ನಿಮ್ಮನ್ನು ಜನ ಹೆಚ್ಚಾಗಿ ಗಮನಿಸಬೇಕೆಂದು ಇಚ್ಛಿಸುತ್ತೀರಾ? ನಿಮ್ಮ ಸಾಮರ್ಥ್ಯದ ಬಗ್ಗೆ ಜನ ವಿಶ್ವಾಸವಿಡಬೇಕೇ? ಹೌದು, ಎಂದಾದರೆ ನೀವು ನಿಮ್ಮ ಲುಕ್ಸ್ ಬಗ್ಗೆ ಗಮನಕೊಡಬೇಕು. ಒಳ್ಳೆಯ ಮೇಕಪ್‌, ಆಕರ್ಷಕ ಡ್ರೆಸ್‌ ಮತ್ತು ಫ್ಯಾಷನೆಬಲ್ ಲುಕ್ಸ್ ನಿಮ್ಮದಾಗಿಸಿಕೊಂಡು ಜನರಲ್ಲಿ ನಿಮ್ಮ ಬಗ್ಗೆ ಇರುವ ದೃಷ್ಟಿಯನ್ನು ಬದಲಿಸಬಹುದು. ನಿಮ್ಮನ್ನು ಅಧಿಕ ಸಮರ್ಥರನ್ನಾಗಿ ಹಾಗೂ ವಿಶ್ವಸನೀಯರನ್ನಾಗಿ ಕಾಣುವಂತೆ ಮಾಡಬಹುದು.

ಅಮೆರಿಕಾದಲ್ಲಿ ಮಾಡಲಾದ ಒಂದು ಅಧ್ಯಯನದ ಪ್ರಕಾರ, ಕಾಸ್ಮೆಟಿಕ್ಸ್ ಮಹಿಳೆಯ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಚೆನ್ನಾಗಿ ಅಲಂಕರಿಸಿಕೊಳ್ಳುವ ಮಹಿಳೆಯರನ್ನು ಜನ ಹೆಚ್ಚು ಇಷ್ಟಪಡುತ್ತಾರೆ.

ಹಾರ್ವರ್ಡ್ ಯೂನಿವರ್ಸಿಟಿಯ ಮನೋವೈಜ್ಞಾನಿಕ ಪ್ರೊಫೆಸರ್‌ ನ್ಯಾನ್ಸಿ ಎಟ್‌ ಕಾಫ್‌ರ ನೇತೃತ್ವದಲ್ಲಿ ಒಂದು ಅಧ್ಯಯನ ನಡೆಸಲಾಯಿತು. ಅದರಲ್ಲಿ 20 ರಿಂದ 50 ವಯಸ್ಸಿನವರೆಗಿನ 25 ಮಹಿಳೆಯರನ್ನು ಆಯ್ಕೆ ಮಾಡಲಾಯಿತು. ಮೊದಲು ಮೇಕಪ್ ಇಲ್ಲದೆ ಅವರ ಫೋಟೋ ತೆಗೆಯಲಾಯಿತು. ನಂತರ ಬೇರೆ ಬೇರೆ ಮೇಕಪ್‌ ಮಾಡಿ ನ್ಯಾಚುರಲ್, ಪ್ರೊಫೆಶನಲ್ ಮತ್ತು ಗ್ಲಾಮರಸ್‌ ಇತ್ಯಾದಿ 3 ರೀತಿಯ ಲುಕ್ಸ್ ನಲ್ಲಿ ಅವರನ್ನು ಸಿದ್ಧಪಡಿಸಿ ಅವರ ಫೋಟೋ ತೆಗೆಯಲಾಯಿತು. ನಂತರ ಆ ಮಹಿಳೆಯರಿಗೆ ಕನ್ನಡಿಯಲ್ಲಿ ನೋಡಿಕೊಳ್ಳಲು ಅನುಮತಿ ನೀಡಲಾಯಿತು.

ನಂತರ 149 ಜನರಿಗೆ (61 ಪುರುಷರನ್ನು ಸೇರಿಸಿ) 250 ಮಿಲಿ ಸೆಕೆಂಡ್‌ ಅವರ ಫೋಟೋಗಳನ್ನು ತೋರಿಸಲಾಯಿತು. ನಂತರ 117 ಜನರಿಗೆ (30 ಪುರುಷರನ್ನು ಸೇರಿಸಿ) ಅವರಿಗೆ ಇಷ್ಟವಾದಷ್ಟು ಹೊತ್ತು ಫೋಟೋ ನೋಡಲು ಹೇಳಲಾಯಿತು.

ಈ ವ್ಯಕ್ತಿಗಳ ಜಡ್ಜ್ ಮೆಂಟ್‌ ಆಧಾರದಲ್ಲಿ ನಿರ್ಣಯಿಸಿದ್ದೇನೆಂದರೆ ಸ್ವಲ್ಪ ಹೊತ್ತು ನೋಡಲಿ ಅಥವಾ ಹೆಚ್ಚು ಹೊತ್ತು ನೋಡಲಿ, ಮೇಕಪ್‌ ಇಲ್ಲದರಿಗೆ ಹೋಲಿಸಿದರೆ ಮೇಕಪ್‌ ಮಾಡಿಕೊಂಡ ಮಹಿಳೆಯರು ಜನರಿಗೆ ಹೆಚ್ಚು ಆಕರ್ಷಕ ಹಾಗೂ ಸಮರ್ಥರಾಗಿ ಕಂಡುಬಂದರು.

ಹೆಚ್ಚಿದ ಆತ್ಮವಿಶ್ವಾಸ

ಮೇಕಪ್‌ ಮಾಡಿಕೊಳ್ಳುವುದು ಇತರರ ಮೇಲೆ ಒಳ್ಳೆಯ ಪ್ರಭಾವ ಬೀರುವುದಕ್ಕೆ ಮಾತ್ರವಲ್ಲ, ನಿಮಗೂ ಒಳ್ಳೆಯ ಅನುಭವ ನೀಡಲು ಹಾಗೂ ಆತ್ಮವಿಶ್ವಾಸ ಹೆಚ್ಚಿಸಲು ಅಗತ್ಯವಾಗಿದೆ. ನೀವು ಒಳ್ಳೆಯ ಬಟ್ಟೆ ಧರಿಸಿ, ಚೆನ್ನಾಗಿ ಮೇಕಪ್‌ ಮಾಡಿಕೊಂಡು ಮನೆಯಿಂದ ಹೊರಟಾಗ ನೋಡುವವರಿಂದ ಒಳ್ಳೆಯ ಕಾಂಪ್ಲಿಮೆಂಟ್ಸ್ ಸಿಗುತ್ತದೆ. ಜನ ಪ್ರಶಂಸಾಭರಿತ ದೃಷ್ಟಿಯಿಂದ ನಿಮ್ಮನ್ನು ನೋಡಿದಾಗ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮ ಮಹತ್ವ ನಿಮಗೆ ಅನುಭವವಾಗುತ್ತದೆ. ನಿಮ್ಮನ್ನು ನೀವು ಪ್ರೂವ್‌ಮಾಡಿಕೊಳ್ಳುವ ಪ್ರಯಾಸದಲ್ಲಿ ತೊಡಗುತ್ತೀರಿ. ಹೀಗೆ ಒಂದು ಸಕಾರಾತ್ಮಕ ಬದಲಾವಣೆ ನಿಮ್ಮಲ್ಲಿ ಬಂದು ಇಡೀ ವ್ಯಕ್ತಿತ್ವ ಕಾಂತಿಯುತವಾಗುತ್ತದೆ.

ಲಂಡನ್‌ ಸ್ಕೂಲ್ ಆಫ್‌ ಎಕನಾಮಿಕ್ಸ್ ನಲ್ಲಿ 52 ಸಾವಿರ ಜನರ ಮೇಲೆ ಒಂದು ಅಧ್ಯಯನ ನಡೆಸಿದಾಗ ಆಕರ್ಷಕ ಜನರು ಹೆಚ್ಚು ಬುದ್ಧಿವಂತರೆಂದು ತಿಳಿಯಲಾಯಿತು. ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಅವರು ಜೀವನದಲ್ಲಿ ಹೆಚ್ಚು ಸಫಲರಾಗುತ್ತಾರೆ. ಚಿಕ್ಕಂದಿನಲ್ಲಿ ಹೇಳಿಕೊಳ್ಳುವಂತಹ ಸೌಂದರ್ಯವಿಲ್ಲದಿದ್ದರು ದೊಡ್ಡವರಾದ ನಂತರ ಫ್ಯಾಷನೆಬಲ್ ಲುಕ್ಸ್, ಸ್ಟೈಲ್ ‌ಮತ್ತು ಆತ್ಮವಿಶ್ವಾಸದ ಮೂಲಕ ತಮ್ಮದೇ ಪ್ರತ್ಯೇಕ ಐಡೆಂಟಿಟಿ ಪಡೆದುಕೊಂಡಿದ್ದಾರೆ.

1990ರ ದಶಕದ ಟಾಪ್‌ 3 ಪ್ರಸಿದ್ಧ ಮಾಡೆಲ್ ‌ಗಳಲ್ಲಿ ಒಬ್ಬರಾದ ಸೂಪರ್‌ ಮಾಡೆಲ್ ‌ನಾಓಮಿ ಕ್ಯಾಂಪ್‌ಬೆಲ್ ‌ಲಂಡನ್ನಿನ ಒಂದು ವರ್ಕಿಂಗ್‌ ಕ್ಲಾಸ್‌ ಕುಟುಂಬದಲ್ಲಿ ಹುಟ್ಟಿದರು. ಶ್ಯಾಮಲ ವರ್ಣದ ನಾಓಮಿ 1988ರಲ್ಲಿ ಎಂತಹ ಬ್ಲ್ಯಾಕ್‌ ಮಾಡೆಲ್ ‌ಆದರೆಂದರೆ ಅವರಿಗೆ ಫ್ಯಾಷನ್‌ ಮ್ಯಾಗಝೀನ್‌ `ಫ್ರೆಂಚ್‌ ವೇಗ್‌’ನ ಕವರ್‌ ಪೇಜ್‌ ನಲ್ಲಿ ಸ್ಥಾನ ದೊರೆಯಿತು. ಅವರ ಆತ್ಮವಿಶ್ವಾಸ ಮತ್ತು ಫ್ಯಾಷನ್‌ ಸೆನ್ಸ್ ಅವರನ್ನು ಸಫಲತೆಯ ಉನ್ನತಿಗೇರಿಸಿತು. ಇಷ್ಟೇ ಅಲ್ಲ, ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಅವರು ಫ್ಯಾಷನ್ ಇಂಡಸ್ಟ್ರಿಯಲ್ಲಿ ಯಾವಾಗಲೂ ಬಣ್ಣ ಹಾಗೂ ಜಾತಿಯ ಬಗೆಗಿನ ಭೇದಭಾವದ ವಿರುದ್ಧ ದನಿಯೆತ್ತುತ್ತಿರುತ್ತಾರೆ.

ಬಿಪಾಶಾ ಬಸುರನ್ನೇ ತೆಗೆದುಕೊಳ್ಳಿ. ಶ್ಯಾಮಲ ವರ್ಣ ಹೊಂದಿದ್ದು ಹೆಲ್ದಿಯಾಗಿದ್ದರಿಂದ ಶಾಲೆಯಲ್ಲಿ `ಟಾಮ್ ಬಾಯ್‌’ ಹಾಗೂ `ಲೇಡಿ ಡಾನ್‌’ ಎಂದು ಕರೆಸಿಕೊಳ್ಳುತ್ತಿದ್ದ ಬಿಪಾಶಾ ಬಸು ಇಂದು ಸೆಕ್ಸ್ ಬಾಂಬ್‌ ಎನ್ನಿಸಿಕೊಂಡಿದ್ದಾರೆ. ಸುಂದರ ಶರೀರ, ಹೊಳೆಯುವ ಕಣ್ಣುಗಳು, ಆಕರ್ಷಕ ಸೆಕ್ಸಿ ಡ್ರೆಸ್‌, ಫ್ಯಾಷನೆಬ್‌ ಲುಕ್ಸ್ ಮತ್ತು ಆತ್ಮವಿಶ್ವಾಸದಿಂದ ತುಂಬಿ ತುಳುಕು ಬಿಪಾಶಾ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಡಸ್ಕಿ ಬ್ಯೂಟಿ ಆಗಿದ್ದಾರೆ. ಅವರು ತಮ್ಮನ್ನು ಅತ್ಯುತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿಕೊಳ್ಳುವುದನ್ನು ತಿಳಿದಿದ್ದಾರೆ.

ಇದೇ ರೀತಿ ಫ್ಯಾಷನೆಬಲ್ ಆಗಿದ್ದು ಸುಂದರಿಯಾಗಿರುವ ಸೋನಂ ಕಪೂರ್‌ ತಮ್ಮ ಮೊದಲ ಚಿತ್ರ `ಸಾರಿಯಾ’ದಲ್ಲಿ ನಟಿಸುವ ಮೊದಲು ಅವರ ತೂಕ ಸುಮಾರು 90 ಕೆ.ಜಿ. ಇತ್ತು. ಆದರೆ `ಸಾರಿಯಾ’ದ ಆಫರ್‌ ಸಿಕ್ಕ ನಂತರ ಕಠಿಣ ಪರಿಶ್ರಮದಿಂದ ಅವರು 30 ಕೆ.ಜಿ. ತೂಕ ಕರಗಿಸಿಕೊಂಡರು. ಈಗ ಸ್ಲಿಮ್ ಮತ್ತು ಫ್ಯಾಷನೆಬಲ್ ಲುಕ್ಸ್ ನೊಂದಿಗೆ, ಸಾಕಷ್ಟು ಕಾನ್ಛಿಡೆನ್ಸ್ ನಿಂದ ಫಿಲ್ಮ್ ಗಳಲ್ಲಿ ಕಂಡುಬರುತ್ತಾರೆ.

ಇಂತಹುದೇ ಒಂದು ಹೆಸರು ಅಮೆರಿಕಾದ ಫಸ್ಟ್ ಲೇಡಿ ಮಿಶೆಲ್ ‌ಒಬಾಮಾರದ್ದು. ಶ್ಯಾಮಲ ವರ್ಣದವರಾಗಿದ್ದು ಸಾಮಾನ್ಯ ರೂಪಿನವರಾಗಿದ್ದರೂ ಅವರ ಆತ್ಮವಿಶ್ವಾಸ ತುಂಬಿದ ವ್ಯಕ್ತಿತ್ವ, ಫಿಟ್‌ ಬಾಡಿ ಮತ್ತು ಸ್ಟೈಲಿಶ್‌ ಬೋಲ್ಡ್ ಕಲರ್ಸ್ನ ಡ್ರೆಸೆಸ್‌ಜಾದೂನಂತಹ ಪರಿಣಾಮ ಬೀರುತ್ತದೆ.

ಫ್ಯಾಷನ್ನಿನ ಮಹತ್ವ

ಬರೀ ಗ್ಲಾಮರ್‌ ಲೋಕದಲ್ಲಷ್ಟೇ ಅಲ್ಲ, ಸಾಮಾನ್ಯ ಬದುಕಿನಲ್ಲೂ ಫ್ಯಾಷನ್ನಿನ ಮಹತ್ವವನ್ನು ಕಡೆಗಣಿಸಲಾಗುವುದಿಲ್ಲ. ಅಂದಹಾಗೆ ಇತರ ಸಾಮರ್ಥ್ಯಗಳನ್ನು ಪ್ರಮಾಣಪತ್ರಗಳಿಂದ ಸಾಬೀತುಪಡಿಸಬಹುದು. ಆದರೆ ನಮ್ಮ ವ್ಯಕ್ತಿತ್ವದಲ್ಲಿ ಆತ್ಮವಿಶ್ವಾಸ ತುಂಬಬೇಕೆಂದಿದ್ದರೆ ನಮ್ಮ ಓವರ್‌ ಆಲ್ ಲುಕ್ಸ್ ಬಗ್ಗೆ ಗಮನ ಕೊಡಬೇಕು. ನೀವು ಸಂಪೂರ್ಣವಾಗಿ ಸಿದ್ಧರಾಗಿ ಮನೆಯಿಂದ ಹೊರಟಾಗ ಮುಖದಲ್ಲಿ ಹಾಗೂ ನಡವಳಿಕೆಯಲ್ಲಿ ಕಾನ್ಛಿಡೆನ್ಸ್ ತಾನಾಗಿ ಹೊಳೆಯುತ್ತದೆ. ಆಫೀಸಿನಲ್ಲಿ ಬಾಸ್‌ ನಿಮ್ಮ ಮೇಲೆ ವಿಶ್ವಾಸವಿಟ್ಟು ಹೊಸ ಜವಾಬ್ದಾರಿಗಳನ್ನು ಕೊಡುತ್ತಾರೆ. ಸಹೋದ್ಯೋಗಿಗಳು ನಿಮಗೆ ಪ್ರಾಮುಖ್ಯತೆ ನೀಡುತ್ತಾರೆ. ಇಷ್ಟೇ ಅಲ್ಲ ಆಕರ್ಷಕ ವ್ಯಕ್ತಿತ್ವ ನಿಮಗೆ ಯಶಸ್ಸಿನ ಬಾಗಿಲನ್ನು ತೆರೆಸುತ್ತದೆ.

ಮನೆಯಲ್ಲೂ ನೀವು ಸುಂದರವಾಗಿ ಕಾಣುವುದು ಅಗತ್ಯ. ವಿಶೇಷವಾಗಿ ನಿಮ್ಮ ಪತಿಯನ್ನು ನಿಮ್ಮ ಪ್ರೀತಿಯಲ್ಲಿ ಹುಚ್ಚರನ್ನಾಗಿಸಲು. ಸೋಶಿಯಲ್ ಫಂಕ್ಷನ್‌ ನಲ್ಲಿ ನೀವು ಫ್ಯಾಷನ್‌ ನಲ್ಲಿದ್ದರೆ ಜನ ನಿಮ್ಮನ್ನು ಪ್ರಶಂಸಿಸುತ್ತಾರೆ.

ಫ್ಯಾಷನೆಬಲ್ ಮತ್ತು ಸ್ಮಾರ್ಟ್ಆಗುವುದು ಹೇಗೆ?

ಅಂದಹಾಗೆ ಫ್ಯಾಷನ್‌ ಕೂಡ ಒಂದು ಕಲೆ. ಅದರಿಂದ ನಮ್ಮಲ್ಲಿ ಕಾಂತಿ ತಂದುಕೊಳ್ಳಬಹುದು. ನಮ್ಮ ದೈಹಿಕ ರಚನೆ, ರೂಪ, ಮುಖದ ಬಣ್ಣ, ಕಣ್ಣುಗಳು ಇತ್ಯಾದಿ ನಮ್ಮ ವಶದಲ್ಲಿಲ್ಲ. ಆದರೂ ಕೊಂಚ ಪ್ರಯಾಸದಿಂದ ನಾವು ಅವುಗಳಲ್ಲಿ ಕಾಂತಿ ತರಬಹುದು.

ದೈಹಿಕ ರಚನೆಯ ಬಗ್ಗೆ ಗಮನಿಸಿ

ಎಲ್ಲಕ್ಕೂ ಮೊದಲು ಕನ್ನಡಿಯ ಮುಂದೆ ನಿಂತು ನಿಮ್ಮನ್ನು ಎಲ್ಲ ಕೋನಗಳಿಂದ ಗಮನಿಸಿ. ನಿಮ್ಮ ಸ್ಕಿನ್‌ ಹಾಗೂ ಬಾಡಿ ಟೈಪ್‌ ಬಗ್ಗೆ ಗಮನಿಸಿ. ವ್ಯಕ್ತಿತ್ವದ ಯಾವ ಅಂಶ ನಿಮ್ಮನ್ನು ಇತರರಿಂದ ಪ್ರತ್ಯೇಕಿಸುತ್ತದೆ? ಶರೀರದ ಯಾವ ಕೊರತೆಯನ್ನು ಅಡಗಿಸಲು ಬಯಸುತ್ತೀರಿ ಎಂಬುದರ ಬಗ್ಗೆ ಗಮನ ಕೊಡಿ. ಸ್ಕಿನ್‌ ಪ್ರಾಬ್ಲಮ್ಸ್ ಇದ್ದರೆ ಅದಕ್ಕೆ ಎಕ್ಸ್ ಪರ್ಟ್‌ ಗಳ ಸಲಹೆ ಪಡೆಯಿರಿ. ದಪ್ಪಗಿದ್ದರೆ ಎಕ್ಸರ್‌ ಸೈಜ್‌ ಹಾಗೂ ಡಯೆಟ್‌ ಕಂಟ್ರೋಲ್ ‌ಬಗ್ಗೆ ಗಮನಿಸಿ. ಏಕೆಂದರೆ ನಿಮ್ಮ ಬಾಡಿ ಫಿಟ್‌ ಆಗಿದ್ದು ಸ್ಕಿನ್‌ ಕ್ಲಿಯರ್‌ ಆಗಿದ್ದಾಗಲೇ ಫ್ಯಾಷನ್‌ ಸರಿಯೆನಿಸುತ್ತದೆ.

ನಿಮ್ಮ ವಾರ್ಡ್ರೋಬ್ವ್ಯವಸ್ಥಿತಗೊಳಿಸಿ

ಎಂದಾದರೂ ಕುಳಿತು ನಿಮ್ಮ ವಾರ್ಡ್‌ ರೋಬ್‌ ನ ಎಲ್ಲ ಬಟ್ಟೆಗಳನ್ನೂ ಹೊರತೆಗೆಯಿರಿ. ನಂತರ ನೀವು ಯಾವ ಬಟ್ಟೆ ಧರಿಸುತ್ತೀರಿ, ಯಾವುದನ್ನು ಧರಿಸುವುದಿಲ್ಲ ಎಂದು ನಿರ್ಧರಿಸಿ. ವ್ಯರ್ಥವಾಗಿ ಬಟ್ಟೆಗಳ ರಾಶಿಯನ್ನು ವಾರ್ಡ್‌ ರೋಬಿನಲ್ಲಿ ಹೆಚ್ಚಿಸಬೇಡಿ. ಅವುಗಳನ್ನು ಹಂಚಿಬಿಡಿ. ಯಾವ ಬಟ್ಟೆಗಳನ್ನು ಮಿಕ್ಸ್ ಅಂಡ್‌ ಮ್ಯಾಚ್‌ ಆಗಿ ಧರಿಸುತ್ತೀರೋ ಅವನ್ನು ಬೇರೊಂದು ಮೂಲೆಯಲ್ಲಿಡಿ. ಹೊಲಿಗೆ ಬಿಚ್ಚಿರುವುದನ್ನು ಸರಿ ಮಾಡಲು ಹಾಗೂ ಆಲ್ಟ್ರೇಶನ್‌ ಮಾಡಲು ದರ್ಜಿಗೆ ಕೊಡಿ.

ಸಂದರ್ಭಕ್ಕೆ ಅನುಗುಣವಾಗಿ ಬಟ್ಟೆ ಧರಿಸಿ

ಫ್ಯಾಷನ್‌ ಸಂದರ್ಭ, ಹವಾಮಾನ ಮತ್ತು ಸ್ಥಳಕ್ಕೆ ಅನುಗುಣವಾಗಿದ್ದರೆ ಒಳ್ಳೆಯದು. ಆಫೀಸಿಗೆ ಕೊಂಚ ಫಾರ್ಮಲ್ ಡ್ರೆಸ್‌, ಪಾರ್ಟಿಗೆ ಗ್ಲಾಮರಸ್‌ ಡ್ರೆಸ್‌ ಗಳು ಪರ್ಫೆಕ್ಟ್ ಆಗಿರುತ್ತವೆ. ನಿಮ್ಮ ಪ್ರೊಫೆಶನ್‌ ಬಗ್ಗೆಯೂ ಗಮನಿಸಿ. ಒಬ್ಬ ನರ್ಸ್‌ ಅಥವಾ ಟೀಚರ್‌ ಳ ಡ್ರೆಸ್‌ ಮತ್ತು ರಿಸೆಪ್ಶನಿಸ್ಟ್ ಅಥವಾ ಮಾಡೆಲ್ ‌ನ ಡ್ರೆಸ್‌ ಗಳಲ್ಲಿ ಅಂತರವಿರಬೇಕು. ಪ್ರಯತ್ನಿಸಿದರೆ ಸಿಂಪಲ್ ಆಗಿದ್ದರೂ ಫ್ಯಾಷನೆಬಲ್ ಆಗಿ ಕಾಣಿಸುತ್ತೀರಿ.

ಕಾಸ್ಮೆಟಿಕ್ಸ್ ಮತ್ತು ಬಟ್ಟೆಗಳ ಆಯ್ಕೆ

Bipasha-Basu-07

ಅಗ್ಗದ ವಸ್ತುಗಳ ಬದಲು ಒಳ್ಳೆಯ ಬ್ರ್ಯಾಂಡ್‌ ನ ವಸ್ತುಗಳನ್ನು ಕೊಳ್ಳಿರಿ. ದುಬಾರಿಯಾಗಿದ್ದರೂ ಅವು ಹೆಚ್ಚು ಉಪಯೋಗವಾಗಿರುತ್ತವೆ. ಏಕೆಂದರೆ ಬ್ರ್ಯಾಂಡೆಡ್‌ ಬಟ್ಟೆಗಳ ಫ್ಯಾಬ್ರಿಕ್‌ ಮತ್ತು ಬಣ್ಣ ಬೇಗನೆ ಹಾಳಾಗುವುದಿಲ್ಲ. ಅವು ಹೆಚ್ಚು ಸಮಯದವರೆಗೆ ಆಕರ್ಷಕವಾಗಿದ್ದು ಫ್ಯಾಷನ್‌ ನಲ್ಲಿರುತ್ತವೆ. ಆದರೆ ಅಗ್ಗದ ಬಟ್ಟೆಗಳ ಲೈಫ್‌ ಬಹಳ ಕಡಿಮೆಯಾಗಿರುತ್ತದೆ. ಮಿಕ್ಸ್ ಅಂಡ್‌ ಮ್ಯಾಚ್‌ ಮಾಡಲು ಕೆಲವು ಫಂಕಿ ಜ್ಯೂವೆಲರಿ, ಕಲರ್ ಫುಲ್ ಫುಟ್‌ ವೇರ್‌ ಗಳು ಮತ್ತು ಸ್ಟೋಲ್ ‌ಇತ್ಯಾದಿಗಳ ಸ್ಟಾಕ್ ಅಗತ್ಯವಾಗಿ ಇಟ್ಟುಕೊಳ್ಳಿ. ವಿಧವಿಧವಾದ ಸನ್‌ ಗ್ಲಾಸಸ್‌ ಮತ್ತು ಹ್ಯಾಂಡ್‌ ಬ್ಯಾಗ್ಸ್ ಇಟ್ಟುಕೊಳ್ಳಿ. ಇದೇ ರೀತಿ ಯಾವಾಗಲೂ ಒಳ್ಳೆಯ ಬ್ರ್ಯಾಂಡ್‌ ನ ಕಾಸ್ಮೆಟಿಕ್ಸ್ ಉಪಯೋಗಿಸುವುದರಿಂದ ಸೈಡ್‌ ಎಫೆಕ್ಟ್ಸ್ ಇರುವುದಿಲ್ಲ.

