ಮದುವೆಯ ಸಂದರ್ಭದಲ್ಲಿ ಸಂಬಂಧಗಳ ಅಡಿಪಾಯ ಎಂತಹ ಕಷ್ಟಗಳನ್ನೂ ಸುಲಭವಾಗಿ ನಿಭಾಯಿಸಲು ಸಾಧ್ಯವಾಗಿರುವಂತಿರಬೇಕು. ಯಾವುದೇ ಒಂದು ಕಟ್ಟಡ ನಿರ್ಮಿಸಲು ಬಲಿಷ್ಠ ಪಿಲ್ಲರ್‌ ಗಳ ಅಗತ್ಯ ಉಂಟಾಗುತ್ತದೆ. ಅದೇ ರೀತಿ ನಮ್ಮ 'ಹೌಸ್‌ ಆಫ್‌ ಲವ್' ಕೂಡ ಪ್ರೀತಿ, ವಿಶ್ವಾಸ, ಗೌರವ ಹಾಗೂ ಪರಸ್ಪರ ಹೊಂದಾಣಿಕೆ ಎಂಬ 4 ಪಿಲ್ಲರ್‌ ಗಳ ಬಲಿಷ್ಠತೆಯನ್ನು ಅವಲಂಬಿಸಿರುತ್ತದೆ.

ಒಂದು ವೇಳೆ ಈ ಪಿಲ್ಲರ್‌ ಗಳಲ್ಲಿ ಯಾವುದಾದರೊಂದು ದುರ್ಬಲವಾಗಿದ್ದರೆ, ಸಂಬಂಧಗಳ ಕಟ್ಟಡ ಅಸ್ಥಿರವಾಗಬಹುದು. ವಾಸ್ತವ ಸಂಗತಿಯೆಂದರೆ, ಯಾವುದೇ ಒಂದು ಪಿಲ್ಲರ್‌ ಬೇರೊಂದು ಪಿಲ್ಲರ್‌ ಗೆ ಪರ್ಯಾಯವಾಗಲಾರದು. ಹೀಗಾಗಿ ಈ ನಾಲ್ಕೂ ಪಿಲ್ಲರ್ ಗಳು ತಮ್ಮ ತಮ್ಮ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಬೇಕು.

ಪಿಲ್ಲರ್‌ ಆಫ್‌ ಲವ್ ನಮ್ಮನ್ನು ನಾವು ಪ್ರೀತಿಸುವುದು ಕೂಡ ಬಹಳಷ್ಟು ಲಾಭವನ್ನುಂಟು ಮಾಡುತ್ತದೆ. ನಿಮ್ಮ ಜೀವನದಲ್ಲಿ ಅದೆಷ್ಟೋ ಜನರಿದ್ದಾರೆ. ಅವರ ಉಪಸ್ಥಿತಿಯಲ್ಲಿ ನೀವು ನಿಮ್ಮ ಬಗ್ಗೆ ಯೋಚಿಸಬಹುದು. ಏಕೆಂದರೆ ನೀವು ಅವರ ಮೇಲೆ ವಿಶ್ವಾಸವಿಟ್ಟಿರಬಹುದು. ಅವರ ಸುರಕ್ಷತೆಯಿಂದಾಗಿ ನಿಮ್ಮ ಸುರಕ್ಷಾ ಕವಚ ತೊರೆದು ಅವರ ಉಪಸ್ಥಿತಿಯ ಆನಂದ ಪಡೆದುಕೊಳ್ಳಬಹುದು.

ಮನುಷ್ಯ ಸಾಮಾಜಿಕ ಜೀವಿ. ನಮ್ಮನ್ನು ಯಾರು ಸ್ವೀಕರಿಸುತ್ತಾರೆ, ಸ್ವೀಕರಿಸುವುದಿಲ್ಲ ಎನ್ನುವುದು ನಮಗೆ ಚೆನ್ನಾಗಿ ಗೊತ್ತಾಗುತ್ತದೆ. ಕಾರಣಗಳು ಬೇರೆ ಬೇರೆಯಾಗಿರುತ್ತವೆ. ಆದರೆ ಅದರ ನೋವು ಸರಿಯಾಗಿ ಮನದಟ್ಟಾಗುತ್ತದೆ. ಇದೇ ಕಾರಣದಿಂದ ನಾವು ಎಂತಹ ವ್ಯಕ್ತಿಗಳೊಂದಿಗೆ ನಿಕಟತೆ ಬೆಳೆಸಿಕೊಳ್ಳಬೇಕೆಂದರೆ, ಅವರು ನಮ್ಮ ಆಸಕ್ತಿ ಹಾಗೂ ಮಹತ್ವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು, ನಮ್ಮನ್ನು ಯಾವುದೇ ಕಾರಣಕ್ಕೂ ಉತ್ಸಾಹ ಭಂಗಗೊಳಿಸುವಂತಿರಬಾರದು.

