ಹೆಲ್ದಿ ಆಹಾರ ತಯಾರಿಸಲು ಒತ್ತಾಯ :
ಮಿಸೆಸ್ ಅಮೆರಿಕನ್ ಪ್ರೆಸಿಡೆಂಟ್ ಮಿಶೆಲ್ ಒಬಾಮಾ, ಜಂಕ್ ಫುಡ್ ತಯಾರಕ ಕಂಪನಿಗಳ ಜೀವ ಹಿಂಡುತ್ತಿದ್ದಾರೆ. ಇಂಥ ಕಂಪನಿಗಳು ತಮ್ಮ ರೆಡಿ ಟು ಈಟ್ ಆಹಾರವನ್ನು ಕಡ್ಡಾಯವಾಗಿ ಪೌಷ್ಟಿಕ ಹಾಗೂ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದ್ದಾರೆ. ಸ್ವಸ್ಥ ಅಮೆರಿಕಾ ಮಾತ್ರವೇ ಸಶಕ್ತ ಅಮೆರಿಕಾ ಆಗಲು ಸಾಧ್ಯ ಎನ್ನುತ್ತಾರೆ.
ಧರ್ಮಗುರುಗಳಿಗೆ ಬಂದ ಧರ್ಮಸಂಕಟ :
ಸಲಿಂಗಕಾಮಿಗಳು ವಿಶ್ವದಲ್ಲಿ ಎಲ್ಲೆಡೆ ಬಿಂದಾಸ್ ಆಗಿ ಮೋಜು ಉಡಾಯಿಸುತ್ತಾರೆ. ಸಾಮಾನ್ಯವಾಗಿ ಇವರು ಅನಗತ್ಯ ಬಂಧನಗಳಿಗೆ ಸಿಲುಕಲು ಬಯಸುವುದಿಲ್ಲ. ಚೀನಾದಿಂದ ಬೇರಾದ ತೈವಾನಿನ ಸಲಿಂಗಕಾಮಿಗಳು ಇತ್ತೀಚೆಗೆ ಬಣ್ಣಬಣ್ಣದ ವೇಷ ಧರಿಸಿ, ದೊಡ್ಡ ಕಾರ್ನಿವಾಲ್ ನಡೆಸುತ್ತಾ, ಪಾರ್ಲಿಮೆಂಟ್ ಕಡೆ ಮೆರವಣಿಗೆ ಹೊರಟರು. ಕಾನೂನು ಅಸಿಂಧು ಎನ್ನುವ ಸಲಿಂಗಕಾಮಿಗಳ ಮದುವೆಯನ್ನು ಮಾನ್ಯ ಮಾಡಬೇಕೆಂಬುದು ಇವರ ಬೇಡಿಕೆ, ಇದನ್ನು ಅಂಗೀಕರಿಸಲಾಗದ ಅಲ್ಲಿನ ಧರ್ಮಗುರುಗಳು ಈಗ ಧರ್ಮಸಂಕಟಕ್ಕೆ ಸಿಲುಕಿದ್ದಾರೆ.
ಆಹಾ…… ಕುಂಬಳ! :
ಕುಂಬಳಕಾಯಿ ಎಂದರೇನೇ ಭಾರಿ ಗಾತ್ರ. ಅದು ಇನ್ನಷ್ಟು, ಮತ್ತಷ್ಟು, ಮಗದಷ್ಟು ಬೆಳೆದುಬೆಳೆದೂ ಅಮೆರಿಕಾದ ಪಂಪ್ ಕಿನ್ ಫೆಸ್ಟಿವಲ್ ಗೆ ಪೈಪೋಟಿ ನಡೆಸಲೆಂದೇ ಭಾರಿ ಟ್ರಾಕ್ಟರ್ ನಲ್ಲಿ ಹಾಯಾಗಿ ಒರಗಿಕೊಂಡು ಬಂದಿಳಿದಿವೆ. ಬೆಲೆ ಕೇಳಿದರೆ ಕಣ್ಣೀರು ತರಿಸುವ ಈರುಳ್ಳಿಯೂ ಹೀಗೆ ಆನೆ ಮೊಟ್ಟೆಗಳಾಗಿ ನಮ್ಮ ಮಾರುಕಟ್ಟೆಗೆ ಬಂದರೆ ಎಂಥ ಚಂದ ಅಲ್ಲವೇ?
