ಅಮೆರಿಕಾದ ನ್ಯೂಯಾರ್ಕ್‌ ನ ಎಡಿಥ್‌ ವಿಂಡ್ಸರ್‌ ರವರನ್ನು ಅವರ ದೇಶವಷ್ಟೇ ಅಲ್ಲ, ಇಡೀ ವಿಶ್ವದ ಅಂತಹ ವರ್ಗದ ಜನರು ಬಹಳ ವರ್ಷಗಳವರೆಗೆ ಪ್ರಶಂಸಿಸುತ್ತಾರೆ. ಅವರನ್ನು ಬಹುಸಂಖ್ಯಾತರು ಯಾವುದೋ ಬೇರೆ ಗ್ರಹದಿಂದ ಬಂದವರೆಂದು ಭಾವಿಸುತ್ತಾರೆ. ಶಿಯಾ ಕ್ಲಾರಾ ಹಾಗೂ ಇವರು ಸಲಿಂಗ ಜೋಡಿಗಳಾಗಿದ್ದು, ಮದುವೆ ಮಾಡಿಕೊಂಡು ಒಟ್ಟಿಗೆ ಬಾಳಿದ್ದರು. ಅಮೆರಿಕಾದ ಕೆಲವು ರಾಜ್ಯಗಳು ಕೊಂಚ ತಕರಾರು ಮಾಡಿದರೂ ನಂತರ ಇಂತಹ ಮದುವೆಗಳನ್ನು ಕಾನೂನುಬದ್ಧಗೊಳಿಸಿದ. ಬಿಲ್ ಕ್ಲಿಂಟನ್‌ ಕಾಲದಲ್ಲಿ ಮಾಡಿದ ಒಂದು ಕಾನೂನು ಈ ವಿವಾಹಿತ ಸಲಿಂಗಿಗಳಿಗೆ ಅಡ್ಡಿಪಡಿಸುತ್ತಿತ್ತು.

ಎಡಿಥ್‌ ವಿಂಡ್ಸರ್‌ ಮತ್ತು ಶಿಯಾ ಕ್ಲಾರಾ ಸ್ಪೈರ್‌ ಇಬ್ಬರೂ ಮಹಿಳೆಯರು. ಆದರೆ ಅವರಿಬ್ಬರೂ ಕಾನೂನುಬದ್ಧವಾಗಿದ್ದ ಕಡೆ ಅಂತಹ ಮದುವೆ ಮಾಡಿಕೊಂಡಿದ್ದರು. 2009ರಲ್ಲಿ ಶಿಯಾ ಕ್ಲಾರಾ ತೀರಿಕೊಂಡರು. ಎಡಿಥ್‌ ವಿಂಡ್ಸರ್‌ ಗೆ ಶಿಯಾರ ಆಸ್ತಿ ಸಿಕ್ಕಾಗ ಫೆಡರ್‌ ಡಿಫೆನ್ಸ್ ಮತ್ತು ಮ್ಯಾರೇಜ್‌ ಆ್ಯಕ್ಟ್ ಪ್ರಕಾರ, ಅವರಿಗೆ ಅವಿವಾಹಿತ ವ್ಯಕ್ತಿಯಿಂದ ಸಿಕ್ಕ ಆಸ್ತಿಗೆ ತೆರಿಗೆ ರೂಪದಲ್ಲಿ 3,60,000 ಡಾಲರ್‌ ನ ತೆರಿಗೆ ತುಂಬಲು ನೋಟೀಸ್‌ ಕೊಡಲಾಯಿತು. ಅಮೆರಿಕನ್‌ ಸುಪ್ರೀಂ ಕೋರ್ಟ್‌ ಈಗ ಈ ಕಾನೂನು ಸ್ತ್ರೀ ಪುರುಷರಲ್ಲಿ ಭೇದ ತೋರುತ್ತದೆಂದು ಅದನ್ನು ಮಾನ್ಯ ಮಾಡಲಿಲ್ಲ. ಒಂದು ವೇಳೆ ಪುರುಷ ಪುರುಷನನ್ನು ಅಥವಾ ಸ್ತ್ರೀ ಸ್ತ್ರೀಯನ್ನು ವಿವಾಹ ಮಾಡಿಕೊಂಡರೆ ಅಂಥವರನ್ನು ಸ್ತ್ರೀ-ಪುರುಷರ ವಿವಾಹಕ್ಕಿಂತ ಬೇರೆ ಎಂದು ತಿಳಿಯಾಗುವುದಿಲ್ಲ.

