ಆ ಮನೆಯಲ್ಲಿ ವಯಸ್ಸಾದ ದಂಪತಿಗಳು ಮಾತ್ರ ವಾಸವಾಗಿದ್ದರು. ಇದ್ದಕ್ಕಿದ್ದಂತೆ ಒಂದು ರಾತ್ರಿ ಒಬ್ಬ ಕಳ್ಳ ಕೈಯಲ್ಲಿ ಭಾರಿ ಚಾಕು ಚೂರಿ ಹಿಡಿದು ಅವರ ಮನೆಗೆ ನುಗ್ಗಿ ಬಂದ.

ಕಳ್ಳ : ಏ ಮುದುಕಿ, ನಿದ್ದೆ ಮಾಡಿದ್ದು ಸಾಕು. ಮೊದಲು ನಿನ್ನ ಒಡವೆ ಬಿಚ್ಚಿಕೊಡು.

ಮುದುಕಿ : ಅಯ್ಯೋ..... ಒಡವೆ ಮಾತ್ರ ಕೇಳಬೇಡಪ್ಪ, ಹಳೇ ಚಿತ್ರಾನ್ನ ಇದೆ. ತಿಂದುಕೊಂಡು ಹೊರಟುಹೋಗು.

ಕಳ್ಳ : ಹೊಟ್ಟೆ ಹಸಿಯುತ್ತಿದೆ, ಇರಲಿ. ಅಂದಹಾಗೆ ನಿನ್ನ ಹೆಸರೇನು?

ಮುದುಕಿ : ನನ್ನ ಹೆಸರು ಲಕ್ಷ್ಮಿದೇವಿ.

ಕಳ್ಳ : ಅಯ್ಯೋ ಲಕ್ಷ್ಮಿಯೇ? ನಮ್ಮಮ್ಮನ ಹೆಸರು ಕೂಡ ಲಕ್ಷ್ಮಮ್ಮ. ಹೋಗು, ನಿನಗೆ ಜೀವದಾನ ಮಾಡಿದ್ದೇನೆ. ಆದರೆ... ಏ ಮುದುಕ, ಮೊದಲು ನಿನ್ನ ಹಳೆ ಪೆಟ್ಟಿಗೆಯಲ್ಲಿರೋ ಹಣ ಇತ್ಯಾದಿ ಕೊಟ್ಟುಬಿಡು! ಇಲ್ಲದಿದ್ದರೆ ಈಗಲೇ ಚೂರಿ ಹಾಕ್ತೀನಿ.

ಮುದುಕ : ನೋಡಪ್ಪ, ಹಣದ ಬದಲು ಈ ಛತ್ರೀನೋ, ವಾಕಿಂಗ್‌ ಸ್ಟಿಕ್ಕೋ ತಗೋ. ಅಂದಹಾಗೆ ನನ್ನ ಹೆಸರು ಲಕ್ಷ್ಮಿನಾರಾಯಣ. ಎಲ್ಲರೂ ಪ್ರೀತಿಗೆ ನನ್ನ `ಲಕ್ಷ್ಮಿ' ಅಂತ್ಲೇ ಕರೀತಾರೆ!

ಕಳ್ಳ :  !?...!!??? ?

ಒಂದು ಸಲ ಹೆಲಿಕಾಪ್ಟರ್‌ ಕೆಳಗೆ ಲ್ಯಾಂಡ್‌ ಆಗಲಾರದೆ, ದೊಡ್ಡ ಹಗ್ಗವನ್ನು ಮೇಲಿನಿಂದ ಇಳಿಬಿಟ್ಟರು. ಅದನ್ನು ಹಿಡಿದು 1-1 ಜನ ನೇತಾಡುತ್ತಾ ಇಳಿಯಬೇಕಾಯಿತು. ಅವರಲ್ಲಿ 10 ಮಂದಿ ಗಂಡಸರು, ಒಬ್ಬಾಕೆ ಸ್ಥೂಲ ಹೆಂಗಸು.