ಬೆಂಗಳೂರಿನ ಡ್ಯಾನ್ಸ್ ಫೆಸ್ಟಿವಲ್ :
ಬಾಲಿವುಡ್ ನಲ್ಲಿ ಆ ಕಾಲದಿಂದಲೇ ಹೆಲೆನ್ ಬೆಲ್ಲಿ ಡ್ಯಾನ್ಸ್ ನಿಂದಾಗಿ ಹೆಸರು ಗಳಿಸಿದ್ದಳು. ಅಂಥದೇ ತಂಡಗಳು ಈಗ ದೇಶದಲ್ಲಿ ಎಲ್ಲೆಡೆ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತವಾಗಿವೆ. ಪಾರ್ಟಿ ಎಂಥದೇ ಇರಲಿ, ಅಲ್ಲೀಗ ಬೆಲ್ಲಿ ಡ್ಯಾನ್ಸ್ ಅನಿವಾರ್ಯ ಆಗಿಬಿಟ್ಟಿದೆ. ಇಂಥದೇ ಪಂಚರಂಗಿಗಳ ತಂಡ, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ `ಹಿಪ್ನೋಸಿಸ್’ 5ನೇ ಅಂತಾರಾಷ್ಟ್ರೀಯ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ ತಮ್ಮ ನಡು ಕುಣಿಸಿದ್ದು ಹೀಗೆ!
ಕಾಂಚಾಣಂ ಸರ್ವತ್ರ ಸಾಧನಂ :
ಮಿಸ್ ಯೂನಿವರ್ಸ್ ಎನಿಸಿದ ಸುಂದರಿಯರು, ಸೌಂದರ್ಯ ಸಂವರ್ಧನೆಗಷ್ಟೇ ಗಮನಕೊಡದೆ, ಬೇರೊಂದಿಷ್ಟು ಸಮಾಜಸೇವೆಯನ್ನೂ ಮಾಡಬೇಕಾಗುತ್ತದೆ. 2012ರ ಮಿಸ್ ಯೂನಿವರ್ಸ್ ಒಲಿವಿಯಾ ಕಿಲ್ಪೋ, ಮಿಸ್ ಯೂನಿವರ್ಸ್ 2013ರ ಆಯ್ಕೆ ಮುಗಿಯು ಮುನ್ನ ಇತ್ತೀಚೆಗೆ ಏಡ್ಸ್ ಪೀಡಿತ ಮಕ್ಕಳ ವಾರ್ಡ್ ಗೆ ಭೇಟಿ ನೀಡಿ, ಹೀಗೊಂದು ಸಂಪ್ರದಾಯ ಸಲ್ಲಿಸಿದರು. ಈ ಮಿಸ್ ಗಳಿಗೆ ವ್ಯಾಧಿಪೀಡಿತ ಮಕ್ಕಳ ಮೇಲೆ ವಿಶೇಷ ಮಮಕಾರವೇನಿಲ್ಲದಿದ್ದರೂ, ಪ್ರಾಯೋಜಕರ ಆಹ್ವಾನ ಮನ್ನಿಸಿ, `ಸೂಕ್ತ’ ಸಂಭಾವನೆ ಪಡೆದೇ ಇಂಥ ಸೇವೆಗೆ ಧಾವಿಸುತ್ತಾರೆ.