ಇದೇ ರೀತಿ ಕ್ಯಾಲಿಫೋರ್ನಿಯಾದ ಕಾನೂನಿನಲ್ಲಿ ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ಕೊಡುತ್ತಿರಲಿಲ್ಲ. ಅಲ್ಲಿನ ಕೋರ್ಟು ಅಸಂವಿಧಾನಕ ಎಂದು ತೀರ್ಮಾನಿಸಿತ್ತು. ವಿಷಯ ಸುಪ್ರೀಂ ಕೋರ್ಟ್‌ ತಲುಪಿತು. ಅಪೀಲ್ ‌ಮಾಡಿದವರು ಯಾರೋ ಕಟ್ಟಾ ತಲೆ ತಿರುಕರಾಗಿದ್ದರು. ಆದರೆ ಸುಪ್ರೀಂ ಕೋರ್ಟ್‌ ಅದರ ಬಗ್ಗೆ ವಿಚಾರಣೆ ಮಾಡಲು ಒಪ್ಪಲಿಲ್ಲ. ಹೀಗೆ ಕ್ಯಾಲಿಫೋರ್ನಿಯಾ, ಸಲಿಂಗಿಗಳ ಮದುವೆಯನ್ನು ಸ್ತ್ರೀ-ಪುರುಷರ ಮದುವೆಗಳಿಗೆ ಸಮಾನವಾಗಿ ಮಾನ್ಯತೆ ನೀಡುವ ಮತ್ತು ಅವಕ್ಕೆ ಕಾಯಿದೆ ಪ್ರಕಾರ ಸರ್ಕಾರದಿಂದ ಲೈಸೆನ್ಸ್ ನೀಡುವ 13ನೇ ರಾಜ್ಯವಾಯಿತು.

ಅಮೆರಿಕಾ ಬಿಳಿಯರಲ್ಲದವರೊಂದಿಗಿದ್ದ ಭೇದಭಾವವನ್ನು ಸಮಾಪ್ತಿಗೊಳಿಸಿದಂತೆ, ಮಹಿಳೆಯರಿಗೆ ಹಕ್ಕು ಕೊಟ್ಟಂತೆ ಕಾನೂನು ಪ್ರಕಾರ ಅಥವಾ ಕಾನೂನುಬಾಹಿರಾಗಿ ದೇಶಕ್ಕೆ ಬಂದ ವ್ಯಕ್ತಿಗಳಿಗೆ ಪೌರತ್ವ ನೀಡಿತು. ಈ ಹೆಜ್ಜೆಯೂ ಅದರಂತೆಯೇ ಇದೆ.

ಸಲಿಂಗಿಗಳ ಜೋಡಿ ಯಾವುದೇ ಅನೈತಿಕ ಕಾರ್ಯ ಮಾಡುವುದಿಲ್ಲ. ಏಕೆಂದರೆ ಮದುವೆಯಾದವರಂತೆ ಇರುವುದು, ಮನಸ್ಸಿಗೆ ಬಂದ ರೀತಿಯಲ್ಲಿ ಸೆಕ್ಸ್ ಸುಖ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಸರ್ಕಾರ ಅಥವಾ ಸಮಾಜ ಇದರಲ್ಲಿ ಹಸ್ತಕ್ಷೇಪ ಮಾಡಬಾರದು.

ಅವರುಗಳ ವಿವಾಹಕ್ಕೆ ಮಾನ್ಯತೆ ಕೊಟ್ಟು ಅಸಲಿಗೆ ಸರ್ಕಾರ ಇಬ್ಬರಿಗೂ ರಕ್ಷಣೆ ನೀಡುತ್ತದೆ. ಬೇರೆಯಾದರೆ ಆಸ್ತಿ ಹಂಚುವಿಕೆ ವೈವಾಹಿಕ ಕಾನೂನುಗಳ ಪ್ರಕಾರ ಆಗುತ್ತದೆ. ಇಬ್ಬರೂ ದಂಪತಿಗಳಂತೆ ಇನ್‌ ಕಂ ಟ್ಯಾಕ್ಸ್ ರಿಟರ್ನ್‌ ಫೈಲ್ ‌ಮಾಡುತ್ತಾರೆ. ಒಬ್ಬರು ಸತ್ತ ನಂತರ ಇನ್ನೊಬ್ಬರಿಗೆ ಆಸ್ತಿ ಸಿಗುತ್ತದೆ. ಯಾರಾದರೂ ಒಬ್ಬರಿಗೆ ಅಪಘಾತವಾದರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ವಿವಾಹಿತ ಸಂಗಾತಿಯಂತೆ ಅವರೊಂದಿಗೆ ಇರಬಹುದು. ಇಬ್ಬರೂ ಸ್ತ್ರೀ-ಪುರುಷ ಜೋಡಿಗಳಂತೆ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು ಅಥವಾ ಒಬ್ಬರ ಅಂಶದಿಂದ ಸರೋಗೇಟ್‌ ಮಗುವನ್ನು ಪಡೆಯಬಹುದು.