ಶಾಪಿಂಗ್ಮಾಡಲು ಹೋದಾಗ

ಶಾಪಿಂಗ್‌ ಸಮಯದಲ್ಲಿ ತಿಳಿದರ ಸಲಹೆ ಕೇಳಿ. ಖರೀದಿಸಲು ಹೋಗುವಾಗೆಲ್ಲಾ ಫ್ಯಾಷನೆಬಲ್ ಸಂಗಾತಿಯನ್ನು ಜೊತೆಗೆ ಕರೆದುಕೊಂಡು ಹೋಗಿ.

ಸರಿಯಾದ ಪೋಸ್ಚರ್‌ : ಸ್ಮಾರ್ಟ್‌, ಕಾನ್ಛಿಡೆಂಟ್‌ ಮತ್ತು ಅಟ್ರ್ಯಾಕ್ಟಿವ್ ‌ಆಗಿ ಕಾಣಿಸಲು ನಿಮ್ಮ ಪೋಸ್ಚರ್‌ ಬಗ್ಗೆಯೂ ಗಮನಿಸಬೇಕು. ಅಂದಹಾಗೆ, ವ್ಯಕ್ತಿ ತನ್ನನ್ನು ಪ್ರಸ್ತುತಪಡಿಸಿಕೊಳ್ಳುವ ವಿಧಾನ ಅವರ ವ್ಯಕ್ತಿತ್ವವನ್ನು ಸಾರುತ್ತದೆ. ಬಾಗಿದ ಹೆಗಲು ಮತ್ತು ಸುಸ್ತಾದ ಕಾರ್ಯಕಲಾಪಗಳು ಕಾನ್ಛಿಡೆನ್ಸ್ ಕೊರತೆಯನ್ನು ತೋರಿಸುತ್ತದೆ. ತಲೆಯೆತ್ತಿ ಓಡಾಡುವುದು, ಕಣ್ಣುಗಳನ್ನು ಸೇರಿಸಿ ಮಾತಾಡುವುದು, ನೆಟ್ಟಗೆ ನಿಲ್ಲುವುದು, ವೇಗವಾಗಿ ನಡೆಯುವುದು, ಮಾತಾಡುವಾಗ ಮುಗುಳ್ನಗುವುದು ಇತ್ಯಾದಿ ವ್ಯಕ್ತಿತ್ವವನ್ನು ಆಕರ್ಷಕವಾಗಿಸುತ್ತವೆ.

ಸ್ಮಾರ್ಟ್ಹೇರ್ಕಟ್‌ : ನಿಮ್ಮ ಕೂದಲನ್ನು ಮುಖದ ಆಕಾರಕ್ಕೆ ತಕ್ಕಂತೆ ಸ್ಮಾರ್ಟ್‌ ಆಗಿ ಕತ್ತರಿಸಿ. ನಂತರ ನಿಮ್ಮ ಲುಕ್ಸ್ ಹೇಗೆ ಬದಲಾಗುತ್ತದೆಂದು ನೋಡಿ.

ಫ್ಯಾಷನ್ಸೆನ್ಸ್ ಅಗತ್ಯ

ಫ್ಯಾಷನ್‌ ನ್ನು ಒಂದು ಸುಂದರ ಪ್ಯಾಕೇಜಿಂಗ್‌ ಎಂದು ಕರೆಯಬಹುದು. ಪ್ರತಿ ವ್ಯಕ್ತಿ ತನ್ನನ್ನು ಇತರರಿಗಿಂತ ಹೆಚ್ಚು ಉತ್ತಮವಾಗಿ ಪ್ರದರ್ಶಿಸಲು ಇಚ್ಛಿಸುತ್ತಾರೆ. ಇದಕ್ಕಾಗಿ ಫ್ಯಾಷನ್‌ ನ ಆಸರೆ ಪಡೆಯುತ್ತಾರೆ.

