ನೀವು ವಿದೇಶ ಪ್ರವಾಸದ ಸಿದ್ಧತೆ ಮಾಡುತ್ತಿದ್ದೀರಿ, ಟಿಕೆಟ್‌ ಕೂಡ ತೆಗೆದುಕೊಂಡಿದ್ದೀರಿ. ಹೊಸ ಚಪ್ಪಲಿಗಳನ್ನು ಖರೀದಿಸಿದ್ದೀರಿ. ಇದನ್ನು ಬಿಟ್ಟು ಮತ್ತೇನನ್ನಾದರೂ ಮರೆತಿದ್ದೀರಾ? ಕಳೆದ ಹಲವು ವರ್ಷಗಳಲ್ಲಿ ಭಯೋತ್ಪಾದನೆ ಘಟನೆಗಳಿಂದಾಗಿ ಜಗತ್ತಿನಾದ್ಯಂತದ ದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ನಿಮ್ಮ ಪ್ರವಾಸ ಕಾರ್ಯಕ್ರಮಕ್ಕೆ ಯಾವುದೇ ವ್ಯತ್ಯಯ ಉಂಟಾಗಬಾರದು. ಹಾಗಾಗಿ ಕೆಲವು ಸಂಗತಿಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು.

ನೀವು ನಿಮ್ಮ ಪಾಸ್‌ ಪೋರ್ಟ್‌ ನ್ನು ಕೆಲವು ವರ್ಷಗಳ ಹಿಂದೆ ಮಾಡಿಸಿರಬಹುದು. ಪ್ರವಾಸ ಹೋಗುವ 2 ತಿಂಗಳ ಮುಂಚೆಯೇ ಅದು ಎಲ್ಲಿಯವರೆಗೆ ಕಾಲಮಿತಿ ಹೊಂದಿದೆ ಎನ್ನುವುದನ್ನು ಅವಶ್ಯವಾಗಿ ಗಮನಿಸಿ. ಅಷ್ಟೇ ಮಾಡಿದರೆ ಸಾಲದು, ಪ್ರವಾಸ ಮುಗಿಸಿ ಬರುವ ತನಕ ನಿಮ್ಮ ಪಾಸ್‌ ಪೋರ್ಟ್‌ ಮಾನ್ಯತೆ ಹೊಂದಿರುತ್ತದೆಯೇ? ಅಷ್ಟೇ ಅಲ್ಲ, ನೀವು ನಿಮ್ಮ ಪ್ರವಾಸದ ಕೊನೆಯಲ್ಲಿ ಯಾವ ದೇಶಕ್ಕೆ ಭೇಟಿ ಕೊಡುತ್ತಿದ್ದೀರೊ, ಆ ದಿನದಿಂದ ಹಿಡಿದು 6 ತಿಂಗಳ ತನಕ ಮಾನ್ಯತೆ ಹೊಂದಿರಬೇಕು ಮತ್ತು ಅದರ ಮೇಲೆ ಮೊಹರು ಹಾಕಲು ಸಾಕಷ್ಟು ಹಾಳೆಗಳು ಕೂಡ ಬಾಕಿ ಇರಬೇಕು.

ಈ ಒಂದು ಕಾರಣದಿಂದಾಗಿ ಅದೆಷ್ಟೊ ಪ್ರಯಾಣಿಕರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಏರ್‌ ಪೋರ್ಟ್‌ ನಿಂದಸೇ ವಾಪಸ್‌ ಆಗಬೇಕಾಗಿ ಬರುತ್ತದೆ. ಅನೇಕರ ಪಾಸ್‌ ಪೋರ್ಟ್‌ ಅವಧಿ ಮುಗಿದುಹೋಗಿತ್ತು. ಇಲ್ಲಿ ಮುಗಿಯುವುದರಲ್ಲಿತ್ತು ಅಥವಾ ಅವರ ಪಾಸ್‌ ಪೋರ್ಟ್‌ ನಲ್ಲಿ ಮೊಹರು ಹಾಕಲು ಖಾಲಿ ಜಾಗವೇ ಉಳಿದಿರಲಿಲ್ಲ.

