ಸೆಕ್ಸ್ ಎನ್ನುವುದು ಕೇವಲ ದೈಹಿಕ ಚಟುವಟಿಕೆಯಷ್ಟೇ ಅಲ್ಲ, ಅದರಲ್ಲಿ ಭಾವನಾತ್ಮಕ ಬಾಂಧವ್ಯ ಸೇರಿರುತ್ತದೆ. ಆರ್ಥಿಕ ಒತ್ತಡದ ಕಾರಣದಿಂದ ಭಾವನಾತ್ಮಕ ವಲಯದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ, ಚಿಂತೆಯಲ್ಲಿ ಮುಳುಗಿದ ಮನಸ್ಸು ದೇಹದೊಂದಿಗೆ ಪರಿಪೂರ್ಣವಾಗಿ ಜೊತೆ ಕೊಡುವುದಿಲ್ಲ. ಆ ಕಾರಣದಿಂದ ಸೆಕ್ಸ್ ಲೈಫ್ ಮೇಲೆ ಸಾಕಷ್ಟು ಪರಿಣಾಮ ಉಂಟಾಗುತ್ತದೆ. ಇದರ ಪರಿಣಾಮ ಕೇವಲ ಗಂಡ ಹೆಂಡತಿಯ ಮೇಲಷ್ಟೇ ಅಲ್ಲ, ಕುಟುಂಬ ಹಾಗೂ ಮಕ್ಕಳ ಮೇಲೂ ಆಗುತ್ತದೆ. ಕೆಟ್ಟ ಸೆಕ್ಸ್ ಲೈಫ್ ನ ಪ್ರಭಾವ ವ್ಯಕ್ತಿಯೊಬ್ಬನ ಕಾರ್ಯ ಸಾಮರ್ಥ್ಯದ ಮೇಲೂ ಉಂಟಾಗುತ್ತದೆ.
ಅಂದಹಾಗೆ ಪ್ರತಿಯೊಂದು ಬಗೆಯ ಒತ್ತಡ ಸೆಕ್ಸ್ ಲೈಫ್ ನ ಮೇಲೆ ದುಷ್ಪರಿಣಾಮ ಬೀರುತ್ತದೆ. ಆರ್ಥಿಕ ಒತ್ತಡ ಉಂಟಾದಾಗ ಅದು ಕೇವಲ ಆ ವ್ಯಕ್ತಿಯ ಮೇಲಷ್ಟೇ ಅಲ್ಲ, ಸಂಗಾತಿಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣವೇನೆಂದರೆ, ಹಣದ ಕೊರತೆಯಿಂದಾಗಿ ಡಾಕ್ಟರ್ ಹಾಗೂ ಔಷಧಿ ಎರಡೂ ಕಷ್ಟಕರವಾಗಿ ಪರಿಣಮಿಸುತ್ತದೆ.
ಸಂಗಾತಿಯನ್ನು ಖುಷಿಯಿಂದಿಡಲು ಉಡುಗೊರೆ ತಂದುಕೊಡುವುದಿರಲಿ, ಹೊರಗೆ ಸುತ್ತಾಡಲು ಹೋಗುವುದೂ ಕಷ್ಟವಾಗುತ್ತದೆ. ಯಾರು ವರ್ಷಾನುವರ್ಷಗಳಿಂದ ಜೊತೆಯಿರುತ್ತಾರೊ, ಅವರು ಕೂಡ ಕೊರತೆಗಳನ್ನು ಎಣಿಸಲು ಶುರು ಮಾಡುತ್ತಾರೆ. ಕೋವಿಡ್ ನ ಕಾರಣದಿಂದ ಉದ್ಯೋಗ ಕಳೆದುಕೊಳ್ಳುವುದು ಇಲ್ಲಿ ಪೂರ್ತಿ ಸಂಬಳ ದೊರೆಯದಿರುವುದು, ಸಕಾಲಕ್ಕೆ ಸಂಬಳ ಕೈಗೆ ಬರದಿರುವುದು, ಬಾಡಿಗೆ ಕೊಡಲು ಆಗದಿರುವುದು ಮುಖ್ಯವಾಗಿವೆ.
