ಡ್ರ್ಯಾಗನ್ಕ್ವೀನ್ ಸವಾರಿ : ಸ್ಪೇನ್‌ ದೇಶದ ಒಂದು ನಗರದಲ್ಲಿ ಇತ್ತೀಚೆಗೆ ರಂಗುರಂಗಿನ ಕಾರ್ನಿವಾಲ್ ‌ಏರ್ಪಡಿಸಲಾಗಿತ್ತು. ಅದರಲ್ಲಿನ ಮೆರವಣಿಗೆಯಲ್ಲಿ  ಡ್ರ್ಯಾಗನ್‌ ಕ್ವೀನ್‌ ವೇಷಧಾರಿ ನಾರಿಯ ಸವಾರಿ ಹೀಗಿತ್ತು. ನಮ್ಮಲ್ಲಿನ ಜಾತ್ರೆಗಳಲ್ಲಿ ನಡೆಯುವ ಹುಲಿ ವೇಷ ಹೀಗೆಯೇ, ಇದು ಕೊಂಚ ಮಾಡಲ್ ಸ್ಟೈಲಿಶ್‌!

ಬಚಾವಾದ ತಪ್ಪಿತಸ್ಥ : ನಮ್ಮ ದೇಶದಲ್ಲಿ ನಮ್ಮ ವ್ಯವಹಾರಗಳ ನೆಟ್‌ ವರ್ಕ್‌ ಸರಿಯಿದ್ದು ಎಲ್ಲಿಯೂ ಲಿಂಕ್‌ ಗಳು ತಪ್ಪದಿದ್ದರೆ, ಎಂಥದೇ ತಪ್ಪುಗಳಾದ ಮೇಲೂ ಸುಲಭವಾಗಿ ಬಚಾವಾಗಬಹುದು. ಹೀಗಾಗಿಯೇ ಕ್ರಿಕೆಟ್‌ ಕಂಟ್ರೋಲ್ ಬೋರ್ಡ್‌ ನ ಅಧ್ಯಕ್ಷ ಎನ್. ಶ್ರೀನಿವಾಸನ್‌ ಮ್ಯಾಚ್‌ ಫಿಕ್ಸಿಂಗ್‌ ನ ವಿವಾದದ ಬಳಿಕ, ತಮ್ಮ ಕುರ್ಚಿಯನ್ನೇನೋ ಬಿಟ್ಟುಕೊಟ್ಟರು, ಆದರೆ ಪದವಿ ಮಾತ್ರ ಬಿಡಲೇ ಇಲ್ಲ! ಅಪ್ರಾಮಾಣಿಕರದೇ ಸರ್ವಾಧಿಕಾರ ಆಗಿರುವ ನಮ್ಮ ದೇಶದಲ್ಲಿ, ಪ್ರಾಮಾಣಿಕರು ಮಾತ್ರ ಜೇಲಿನಲ್ಲಿ ಕೊಳೆಯಬೇಕಷ್ಟೆ….. ಬೆತ್ತಲೆ ರಾಜ್ಯದಲ್ಲಿ ಬಟ್ಟೆ ಧರಿಸಿದವನಿಗೆಲ್ಲಿದೆ ಮರ್ಯಾದೆ?

ಆಹಾ…. ಇದೆಂಥ ಸ್ಪರ್ಧೆ? ! :  ಓ… ಈಕೆ ಮನೆ ಬದಲಾಯಿಸುತ್ತಿದ್ದಾರೆ ಹಾಗೂ ಟೆಂಪೋಗೆ ಬಾಡಿಗೆ ಕಟ್ಟಲು ಹಣವಿಲ್ಲದೆ ಹೀಗೆ ಕಾರಿನಲ್ಲೇ ಎಲ್ಲವನ್ನೂ ಸಾಗಿಸುತ್ತಿದ್ದಾರೆ ಅಂದುಕೊಂಡಿರಾ? ಹಾಗೇನಿಲ್ಲ. ಅಸಲಿಗೆ, ಬೇಕೆಂದೇ ಒಂದು ಸ್ಪರ್ಧೆಯ ಸಲುವಾಗಿ ಈ ತರಹ ಭಾರವಾದ ರಾಶಿ ರಾಶಿ ಸೂಟ್‌ ಕೇಸ್‌ ಗಳನ್ನು ಕಾರಿಗೆ ತುಂಬಿಸಿ ರೇಸ್‌ ನಡೆಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಇಂಥ ಕಾರ್‌ ರೇಸ್‌ ಬಲು ಜನಪ್ರಿಯ.

ಡ್ಯಾನ್ಸ್ ಗ್ಲಾಮರಸ್ಮೋಡಿ : ಅವಾರ್ಡ್‌ ಫಂಕ್ಷನ್‌ ಗಳಲ್ಲಿ ಅವಾರ್ಡ್‌ ಗಳಿಗಿಂತ ಅಲ್ಲಿ ಮಧ್ಯೆ ಮಧ್ಯೆ ಪ್ರಸ್ತುತಪಡಿಸಲಾಗುವ ಡ್ಯಾನ್ಸ್ ಗಳ ಮೋಡಿ ಹೆಚ್ಚಿನದು. ಲಾಸ್‌ ವೇಗಸ್‌ ನಲ್ಲಿ ಇತ್ತೀಚೆಗೆ ನಡೆದ ಅವಾರ್ಡ್‌ ಫಂಕ್ಷನ್‌ ನಲ್ಲಿ, ಸಿಂಗರ್‌ ಜೆನಿಫರ್‌ ಲೋಪೇಜ್‌ ತಮ್ಮ ಸಂಗೀತದಿಂದ ಇಂದಿನ ಯುವಜನತೆಗೆ ಎಂಥ ಮೋಡಿ ಮಾಡಿದ್ದಾರೆಂದು, ಆಕೆ ನಿಂತಿರುವ ಈ ಪೋಸ್‌ ನಿಂದೀ ತಿಳಿಯುತ್ತದೆ.

