ಮದುವೆಯು ಜೀವನದ ಹೊಸ ಆರಂಭವಾಗಿದೆ. ಇದರಲ್ಲಿ ಪುರುಷ ಮಹಿಳೆಯ ಹಾಗೂ ಮಹಿಳೆ ಪುರುಷನ ಜೀವನವನ್ನು ಪರಿಪೂರ್ಣಗೊಳಿಸುತ್ತಾಳೆ. ಅದು ಜೀವನದಲ್ಲಿ ಯಶಸ್ಸು ಹಾಗೂ ಸಂತಸದ ತಳಹದಿಯಾಗಿದೆ. ಈಗಿನ ಕಾಲದಲ್ಲಿ ಹುಡುಗ ಹುಡುಗಿಯರು ಮದುವೆಯ ಬಗ್ಗೆ ಕೊಂಚ ಚೂಸಿಯಾಗಿದ್ದಾರೆ.
ಅವರು ಕೆರಿಯರ್ ನ ಮುಂದೆ ಮದುವೆಗೆ ಕಡಿಮೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಯಶಸ್ಸಿನ ದಾರಿ ಮದುವೆಯ ದಾರಿಯಿಂದಲೇ ಸಾಗುತ್ತದೆ ಎನ್ನುವುದನ್ನು ಅವರು ಮರೆಯಬಾರದು.
ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆಯ ಪರಿಶ್ರಮ ಇದ್ದೇ ಇರುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಧೀರೂಬಾಯಿ ಅಂಬಾನಿ. ಧೀರೂಬಾಯಿ ಈ ಹಂತದವರೆಗೆ ತಲುಪಲು ಅತ್ಯಂತ ಹೆಚ್ಚು ನೆರವು ನೀಡಿದ್ದು ಅವರ ದೃಢನಿಶ್ಚಯಿ ಪತ್ನಿ ಕೋಕಿಲಾ ಬೆನ್. ಅವರು ಪ್ರತಿ ಹೆಜ್ಜೆಯಲ್ಲೂ ಗಂಡನಿಗೆ ಸಹಕರಿಸಿದರು. ಕೆಟ್ಟ ಕಾಲದಲ್ಲಿ ಮನುಷ್ಯ ಕಂಗೆಟ್ಟು ಹಾಳಾಗುತ್ತಾನೆ. ಆದರೆ ಸಂಗಾತಿ ಜೊತೆಗಿದ್ದರೆ ಅವನು ಯಶಸ್ವಿಯಾಗುತ್ತಾನೆ ಮತ್ತು ಜೀವನದಲ್ಲೂ ಮುಂದೆ ಬರುತ್ತಾನೆ.
ಸಿನಿಮಾ ಕಲಾವಿದರ ಬಗ್ಗೆ ಹೇಳುವುದಾದರೆ, ಅಮಿತಾಭ್ ಬಚ್ಚನ್ ರಿಂದ ಹಿಡಿದು ಶಾರೂಖ್, ಹೃತಿಕ್ ವರೆಗೆ ಎಲ್ಲರೂ ಮದುವೆಯ ನಂತರವೇ ಯಶಸ್ಸಿನ ರುಚಿ ಸವಿದರು. ಅಮಿತಾಬ್, `ಜಂಜೀರ್’ ಚಿತ್ರದ ನಂತರ ಜಯಾರೊಂದಿಗೆ ಮದುವೆಯಾಗಿ ಫಿಲ್ಮ್ ಇಂಡಸ್ಟ್ರಿಯಲ್ಲಿ ತಮ್ಮ ಛಾಪು ಮೂಡಿಸಿದರು. ಮದುವೆಯ ನಂತರ ಬಿಡುಗಡೆಯಾದ ಶಾರೂಖ್ ರ ಚಿತ್ರಗಳು ಸೂಪರ್ ಹಿಟ್ ಆದವು. ರಿತೇಶ್ ದೇಶ್ ಮುಖ್ ಮತ್ತು ಜೆನಿಲಿಯಾ ಡಿಸೋಜಾರ ಮದುವೆ ಇತ್ತೀಚೆಗಾಗಿದೆ. ರಿತೇಶ್ ರ ತಂದೆಯ ಸಾವಿನ ನಂತರ ಜೆನಿಲಿಯಾ ರಿತೇಶ್ ರ ಪ್ರತಿ ಹೆಜ್ಜೆಯಲ್ಲೂ ಅವರಿಗೆ ಜೊತೆ ನೀಡಿದ್ದು, ಸಂಗಾತಿ ಬದುಕಿನ ಕಷ್ಟಗಳನ್ನು ಎದುರಿಸುವಲ್ಲಿ ಎಷ್ಟು ಸಹಾಯ ಮಾಡುತ್ತಾರೆಂಬುದನ್ನು ಇದು ತಿಳಿಸುತ್ತದೆ.