ಕಂಪನಿಗಳು ಬಗೆಬಗೆಯ ನೆಪವೊಡ್ಡಿ ಕೆಲಸಗಾರರಿಗೆ ತೊಂದರೆ ಕೊಡುತ್ತವೆ. ಏಕೆಂದರೆ ಅವರು ತೊಂದರೆಗೆ ಹೆದರಿ ಕೆಲಸ ಬಿಟ್ಟು ಬಿಡಲಿ ಎನ್ನುವುದಾಗಿರುತ್ತದೆ. ಆರ್ಥಿಕ ಹಿಂಜರಿತಕ್ಕೆ ಬೇರೆ ಕಾರಣ ಇರಬಹುದು. ಆದರೆ ಅದರ ಪ್ರಭಾವ ಸೆಕ್ಸ್ ಮೇಲಂತೂ ಆಗಿಯೇ ಆಗುತ್ತದೆ. ಆ ಕಾರಣದಿಂದ ಗಂಡ ಹೆಂಡತಿ ನಡುವಿನ ಸ್ವಾಭಾವಿಕ ಸಂಬಂಧಕ್ಕೆ ಏಟು ಬೀಳುತ್ತದೆ.
ಆರ್ಥಿಕ ಒತ್ತಡದ ಪರಿಣಾಮಗಳು
ಆರ್ಥಿಕ ಬಿಕ್ಕಟ್ಟಿನಿಂದ ಜನರು ದೊಡ್ಡ ನಗರಗಳಿಂದ, ಚಿಕ್ಕ ನಗರಗಳಿಗೆ, ದೊಡ್ಡ ಮನೆಗಳಿಂದ ಚಿಕ್ಕ ಮನೆಗಳಿಗೆ ಶಿಫ್ಟ್ ಆಗಬೇಕಾಯಿತು. ಮಕ್ಕಳನ್ನು ಭಾರಿ ಪ್ರತಿಷ್ಠಿತ ಶಾಲೆಗಳಿಂದ, ಸಾಧಾರಣ ಶಾಲೆಗಳಿಗೆ ಅದರಲ್ಲೂ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕಾಯಿತು. ಆರ್ಥಿಕ ಬಿಕ್ಕಟ್ಟಿನ ಪ್ರಭಾವ ಸಾಮಾಜಿಕ ಜೀವನದ ಮೇಲೂ ಉಂಟಾಗುತ್ತದೆ. ಅದು ಒತ್ತಡಕ್ಕೆ ಮುಖ್ಯ ಕಾರಣವಾಗಿದೆ.
ಮಹಿಳೆಯರ ಮೇಲೆ ಇದರ ಪ್ರಭಾವ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿ ಗಂಡನೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಕಷ್ಟವಾಗುತ್ತದೆ. ಎಷ್ಟೋ ಸಲ ಗಂಡ ಆಸಕ್ತಿ ತೋರಿಸಿದರೆ ಹೆಂಡತಿ ಅದಕ್ಕೆ ನಿರಾಕರಿಸುತ್ತಾಳೆ.
ಆರ್ಥಿಕ ಒತ್ತಡವನ್ನು ಕಡಿಮೆಗೊಳಿಸಲು ಜನರು ಹೆಚ್ಚೆಚ್ಚು ಕೆಲಸ ಮಾಡುತ್ತಾರೆ. ಈ ಕಾರಣದಿಂದಲೂ ಸೆಕ್ಸ್ ಸಂಬಂಧಕ್ಕಾಗಿ ಸಮಯ ಸಿಗುವುದಿಲ್ಲ. ಅದಕ್ಕೂ ಮೇಲಾಗಿ ದೇಹದ ದಣಿವು ಸೆಕ್ಸ್ ಸಂಬಂಧಗಳ ತೊಂದರೆ ಹೇಗಿರುತ್ತದೋ ಹಾಗೆಯೇ ಇರುವಂತೆ ಮಾಡುತ್ತದೆ.
ಮಹಿಳೆಯರ ಮೇಲೆ ಪರಿಣಾಮ
ಆರ್ಥಿಕ ಬಿಕ್ಕಟ್ಟು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರ ಮೇಲೆಯೇ ಅದು ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಪುರುಷರಿಗಿಂತ ಮಹಿಳೆಯರಿಗೇ ಆರ್ಥಿಕ ಚಿಂತೆ ಹೆಚ್ಚು ಕಾಡುತ್ತದೆ. ಇವೆಲ್ಲ ಸಂಗತಿಗಳ ಚಿಂತೆಯ ಜೊತೆಗೆ ಅವರ ಮನಸ್ಸು ಸೆಕ್ಸ್ ಬಗ್ಗೆ ಒಲವು ತೋರುವ ಹಾಗೂ ಅದರ ಖುಷಿ ಅನುಭವಿಸಲು ಅವಕಾಶ ಕೊಡುವುದಿಲ್ಲ. ಆರ್ಥಿಕ ಒತ್ತಡ ಸೆಕ್ಸ್ ಲೈಫ್ ನ್ನು ಹೆಚ್ಚು ಪ್ರಭಾವಿತಗೊಳಿಸುತ್ತದೆ. ಈ ಒತ್ತಡದಲ್ಲಿ ಇಷ್ಟಪಟ್ಟು ಕೂಡ ವರ್ತನೆಯ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ.