``ಬೇಸಿಗೆಯ ದಿನಗಳ ಮಾತು. ನಮ್ಮ ಮನೆಯ ಬೋರ್‌ ವೆಲ್ ‌ಕೆಟ್ಟುಹೋಗಿತ್ತು. ಅದು ದುರಸ್ತಿಯಾಗಲು ಇನ್ನು 3-4 ದಿನ ಬೇಕಿತ್ತು. ಹೀಗಾಗಿ ನಾವು ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದೆವು. ಈ ಮಧ್ಯೆ ಊರಿನಿಂದ ನನ್ನ ಅತ್ತೆ ಮಾವ, ಮೈದುನ, ನಾದಿನಿ ನಮ್ಮ ಮನೆಗೆ ಬಂದರು. ಅವರನ್ನು ನೋಡಿ ನನಗೆ ಖುಷಿಯೇನೋ ಆಯಿತು. ಆದರೆ ನೀರಿನ ಕೊರತೆಯ ಸಂದರ್ಭದಲ್ಲಿ ಅವರ ಸ್ನಾನದ ವ್ಯವಸ್ಥೆ, ಬಟ್ಟೆ ಸ್ವಚ್ಛಗೊಳಿಸುವುದು ಹೇಗೆ ಎಂಬ ಚಿಂತೆ ನನ್ನನ್ನು ಕಾಡತೊಡಗಿತು.

``ಅದೇ ದಿನಗಳಲ್ಲಿ ಪಕ್ಕದ ಮನೆಯಾಕೆಗೂ ನನಗೂ ಯಾವುದೊ ವಿಷಯಕ್ಕೆ ಸಂಬಂಧಪಟ್ಟಂತೆ ವಿರಸ ಉಂಟಾಗಿ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಅತಿಥಿಗಳು ಮನೆಗೆ ಬಂದ ದಿನದಂದು ಸಂಜೆ ನಾನು ಗೇಟ್‌ ಹತ್ತಿರ ಅತ್ತಿತ್ತ ಸುತ್ತುತ್ತಲಿದ್ದೆ. ಅಷ್ಟರಲ್ಲಿ ನೆರೆಮನೆಯ ಕುಸುಮಾ ಗೇಟು ತೆಗೆದು ಒಳಗೆ ಬಂದು, ``ನಿಮ್ಮ ಮನೆಗೆ ಅತಿಥಿಗಳು ಬಂದಿದ್ದಾರೆಯೇ?'' ಎಂದು ಕೇಳಿದಳು.

ನಾನು ಮನಸ್ಸಿಲ್ಲದ ಮನಸ್ಸಿನಿಂದ ``ಹೌದು'' ಎಂದೆ. ಅವಳು ನನ್ನನ್ನು ತಮಾಷೆ ಮಾಡಲು ಬಂದಿರಬಹುದು ಎಂದು ಯೋಚಿಸಿದೆ. ಆದರೆ ಆಕೆ, ``ನಿಮ್ಮ ಮನೆಯ ಬೋರ್‌ ವೆಲ್ ‌ಕೆಟ್ಟಿದೆ, ಹೀಗಾಗಿ ನಿಮಗೆ ನೀರಿನ ಸಮಸ್ಯೆ ಆಗ್ತಿರಬಹುದು. ನೀವು ಒಂದು ಪೈಪ್‌ ತೆಗೆದುಕೊಂಡು ಬನ್ನಿ.

``ಅದರಿಂದ ನಮ್ಮ ಮನೆಯ ನಲ್ಲಿಯಿಂದ ನಿಮ್ಮ ಮನೆಯ ತನಕ ನೀರು ತಲುಪಿಸಲು ಸಾಧ್ಯವಾಗುತ್ತದೆ. ನಿಮ್ಮ ಬೋರ್‌ ವೆಲ್ ‌ದುರಸ್ತಿಯ ಬಳಿಕ ಪೈಪ್‌ ತೆಗೆದುಬಿಡಿ,'' ಎಂದು ಹೇಳಿದಾಗ, ನನಗೆ ಮಾತೇ ಹೊರಡಲಿಲ್ಲ,'' ಇದು ಬೆಂಗಳೂರಿನ ಚಂದ್ರಿಕಾ ಅವರ ಮನದಾಳದ ಮಾತು.