1998ರಲ್ಲಿ ವೈಟ್ ಹೌಸ್ ಇಂಟರ್ನ್‌ವೋನಿಕಾ ಲೆವಿನ್ ಸ್ಕಿ ಬಿಲ್ ಕ್ಲಿಂಟನ್ ರತ್ತ ಬೆರಳು ತೋರಿಸಿದಾಗ ಅವರು ಸಾರ್ವಜನಿಕವಾಗಿ ಅದನ್ನು ಒಪ್ಪಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅವರು ಬಹಳಷ್ಟು ಮಾನಸಿಕ ವೇದನೆಗೆ ಗುರಿಯಾಗಬೇಕಾಯಿತು. ಆದರೆ ಹಿಲರಿ ಕ್ಲಿಂಟನ್ ರಿಂದಾಗಿ ಅವರು ಈ ಸ್ಥಿತಿಯಿಂದ ಹೊರಬಂದರು. ಇಂದಿಗೂ ಅವರಿಬ್ಬರೂ ಅದೇ ಹಳೆಯ ಗಾಢ ಪ್ರೀತಿಯಲ್ಲಿ ಜೊತೆಯಲ್ಲಿದ್ದಾರೆ. ನಟ ಶೈನಿ ಅಹೂಜಾ ಮೇಲೆ ಕೆಲಸದವಳು ಬಲಾತ್ಕಾರದ ಆರೋಪ ಹೊರಿಸಿದ್ದಳು. ಆತ ಜೈಲಿಗೆ ಹೋಗಬೇಕಾದಾಗ ಹೆಂಡತಿ ಅನುಪಮಾರ ಬೆಂಬಲ ಕಷ್ಟಕಾಲದಲ್ಲಿ ಸಾಂತ್ವನ ನೀಡಿತು.
ಮದುವೆ ನಿಮ್ಮನ್ನು ಉತ್ತಮರನ್ನಾಗಿಸುತ್ತದೆ
ಒಂದು ವೇಳೆ ನೀವು ಸಂಗಾತಿಯನ್ನು ಬುದ್ಧಿವಂತಿಕೆಯಿಂದ ಆರಿಸಿಕೊಂಡರೆ, ಹೊರಗಿನ ರೂಪ, ಆಕರ್ಷಣೆಗೆ ಬದಲಾಗಿ ಸಂಗಾತಿಯ ಆಲೋಚನೆ, ಪ್ರಾಮಾಣಿಕತೆ ಮತ್ತು ಗುಣಗಳಿಗೆ ಪ್ರಾಶಸ್ತ್ಯ ನೀಡಿದರೆ ಅವರ ಸಹವಾಸದಿಂದ ನೀವು ಉತ್ತಮ ವ್ಯಕ್ತಿ ಆಗುತ್ತೀರಿ. ಅವರು ನಿಮ್ಮೊಳಗಿನ ಒಳ್ಳೆಯ ಗುಣಗಳನ್ನು ಹೊರತೆಗೆಯುತ್ತಾರೆ. ನಿಮ್ಮ ಸರ್ವಶ್ರೇಷ್ಠ ವ್ಯಕ್ತಿತ್ವವನ್ನು ಬೆಳಕಿಗೆ ತರುತ್ತಾರೆ. ಮದುವೆಯಿಂದ ನೀವು ತ್ಯಾಗ, ಹೊಂದಾಣಿಕೆ, ಪ್ರೇಮ, ಸ್ನೇಹದ ನಿಜಾದ ಅರ್ಥ ತಿಳಿಯುತ್ತೀರಿ. ನಿಮ್ಮ ಆಲೋಚನಾ ವ್ಯಾಪ್ತಿ ದೊಡ್ಡದಾಗುತ್ತದೆ ಮತ್ತು ಉತ್ತಮ ರೀತಿಯಲ್ಲಿ ಬದುಕಲು ಕಲಿಯುತ್ತೀರಿ.
