ಪ್ರಥಮ ರಾತ್ರಿ ಯಾವುದೇ ವಧುವಿಗೆ ವಿಶಿಷ್ಟ ಹಾಗೂ ಸ್ಮರಣಾರ್ಹ ರಾತ್ರಿಯಾಗಿರುತ್ತದೆ. ಆ ರಾತ್ರಿಯ ನೆನಪು ಆಕೆಗೆ ಸದಾಕಾಲ ಮನದಲ್ಲಿ ಅಚ್ಚೊತ್ತಿರುತ್ತದೆ. ಆ ರಾತ್ರಿಯನ್ನು ಮತ್ತಷ್ಟು ಸ್ಮರಣಾರ್ಹವಾಗಿಸಿಕೊಳ್ಳಲು ಸಂಗಾತಿ ಆಕೆಗೆ ಯಾವುದಾದರೊಂದು ಪ್ರೀತಿಯ ಉಡುಗೊರೆ ನೀಡಿದರೆ, ಅದು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಂತಹ ಕ್ಷಣವಾಗುತ್ತದೆ. ಅಂದಹಾಗೆ ಈಚೆಗೆ ನವ ದಂಪತಿಗಳು ಪರಸ್ಪರರಿಗೆ ವಿಶಿಷ್ಟ ಉಡುಗೊರೆ ನೀಡುವುದರ ಮೂಲಕ ತಮ್ಮ ಪ್ರೀತಿ ತೋರ್ಪಡಿಸಿಕೊಳ್ಳುತ್ತಾರೆ.
ಪ್ಲಾಟಿನಂನ ವೈಶಿಷ್ಟ್ಯತೆ : ಜ್ಯೂವೆಲರಿ ಅಂಗಡಿಯೊಂರ ಮಾಲೀಕ ರಮೇಶ್ ಹೀಗೆ ಹೇಳುತ್ತಾರೆ, ``ಚಿನ್ನ ಕೊಟ್ಟಿಲ್ಲವೆಂದರೆ ಏನೂ ಕೊಟ್ಟಿಲ್ಲ ಎಂದು ಜನರು ಭಾವಿಸುತ್ತಾರೆ. ಅದರೆ ಇದು ತಪ್ಪುಕಲ್ಪನೆ. ಈ ಪರಂಪರೆ ಹಿಂದಿನ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಆದರೆ ಈಗ ಜನರ ಗಮನ ಪ್ಲಾಟಿನಂನತ್ತ ತಿರುಗಿದೆ.
ಪ್ಲಾಟಿನಂ ಕೇಲ 10-12 ವರ್ಷಗಳ ಹಿಂದಷ್ಟೇ ಭಾರತಕ್ಕೆ ಬಂದಿತ್ತು. ಆಗಿನಿಂದಲೇ ಇದು ಚಿನ್ನಕ್ಕಿಂತ ದುಬಾರಿಯಾಗಿತ್ತು. ಈಗಲೂ ಕೂಡ ಏರಿಕೆಯ ಹಂತದಲ್ಲಿಯೇ ಇದೆ. ಪ್ಲಾಟಿನಂನಲ್ಲಿ ಪ್ರಸ್ತುತ ಅನೇಕ ಬಗೆಯ ಡಿಸೈನರ್ ಮತ್ತು ಬ್ರ್ಯಾಂಡೆಡ್ ಆಭರಣಗಳು ಲಭ್ಯವಿವೆ.
ಪ್ಲಾಟಿನಂ ವಜ್ರದ ಜೊತೆಗಷ್ಟೇ ಹೊಂದಾಣಿಕೆಯಾಗುತ್ತದೆ. ಹೀಗಾಗಿ ತೆಳ್ಳನೆಯ ಚೈನ್ ಅಥವಾ ಉಂಗುರದಲ್ಲಿ ಅನೇಕ ಬಗೆಯವು ಲಭಿಸುತ್ತವೆ. ಪ್ಲೇರ್ ಡಿಸೈನಿನಲ್ಲಿ ಡೈಮಂಡ್ ವುಳ್ಳ ಫ್ಲವರ್ ಇಯರ್ ರಿಂಗ್ಸ್ ಅಥವಾ ನೆಕ್ಲೇಸ್ ಹೆಚ್ಚು ಕ್ರೇಜ್ ನಲ್ಲಿವೆ.
ನೀವು ಇಷ್ಟಪಟ್ಟರೆ ಪೆಂಡೆಂಟ್, ವಜ್ರಖಚಿತ ಬಳೆಗಳನ್ನು ಉಡುಗೊರೆ ರೂಪದಲ್ಲಿ ಕೊಡಬಹುದು. ಏಕೆಂದರೆ ಇವು ನೋಡಲು ಎಷ್ಟೊಂದು ಸ್ಲೀಕ್, ಎಲಿಗೆಂಟ್ ಹಾಗೂ ಸೋಬರ್ ಆಗಿವೆ ಎಂದರೆ, ಅವನ್ನು ಯಾವಾಗ ಬೇಕಾದರೂ ಧರಿಸಬಹುದು.
ಎಂದೆಂದಿಗೂ ಸಲ್ಲುವ ವಜ್ರಾಭರಣ : ಮಹಿಳೆಯರಿಗೆ ಆಭರಣಗಳು ಬಹಳ ಹಿಡಿಸುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲೂ ವಜ್ರದ ಹಾರ ಅಥವಾ ಆಭರಣದ ಬಗ್ಗೆ ಉಲ್ಲೇಖವಾದರೆ ಸಾಕು, ಅವರ ಖುಷಿಗೆ ಮೇರೆಯೇ ಇರುವುದಿಲ್ಲ. ಏಕೆಂದರೆ ಇವುಗಳ ಬೆಲೆ, ಗುಣಮಟ್ಟ, ಆಕಾರ ಹಾಗೂ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆ. ಸದ್ಯ ವಜ್ರ ಅತ್ಯಂತ ಬೆಲೆ ಬಾಳುವಂಥದ್ದು. ಆದಾಗ್ಯೂ 10,000 ರೂ.ಗಳಿಂದ 1 ಲಕ್ಷ ರೂ.ಗಳ ತನಕದ ಆಭರಣಗಳನ್ನು ಜನರು ಸಾಕಷ್ಟು ಪ್ರಮಾಣದಲ್ಲಿ ಖರೀದಿಸುತ್ತಾರೆ.
ಒಂದು ವೇಳೆ ನೀವು ಆಧುನಿಕ ಡಿಸೈನಿನ ವಜ್ರಾಭರಣಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಉಂಗುರ, ಹಗುರ ಬಳೆಗಳು, ನತ್ತುಗಳು, ಚಿಕ್ಕ ಪೆಂಡೆಂಟ್ ಗಳನ್ನು ಯಾವುದಾದರೂ ಬ್ರ್ಯಾಂಡೆಡ್ ಜ್ಯೂವೆಲರಿ ಶೋರೂಮಿನಿಂದ ಖರೀದಿಸಬಹುದು.
ವಜ್ರಖಚಿತ ಉಂಗುರ 18-35 ಸಾವಿರ ರೂ., ಹಗುರವಾದ ಮತ್ತು ತೆಳ್ಳನೆಯ ಬಳೆಗಳು 80,000 ರೂ.ಗಳಿಂದ ಹಿಡಿದು 1 ಲಕ್ಷ ರೂ. ತನಕ, ನತ್ತುಗಳು 5,000-30,000 ರೂ., ಪೆಂಡೆಂಟ್ 6,000-50,000 ರೂ.ತನಕ ಖರೀದಿಸಬಹುದು. ಮಾಣಿಕ್ಯ ಖಚಿತ ಹಾಗೂ 14 ಕ್ಯಾರೆಟ್ ನ ಸ್ಪಾರ್ಕಲಿಂಗ್ ಇಯರ್ ರಿಂಗ್ ನ್ನು ನೀವು 20,000 ರೂ.ಗಳಿಂದ 50,000 ರೂ.ಗಳ ತನಕ ಖರೀದಿಸಬಹುದು.
ಚಿನ್ನ ಒಂದು ಸ್ಮರಣೀಯ ಉಡುಗೊರೆ : ಚಿನ್ನದ ಬಣ್ಣ ಎಂದೂ ಹೊಳಪು ಕಳೆದುಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಪ್ರಥಮ ರಾತ್ರಿಯಂದು ಚಿನ್ನದ ಡಿಸೈನರ್ ಹಾಗೂ ಬ್ರ್ಯಾಂಡೆಡ್ ಆಭರಣಗಳನ್ನು ಕೊಟ್ಟು ಸಂಗಾತಿಯ ಮನಸ್ಸನ್ನೇಕೆ ಸೆಳೆಯಬಾರದು?