Samachar-Darshan 2

ನಮ್ಮ ಬೇಡಿಕೆ ಈಡೇರಿಸಿ, ಇಲ್ಲದಿದ್ದರೆ….! : ಯೂಕ್ರೇನ್‌ ದೇಶದ ಫೆಮೆನ್‌ ದಳ ಇಡೀ ವಿಶ್ವದಲ್ಲಿ ದೊಡ್ಡ ಗಲಭೆ ಎಬ್ಬಿಸಿದೆ. ಇದರ ಕಾರ್ಯಕರ್ತರೆಲ್ಲ ತಮ್ಮ ಬೇಡಿಕೆ ಈಡೇರದಿದ್ದರೆ ಅದನ್ನು ವಿರೋಧಿಸಲು ತಕ್ಷಣವೇ ವಿವಸ್ತ್ರರಾಗಿ ರಸ್ತೆಗಿಳಿಯುತ್ತಾರೆ! ಇಸ್ಲಾಮಿನ ಟ್ಯೂನೀಶಿಯಾದಲ್ಲಿ ಇಂಥದೇ ಒಂದು ಪ್ರದರ್ಶನವನ್ನು ನಿಷೇಧಿಸಿದ್ದನ್ನು ವಿರೋಧಿಸಿ, ಯೂರೋಪ್‌ ನ ಬ್ರೂಸೆಲೆಸ್‌ ನಗರದಲ್ಲಿ ಈ ಹುಡುಗಿಯರು ಮತ್ತೆ ರಸ್ತೆಗಿಳಿದಿದ್ದಾರೆ! ಅಲ್ಲಿನ ಪೊಲೀಸರಿಗಂತೂ ಇವರನ್ನು ಸಂಭಾಳಿಸುವುದರಲ್ಲಿ ಸಾಕು ಸಾಕಾಗುತ್ತದೆ.

ಕಲ್ಪನೆಗೆ ತಕ್ಕಂತೆ ಡ್ರೆಸ್ಡಿಸೈನಿಂಗ್‌? : ಯಾವುದೇ ನಾಟಕ, ಡ್ಯಾನ್ಸ್, ಕಾಮಿಕ್ಸ್ ಕಾರ್ಟೂನನ್ನು ನಕಲು ಮಾಡಿ, ಡ್ರೆಸ್‌ ಡಿಸೈನ್ ಮಾಡುವುದೆಂದರೆ ಪಾಶ್ಚಿಮಾತ್ಯ ಯುವಜನತೆಗೆ ಒಂದು ಉತ್ತಮ ಮನರಂಜನೆ ಆಗಿಹೋಗಿದೆ. ಈಗಂತೂ ಇಂಥ ಚಿತ್ರವಿಚಿತ್ರ ಉಡುಗೆಗಳಲ್ಲಿ ಅಲ್ಲಿನ ಹುಡುಗಹುಡುಗಿಯರು ಊರೆಲ್ಲ ಸುತ್ತುತ್ತಾರೆ. ನೀವು ಸಹ ನಮ್ಮ ಪುರಾತನ ಕಾಲದ ರಾಜಕುಮಾರಿ ಚಂದ್ರಕಾಂತಾ ಅಥವಾ ರಾಣಿ ಪದ್ಮಿನಿ ಎಂಥ ಉಡುಗೆ ಧರಿಸಿರಬಹುದೆಂಬುದನ್ನು ಊಹಿಸಿ, ಈಗಿನ ಕಾಲಕ್ಕೆ ತಕ್ಕಂತೆ ಡ್ರೆಸ್‌ಡಿಸೈನ್‌ ಮಾಡಿ ನೋಡಿ, ಯಾರಿಗೆ ಗೊತ್ತು…. ಮುಂದೆ ನೀವು ಸ್ಟಾರ್‌ ಫ್ಯಾಷನ್‌ ಡಿಸೈನರ್‌ ಎನಿಸಬಹುದು!

ತಾಲಿಬಾನಿ ಹುಕುಂ : ಭಾರತದ ಗಂಡಸರಿಗೆ ನೈತಿಕತೆಯೇ ಇಲ್ಲ, ಎಂದು ನಿರ್ಧರಿಸಿದಂತಿದೆ ಶಿವಸೇನಾದ ಕಂಟ್ರೋಲ್ ನಲ್ಲಿರುವ ಮುಂಬೈ ಕಾರ್ಪೊರೇಶನ್‌. ಅಲ್ಲಿನ ಪ್ರಮುಖ ಅಂಗಡಿ ಮುಂಗಟ್ಟುಗಳ ಶೋ ವಿಂಡೋಸ್‌ ನಲ್ಲಿ ಹೆಣ್ಣು ಬೊಂಬೆಗಳು ಒಳ ಉಡುಪು ಧರಿಸಿ ನಿಂತಿದ್ದರೆ ಅಂಥ ಅಂಗಡಿಗಳ ಮಾಲೀಕರನ್ನೇ ಬಂಧಿಸುವುದಾಗಿ ಅದು ಬೆದರಿಕೆ ಒಡ್ಡಿದೆ, ತಾಲಿಬಾನಿ ಹುಕುಂ ಅಂದಮೇಲೆ ಒಪ್ಪಲೇಬೇಕಲ್ಲವೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