ಖುಷಿಯ ಕಲರವ
ಆಸ್ಟ್ರೇಲಿಯಾ ಯೂನಿವರ್ಸಿಟಿಯಲ್ಲಿ ಇತ್ತೀಚೆಗೆ ನಡೆಸಿದ ಒಂದು ಅಧ್ಯಯನದ ಪ್ರಕಾರ, ವಿವಾಹಿತರು ಹೆಚ್ಚು ಖುಷಿಯಿಂದಿರುತ್ತಾರೆ ಮತ್ತು ಅವರಲ್ಲಿ ಹ್ಯಾಪಿನೆಸ್ ಸ್ಕೋರ್ ಶೇ.135ರಷ್ಟು ಹೆಚ್ಚು ಇರುವುದು ಪತ್ತೆಯಾಯಿತು.
ಮದುವೆಯ ಈ ಬಂಧದಲ್ಲಿ ನಿಮಗೆ ಬಹಳಷ್ಟು ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆ ಸಿಗುತ್ತದೆ. ಯಾರ ಬದುಕು ಸಂಪೂರ್ಣವಾಗಿ ನಿಮ್ಮೊಂದಿಗೆ ಸೇರಿಕೊಂಡಿದೆಯೋ, ಯಾರ ಮೇಲೆ ನಿಮಗೆ ಹಕ್ಕು ಇದೆಯೋ, ಯಾರು ನಿಮ್ಮನ್ನೇ ಕಾಯುತ್ತಿರುತ್ತಾರೋ ಅವರ ಸಾಂಗತ್ಯದಿಂದ ಉಂಟಾಗುವ ಸಂತಸ ಹಾಗೂ ಉತ್ಸಾಹದಿಂದ ನೀವು ಜೀವನದಲ್ಲಿ ಯಾವುದೇ ಏರಿಳಿತಗಳನ್ನು ಸುಲಭವಾಗಿ ಎದುರಿಸುತ್ತೀರಿ. ಸಂಗಾತಿ ನಿಮ್ಮನ್ನು ಹೊಗಳಿದಾಗ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅವರು ನಿಮ್ಮ ಸಾಮರ್ಥ್ಯ ಹೆಚ್ಚಿಸುತ್ತಾರೆ. ಅದರಿಂದಾಗಿ ಯಾವ ನಿರ್ಣಯವನ್ನು ತೆಗೆದುಕೊಳ್ಳಲು ಮೊದಲು ನೀವು ಹೆದರುತ್ತಿದ್ದಿರೋ ಅದನ್ನು ಧೈರ್ಯವಾಗಿ ತೆಗೆದುಕೊಳ್ಳಬಹುದು.
ಇಷ್ಟೇ ಅಲ್ಲ, ಸಂಗಾತಿ ನಿಮ್ಮ ಸೋಶಿಯಲ್ ಸರ್ಕಲ್ ನ್ನು ವಿಸ್ತರಿಸುತ್ತಾರೆ. ನೀವು ಹೊಸ ಸಂಬಂಧದಲ್ಲಿ ಸೇರಿಕೊಂಡಾಗ ಸಂಗಾತಿಯ ಸಂಬಂಧಿಕರು ಮತ್ತು ಗೆಳೆಯರು ನಿಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ಇದರಿಂದ ಹೊಸ ಸಂತಸಗಳು ಹಾಗೂ ಸಾಧನೆಗಳ ದ್ವಾರಗಳು ತೆರೆದುಕೊಳ್ಳುತ್ತವೆ.
