ಕನಸುಗಳು ನನಸಾಗುವ ಕ್ಷಣ, ಪ್ರೀತಿಯ ಅನುಭೂತಿಯಲ್ಲಿ ಮುಳುಗೇಳುವ ಸುಮಧುರ ವಾತಾವರಣ. ಯಾರೊಬ್ಬರನ್ನು ಪಡೆದುಕೊಳ್ಳುವ, ಇನ್ನೊಬ್ಬರ ಅಧೀನರಾಗುವ ಅನುಭೂತಿ, ಬಹುಶಃ ಹನಿಮೂನ್ ಸಂದರ್ಭದಲ್ಲಿ ಕಳೆದ ಒಂದೊಂದು ಕ್ಷಣಗಳು ಸ್ಮರಣಾರ್ಹವಾಗಿರುತ್ತವೆ.
ಕಾಲ ಕಳೆದಂತೆ ಹೀಗೆಯೇ ಅನುಭೂತಿಯಾಗುತ್ತದೆ ಹಾಗೂ ಪ್ರಿಯಕರನ ಜೊತೆ ಕಳೆದ ಮಧುರ ಕ್ಷಣಗಳನ್ನು ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬೇಕು ಅನಿಸುತ್ತೆ.
ಹಾಗಾದರೆ ಅಂತಹ ಅಮೂಲ್ಯ ಕ್ಷಣಗಳನ್ನು ನಿಮ್ಮ ಸ್ಮರಣೆಯಲ್ಲಿ ಸೆರೆಹಿಡಿಯಿರಲ್ಲ, ಬೇಡ ಎಂದವರಾರು? ಇದು ಅಷ್ಟೊಂದು ಕ್ಲಿಷ್ಟಕರವಾದುದೇನೂ ಅಲ್ಲ, ಹನಿಮೂನ್ ಗೆ ಹೋಗುವ ಗಂಡಹೆಂಡತಿ ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಆ ಕ್ಷಣಗಳನ್ನು ಮಧುರಾತಿ ಮಧುರಗೊಳಿಸಿಕೊಳ್ಳಬಹುದು.
ಅದಕ್ಕಾಗಿ ಕೆಲವು ಟಿಪ್ಸ್ ಗಳು ನಿಮಗಾಗಿ ಇಲ್ಲಿವೆ :
ಹನಿಮೂನ್ ಸಂದರ್ಭದಲ್ಲಿ ನವದಂಪತಿಗಳು ಪರಸ್ಪರ, ಸ್ವೀಟ್ ಹಾರ್ಟ್, ಸ್ವೀಟಿ, ಹಬ್ಬಿ ಹೀಗೆ ಸೂಕ್ತ ಕಂಡ ಪ್ರೀತಿಪಾತ್ರ ಹೆಸರಿನಿಂದ ಕರೆಯಬಹುದು. ಬಹಳ ವರ್ಷಗಳ ನಂತರ ನೀವು ಆ ಹೆಸರಿನಿಂದ ಕರೆದರೆ ಅವರಿಗೆ ರೋಮಾಂಚನ ಉಂಟಾಗಬಹುದು. ಆ ಹೆಸರು ಇಟ್ಟಾಗಿನ ಒಂದೊಂದು ನಿಮಿಷಗಳು ಅವರಿಗೆ ಹಾಗೂ ನಿಮಗೆ ನೆನಪಿಗೆ ಬರುತ್ತವೆ.
ಹನಿಮೂನ್ ಸಂದರ್ಭದಲ್ಲಿ ನಿಮಗೆ ಇಷ್ಟವಾಗುವ ಒಂದು ಸಂಗತಿ, ಅವರಿಗೆ ಇಷ್ಟವಾಗದಿದ್ದರೆ, ಅವರು ನಿಮ್ಮಿಂದ ಅದನ್ನು ಬಿಡಲು ಪ್ರಮಾಣ ಮಾಡಿಸಿಕೊಳ್ಳಬಹುದು. ಯಾವುದೋ ಒಂದು ಪದಾರ್ಥವನ್ನು ನೀವು ಈವರೆಗೆ ತಿಂದೇ ಇಲ್ಲ, ಅದನ್ನು ಹನಿಮೂನ್ ಸಂದರ್ಭದಲ್ಲಿ ತಿನ್ನಲು ಶುರು ಮಾಡುತ್ತೀರಿ. ಆ ಬಳಿಕ ಆ ಪದಾರ್ಥವನ್ನು ಇಷ್ಟಪಟ್ಟು ತಿನ್ನುವಾಗೆಲ್ಲಾ ನಿಮಗೆ ಹನಿಮೂನ್ ನ ಮಧುರ ನೆನಪು ಬರದೇ ಇರುವುದಿಲ್ಲ.
ಪರಸ್ಪರ ಕೆಲವು ಪ್ರಮಾಣಗಳನ್ನು ಕೂಡ ಮಾಡಿ. ಆದರೆ ಮದುವೆಯ ಬಳಿಕ ಮಾಡಿದ ಒಂದೊಂದು ಪ್ರಮಾಣವನ್ನು ನಿಭಾಯಿಸಲು ಕಟಿಬದ್ಧರಾಗಿ. ಆದರೆ ಯಾವುದೇ ಕಾರಣಕ್ಕೂ ಅದನ್ನು ಮುರಿಯಲು ಪ್ರಯತ್ನಿಸಬೇಡಿ. ಏಕೆಂದರೆ ಮುರಿದ ನೂರಾರು ಪ್ರಮಾಣಗಳ ನಡುವೆ ಇದೇ ಒಂದು ಪ್ರಮಾಣ ನಿಮ್ಮ ಹನಿಮೂನ್ ನೆನಪನ್ನು ತಾಜಾಗೊಳಿಸಿ, ಅವರ ಮನಸ್ಸಿನಲ್ಲಿರುವ ಕಹಿಯನ್ನು ಹೋಗಲಾಡಿಸಲು ನೆರವಾಗುತ್ತದೆ.