ಒಬ್ಬರ ಬಗ್ಗೆ ನಾವು ಕಾಳಜಿ ಮಾಡುವುದೆಂದರೆ ಅವರು ನಮ್ಮ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆಂದು ಅರ್ಥ. ನಿಮ್ಮ ಕಾಳಜಿಯ ಸತ್ಯಾಸತ್ಯತೆಯನ್ನು ಅರುಹಲು ನೀವು ತ್ಯಾಗ ಮಾಡಲು ಕೂಡ ಹಿಂದೇಟು ಹಾಕುವುದಿಲ್ಲ. ಪಿಲ್ಲರ್‌ ಆಫ್‌ ಟ್ರಸ್ಟ್ ಬೇರೆಯವರ ಮೇಲೆ ವಿಶ್ವಾಸವಿಡುವುದು ಕೆಲವು ಜನರಿಗೆ ಸುಲಭವಾಗಿರುತ್ತದೆ. ಮತ್ತೆ ಕೆಲವರಿಗೆ ಇದು ತುಂಬಾ ಕಷ್ಟಕರ ಕೆಲಸ. ಅದರಲ್ಲೂ ವಿಶ್ವಾಸಕ್ಕೆ ಅರ್ಹನಲ್ಲದ ವ್ಯಕ್ತಿಯನ್ನು ನಂಬಬೇಕೆಂಬ ಒತ್ತಡಗಳಿದ್ದಾಗ ಅದು ಮತ್ತೂ ಕಷ್ಟ ಎನಿಸುತ್ತದೆ. ಇದೇ ಕಾರಣದಿಂದ ಅಂತಹ ವ್ಯಕ್ತಿಯನ್ನು ಎದುರಿಸಬೇಕಾಗಿ ಬಂದಾಗ ಅತ್ಯಂತ ಎಚ್ಚರದಿಂದ ಹೆಜ್ಜೆ ಇಡಬೇಕಾಗುತ್ತದೆ. ನನ್ನ ಮೇಲೆ ನಂಬಿಕೆ ಇಡು. ನಿನಗೆ ಯಾವಾಗ ನನ್ನ ಅಗತ್ಯ ಉಂಟಾಗುತ್ತೋ, ಆಗ ನಾನು ನಿನಗೆ ಸಹಾಯ ಮಾಡ್ತೀನಿ. ನಾನು ಬದಲಾಗೋದಿಲ್ಲ. ಇದು ನೂರಕ್ಕೆ ನೂರು ಸತ್ಯ ಎಂಬ ಮಾತುಗಳ ಮೇಲೆ ಆಗ ವಿಶ್ವಾಸವಿಡುವುದು ಕಷ್ಟ. ಆದರೆ ವಾಸ್ತವ ಸಂಗತಿಯೆಂದರೆ, ಇದೇ ನಮಗೆ ನಂಬಿಕೆಯ ಅನುಭೂತಿಯನ್ನುಂಟು ಮಾಡುತ್ತದೆ. ಏಕೆಂದರೆ ಸಂಬಂಧದಲ್ಲಿ ವಿಶ್ವಾಸಾರ್ಹತೆ ಬಹಳ ಮುಖ್ಯ.

ಪಿಲ್ಲರ್‌ ಆಫ್‌ ರೆಸ್ಪೆಕ್ಟ್ ಇನ್ನೊಬ್ಬರನ್ನು ಗೌರವಿಸುವುದು ಬಹಳ ಮಹತ್ವದ ಸಂಗತಿ. ಗೌರವವೆಂದರೆ ನೀವು ಇನ್ನೊಬ್ಬರ ಮೌಲ್ಯಗಳ ಬಗ್ಗೆ ಎಷ್ಟೊಂದು ಅರ್ಥ ಮಾಡಿಕೊಂಡಿದ್ದೀರಿ ಎಂದಾಗುತ್ತದೆ. ಬೇರೆಯವರನ್ನು ಗೌರವಿಸುವ ಮುಂಚೆ ನಿಮ್ಮನ್ನು ನೀವು ಗೌರವಿಸದಿದ್ದರೆ, ನೀವು ಬೇರೆಯವರನ್ನು ಅದೆಷ್ಟು ಚೆನ್ನಾಗಿ ಗೌರವಿಸಲು ಸಾಧ್ಯ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