ಈ ವಿಷಯದಲ್ಲಿ ಸಮಾಜ ಅಡ್ಡಗಾಲು ಹಾಕುವ ಅಗತ್ಯವೇನಿದೆ? ಇದನ್ನು ಮಾಡು, ಅದನ್ನು ಮಾಡು, ಆಗಲೇ ಮದುವೆಯಾಗುತ್ತದೆ ಎಂದು ಸಮಾಜವೇಕೆ ಹೇಳಬೇಕು?

ಇದನ್ನೇ ಹೋಲುವಂಥ ಆದರೆ ಕಡಿಮೆ ಕ್ರಾಂತಿಕಾರಿ ನಿರ್ಣಯವನ್ನು ಚೆನ್ನೈನ ಉಚ್ಚ ನ್ಯಾಯಾಲಯ ಜೂನ್‌ನಲ್ಲಿ ಕೊಟ್ಟಿದೆ. ಮುಸ್ಲಿಂ ಪತ್ನಿ ತಲಾಕ್‌ ನಂತರ ಜೀವನಾಂಶ ಕೇಳಿದ್ದಳು. ಪತಿ ಹೇಳಿದ್ದು ಮದುವೆ ಆಗಿಯೇ ಇಲ್ಲ. ಏಕೆಂದರೆ ಮದುವೆ ಬಗ್ಗೆ ನಿಖಾದ ಪುಸ್ತಕದಲ್ಲಿ ದಾಖಲಾಗಿಲ್ಲ. ಫ್ಯಾಮಿಲಿ ಕೋರ್ಟ್‌ ಪತಿಯ ಮಾತನ್ನು ಒಪ್ಪಿಕೊಂಡಿತು ಮತ್ತು 2 ಮಕ್ಕಳಿಗೆ ಪರಿಹಾರ ಕೊಡಿಸಿತು. ಆದರೆ ಹೆಂಡತಿಗೆ ಕೊಡಿಸಲಿಲ್ಲ. ಪತ್ನಿ ಆಯೇಶಾ ಹೈಕೋರ್ಟಿಗೆ ಹೋದಾಗ ಯಾವುದಾದರೂ ಜೋಡಿ ಬಹಳ ಕಾಲದವರೆಗೆ ಒಟ್ಟಿಗೆ ಇದ್ದು ಸೆಕ್ಸ್ ಅನುಭವಿಸುತ್ತಿದ್ದರೆ, ವಿವಾಹ ಶಾಸ್ತ್ರಗಳು ಪೂರ್ಣವಾಗಿದ್ದರೂ ಅಥವಾ ಇಲ್ಲದಿದ್ದರೂ ಅವರನ್ನು ವಿವಾಹಿತರೆಂದೇ ತಿಳಿಯಾಗುತ್ತದೆ ಎಂದು ಹೈಕೋರ್ಟ್‌ ತೀರ್ಪು ನೀಡಿತು.

ಇಂಡಿಯನ್‌ ಪೀನ್‌ ಕೋಡ್‌ ನ ಸೆಕ್ಷನ್‌ 377ರಂತೆ ಕಾನೂನುಬದ್ಧ ಅಲ್ಲಿಂದು ಹೇಳಿದ ನಂತರ ಯಾರಾದರೂ ಸ್ತ್ರೀ-ಸ್ತ್ರೀ ಅಥವಾ ಪುರುಷ-ಪುರುಷ ಸೆಕ್ಸ್ ಅನುಭವಿಸಿದರೆ, ಆದಾಯ ತೆರಿಗೆ ಮತ್ತು ಉತ್ತರಾಧಿಕಾರದ ವಿಷಯದಲ್ಲಿ ಎಷ್ಟು ಲಾಭ ಪಡೆಯಬಹುದು? ತಾವು ಶಾಸ್ತ್ರಬದ್ಧವಾಗಿ ಮದುವೆ ಮಾಡಿಕೊಳ್ಳಲಿಲ್ಲವೆಂದು ಅವರೂ ಹೇಳಬಹುದು. ಆದರೆ ಅವರು ದಾಂಪತ್ಯ ಸುಖ ಅನುಭವಿಸುತ್ತಿದ್ದರೆ ವಿವಾಹಿತರೇಕಲ್ಲ?