ಕರ್ನಾಟಕ ಬ್ಯಾಂಕಿನಲ್ಲಿ ಕೆಲಸ ಮಾಡುವ ಅರವಿಂದ್ ಹೇಳುವುದೇನೆಂದರೆ, ನಾವು ಹನಿಮೂನ್ ಗೆ ಊಟಿಗೆ ಹೋಗಿದ್ದೆ. ಅಲ್ಲಿ ನನಗೊಬ್ಬ ಒಳ್ಳೆಯ ಗೆಳೆಯ ಸಿಕ್ಕ. ಈಗಲೂ ನನ್ನ ಹಾಗೂ ಅವನ ಕುಟುಂಬ ಭೇಟಿಯಾದಾಗೆಲ್ಲ ನನಗೆ ಊಟಿಯ ಹನಿಮೂನ್ ನೆನಪು ಬರುತ್ತದೆ.
ನೀವು ಹನಿಮೂನ್ ಗಾಗಿ ಉಳಿದುಕೊಂಡ ಹೋಟೆಲ್ ನಲ್ಲಿಯೇ ಬೇರೆ ಕೆಲವು ಜೋಡಿಗಳು ಉಳಿದುಕೊಂಡಿರುತ್ತವೆ. ಅವರೊಂದಿಗೆ ಬೆರೆತು ಮಾತುಕತೆ ನಡೆಸಿ. ಅಲ್ಲಿ ಭೇಟಿಯಾದವರು ನಿಮಗೆ ಅತ್ಯಂತ ನಿಕಟ ಸ್ನೇಹಿತರೂ ಆಗಬಹುದು. ಆ ಸ್ನೇಹಿತನನ್ನು ಭೇಟಿಯಾದಾಗೆಲ್ಲ ನಿಮಗೆ ನಿಮ್ಮ ಹನಿಮೂನ್ ನೆನಪು ಕಾಡದೇ ಇರುವುದಿಲ್ಲ.
ನೆನಪುಗಳನ್ನು ಹೆಣೆಯುವ ಬಗ್ಗೆ ಮೀನಾಕ್ಷಿಯವರು ತಮ್ಮದೇ ಆದ ಒಂದು ಉಪಾಯವನ್ನು ಹೇಳುತ್ತಾರೆ, “ನಿಮ್ಮ ಗಂಡನಿಗೆ ಮೀಸೆ ಇದ್ದರೆ, ಹನಿಮೂನ್ ಸಂದರ್ಭದಲ್ಲಿ ಅವರಿಗೆ ಕ್ಲೀನ್ ಶೇವ್ ಮಾಡಿಕೊಳ್ಳಲು ಹೇಳಬಹುದು. ನೀವು ಮನೆಗೆ ವಾಪಸ್ ಬಂದಾಗ ಮನೆಯವರಿಗೆಲ್ಲ ಇದು ವಿಶೇಷ ನೆನಪಾಗಿ ಉಳಿಯುತ್ತದೆ. ಇಂತಹದೇ ಹಲವು ನೆನಪುಗಳು ಇರುತ್ತವೆ. ಅವೇ ನೆನಪುಗಳು ಮುಂದೆ ನಮಗೆ ಕಚಗುಳಿ ಇಡುತ್ತವೆ.
ಹನಿಮೂನ್ ನ್ನು ಸ್ಮರಣಾರ್ಹಗೊಳಿಸಿಕೊಳ್ಳಲು ನಿಮ್ಮೊಂದಿಗೆ ಕ್ಯಾಮೆರಾವೊಂದನ್ನು ಜೊತೆಗೆ ತೆಗೆದುಕೊಂಡು ಹೋಗಿ. ನೀವು ಜೊತೆಗೊಯ್ಯುವ ಕ್ಯಾಮೆರಾದಲ್ಲಿ ಸಮಯ ಹಾಗೂ ದಿನಾಂಕ ನಮೂದಾಗಿರಲಿ. ನಿಮ್ಮ ಸಂಗಾತಿಗೆ ತಿಳಿಸದೆಯೇ ಎಂತಹ ಕೆಲವು ಫೋಟೋಗಳನ್ನು ಕ್ಲಿಕ್ಕಿಸಬೇಕೆಂದರೆ, ಆ ಬಳಿಕ ಆ ಫೋಟೋಗಳನ್ನು ನೋಡಿ ಸಂಗಾತಿ ಚಕಿತಗೊಳ್ಳಬೇಕು.
ನೀವು ಹನಿಮೂನ್ ಗೆ ಎಂತಹ ಸ್ಥಳಕ್ಕೆ ಹೋಗಬೇಕೆಂದರೆ, ಅಲ್ಲಿ ಹೋಗುವ ಆಸೆಯನ್ನು ನಿಮ್ಮ ಸಂಗಾತಿ ಮೊದಲಿನಿಂದಲೂ ಹೊಂದಿರಬೇಕು. ಹೀಗೆ ಮಾಡುವಾಗ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಒಂದು ಸಂಗತಿಯೆಂದರೆ, ಹನಿಮೂನ್ ಟ್ರಿಪ್ ನಿಮ್ಮ ಸಂಗಾತಿಗೆ ಒಂದು ಅಚ್ಚರಿದಾಯಕ ಉಡುಗೊರೆ ಎನಿಸಬೇಕು. ಏಕೆಂದರೆ ಸಂಗಾತಿ ಜೀವನವಿಡೀ ಅದನ್ನು ಮರೆಯುವಂತಿರಬಾರದು.
– ಶೀಲಾ ಜೈನ್