``ನಾನು ಗಂಡನ ಜೊತೆ ಮೋಟಾರ್‌ ಸೈಕಲ್ ಮೇಲೆ ಹೊರಟಿದ್ದೆ. ಆಕಸ್ಮಿಕವಾಗಿ ಹಿಂದಿನಿಂದ ಬರುತ್ತಿದ್ದ ಬಸ್ಸೊಂದು ನಮ್ಮ ಬೈಕ್‌ ಗೆ ಗುದ್ದಿತು. ಆಗ ನಾವು ರಸ್ತೆಯ ಮೇಲೆ ಉರುಳಿಬಿದ್ದೆವು. ಇಬ್ಬರಿಗೂ ಸಾಕಷ್ಟು ಗಾಯಗಳಾದವು. ಜನರು ನಮ್ಮನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು. ನಂತರ ನನ್ನ ತಮ್ಮ ಬಂದು ನಮ್ಮಿಬ್ಬರನ್ನು ಮನೆಗೆ ಕರೆತಂದುಬಿಟ್ಟ. ಆ ಬಳಿಕ ಗಾಯ ಹಾಗೂ ನೋವಿನಿಂದಾಗಿ ನನಗೆ 10 ದಿನಗಳ ಕಾಲ ಹಾಸಿಗೆಯಿಂದ ಮೇಲೇಳಾಗಲಿಲ್ಲ.

``ಈ ಅವಧಿಯಲ್ಲಿ ನನ್ನ ಪಕ್ಕದ ಫ್ಲ್ಯಾಟಿನ ಸುಮಂಗಲಾ ನಮ್ಮ ಮನೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡರು. ನನಗೆ ಅವರು ಯಾವುದೇ ಕೆಲಸ ಮಾಡಲು ಬಿಡಲಿಲ್ಲ,'' ಎಂದು ಹೇಳುವಾಗ ಮೈಸೂರಿನ ಸುಚಿತ್ರಾ ಅವರ ಕಣ್ಣುಗಳು ಒದ್ದೆಯಾಗುತ್ತವೆ.

ನೆರೆಮನೆಯವರೇ ನೆರವಿಗೆ ಬರುತ್ತಾರೆ. ಅದರಲ್ಲೂ ನಮಗೆ ಕಷ್ಟಕಾಲದಲ್ಲಿ ಹೆಚ್ಚು ಸಹಾಯ ಮಾಡುತ್ತಾರೆ. ಮುಂಜಾನೆ 10 ಗಂಟೆಯಿಂದ ಸಂಜೆ 6 ಗಂಟೆಯತನಕ ಮನೆಯಲ್ಲಿ ಮಹಿಳೆಯರಷ್ಟೇ ಇರುತ್ತಾರೆ. ಆ ಸಮಯದಲ್ಲಿ ಏನಾದರೂ ತೊಂದರೆ ಉಂಟಾದರೆ ನೆರೆಮನೆ ಅಥವಾ ಫ್ಲ್ಯಾಟಿನ ಮಹಿಳೆಯರೇ ನಿಮ್ಮ ನೆರವಿಗೆ ಬರುತ್ತಾರೆ.

aah-padosin.....2

ನೆರೆಯವರ ಜೊತೆ ಉತ್ತಮ ಸಂಬಂಧ

ವಕೀಸೆ ಶರ್ಮಿಳಾ ಹೀಗೆ ಹೇಳುತ್ತಾರೆ, ``ಕಳೆದ ವರ್ಷ ಒಂದು ದಿನ ನಾನು ಮನೆಯಲ್ಲಿ ಅಡುಗೆಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಮಗನ ಶಾಲೆಯಿಂದ ನನಗೆ ಫೋನ್‌ ಬಂತು. ಮಗನ ಆರೋಗ್ಯ ಒಮ್ಮೆಲೆ ಹದಗೆಟ್ಟಿದೆ ಎಂದು ಅವನನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದು ಹೇಳಿದರು. ಆಗ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಗಂಡ ಆಫೀಸ್‌ ಕೆಲಸದ ನಿಮಿತ್ತ ಬೇರೆ ನಗರಕ್ಕೆ ಹೋಗಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