ಅಮೆರಿಕಾದ ನಿರ್ಣಯ ಇಡೀ ವಿಶ್ವದ ಸಮಾಜದಲ್ಲಿ ಬದಲಾವಣೆ ತರಲಿದೆ ಮತ್ತು ಮದುವೆಗಳು ಪುರೋಹಿತರು, ಮುಲ್ಲಾಗಳು ಮತ್ತು ಪಾದ್ರಿಗಳ ಕೈಗಳಿಂದ ತಪ್ಪಲಿವೆ. ಅವರು ಈ ಸಂಬಂಧಗಳನ್ನು ಮಾಡಿಸಲು ಹೆಚ್ಚಿನ ಹಣ ಪಡೆಯುತ್ತಾರೆ. ಮದುವೆ ಮಾಡಿಸಲೆಂದು ಅವರ ಬಾಗಿಲಿಗೆ ಹೋದರು ಮತ್ತೆ ಮತ್ತೆ ಹೋಗುತ್ತಿರುತ್ತಾರೆ.

ಸಮಾಜಕ್ಕೆ ಹೊರೆ ರಸ್ತೆ ಬದಿ ವ್ಯಾಪಾರಿಗಳು!

vih-bb

ದೆಹಲಿಯ ಜನನಿಬಿಡ ಶಾಹದರಾ ಭಾಗದ ರಸ್ತೆಯೊಂದರಲ್ಲಿ ನಿರ್ಮಿಸಲಾಗಿದ್ದ ತರಕಾರಿ ಮಾರುಕಟ್ಟೆ ಕೆಡಲು ಹೋದಾಗ ಭಾರಿ ಗಲಾಟೆಯೇ ನಡೆಯಿತು. ತರಕಾರಿ ವ್ಯಾಪಾರಿಗಳ ಬಹು ದೊಡ್ಡ ಪಡೆಯೇ ರಕ್ಷಣೆಗೆ ಬಂದು ನಿಂತಿತು. ರಾಜಕೀಯ ಮುಖಂಡರು ಹಾಗೂ ಅನೇಕ ನಾಗರಿಕರು ಕೂಡ ರಸ್ತೆಯಲ್ಲಾಗುವ ಮುಕ್ತ ಅತಿಕ್ರಮಣದ ಬಗ್ಗೆ ಸಮರ್ಥನೆ ನೀಡಲು ಅಲ್ಲಿಗೆ ಬಂದರು. ಇದು ಕೇವಲ ದೆಹಲಿಯ ಸಮಸ್ಯೆ ಮಾತ್ರವಲ್ಲ, ನಮ್ಮ ದೇಶದ ಎಲ್ಲಾ ನಗರಗಳಲ್ಲೂ ಕಂಡುಬರುತ್ತಿರುವ ನಿತ್ಯ ನರಕವಾಗಿದೆ.

ಸಾಮಾನ್ಯ ನಾಗರಿಕರು ರಸ್ತೆ ಬದಿ ಅಂಗಡಿಕಾರರಿಗೆ ಬೆಂಬಲ ನೀಡುತ್ತಾರೆ. ಏಕೆಂದರೆ ಅವರಿಗೆ ಇವರು ಬಡವರು, ನಮಗಾಗಿ ಸೌಲಭ್ಯ ಒದಗಿಸಿಕೊಡುವರು ಎಂದು ಅನಿಸುತ್ತದೆ. ಅವರಿಲ್ಲದಿದ್ದರೆ ನಮಗೆ ದುಬಾರಿ ವಸ್ತುಗಳನ್ನು ಕೊಳ್ಳಬೇಕಾದ ಸ್ಥಿತಿ ಬಂದೊದಗುತ್ತದೆ ಎಂದು ಅನಿಸುತ್ತದೆ.