ಸುರಕ್ಷತೆಗಾಗಿ ಹೀಗೊಂದು ಪೋಷಾಕು :
ಇತ್ತೀಚೆಗೆ ಚೀನಾದಲ್ಲಿ ನಡೆದ ಒಂದು ಅಂತಾರಾಷ್ಟ್ರೀಯ ಫ್ಯಾಷನ್ ಶೋನಲ್ಲಿ ಮುಳ್ಳುಮಯವಾದ ಈ `ಥಾರ್ನಿ ಡ್ರೆಸ್’ ಎಲ್ಲರ ಗಮನಸೆಳೆಯಿತು. ಇದು ಫ್ಯಾಷನ್ ಗೆ ಮಾತ್ರವಲ್ಲ, ಹೆಣ್ಣುಮಕ್ಕಳು ಇಂದಿನ ಕಾಮುಕ ಯುಗದಲ್ಲಿ ಸುರಕ್ಷಿತವಾಗಿರಲು ಎಲ್ಲಾ ಊರುಗಳಲ್ಲಿಯೂ ಅತ್ಯಗತ್ಯವೆಂದೇ ಹೇಳಬೇಕು. ಕಾಮಾಂಧರ ಕಾಟದಿಂದ ತಪ್ಪಿಸಿಕೊಳ್ಳಲು ಪೊಲೀಸರ ಮೊರೆಹೋಗುವುದಕ್ಕಿಂತ ಇದು ಮೇಲಲ್ಲವೇ?
ಸ್ಪಾ ಮಸಾಜ್ ಬದಲಿಗೆ ಸರ್ಪ ಮಸಾಜ್ :
ಕ್ರೀಂ ಮಸಾಜ್, ಬಾಡಿ ಮಸಾಜ್, ಥಾಯ್ ಮಸಾಜ್, ಸ್ಪಾ ಮಸಾಜ್ ಗಳ ಕಾಲ ಹೋಗಿ ಸರ್ಪ ಮಸಾಜ್ ಬಂದಿದೆ! ಇಂಥ ವಿಭಿನ್ನ ಆಕಾರದ ಸರ್ಪಗಳು ಬರಿಮೈಯನ್ನು ಉಜ್ಜಾಡಿದರೆ ನಿಮ್ಮ ಚರ್ಮ ಅತಿ ಮೃದು, ಕೋಮಲ, ಕಾಂತಿಯುತವಾಗಿ ಲಕಲಕ ಹೊಳೆಯುತ್ತದಂತೆ! ಸ್ನೇಕ್ ಮಸಾಜ್ ಬೇಕಿದ್ದರೆ ಇಂದೇ ಇಂಡೋನೇಷ್ಯಾದ ಮಸಾಜ್ ಪಾರ್ಲರ್ ಗೆ ಭೇಟಿ ನೀಡಿ. ದುಬಾರಿ ಅಂತೀರಾ? ಗ್ಲಾಮರ್ ಜೊತೆಗೆ ರೋಮಾಂಚಕಾರಿ ಅನುಭವ, ಯಾರಿಗುಂಟು….. ಯಾರಿಗಿಲ್ಲ?
ಸ್ಮಾರ್ಟ್ ಫ್ಯಾಟ್ ಫ್ಯಾಷನ್ ಶೋ :
ರೀ, ಫ್ಯಾಟ್ ಆದರೇನಂತೆ? ಹಾಗೆಂದು ಮೂಗು ಮುರಿಯುವವರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಪ್ಯಾರಿಸ್ ನಲ್ಲಿ ನಡೆಯಿತು ಈ ಡುಮ್ಮಿಯರ ಫ್ಯಾಷನ್ ಶೋ! ಸ್ಥೂಲ ಶರೀರವಾದರೇನು? ನಮ್ಮನ್ನು ನಾವು ಖಂಡಿತಾ ಪ್ರೀತಿಸುತ್ತೇವೆ ಎನ್ನುತ್ತಾರೆ ಈ ಸ್ಮಾರ್ಟ್ ಫ್ಯಾಟ್ ಮಾಡೆಲ್ಸ್.