ಪಾಸ್ಪೋರ್ಟ್ ಮಾನ್ಯತೆ

ಒಂದುವೇಳೆ ನಿಮ್ಮ ಪಾಸ್‌ ಪೋರ್ಟ್‌ ನ ಅವಧಿ ಮುಗಿದುಹೋಗಿದ್ದಲ್ಲಿ ಅಥವಾ ಇವನ್ನು ಕೆಲವೇ ದಿನಗಳಲ್ಲಿ ಮುಗಿಯುವುದರಲ್ಲಿದ್ದರೆ, ನೀವು ಯಾವುದೇ ತೆರನಾದ ತೊಂದರೆಯಿಂದ ಪಾರಾಗಲು `ತತ್ಕಾಲ ಸೇವಾ’ ಮುಖಾಂತರ ಪಾಸ್ ಪೋರ್ಟಿನ ನವೀಕರಣಕ್ಕಾಗಿ ತಕ್ಷಣವೇ ಅರ್ಜಿ ಹಾಕಿ. ಇದಕ್ಕಾಗಿ ನಿಮಗೆ ಹೆಚ್ಚುವರಿಯಾಗಿ 1500 ರೂ. ಶುಲ್ಕ ನೀಡಬೇಕಾಗಬಹುದು.

ಯಾವುದೇ ಒಬ್ಬ ಅರ್ಜಿದಾರ ಅರ್ಜಿ ಸಲ್ಲಿಸಿದ 3 ತಿಂಗಳೊಳಗಾಗಿ ಪಾಸ್‌ ಪೋರ್ಟ್‌ ಸಿಗಬೇಕೆನ್ನುವುದು ಸರ್ಕಾರದ ಘೋಷಣೆಯಾಗಿದೆ. ಸಾಮಾನ್ಯ ಪದ್ಧತಿಯಲ್ಲಿ ಅರ್ಜಿ ಸಲ್ಲಿಸುವುದರಿಂದ ನಿಮಗೆ 3 ತಿಂಗಳಿಗೂ ಹೆಚ್ಚು ಕಾಲ ಕಾಯಬೇಕಾಗಿ ಬರಬಹುದು.

ಆರೋಗ್ಯ ವಿಮೆ ಪಾಲಿಸಿ

ಟಿಕೆಟ್‌ ಬುಕ್‌ ಮಾಡಿಸುವ ಸಮಯದಲ್ಲಿ ಆರೋಗ್ಯ ವಿಮೆಯ ಪಾಲಿಸಿ ಕೂಡ ತೆಗೆದುಕೊಳ್ಳಿ. ಏಕೆಂದರೆ ಅನಾರೋಗ್ಯ ಹಾಗೂ ಅಪಘಾತಗಳು ಹೇಳಿ ಕೇಳಿ ಘಟಿಸುವುದಿಲ್ಲ. ಹೊರದೇಶಕ್ಕೆ ಹೋದಾಗ ನಮಗೆ ಏನೂ ಆಗುವುದಿಲ್ಲ ಎಂದು ಯಾರೂ ಹೇಳಲು ಆಗುವುದಿಲ್ಲ.

ಕೆಲವು ತಿಂಗಳುಗಳ ಹಿಂದಷ್ಟೇ ವಂದನಾ ತಮ್ಮ ಮಗ, ಸೊಸೆ ಹಾಗೂ ಮೊಮ್ಮಗ ಅನೂಪ್‌ ಜೊತೆಗೆ ಸ್ಪೇನ್‌ ಗೆ ಹೋಗಿದ್ದರು. ಅಲ್ಲಿ ಹೋಟೆಲ್ ‌ನ ಕೋಣೆಯಲ್ಲಿ ಅನೂಪ್‌ ಆಟ ಆಡ್ತಾ ಆಡ್ತಾ ಒಮ್ಮೆಲೆ ಬಿದ್ದುಬಿಟ್ಟ. ಮಂಚದ ಅಂಚು ತಗುಲಿ ಅವನ ತಲೆಗೆ ಬಲವಾಗಿಯೇ ಏಟು ತಗುಲಿತು. ಅದರಿಂದ ಸಾಕಷ್ಟು ರಕ್ತ ಹೋಯಿತು. ಅಲ್ಲಿಂದ ಇನ್ನೆರಡು ಕಡೆ ಹೋಗಬೇಕಿದ್ದಾಗಲೇ ಈ ಘಟನೆ ನಡೆದಿದ್ದರಿಂದ ಅವರಿಗೆ ಚಿಂತೆ ಉಂಟಾಗಿತ್ತು.