ಸಂಗಾತಿಯಿಂದ ಹೆಲ್ದಿ ಲೈಫ್
ಸ್ವಸ್ಥ ಶರೀರ ಸ್ವಸ್ಥ ಜೀವನ ಮತ್ತು ಯಶಸ್ಸಿನ ದಾರಿಯನ್ನು ತೆರೆಯುತ್ತದೆ. ಕಳೆದ 2 ದಶಕಗಳಲ್ಲಿ ಮಾಡಿದ ಅಧ್ಯಯನಗಳು ಹಾಗೂ ಸಂಶೋಧನೆಗಳ ಪ್ರಕಾರ ಮದುವೆಯ ನಂತರ ಸ್ತ್ರೀ ಪುರುಷರು ಅಧಿಕ ಹೆಲ್ದಿ ಅಂಡ್ ಹ್ಯಾಪಿ ಲೈಫ್ ಎಂಜಾಯ್‌ಮಾಡುತ್ತಾರೆ. ಮದುವೆಯ ನಂತರ ಮಹಿಳೆಯರ ಮಾನಸಿಕ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬರುತ್ತದೆ. ಪುರುಷರ ಆರೋಗ್ಯ ಉತ್ತಮಗೊಳ್ಳುತ್ತದೆ. ಅವರ ಆಯಸ್ಸು ಹೆಚ್ಚುತ್ತದೆ. ಯಾವುದೇ ಗಂಭೀರ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ.
ಒಂದು ಯೂರೋಪಿಯನ್ ಅಧ್ಯಯನದ ಪ್ರಕಾರ, ವಿವಾಹಿತರ ಸಾವಿನ ಪ್ರಮಾಣ ಏಕಾಂಗಿಯಾಗಿರುವವರು/ವಿಚ್ಛೇದಿತರಿಗೆ ಹೋಲಿಸಿದರೆ ಶೇ.10 ರಿಂದ 15 ರಷ್ಟು ಕಡಿಮೆ. 50 ವರ್ಷ ತುಂಬಿದ ಏಕಾಂಗಿಗಳ ಆರೋಗ್ಯ ವೇಗವಾಗಿ ಇಳಿಯತೊಡಗುತ್ತದೆ. ಅವರು ಹಾರ್ಟ್ ಡಿಸೀಸ್, ಡಯಾಬಿಟೀಸ್ ಇತ್ಯಾದಿಗಳಿಗೆ ಗುರಿಯಾಗುತ್ತಾರೆ.
ಕ್ಯಾನ್ಸರ್ ಎಕ್ಸ್ ಪರ್ಟ್ ಡಾ. ಶರ್ಮಿನ್ ಪ್ರಕಾರ, ಮದುವೆ ನಂತರ ಮಕ್ಕಳು ಹುಟ್ಟುವಿಕೆಯಿಂದಾಗಿ ಮಹಿಳೆಗೆ ಕ್ಯಾನ್ಸರ್ ನಿಂದ ಸುರಕ್ಷತೆ ಸಿಗುತ್ತದೆ. ಅವರು ಬ್ರೆಸ್ಟ್ ಹಾಗೂ ಒವೇರಿಯನ್ ಕ್ಯಾನ್ಸರ್ ನಿಂದ ಪೀಡಿತರಾಗುವುದು ತಪ್ಪುತ್ತದೆ. ಇಷ್ಟೇ ಅಲ್ಲ, ಮದುವೆಯ ನಂತರ ಸ್ತ್ರೀ ಪುರುಷರು ಪರಸ್ಪರ ಕಮಿಟೆಡ್ ಆಗಿರುತ್ತಾರೆ. ಈ ಕಮಿಟ್ ಮೆಂಟ್ ಅವರಿಗೆ ಸರ್ವೈಕಲ್ ಕ್ಯಾನ್ಸರ್ ನಿಂದ ರಕ್ಷಣೆ ಕೊಡುತ್ತದೆ. ಒಂದಕ್ಕಿಂತ ಹೆಚ್ಚು ಸೆಕ್ಸ್ ಪಾರ್ಟ್ ನರ್ ಇದ್ದಾಗ ಸರ್ವೈಕಲ್ ಕ್ಯಾನ್ಸರ್ ನ ರಿಸ್ಕ್ ಹೆಚ್ಚುತ್ತದೆ. ಏಕೆಂದರೆ ಅವರು ಸೆಕ್ಷುಯಲಿ ಟ್ರಾನ್ಸ್ ಮಿಟೆಡ್ ವೈರಸ್ ನ ಸೋಂಕಿನಿಂದ ಪೀಡಿತರಾಗುವ ಸಾಧ್ಯತೆ ಹೆಚ್ಚುತ್ತದೆ.