ಈ ಯೋಚನೆ ತಪ್ಪು. ದೇಶಾದ್ಯಂತ ರಸ್ತೆ ಬದಿ ಅಂಗಡಿ ಇಟ್ಟುಕೊಳ್ಳುವುದು ಕೆಲವರಿಗೆ ತಮ್ಮ ಹಕ್ಕು ಎಂಬಂತಾಗಿಬಿಟ್ಟಿದೆ. 3-4 ತಿಂಗಳು ಅವನು ಅಲ್ಲಿ ನೆಲೆಯೂರಿಬಿಟ್ಟನೆಂದರೆ, ಮುಂದೆಂದೂ ಅಲ್ಲಿಂದ ಕಾಲು ಕೀಳಲಾರ. ನಗರಸಭೆ, ಮಹಾನಗರ ಪಾಲಿಕೆಗಳ ಅಧಿಕಾರಿಗಳು ಇವರಿಗೆ ಅಂಗಡಿ ಇಟ್ಟುಕೊಳ್ಳಲು ಅವಕಾಶ ಕೊಡುತ್ತಾರೆ. ಏಕೆಂದರೆ ಅವರಿಗೆ ಈ ಬೀದಿ ಬದಿ ವ್ಯಾಪಾರಿಗಳಿಂದ ಚೆನ್ನಾಗಿ ಮೇಲಾದಾಯ ಬರುತ್ತದೆ.

ಹಿಂದೆ ನಗರಗಳಲ್ಲಿ ಜನದಟ್ಟಣೆ ಕಡಿಮೆ ಇತ್ತು. ವಾಹನಗಳ ಸಂಖ್ಯೆ ವಿರಳವಾಗಿತ್ತು. ನಗರಗಳ ವ್ಯಾಪ್ತಿ ಕೂಡ ಕಡಿಮೆ ಇತ್ತು. ಆಗ ಹೋಗಿಬರಲು ಹೆಚ್ಚು ಸಮಯ ಬೇಕಾಗುತ್ತಿರಲಿಲ್ಲ. ಆಗ ಬೀದಿ ಬದಿಯ ವ್ಯಾಪಾರಿಗಳನ್ನು ಸಹಿಸಿಕೊಳ್ಳಬಹುದಾಗಿತ್ತು. ಆದರೆ ಈಗ ಅವರು ಇಡೀ ಸಮಾಜಕ್ಕೆ ಹೊರೆಯಾಗಿದ್ದಾರೆ.

ಬೀದಿ ಬದಿ ವ್ಯಾಪಾರಿಗಳು ದೇಶದ ಕೊಳೆಗೆ ಪ್ರಥಮ ಕ್ರಮಾಂಕದ ಹೊಣೆಗಾರರಾಗಿದ್ದಾರೆ. ಅವರು ತಾವು ಕುಳಿತುಕೊಳ್ಳುವ ಜಾಗವನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರಬಹುದು. ಆದರೆ ಅವರು ಹೋಗುವಾಗ ಸಾಕಷ್ಟು ಕಸ ಹಾಗೆಯೇ ಬಿಟ್ಟು ಹೋಗುತ್ತಾರೆ. ಇವರ ಗ್ರಾಹಕರು ಕೂಡ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುತ್ತಾರೆ.

ತರಕಾರಿ ವ್ಯಾಪಾರಿಗಳು ಕೊಳೆತ ತರಕಾರಿಯನ್ನು ರಸ್ತೆ ಮಧ್ಯೆ ಬಿಸಾಡುತ್ತಾರೆ. ಈ ಕಾರಣದಿಂದ ಸಿಪ್ಪೆಗಳು ರಸ್ತೆಯಲ್ಲಿ ಅತ್ತಿಂದಿತ್ತ ಹಾರಾಡುತ್ತಿರುತ್ತವೆ. ಆಹಾರ ವಸ್ತುಗಳನ್ನು ಮಾರುವವರು ಕೊಳೆತ ಕಸವನ್ನು ಹಾಗೆಯೇ ಬಿಟ್ಟುಹೋಗುತ್ತಾರೆ. ತಮಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಿಕೊಂಡ ಅಡ್ಡಾದಿಡ್ಡಿ ಅಂಗಡಿಗಳು ರಸ್ತೆಗಳನ್ನು ಕುರೂಪಗೊಳಿಸಿವೆ.

