ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸಿನ ಪತಾಕೆ ಹಾರಿಸುತ್ತಿರುವುದುರ ಹೊರತಾಗಿಯೂ, ಈಗಲೂ ದೇಶದ ಅರ್ಧದಷ್ಟು ಜನತೆಗೆ ಪ್ರಗತಿಯ ದಾರಿಯಲ್ಲಿ ಸಾಗಲು ಅಡೆತಡೆ ಉಂಟಾಗುತ್ತಿರುವುದೇಕೆ?
`ಅಮ್ಮಾವ್ರ ಗಂಡ' ಎಂಬ ಗಾದೆ ಮಾತನ್ನು ಜನರು ಸಾಮಾನ್ಯವಾಗಿ ತಮಾಷೆಗಾಗಿ ಬಳಕೆ ಮಾಡುತ್ತಾರೆ. ಅಂದಹಾಗೆ ಮಹಿಳೆಯರನ್ನು ಇಡೀ ವಿಶ್ವವೇ ಎರಡನೇ ದರ್ಜೆಯರಂತೆ ಪರಿಗಣಿಸುತ್ತದೆ. ಅಲ್ಲಿ ಪುರುಷನೇ ಮನೆಯ ಯಜಮಾನನಾಗಿರುತ್ತಾನೆ. ಆದರೆ ನಿಮಗೆ ಒಂದು ವಿಷಯ ಕೇಳಿ ಆಶ್ಚರ್ಯ ಆಗಬಹುದು, ಆ ಪ್ರದೇಶದಲ್ಲಿ ಪುರುಷರು ಮಹಿಳೆಯರ ಗುಲಾಮರೇ ಆಗಿರುತ್ತಾರೆ.
`ವಿಮನ್ ಓವರ್ ಮೆನ್' ಎಂಬ ತತ್ವದಂತೆ ಈ ಭಾಗದ ಅಧಿಕಾರ ಕೂಡ ಒಬ್ಬ ಮಹಿಳೆಯ ಕೈಯಲ್ಲಿಯೇ ಇದೆ. ಈ `ಅದರ್ ವರ್ಲ್ಡ್ ಕಿಂಗ್ಡಮ್' 1996ರಲ್ಲಿ ಯೂರೋಪಿಯನ್ ದೇಶ `ಝೆಕ್ ರಿಪಬ್ಲಿಕನ್'ನ ಒಂದು ಫಾರ್ಮ್ ಹೌಸ್ ನಲ್ಲಿ ಸೃಷ್ಟಿಯಾಯಿತು. ಈ ದೇಶದ ರಾಣಿ ಪೆಟ್ರಿಸಿಯಾ (ಪ್ರಥಮ) ಆಗಿದ್ದು, ಬಾಹ್ಯ ಜಗತ್ತು ಇದುವರೆಗೂ ಆಕೆಯ ಮುಖ ನೋಡಿಲ್ಲ.
ಈ ದೇಶದ ಮೂಲ ನಾಗರಿಕರು ಕೇವಲ ಮಹಿಳೆಯರು. ಅಲ್ಲಿ ಪುರುಷರು ಇದ್ದಾರೆ. ಆದರೆ ಅವರು ಗುಲಾಮರ ರೀತಿಯಲ್ಲಿ ಇರುತ್ತಾರೆ. ಜಗತ್ತಿನಲ್ಲಿ ಇಂತಹದೊಂದು ದೇಶ ಇದೆಯೆಂದು ಇದು ಸಾಬೀತುಪಡಿಸುತ್ತದೆ.
ಭಾರತದ ಮಣಿಪುರ ರಾಜ್ಯದ ಇಂಫಾಲದಲ್ಲಿ `ಇಮಾ ಬಾಜಾರ್' ಬಹುದೊಡ್ಡ ಮಾರುಕಟ್ಟೆ. ಅದನ್ನು ಮಣಿಪುರದ ಲೈಫ್ ಲೈನ್ ಎಂದೂ ಕರೆಯಲಾಗುತ್ತದೆ. ಈ ಮಾರುಕಟ್ಟೆಯ ವಿಶೇಷತೆ ಏನೆಂದರೆ ಇಲ್ಲಿನ ಹೆಚ್ಚಿನ ಅಂಗಡಿಗಳು ಮಹಿಳೆಯರದೇ ಆಗಿವೆ. ಖರೀದಿದಾರರು ಕೂಡ ಮಹಿಳೆಯರೇ ಆಗಿರುತ್ತಾರೆ.