ಅವರು ಹೋಟೆಲ್ ‌ನ ರಿಸೆಪ್ಶನ್‌ ಕೌಂಟರ್‌ ನಲ್ಲಿ ಈ ಬಗ್ಗೆ ವಿಚಾರಿಸಿದಾಗ ಹೋಟೆಲ್ ‌ನಲ್ಲಿಯೇ ಒಂದು ಕ್ಲಿನಿಕ್‌ ಇದೆಯೆಂದು ಗೊತ್ತಾಯಿತು. ಡಾಕ್ಟರ್‌ ಕೂಡ ಅಲ್ಲಿಯೇ ಇದ್ದರು. ಆ ಡಾಕ್ಟರ್‌ ಕೇಳಿದ ಮೊದಲ ಪ್ರಶ್ನೆಯೆಂದರೆ, ಅನೂಪ್‌ ನ ಆರೋಗ್ಯವಿಮೆ ಪಾಲಿಸಿ ಇದೆಯಾ ಎಂದು.

ನಾವು `ಹೌದು’ ಎಂದು ಹೇಳುತ್ತಿದ್ದಂತೆ ಆ ವೈದ್ಯರು ಗಾಯ ತುಂಬಾ ಆಳವಾಗಿದೆ, ಹೊಲಿಗೆ ಹಾಕಬೇಕಿದೆ. ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು.

ಹೊಲಿಗೆ ಹಾಕುವ ಖರ್ಚಿಗೆ ಹೆಚ್ಚೆಂದರೆ 50 ಯೂರೊ ಖರ್ಚಾಗಬಹುದು. ಮಗುವಿಗೆ ಏನೇನೂ ತೊಂದರೆಯಾಗದು. ಏಕೆಂದರೆ ಲೋಕ್‌ ಅನಸ್ತೇಶಿಯಾ ಕೊಟ್ಟು ಹೊಲಿಗೆ ಹಾಕುವ ಕೆಲಸ ಮಾಡಲಾಗುತ್ತದೆ.

ಅನೂಪ್‌ ನನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿನ ಡಾಕ್ಟರ್‌ ಗಾಯ ನೋಡಿ ಹೊಲಿಗೆ ಹಾಕುವ ಅವಶ್ಯಕತೆ ಏನಿಲ್ಲ ಅಂತಾ ಹೇಳಿದರು. ಅವರು ಗಾಯದ ಮೇಲೆ ಟಿಂಕ್ಚರ್‌ ಅಯೋಡಿನ್‌ ಹಚ್ಚಿ ಬ್ಯಾಂಡೇಜ್ ಅಂಟಿಸಿದರು. ಇಷ್ಟು ಸಣ್ಣ ಪ್ರಮಾಣದ ಚಿಕಿತ್ಸೆ ಹಾಗೂ ವೈದ್ಯರ ಶುಲ್ಕ ಸೇರಿ 152 ಯೂರೊ (ಸುಮಾರು 9000 ರೂ.) ಆಯಿತು. ಅದನ್ನು ಕಂಡು ಅವರಿಗೆ ಬೆವರು ಸುರಿಯಿತು. ಇನ್ನು ಹೊಲಿಗೆ ಏನಾದರೂ ಹಾಕಿದ್ದರೆ ಬಿಲ್ ಅದೆಷ್ಟು ಹೆಚ್ಚಾಗಿರುತಿತ್ತೊ ಏನೊ?