ಬೀದಿ ಬದಿ ಅಂಗಡಿಗಳ ಕಾರಣದಿಂದ ಈಗ ವಾಹನಗಳ ವೇಗ ಕೂಡ ಕಡಿಮೆಯಾಗಿದೆ. ಪ್ರತಿಯೊಂದು ನಗರದ ಮುಕ್ಕಾಲು ಭಾಗದ ರಸ್ತೆಗಳನ್ನು ಈ ವ್ಯಾಪಾರಿಗಳು ಅರ್ಧದಷ್ಟು ಕಿರಿದುಗೊಳಿಸಿದ್ದಾರೆ. ನಮ್ಮ ದೇಶದಲ್ಲಿ ರಸ್ತೆಗಳು ಮೊದಲೇ ಕಿರಿದಾಗಿವೆ. ಅವನ್ನು ಈ ವ್ಯಾಪಾರಿಗಳು ಮತ್ತಷ್ಟು ಕುಗ್ಗಿಸಿದ್ದಾರೆ. ಸಮಯ ಹಾಗೂ ಪೆಟ್ರೋಲ್ ‌ಗಾಗಿ ಎಷ್ಟೊಂದು ಹಣ ವ್ಯರ್ಥವಾಗಿ ಹೋಗುತ್ತದೆಂದು ಸಿಎಜಿ ಕೂಡ ಪತ್ತೆ ಹಚ್ಚುವುದಿಲ್ಲ. ಮನುಷ್ಯನೊಬ್ಬನ ಜೇಬಿನಲ್ಲಿರುವ ಶೇ.20 ರಷ್ಟು ಹಣವನ್ನು ರಸ್ತೆ ಬದಿ ವ್ಯಾಪಾರಿಗಳೇ ತಿಂದು ಹಾಕುತ್ತಾರೆನ್ನುವುದು ದೊಡ್ಡ ಸುದ್ದಿಯೇನಲ್ಲ.

ಅಪರಾಧಗಳಿಗೆ ಕುಮ್ಮಕ್ಕು ಕೊಡುವವರಲ್ಲಿ ಈ ಬೀದಿ ಬದಿ ವ್ಯಾಪಾರಿಗಳು ನಂಬರ್‌ ಒನ್‌ ಆಗಿದ್ದಾರೆ. ಬೀದಿ ಬದಿ ಚಹ, ಹಣ್ಣುಗಳ ಅಂಗಡಿ ಎದುರು ನಿಂತುಕೊಂಡ ದುರುಳರು ಅಲ್ಲಿಂದ ಹಾಯ್ದು ಹೋಗುವ ಹುಡುಗಿಯರನ್ನು ಚುಡಾಯಿಸುತ್ತಾರೆ, ಇವರಿಂದಾಗಿಯೇ ಮಹಿಳೆಯ ತಾಳಿ, ಸರಗಳು ಲೂಟಿಯಾಗುತ್ತಿವೆ. ವಾಹನ ಅಪಘಾತಗಳಿಗೂ ಇವರೇ ಹೊಣೆಗಾರರಾಗಿರುತ್ತಾರೆ.

ರಸ್ತೆ ಬದಿ ಜಾಗ ಯಾವುದೇ ಬಡವನ ಮನೆ ಅಥವಾ ಗಳಿಕೆಯ ಜಾಗವಾಗಿರುವುದಿಲ್ಲ. ಕಾಲು ದಾರಿ ಅಥವಾ ರಸ್ತೆಗಳು ಸಾರ್ವಜನಿಕ ಆಸ್ತಿ. ಅದರ ಮೇಲೆ ಯಾರೊಬ್ಬರ ಹಕ್ಕೂ ಇಲ್ಲ. ತನ್ನ ಮನೆ ಆಸುಪಾಸಿನ ಪಾದಚಾರಿ ರಸ್ತೆಗಳು ಸ್ವಚ್ಛವಾಗಿರಬೇಕು. ನಡೆದುಕೊಂಡು ಹೋಗಲು ಅನುಕೂಲವಿರಬೇಕು. ಪಾದಚಾರಿಗಳು ಹೋಗುವ ದಾರಿಯ ಮೇಲೆ ಸಾರ್ವಜನಿಕ ಹಕ್ಕು ಇರಬೇಕು. ಅದು ಕೆಲವೇ ಜನರ ಸೊತ್ತಾಗಬಾರದು. ರಸ್ತೆ ಬದಿ ನಡೆದುಕೊಂಡು ಹೋಗುವಾಗ ಸಲ್ಮಾನ್ ನಂಥವರು ಯಾರಾದರೂ ಅಪಘಾತ ಮಾಡಿದರೆ ಅವರನ್ನು ಕ್ಷಮಿಸಬಾರದು. ಅದೇ ರೀತಿ ಬೀದಿ ಬದಿ ಯಾರಾದರೂ ಮಲಗಿಕೊಂಡರೆ, ಅದನ್ನು ಅವರದೇ ತಪ್ಪು ಎಂದು ಭಾವಿಸಬೇಕು. ಈ ಬಗ್ಗೆ ಯಾರು ಏನೇ ಹೇಳಿದರೂ ಅದನ್ನು ಒಪ್ಪಬಾರದು.

