ಮಹಿಳೆಯರು ಕಾರ್ಯಸ್ಥಳದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಅದೇ ರೀತಿ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆ ಕಾರ್ಯಸ್ಥಳದಲ್ಲಿ ನಡೆಯುವ ಲಿಂಗ ಭೇದಭಾವವನ್ನು ಒಪ್ಪಿಕೊಂಡಳು. ಲ್ಯಾನ್ಸೆಟ್ ಪತ್ರಿಕೆಯ ಪ್ರಕಾರ, ಕಳೆದ 30 ವರ್ಷಗಳಲ್ಲಿ ಕನಿಷ್ಠ 40 ಲಕ್ಷ ಹೆಣ್ಣು ಭ್ರೂಣಹತ್ಯೆ ನಡೆಸಲಾಗಿದೆ.