ಆ ಹಗ್ಗ ದುರ್ಬಲವಾಗಿತ್ತು. ಒಮ್ಮೆಲೇ 1-1 ಜನರ ಭಾರ ಹೊತ್ತು ಎಲ್ಲರನ್ನೂ ಸುರಕ್ಷಿತವಾಗಿ ಕೆಳಗೆ ಇಳಿಸುವುದು ಸಾಧ್ಯವಿರಲಿಲ್ಲ. ಯಾವ ಕ್ಷಣದಲ್ಲಾದರೂ ಅದು ತುಂಡರಿಸುವ ಸ್ಥಿತಿ ಬಂತು. ಅಷ್ಟು ಜನರಲ್ಲಿ ಕನಿಷ್ಠ ಯಾರಾದರೂ ಒಬ್ಬರು ಹಗ್ಗ ಬಿಟ್ಟು ನೇರವಾಗಿ ಕೆಳಗೆ ದುಮುಕಬೇಕು, ಇಲ್ಲದಿದ್ದರೆ ಭಾರಕ್ಕೆ ಅದು ತುಂಡರಿಸುತ್ತೆ, ಆಗ ಎಲ್ಲರೂ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಪೈಲಟ್‌ ಹೇಳಿದ. ಆದರೆ ಈಗ ಈ ಬಲಿದಾನ ನೀಡುವವರು ಯಾರು? ಈ ಜಿಜ್ಞಾಸೆ ಎಲ್ಲರ ತಲೆ ತಿನ್ನತೊಡಗಿತು. ಆಗ ಆ ಹೆಂಗಸು ಬಹಳ ಭಾವುಕಳಾಗಿ ಹೇಳತೊಡಗಿದಳು, ``ನಾನು ನನ್ನ ಸ್ವಇಚ್ಛೆಯಿಂದ ಈ ಹಗ್ಗ ಬಿಟ್ಟು ಕೆಳಗೆ ದುಮುಕಲು ಸಿದ್ಧಳಾಗಿದ್ದೇನೆ, ಏಕೆಂದರೆ ತ್ಯಾಗ ಹೆಣ್ಣಿನ ಹುಟ್ಟುಗುಣ! ಆಕೆ ಪ್ರತಿದಿನ ತನ್ನ ಗಂಡ, ಮಕ್ಕಳು, ಮನೆಯವರಿಗಾಗಿ ತ್ಯಾಗ ಮಾಡುತ್ತಲೇ ಇರುತ್ತಾಳೆ. ಸ್ತ್ರೀಯರು ಅನಾದಿ ಕಾಲದಿಂದಲೂ ಪುರುಷರಿಗಾಗಿ ನಿಸ್ವಾರ್ಥತೆಯಿಂದ ತ್ಯಾಗಗಳನ್ನು ಮಾಡುತ್ತಲೇ ಇದ್ದಾರೆ....'' ಎಂದು ಆಕೆ ತನ್ನ ಭಾಷಣ ಮುಗಿಸಿದ್ದೇ ತಡ, ಹುರುಪಿನಿಂದ ಎಲ್ಲಾ ಗಂಡಸರೂ ಎರಡೂ ಕೈ ಬಿಟ್ಟು ಚಪ್ಪಾಳೆ ತಟ್ಟಿದ್ದೂ ತಟ್ಟಿದ್ದೇ!

ಒಬ್ಬ ವ್ಯಕ್ತಿ ಅರ್ಧ ರಾತ್ರಿಯಲ್ಲಿ ರಸ್ತೆ ದಾಟುತ್ತಿದ್ದಾಗ, ಪೊಲೀಸ್‌ ಪೇದೆಗೆ ಸಿಕ್ಕುಬಿದ್ದ.

ಪೊಲೀಸ್‌ : ಇಷ್ಟು ತಡವಾಗಿ ಹೋಗಿದೆ... ಈ ಹೊತ್ತಿನಲ್ಲಿ ಇಂಥ ವಾಕಿಂಗ್‌ ಗೇನು ಕಾರಣ?

ವ್ಯಕ್ತಿ : ಅಯ್ಯೋ ಹೋಗಯ್ಯ! ಆಗ ಕಾರಣ ನನಗೆ ಗೊತ್ತಿದ್ದರೆ ಅದನ್ನು ನನ್ನ ಹೆಂಡತಿಗೆ ಸ್ಪಷ್ಟಪಡಿಸಿ, ಹಾಯಾಗಿ ಮನೆಯಲ್ಲೇ ಮಲಗಿರುತ್ತಿದ್ದೆ ಅಲ್ವೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