ಮದುವೆ ಒಂದು ಹೂಡಿಕೆ
ನೀವು ಒಬ್ಬ ಸುಂದರ ವ್ಯಕ್ತಿಯನ್ನು ಕಂಡಾಗ ಅವರ ಬಗ್ಗೆ ಆಕರ್ಷಿತರಾಗುತ್ತೀರಿ. ಅವರೊಂದಿಗೆ ಫ್ಲರ್ಟ್ ಮಾಡಬಹುದು. ಒಟ್ಟಿಗೇ ಒಂದಷ್ಟು ಹೊತ್ತು ಕಳೆಯಬಹುದು. ಒಬ್ಬರೇ ಇದ್ದರೆ ಗೆಳೆಯರೊಂದಿಗೆ ಮೋಜು ಮಾಡುತ್ತ ಸಮಯ ಕಳೆಯಬಹುದು. ಆದರೆ ಸಂಬಂಧಗಳನ್ನು ನಿಭಾಯಿಸುವಾಗ ಮದುವೆಗಿಂತ ಉತ್ತಮ ವಿಧಾನ ಯಾವುದೂ ಇಲ್ಲ.
ಮದುವೆ ಎನ್ನುವುದು ಭವಿಷ್ಯಕ್ಕಾಗಿ ಮಾಡಿದ ಸಾಲಿಡ್ ಇನ್ವೆಸ್ಟ್ ಮೆಂಟ್ ಆಗಿದೆ. ಅದು ಸಮಯ ಬಂದಾಗ ನಿಮಗೆ ಆಸರೆಯಾಗುತ್ತದೆ. ಅದಕ್ಕಾಗಿ ಯೌವನದಲ್ಲಿ ಸಿಂಗಲ್ ವೈಫ್ ನ ಚಾರ್ಮ್ ಬಗೆಗಿನ ಮೋಹ ತ್ಯಾಗ ಮಾಡಬೇಕಾಗುತ್ತದೆ. ಆದರೆ ಮದುವೆಯ ನಂತರ ನೀವು ಒಬ್ಬ ವ್ಯಕ್ತಿಯೊಂದಿಗೆ ಎಷ್ಟು ಗಾಢವಾಗಿ ಸೇರಿಕೊಳ್ಳುತ್ತೀರೆಂದರೆ ಅವರು ಎಂದೂ ಮುಗಿಯದ ಪ್ರೀತಿಯ ಖಜಾನೆಯನ್ನು ನಿಮಗಾಗಿ ನೀಡುತ್ತಾರೆ.