ಕುರಿಯ ವೇಷದ ತೋಳಗಳು!

ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯವರು ಮಾದಕ ದ್ರವ್ಯಗಳ ಚಟ ನಿಲ್ಲಿಸುವಲ್ಲಿ ಪ್ರಯತ್ನ ಮಾಡುವವರಿಗೆ ಸನ್ಮಾನ ಮಾಡುತ್ತಾ, ಈ ಕೆಟ್ಟ ಚಟಗಳು ಸಮಾಜಕ್ಕೆ ಗಂಭೀರ ಚಿಂತೆಯ ವಿಷಯಾಗಿದೆ ಎಂದು ಹೇಳಿದರು.

ಬಹುಮಾನ ನೀಡುತ್ತಾ ಅವರು ಹೇಳಬೇಕಾಗಿದ್ದುದನ್ನು ಹೇಳಿದರು. ಆದರೆ ಅವರು ಹಿಂದೆ ಹಣಕಾಸು ಸಚಿವರಾಗಿದ್ದಾಗ ಇವುಗಳಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯವನ್ನು ಮರೆತು ಅವುಗಳನ್ನು ಪರಿಪೂರ್ಣವಾಗಿ ನಿಷೇಧಿಸುವ ಬಗ್ಗೆ ಎಂದಾದರೂ ಯೋಚಿಸಿದ್ದರಾ? ಅಂದಹಾಗೆ ಮದ್ಯ ಹಾಗೂ ಹೊಗೆಸೊಪ್ಪಿನ ಉತ್ಪನ್ನಗಳಿಂದ ಸರ್ಕಾರಕ್ಕೆ ಅದೆಷ್ಟೊ ಕೋಟಿ ರೂ.ಗಳ ಆದಾಯ ಬರುತ್ತಿದೆ. ಅದಕ್ಕೂ ಹೆಚ್ಚಿನ ಮೊತ್ತ ಈ ತೆರಿಗೆ ವಸೂಲಿ ಮಾಡುವವರ ಜೇಬಿಗೆ ಲಂಚದ ರೂಪದಲ್ಲಿ ಸೇರುತ್ತದೆ.

ಮದ್ಯ ಹಾಗೂ ತಂಬಾಕು ಸೇವನೆ ಚಟ ಅತ್ಯಂತ ಹಳೆಯದು. ಇದನ್ನು ತಡೆಯುವುದು ಅಸಾಧ್ಯವೇ ಸರಿ. ಆದರೆ ಈಗ ಹಣದ ಆಸೆಗಾಗಿ ಸರ್ಕಾರಗಳು ತಮ್ಮ ಹೇಳಿಕೆಗೆ ತದ್ವಿರುದ್ಧವಾಗಿ ಅವಕ್ಕೆ ಇನ್ನಷ್ಟು ಸೌಲಭ್ಯ ಕೊಡಲಾರಂಭಿಸಿವೆ. ಇವನ್ನು ತಯಾರಿಸಲು ದೊಡ್ಡ ದೊಡ್ಡ ಕಾರ್ಖಾನೆಗಳು ತಲೆಯೆತ್ತುತ್ತಿವೆ. ವಿದೇಶಿ ಬ್ರ್ಯಾಂಡುಗಳಿಗೆ ಇಲ್ಲಿಗೆ ಬರಲು ಅನುಮತಿ ಕೂಡ ನೀಡಲಾಗುತ್ತಿದೆ. ಗಲ್ಲಿಗಲ್ಲಿಗೂ ಇಂತಹ ಅಂಗಡಿಗಳು ತೆರೆಯಲ್ಪಡುತ್ತಿವೆ.