ವಿದೇಶದ ವಿಷಯ. ಹೀಗಾಗಿ ಅವರು ಏನೂ ಮಾಡಲು ಸಾಧ್ಯವಿರಲಿಲ್ಲ. ಏಕೆಂದರೆ ಮೊದಲಿನ ಡಾಕ್ಟರ್‌ ಚಿಕಿತ್ಸೆಯ ಖರ್ಚಿನ ಬಗ್ಗೆ ಏನೂ ಬರೆದುಕೊಟ್ಟಿರಲಿಲ್ಲ. ಒಂದು ಸಂತೋಷದ ಸಂಗತಿಯೆಂದರೆ, ಅವರು ಲಂಡನ್ನಿಗೆ ಹೋಗುವ ಮುಂಚೆಯೇ ಆರೋಗ್ಯ ವಿಮೆ ಮಾಡಿಸಿಬಿಟ್ಟಿದ್ದರು. ಹೀಗಾಗಿ ಲಂಡನ್ನಿನಿಂದ ವಾಪಸಾದ ಬಳಿಕ ವಿಮೆ ಪಾಲಿಸಿಯ ನಿಯಮದ ಪ್ರಕಾರ ಕೆಲವು ಹೆಚ್ಚುವರಿ ಮೊತ್ತ ಕಡಿತಗೊಳಿಸಿ ಬಾಕಿ ಮೊತ್ತವನ್ನು ನೀಡಿದರು.

videsh-yatra-2

ಆರೋಗ್ಯ ವಿಮೆಯ ಜೊತೆಗೆ ನೀವು ಪ್ರವಾಸ ವಿಮೆ ಕೂಡ ಮಾಡಿಸಬೇಕು. ಪ್ರವಾಸ ವಿಮೆ ಮಾಡಿಸುವುದರ ಒಂದು ಲಾಭವೆಂದರೆ, ನೀವು ಯಾವುದೊ ಕಾರಣದಿಂದ ಸಕಾಲಕ್ಕೆ ವಿಮಾನ ನಿಲ್ದಾಣ ತಲುಪಲು ಆಗದೇ ವಿಮಾನ ಹತ್ತುವುದನ್ನು ತಪ್ಪಿಸಿಕೊಂಡಲ್ಲಿ ನಿಮಗೆ ಏರ್‌ ಲೈನ್ಸ್ ನಿಂದ ಟಿಕೆಟ್‌ ಹಣವಂತೂ ವಾಪಸ್‌ ದೊರೆಯದು ಹಾಗೂ ಅದೇ ಟಿಕೆಟ್‌ ನಲ್ಲಿ ಇನ್ನೊಂದು ವಿಮಾನದಲ್ಲಿ ಸ್ಥಳಾವಕಾಶವನ್ನು ಕಲ್ಪಿಸಿಕೊಡುವುದಿಲ್ಲ. ಆದರೆ ವಿಮೆ ಕಂಪನಿ ನಿಮ್ಮ ಟಿಕೆಟ್‌ ಹಣವನ್ನು ವಾಪಸ್‌ ಕೊಡುತ್ತದೆ. ಒಂದು ವೇಳೆ ಯಾವುದೊ ಕಾರಣದಿಂದ ವಿಮಾನ ರದ್ದಾದಲ್ಲಿ ಅಥವಾ ತುಂಬಾ ತಡವಾಗಿ ಹೊರಡಲಿದ್ದರೆ ಅಥವಾ ಇದೇ ಪ್ರಕಾರದ ಸ್ಥಿತಿಯಲ್ಲಿ ನಿಮಗೆ ಯಾವುದಾದರೂ ಹೋಟೆಲ್ ನಲ್ಲಿ ಇಳಿದುಕೊಳ್ಳುವುದಿದ್ದರೆ, ಊಟ ತಿಂಡಿ ಹಾಗೂ ಹೋಟೆಲ್ ‌ತನಕ ಟ್ಯಾಕ್ಸಿಯಲ್ಲಿ ಹೋಗುವ ಬರುವ ಎಲ್ಲ ಖರ್ಚು ವಿಮೆ ಕಂಪನಿಯಿಂದ ದೊರೆಯುತ್ತದೆ.

ವಿಮಾನ ರದ್ದಾದಾಗ ಅಥವಾ ತಡವಾಗಿ ಹೊರಡುವ ಸಂದರ್ಭದಲ್ಲಿ ನಿಮಗೆ ಆದ ಹಾನಿ, ತೊಂದರೆಗೆ ವಿಮೆ ಕಂಪನಿಯಿಂದ ಪರಿಹಾರ ದೊರಕುತ್ತದೆ. ಅದೇ ರೀತಿ ಪ್ರವಾಸ ವಿಮೆಯಲ್ಲಿ ಲಗೇಜ್‌ ಕಳೆದುಹೋದ ಸಂಗತಿಯೂ ಸೇರ್ಪಡೆಯಾಗಿರುತ್ತದೆ.

ಇಂಟರ್ನೆಟ್ಸೌಲಭ್ಯ

ವಿಮಾನದ ಮೂಲಕ ಪ್ರವಾಸ ಮಾಡುವವರು ಮನೆಯಲ್ಲಿ ಕುಳಿತುಕೊಂಡೇ ಇಂಟರ್‌ ನೆಟ್‌ ಮೂಲಕ ಟಿಕೆಟ್‌ ಬುಕ್ ಮಾಡಿಸಬಹುದು. ಇದರ ಮತ್ತೊಂದು ಸೌಲಭ್ಯವೆಂದರೆ ಇಂಟರ್‌ ನೆಟ್‌ ನಿಂದ `ಚೆಕ್‌ ಇನ್‌’ ಕೂಡ ಮಾಡಬಹುದು. ಇದರಿಂದಾಗಿ ನೀವು ಬಹುಬೇಗನೇ ವಿಮಾನ ನಿಲ್ದಾಣ ತಲುಪಬೇಕಾದ ಅವಶ್ಯಕತೆಯೂ ಇರುವುದಿಲ್ಲ ಹಾಗೂ `ಚೆಕ್‌ ಇನ್‌’ಗಾಗಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾದ ಅವಶ್ಯಕತೆಯೂ ಇರುವುದಿಲ್ಲ.

ಹೊರಡುವ ಒಂದು ದಿನದ ಮುಂಚೆ ನೀವು ನಿಮ್ಮ ಲಗೇಜ್‌ ನ ತೂಕವನ್ನು ಅವಶ್ಯವಾಗಿ ಪರಿಶೀಲಿಸಿ. ಹೆಚ್ಚಿನ ಏರ್‌ ಲೈನ್ಸ್ ಗಳು ಪ್ರತಿಯೊಂದು ಟಿಕೆಟ್‌ ಗೆ 20 ಕಿಲೋ ತನಕ ಸಾಮಾನು ಒಯ್ಯಲು ಅವಕಾಶ ನೀಡುತ್ತವೆ. ಇನ್ನು ಕೆಲವು 23 ಕಿಲೋಗೆ ಅವಕಾಶ ನೀಡುತ್ತವೆ. ಮಿತಿಗಿಂತ ಹೆಚ್ಚಾದರೆ ಪ್ರತಿ ಕಿಲೋಗೆ 500-600 ರೂ. ಹೆಚ್ಚುವರಿ ಬಾಡಿಗೆ ವಿಧಿಸುತ್ತವೆ. ಹೀಗಾಗಿ ಟಿಕೆಟ್‌ ಬುಕ್‌ಮಾಡುವಾಗಲೇ ಎಲ್ಲ ವಿಷಯಗಳನ್ನು ಕೇಳಿ ತಿಳಿದುಕೊಳ್ಳಿ.

ಚೂಪಾದ ವಸ್ತುಗಳನ್ನು ಜೊತೆಗೆ ಒಯ್ಯಬೇಡಿ

ಭಯೋತ್ಪಾದನಾ ಕೃತ್ಯಗಳಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಈಚೆಗೆ ಸುರಕ್ಷತಾ ವ್ಯವಸ್ಥೆ ಅತ್ಯಂತ ಬಿಗಿಗೊಳಿಸಲಾಗಿದೆ. ಹೀಗಾಗಿ ನಿಮ್ಮೊಂದಿಗೆ ಯಾವುದೇ ಚೂಪಾದ ವಸ್ತುಗಳು ಅಂದರೆ ಕತ್ತರಿ, ಬ್ಲೇಡ್‌ ಮುಂತಾದವು ಹಾಗೂ ಯಾವುದೇ ಪೇಯ ಪದಾರ್ಥಗಳನ್ನು ಹ್ಯಾಂಡ್‌ ಬ್ಯಾಗ್‌ ನಲ್ಲಿ ಇಟ್ಟುಕೊಂಡು ಹೋಗುವಂತಿಲ್ಲ.

ಕೆಲವು ವಿಮಾನ ನಿಲ್ದಾಣಗಳಲ್ಲಿ ನೀರಿನ ಬಾಟಲ್ ಗಳು ಹಾಗೂ ಇತರೆ ಪೇಯ ಪದಾರ್ಥಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಕೊಡುವುದಿಲ್ಲ. ಹೀಗಾಗಿ ನಿಮ್ಮ ಬ್ಯಾಗ್‌ ನಲ್ಲಿ ನೀರು ತುಂಬಿದ ಬಾಟಲ್ ನ್ನು ಇಡುವ ಬದಲು ಖಾಲಿ ಬಾಟಲ್ ನ್ನಷ್ಟೇ ಇಟ್ಟುಕೊಳ್ಳಿ ಹಾಗೂ ಚೆಕ್‌ ಇನ್‌ ನ ಬಳಿಕ ಲಾಂಜ್‌ ನಲ್ಲಿ ನಲ್ಲಿಯಿಂದ ನೀರು ತುಂಬಿಸಿಕೊಳ್ಳಿ. ಇಲ್ಲದಿದ್ದರೆ ಲಾಂಜ್‌ ಅಥವಾ ವೇಟಿಂಗ್‌ ಹಾಲ್ ‌ನ ಸಮೀಪ ನೀವು ದುಬಾರಿ ಬೆಲೆ ತೆತ್ತು ನೀರಿನ ಬಾಟಲ್ ಖರೀದಿಸಬೇಕಾಗುತ್ತದೆ.

ಸೌಂದರ್ಯ ಪ್ರಸಾಧನಗಳನ್ನು ಜೊತೆಗೊಯ್ಯಬೇಡಿ

ಮಹಿಳೆಯರ ಪರ್ಸ್‌ ಗಳಲ್ಲಿ ಸಾಮಾನ್ಯವಾಗಿ ಮೇಕಪ್‌ ನ ಸಾಮಗ್ರಿಗಳು ಅಂದರೆ ಲಿಪ್‌ ಸ್ಟಿಕ್‌, ನೇಲ್ ‌ಪಾಲಿಶ್‌, ನೇಲ್ ‌ಪಾಲಿಶ್‌ರಿಮೂವರ್‌, ಕತ್ತರಿ, ಕ್ಲಿಪ್‌, ಮೆನಿಕ್ಯೂರ್‌ ಸೆಟ್‌ ಮುಂತಾದವು ಇದ್ದೇ ಇರುತ್ತವೆ. ಇತ್ತೀಚೆಗೆ ಈ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಅಕಸ್ಮಾತ್‌ ಚೆಕ್‌ ಇನ್‌ ಸಂದರ್ಭದಲ್ಲಿ ಸಿಕ್ಕಿಬಿದ್ದರೆ ಕಸದ ಬುಟ್ಟಿಗೆ ಹಾಕಲಾಗುತ್ತದೆ. ಹೀಗಾಗಿ ಚೆಕ್‌ ಇನ್‌ ಗಿಂತ ಮುಂಚೆಗೆ ಇಂತಹ ವಸ್ತುಗಳನ್ನು ಸೂಟ್‌ ಕೇಸ್‌ ಅಥವಾ ಬ್ಯಾಗ್‌ ನಲ್ಲಿ ಹಾಕಿಡಿ.

ನಿಮ್ಮ ಬ್ಯಾಗ್‌ ಚಿಕ್ಕದೇ ಆಗಿರಲಿ ಅಥವಾ ದೊಡ್ಡದು, ಅದರಲ್ಲಿ ಎಲ್ಲವೂ ಆ ವಸ್ತುಗಳನ್ನು ಹೇಗಿಡಬೇಕೆಂದರೆ, ಯಾವುದೇ ಒಂದು ವಸ್ತುವಿನ ಅಗತ್ಯಬಿದ್ದಾಗ ಆ ವಸ್ತುವನ್ನಷ್ಟೇ ಹೊರತೆಗೆಯಲು ಸಾಧ್ಯವಾಗಿರಬೇಕು. ಒಂದು ವಸ್ತುವಿಗಾಗಿ ಇಡೀ ಬ್ಯಾಗನ್ನು ಕಿತ್ತು ಹಾಕುಂತಹ ಸ್ಥಿತಿ ನಿರ್ಮಾಣವಾಗಬಾರದು.

ಅನುಪಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