ಹೆಚ್ಚು ಗಳಿಕೆ ಮತ್ತು ಪ್ರಮೋಶನ್
ಮದುವೆಯ ನಂತರ ಜೀವನ ವ್ಯವಸ್ಥಿತವಾಗುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ. ಸಂಗಾತಿ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ. ನೀವು ಕಾಯಿಲೆ ಬೀಳುವುದು ಕಡಿಮೆಯಾಗುತ್ತದೆ. ಆಫೀಸಿಗೆ ಲೇಟಾಗಿ ಹೋಗುವುದು ಮತ್ತು ಮರೆಯುವ ಅಭ್ಯಾಸ ಕಡಿಮೆಯಾಗುತ್ತದೆ. ಪರ್ಫಾಮೆನ್ಸ್ ಮಟ್ಟ ಹೆಚ್ಚುತ್ತದೆ. ಪ್ರಮೋಶನ್ ಸಿಗುತ್ತದೆ. ಒಟ್ಟಿಗೆ ಇರುವುದರಿಂದ ಖರ್ಚೂ ಕಡಿಮೆಯಾಗುತ್ತದೆ. ಟ್ಯಾಕ್ಸ್, ಇನ್ಶೂರೆನ್ಸ್ ಬೆನಿಫಿಟ್ ಇತ್ಯಾದಿ ಸಿಗುತ್ತವೆ.
ಒಂದು ಅಧ್ಯಯನದ ಪ್ರಕಾರ, ಮದುವೆಯಾದವರು ಶೇ.25ರಷ್ಟು ಹೆಚ್ಚು ಸಂಪಾದಿಸುತ್ತಾರೆ. ಅವರು ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡುತ್ತಾರೆ.
ಲಿವ್ ಇನ್ ಗಿಂತ ಮ್ಯಾರೇಜ್ ಉತ್ತಮ
ಈಗಿನ ಯುವಜನರಲ್ಲಿ ಅನುಬಂಧ ಕಡಿಮೆ, ಅವರು ಪರಸ್ಪರ ಮುಕ್ತವಾಗಿ ಭೇಟಿಯಾಗುತ್ತಾರೆ. ಗೆಳೆತನ ಮಾಡಿಕೊಳ್ಳುತ್ತಾರೆ. ಕೆರಿಯರ್ ಕಾರಣದಿಂದಾಗಿ ಹುಡುಗಿಯರಿಗೆ ಬೇಗನೆ ಮದುವೆಯಾಗಲು ಒತ್ತಡ ಹಾಕುವುದಿಲ್ಲ. ಹುಡುಗ ಹುಡುಗಿಯರು ನೌಕರಿಗಾಗಿ ಬೇರೆ ಊರುಗಳಿಗೆ ಹೋಗುತ್ತಾರೆ ಮತ್ತು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರುತ್ತಾರೆ. ಆದರೆ ಲಾಂಗ್ ಟರ್ಮ್ ನಲ್ಲಿ ಲಿವ್ ಇನ್ ರಿಲೇಶನ್ ಶಿಪ್ ಮುಂದುವರಿಯುವುದಿಲ್ಲ.
ಏಕೆಂದರೆ ಅದರಲ್ಲಿ ಯಾವುದೇ ಕಮಿಟ್ ಮೆಂಟ್ ಇರುವುದಿಲ್ಲ, ಜೀವನದಲ್ಲಿ ಸ್ಥಿರತೆ ಇರುವುದಿಲ್ಲ. ಇಂತಹ ಸಂಬಂಧಗಳಲ್ಲಿ ಮನಸ್ಸು ಮುರಿದರೆ ಸಾಂತ್ವನ ನೀಡುವವರು ಯಾರೂ ಇರುವುದಿಲ್ಲ. ಏಕೆಂದರೆ ನಿಮಗೆ ಸೋಶಿಯಲ್ ಸಪೋರ್ಟ್ ಸಿಗುವುದಿಲ್ಲ. ಸಂಗಾತಿ ನಿಮ್ಮ ಸಹ ಪ್ರಯಾಣಿಕನಂತೆ. ಕಷ್ಟ ಸುಖ ಹಂಚಿಕೊಳ್ಳುವವರಷ್ಟೇ ಅಲ್ಲ, ನಿಮಗೆ ಪ್ರೇರಣೆಯೂ ಆಗಿರುತ್ತಾರೆ. ಒಳ್ಳೆಯ ಲೈಫ್ ಪಾರ್ಟನರ್ ಇರದಿದ್ದರೆ ಯಶಸ್ವಿ ಜೀವನದ ಪರಿಕಲ್ಪನೆ ಕಷ್ಟ.
– ಗಿರಿಜಾ ಶಂಕರ್