ಮದ್ಯ ಹಾಗೂ ತಂಬಾಕು ವ್ಯಸನಿಗಳ ಮಾರಕ ಪರಿಣಾಮವನ್ನು ವಾಸ್ತವವಾಗಿ ಮನೆಯವರು ಹಾಗೂ ಮಕ್ಕಳು ಅನುಭವಿಸಬೇಕಾಗಿ ಬರುತ್ತಿದೆ. ನಶೆಯಲ್ಲಿರುವ ಪುರುಷ ಕೇವಲ ಹಣವನ್ನಷ್ಟೇ ದುಂದು ಮಾಡುವುದಿಲ್ಲ, ಹೆಂಡತಿ ಮಕ್ಕಳನ್ನು ಕೂಡ ಹೊಡೆಯುತ್ತಾನೆ. ಈ ಮಾದಕ ಚಟಗಳಿಂದಾಗಿ ಅವನು ಅನೇಕ ರೋಗಗಳಿಗೆ ತುತ್ತಾಗುತ್ತಾನೆ. ಅವನನ್ನು ಆರೈಕೆ ಮಾಡುವ ಜವಾಬ್ದಾರಿ ಕೂಡ ಮನೆಯವರ ಮೇಲೆಯೇ ಬೀಳುತ್ತದೆ. ಕ್ಯಾನ್ಸರ್‌ ಹಾಗೂ ಕಿಡ್ನಿಯ ತೊಂದರೆಗಳಿಗೆ ಮುಖ್ಯ ಕಾರಣ ಮದ್ಯ ಹಾಗೂ ತಂಬಾಕು ಇವೇ ಆಗಿವೆ. ಅತಿ ಹೆಚ್ಚು ತೆರಿಗೆ ತಂದುಕೊಡುವ ಇವು ಹೆಚ್ಚು ಮಾರಾಟದ ಸರಕುಗಳಾಗಿವೆ.

ಪ್ರಣಬ್‌ ಮುಖರ್ಜಿಯವರು ಇವನ್ನು ತಡೆಯುವವರಿಗೆ ಪುರಸ್ಕಾರ ನೀಡುತ್ತಿರಬಹುದು. ಆದರೆ ಇವುಗಳಿಗೆ ಪ್ರೋತ್ಸಾಹ ನೀಡುವ ಸಿನಿಮಾ ತಾರೆಯರು ಹಾಗೂ ಕ್ರೀಡಾಪಟುಗಳಿಗೆ ಯಾವುದೇ ಪುರಸ್ಕಾರ ನೀಡಲು ನಿರಾಕರಿಸುವುದಿಲ್ಲ.

ಡೆಲ್ಲಿ ಪ್ರೆಸ್‌ ಪತ್ರಿಕೆಗಳು ಇವುಗಳ ಜಾಹೀರಾತುಗಳನ್ನು ನಿರಾಕರಿಸಿ, ಓದುಗರ ಪ್ರೀತಿಗೆ ಪಾತ್ರರಾಗಬಹುದಾದರೆ, ಸರ್ಕಾರ ಇವುಗಳಿಂದ ಹಣವನ್ನೇಕೆ ಮಾಡಿಕೊಳ್ಳಬೇಕು ಹಾಗೂ ಅವುಗಳ ಬಗ್ಗೆ ಪರದೆಯ ಮೇಲೆ ಹಾಗೂ ಪರದೆಯ ಹಿಂದೆ ಪ್ರಚಾರ ಮಾಡುವ ತಾರೆಯರನ್ನೇಕೆ ಸನ್ಮಾನಿಸಬೇಕು?

ಇದು ಸರ್ಕಾರದ ದ್ವಂದ್ವ ನೀತಿಯೇ ಆಗಿದೆ. ರಾಷ್ಟ್ರಪತಿಯವರು ಇವನ್ನು ತಡೆಯುವವರಿಗೆ ಪುರಸ್ಕಾರ ನೀಡುವ ಯಾವುದೇ ಅವಶ್ಯ ತೋರಿಕೆ ಮಾಡಬಾರದು. ವಾಸ್ತವದಲ್ಲಿ ಸರ್ಕಾರ ಕುರಿ ವೇಷ ಧರಿಸಿದ ತೋಳವಾಗಿದೆ. ಅದಕ್ಕೆ ಬೇರೆಯವರ ಜೀವ ತೆಗೆದುಕೊಳ್ಳುವಲ್ಲಿ ಯಾವುದೇ ಹಿಂಜರಿಕೆ ಉಂಟಾಗುವುದಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