ಮದುವೆಯು ಜೀವನದ ಹೊಸ ಆರಂಭವಾಗಿದೆ. ಇದರಲ್ಲಿ ಪುರುಷ ಮಹಿಳೆಯ ಹಾಗೂ ಮಹಿಳೆ ಪುರುಷನ ಜೀವನವನ್ನು ಪರಿಪೂರ್ಣಗೊಳಿಸುತ್ತಾಳೆ. ಅದು ಜೀವನದಲ್ಲಿ ಯಶಸ್ಸು ಹಾಗೂ ಸಂತಸದ ತಳಹದಿಯಾಗಿದೆ. ಈಗಿನ ಕಾಲದಲ್ಲಿ ಹುಡುಗ ಹುಡುಗಿಯರು ಮದುವೆಯ ಬಗ್ಗೆ ಕೊಂಚ ಚೂಸಿಯಾಗಿದ್ದಾರೆ.

ಅವರು ಕೆರಿಯರ್‌ ನ ಮುಂದೆ ಮದುವೆಗೆ ಕಡಿಮೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಯಶಸ್ಸಿನ ದಾರಿ ಮದುವೆಯ ದಾರಿಯಿಂದಲೇ ಸಾಗುತ್ತದೆ ಎನ್ನುವುದನ್ನು ಅವರು ಮರೆಯಬಾರದು.

ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆಯ ಪರಿಶ್ರಮ ಇದ್ದೇ ಇರುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಧೀರೂಬಾಯಿ ಅಂಬಾನಿ. ಧೀರೂಬಾಯಿ ಈ ಹಂತದವರೆಗೆ ತಲುಪಲು ಅತ್ಯಂತ ಹೆಚ್ಚು ನೆರವು ನೀಡಿದ್ದು ಅವರ ದೃಢನಿಶ್ಚಯಿ ಪತ್ನಿ ಕೋಕಿಲಾ ಬೆನ್‌. ಅವರು ಪ್ರತಿ ಹೆಜ್ಜೆಯಲ್ಲೂ ಗಂಡನಿಗೆ ಸಹಕರಿಸಿದರು. ಕೆಟ್ಟ ಕಾಲದಲ್ಲಿ ಮನುಷ್ಯ ಕಂಗೆಟ್ಟು ಹಾಳಾಗುತ್ತಾನೆ. ಆದರೆ ಸಂಗಾತಿ ಜೊತೆಗಿದ್ದರೆ ಅವನು ಯಶಸ್ವಿಯಾಗುತ್ತಾನೆ ಮತ್ತು ಜೀವನದಲ್ಲೂ ಮುಂದೆ ಬರುತ್ತಾನೆ.

ಸಿನಿಮಾ ಕಲಾವಿದರ ಬಗ್ಗೆ ಹೇಳುವುದಾದರೆ, ಅಮಿತಾಭ್ ಬಚ್ಚನ್‌ ರಿಂದ ಹಿಡಿದು ಶಾರೂಖ್‌, ಹೃತಿಕ್‌ ವರೆಗೆ ಎಲ್ಲರೂ ಮದುವೆಯ ನಂತರವೇ ಯಶಸ್ಸಿನ ರುಚಿ ಸವಿದರು. ಅಮಿತಾಬ್‌, `ಜಂಜೀರ್‌' ಚಿತ್ರದ ನಂತರ ಜಯಾರೊಂದಿಗೆ ಮದುವೆಯಾಗಿ ಫಿಲ್ಮ್ ಇಂಡಸ್ಟ್ರಿಯಲ್ಲಿ ತಮ್ಮ ಛಾಪು ಮೂಡಿಸಿದರು. ಮದುವೆಯ ನಂತರ ಬಿಡುಗಡೆಯಾದ ಶಾರೂಖ್‌ ರ ಚಿತ್ರಗಳು ಸೂಪರ್‌ ಹಿಟ್‌ ಆದವು. ರಿತೇಶ್‌ ದೇಶ್‌ ಮುಖ್‌ ಮತ್ತು ಜೆನಿಲಿಯಾ ಡಿಸೋಜಾರ ಮದುವೆ ಇತ್ತೀಚೆಗಾಗಿದೆ. ರಿತೇಶ್‌ ರ ತಂದೆಯ ಸಾವಿನ ನಂತರ ಜೆನಿಲಿಯಾ ರಿತೇಶ್‌ ರ ಪ್ರತಿ ಹೆಜ್ಜೆಯಲ್ಲೂ ಅವರಿಗೆ ಜೊತೆ ನೀಡಿದ್ದು, ಸಂಗಾತಿ ಬದುಕಿನ ಕಷ್ಟಗಳನ್ನು ಎದುರಿಸುವಲ್ಲಿ ಎಷ್ಟು ಸಹಾಯ ಮಾಡುತ್ತಾರೆಂಬುದನ್ನು ಇದು ತಿಳಿಸುತ್ತದೆ.

1998ರಲ್ಲಿ ವೈಟ್‌ ಹೌಸ್‌ ಇಂಟರ್ನ್‌ವೋನಿಕಾ ಲೆವಿನ್‌ ಸ್ಕಿ ಬಿಲ್ ‌ಕ್ಲಿಂಟನ್‌ ರತ್ತ ಬೆರಳು ತೋರಿಸಿದಾಗ ಅವರು ಸಾರ್ವಜನಿಕವಾಗಿ ಅದನ್ನು ಒಪ್ಪಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅವರು ಬಹಳಷ್ಟು ಮಾನಸಿಕ ವೇದನೆಗೆ ಗುರಿಯಾಗಬೇಕಾಯಿತು. ಆದರೆ ಹಿಲರಿ ಕ್ಲಿಂಟನ್‌ ರಿಂದಾಗಿ ಅವರು ಈ ಸ್ಥಿತಿಯಿಂದ ಹೊರಬಂದರು. ಇಂದಿಗೂ ಅವರಿಬ್ಬರೂ ಅದೇ ಹಳೆಯ ಗಾಢ ಪ್ರೀತಿಯಲ್ಲಿ ಜೊತೆಯಲ್ಲಿದ್ದಾರೆ. ನಟ ಶೈನಿ ಅಹೂಜಾ ಮೇಲೆ ಕೆಲಸದವಳು ಬಲಾತ್ಕಾರದ ಆರೋಪ ಹೊರಿಸಿದ್ದಳು. ಆತ ಜೈಲಿಗೆ ಹೋಗಬೇಕಾದಾಗ ಹೆಂಡತಿ ಅನುಪಮಾರ ಬೆಂಬಲ ಕಷ್ಟಕಾಲದಲ್ಲಿ ಸಾಂತ್ವನ ನೀಡಿತು.

ಮದುವೆ ನಿಮ್ಮನ್ನು ಉತ್ತಮರನ್ನಾಗಿಸುತ್ತದೆ

ಒಂದು ವೇಳೆ ನೀವು ಸಂಗಾತಿಯನ್ನು ಬುದ್ಧಿವಂತಿಕೆಯಿಂದ ಆರಿಸಿಕೊಂಡರೆ, ಹೊರಗಿನ ರೂಪ, ಆಕರ್ಷಣೆಗೆ ಬದಲಾಗಿ ಸಂಗಾತಿಯ ಆಲೋಚನೆ, ಪ್ರಾಮಾಣಿಕತೆ ಮತ್ತು ಗುಣಗಳಿಗೆ ಪ್ರಾಶಸ್ತ್ಯ ನೀಡಿದರೆ ಅವರ ಸಹವಾಸದಿಂದ ನೀವು ಉತ್ತಮ ವ್ಯಕ್ತಿ ಆಗುತ್ತೀರಿ. ಅವರು ನಿಮ್ಮೊಳಗಿನ ಒಳ್ಳೆಯ ಗುಣಗಳನ್ನು ಹೊರತೆಗೆಯುತ್ತಾರೆ. ನಿಮ್ಮ ಸರ್ವಶ್ರೇಷ್ಠ ವ್ಯಕ್ತಿತ್ವವನ್ನು ಬೆಳಕಿಗೆ ತರುತ್ತಾರೆ. ಮದುವೆಯಿಂದ ನೀವು ತ್ಯಾಗ, ಹೊಂದಾಣಿಕೆ, ಪ್ರೇಮ, ಸ್ನೇಹದ ನಿಜಾದ ಅರ್ಥ ತಿಳಿಯುತ್ತೀರಿ. ನಿಮ್ಮ ಆಲೋಚನಾ ವ್ಯಾಪ್ತಿ ದೊಡ್ಡದಾಗುತ್ತದೆ ಮತ್ತು ಉತ್ತಮ ರೀತಿಯಲ್ಲಿ ಬದುಕಲು ಕಲಿಯುತ್ತೀರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