ವೆಸ್ಟರ್ನ್‌ ಡ್ರೆಸ್‌ ಗಳೇ ಫ್ಯಾಷನೆಬಲ್ ಎಂದೇನಿಲ್ಲ. ಇಂಡಿಯನ್‌ ಡ್ರೆಸ್‌ ಗಳಿಗೂ ಫ್ಯಾಷನೆಬಲ್ ಲುಕ್ಸ್ ಕೊಡಬಹುದು. ಸರಿಯಾದ ಫ್ಯಾಷನ್‌ ಸೆನ್ಸ್ ಬಳಸಬೇಕಷ್ಟೆ. ನಿಮ್ಮ ಬಾಹುಗಳು ಸುಂದರವಾಗಿದ್ದು, ಕತ್ತು ನೀಳವಾಗಿದ್ದರೆ ಸ್ಲೀವ್ ಲೆ‌ಸ್‌, ಡೀಪ್‌ ನೆಕ್‌ ನ ಬ್ಲೌಸ್ ನೊಂದಿಗೆ ರೇಷ್ಮೆ ಸೀರೆ ಧರಿಸಬಹುದು. ಒಂದುವೇಳೆ ನಿಮ್ಮ ಕಾಲುಗಳು ಉದ್ದವಾಗಿ ಸುಂದರವಾಗಿದ್ದರೆ ಶಾರ್ಟ್‌ ಸ್ಕರ್ಟ್‌ ಅಥವಾ ಕೇಪ್ರಿ ಧರಿಸಿ ನಿಮ್ಮ ವ್ಯಕ್ತಿತ್ವವನ್ನು ಆಕರ್ಷಕಗೊಳಿಸಬಹುದು. ಜನ ಪ್ರಶಂಸಾಭರಿತ ದೃಷ್ಟಿಯಿಂದ ನೋಡಿದಾಗ ನಿಮ್ಮ ಆತ್ಮವಿಶ್ವಾಸ ತಾನಾಗಿಯೇ ಹೆಚ್ಚುತ್ತದೆ.

ಇದಕ್ಕೆ ಪ್ರತಿಯಾಗಿ ನೀವು ಶ್ಯಾಮಲ ವರ್ಣದವರಾಗಿದ್ದು, ಆರೆಂಜ್‌ ಕಲರ್‌ ಫ್ಯಾಷನ್‌ ನಲ್ಲಿದೆಯೆಂದು ಡಾರ್ಕ್‌ ಆರೆಂಜ್‌ ಡ್ರೆಸ್ ಧರಿಸಿದರೆ ಅಥವಾ ದಪ್ಪಗಿದ್ದರೂ ಸಡಿಲವಾದ ಡ್ರೆಸ್‌ ಗಳನ್ನು ಧರಿಸಿದರೆ ನಿಮ್ಮ ಲುಕ್ಸ್ ಇನ್ನಷ್ಟು ಸಪ್ಪೆಯಾಗುತ್ತದೆ. ಆದ್ದರಿಂದ ಕಣ್ಣು ಮುಚ್ಚಿಕೊಂಡು ಫ್ಯಾಷನ್‌ ಟ್ರೆಂಡ್‌ ಫಾಲೋ ಮಾಡುವ ಬದಲು ನಿಮಗೆ ಅನುರೂಪವಾದ ಡ್ರೆಸ್‌ ನ್ನು ಆರಿಸಿಕೊಳ್ಳಿ.

ಗಿರಿಜಾ ಶಂಕರ್‌.

ಸೋನಂ ಕಪೂರ್‌ : ತನ್ನ ತೂಕ ಕರಗಿಸಿ ಇದೀಗ ಯುವಜನರ ಫೇವರಿಟ್‌ ಸಿನಿ ಐಕಾನ್‌ ಎನಿಸಿದ್ದಾಳೆ!

ಬಿಪಾಶಾ ಬಸು : ಡಸ್ಕಿ ಬ್ಯೂಟಿ ಆದರೇನು? ಗ್ಲಾಮರ್‌ಮುಖ್ಯ!

ಮಿಶೆಲ್ ಒಬಾಮಾ : ಸ್ಟೈಲಿಶ್‌ ಡ್ರೆಸೆಸ್‌ ಮಾಡುವ ಮೋಡಿ ಅಂತಿಂಥದ್ದಲ್ಲ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