4000ಕ್ಕೂ ಹೆಚ್ಚು ಅಂಗಡಿಗಳಿರುವ ಆ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು, ಬಟ್ಟೆ, ದಿನಸಿ ಸಾಮಗ್ರಿಗಳು ಹೀಗೆ ಎಲ್ಲ ಪ್ರಕಾರದ ಅಂಗಡಿಗಳಿವೆ. ಇಲ್ಲಿನ ಯಾವುದೇ ಅಂಗಡಿಯಲ್ಲಿ ಪುರುಷರಿಗೆ ಕೆಲಸ ಮಾಡಲು ಅನುಮತಿ ನೀಡಲಾಗುವುದಿಲ್ಲ.
ಈ ಮಾರುಕಟ್ಟೆ ಸ್ಥಾಪನೆಯಾದದ್ದು 1786ರಲ್ಲಿ. ಆಗ ಮಣಿಪುರದ ಬಹುತೇಕ ಪುರುಷರು ಚೀನಾ ಮತ್ತು ಬರ್ಮಾದಲ್ಲಿ ನಡೆಯುತ್ತಿದ್ದ ಯುದ್ಧದಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಆ ಸಂದರ್ಭದಲ್ಲಿ ಮಹಿಳೆಯರೇ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದರು. ಅವರು ಮನೆಯಿಂದ ಹೊರಗೆ ಬಂದು ಅಂಗಡಿಗಳನ್ನು ಇಟ್ಟುಕೊಂಡು ಹಣ ಗಳಿಸಿದರು. ಈ ರೀತಿಯಿಂದಾಗಿ ಸಾಮಾಜಿಕ ವ್ಯವಸ್ಥೆಯಲ್ಲಾದ ಬದಲಾವಣೆ ಪರಂಪರೆಯಾಗಿ ಪರಿವರ್ತನೆಯಾಯಿತು.
ಸಮಾಜದ ರಚನೆ
ಅಂದಹಾಗೆ, ನಾವು ಯಾವ ಸಮಾಜದಲ್ಲಿ ವಾಸಿಸುತ್ತೇವೆ, ಅದರ ರಚನೆ ಕೂಡ ನಮ್ಮಿಂದಲೇ ಆಗಿದೆ. ಜೀವನವನ್ನು ಸುಲಭಗೊಳಿಸಲು, ಒಂದೇ ರೀತಿಯದ್ದಾಗಿಸಲು, ಬೇರೆ ಅಗತ್ಯಗಳಿಗನುಸಾರ ಮನುಷ್ಯನು ಸಮಾಜದ ರೀತಿನೀತಿಗಳು ಹಾಗೂ ಪರಂಪರೆಯನ್ನು ಹುಟ್ಟುಹಾಕಿದರು. ಮಹಿಳೆಯರು ಹಾಗೂ ಪುರುಷರ ಪಾತ್ರಗಳ ಬಗ್ಗೆ ನಿರ್ಧರಿಸಲಾಯಿತು. ಪುರುಷರು ದೈಹಿಕವಾಗಿ ಬಲಿಷ್ಠರಾಗಿದ್ದುದರಿಂದ ಅವರಿಗೆ ಬಾಹ್ಯ ಕೆಲಸ ಹಾಗೂ ಹಣಸಂಪತ್ತು ಕ್ರೋಢೀಕರಿಸುವ ಜವಾಬ್ದಾರಿ ವಹಿಸಿಕೊಡಲಾಯಿತು. ಮಹಿಳೆಯರು ಮಕ್ಕಳಿಗೆ ಜನ್ಮ ಕೊಡುವುದರಿಂದ ಅವರಿಗೆ ಮಕ್ಕಳ ಪಾಲನೆ ಪೋಷಣೆ ಮತ್ತು ಮನೆ ನಿರ್ವಹಣೆಯ ಜವಾಬ್ದಾರಿ ಹೊರಿಸಲಾಯಿತು.
ಆದರೆ ಇದರರ್ಥ ಮಹಿಳೆ ಮತ್ತು ಪುರುಷರಲ್ಲಿ ಹುಟ್ಟಿನಿಂದಲೇ ಯಾವುದಾದರೂ ಅಂತರ ಇರುತ್ತದೆ ಎಂದಲ್ಲ, ಅವರು ಎಲ್ಲದರಲ್ಲೂ ಸಮಾನರು. ಸಮಾಜವೇ ಅವರ ಸ್ವಭಾದಲ್ಲಡಗಿದ ಗುಣ ಹಾಗೂ ಪಾತ್ರಗಳಿಂದಲೇ ನೀವು ಇಂತಿಂಥ ಜವಾಬ್ದಾರಿ ನಿಭಾಯಿಸಿ ಎಂದು ಸೂಚಿಸುತ್ತದೆ.