ಮಿಸ್ಯೂನಿವರ್ಸ್ಹರ್ನಾರ್

ಓಹೋ, ಅಂತೂ 21 ವರ್ಷಗಳ ನಂತರ ಮತ್ತೊಮ್ಮೆ ಭಾರತದ ಕುವರಿಗೆ ಮಿಸ್‌ ಯೂನಿವರ್ಸ್‌ ಕಿರೀಟ! ಮೂಲತಃ ಚಂಡೀಗಢ ರಾಜ್ಯದವಳಾದ, 5 ಉ 9 ಅ ಎತ್ತರದ, ಅತ್ಯಾಕರ್ಷಕ ಮೈಕಟ್ಟಿನ 21ರ ಹರೆಯದ ಹರ್‌ ನಾರ್‌, ಈ ಸಲದ `ಭುವನ ಸುಂದರಿ’ ಎನಿಸಿ ಭಾರತೀಯ ಹೆಣ್ಣು ಕುಲಕ್ಕೆ ಕಲಶಪ್ರಾಯಳಾಗಿದ್ದಾಳೆ! ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡಬೇಕಾದ ಹುಡುಗಿ ಇವಳು. ಇಂದಿನ ತರುಣಿಯರು ಇವಳಿಂದ ಕಲಿಯಬೇಕಾದುದು ಎಂದರೆ, ನೀವು ನಿಮ್ಮ ಕನಸನ್ನು ನನಸಾಗಿಸ ಬಯಸಿದರೆ, ಅದಕ್ಕಾಗಿ ಅಹರ್ನಿಶಿ ಮನಸ್ಸಿಟ್ಟು ಶ್ರದ್ಧೆಯಿಂದ ದುಡಿಯಬೇಕು. ನಿಮ್ಮ ಕೈಲಾದ ಎಲ್ಲಾ ಪ್ರಯತ್ನ ಮಾಡಲೇಬೇಕು, ನಿಮ್ಮ ಐಡೆಂಟಿಟಿ ಸ್ಥಾಪಿಸಿಕೊಳ್ಳಬೇಕು. ಎಲ್ಲೋ ದೂರದ ಥಳುಕು ಬಳುಕಿನಿಂದ ದೂರವಾದ ಊರಿನ ಈ ಬೆಡಗಿ, ಕೇವಲ ಮಾಡೆಲಿಂಗ್‌ ಕ್ಷೇತ್ರದ ಕೆಲವೇ ಮಂದಿಗಷ್ಟೇ ಗೊತ್ತಿದ್ದಳು. ಅವಳೀಗ ಇಡೀ ವಿಶ್ವಕ್ಕೇ ಗೊತ್ತು….. ಕಂಗ್ರಾಟ್ಸ್ ಹರ್‌ ನಾರ್‌!

ದುಬಾರಿ ಆಯ್ತು ಕುದುರೆ ಮತ್ತು ಗಾಡಿ

ಸುಕೇಷ್‌ ಜೊತೆ ಡೇಟಿಂಗ್‌ ಹೊರಟ ಜ್ಯಾಕ್ಲಿನ್‌ ಗೆ ಅದು ಬಲು ದುಬಾರಿ ಆಯ್ತು. ಡೇಟಿಂಗ್‌ ಇದ್ದ ಮೇಲೆ ಗಿಫ್ಟ್ ಗಳ ಗಿವ್‌ಟೇಕ್ ಸಹಜ. ಇದೇ ಪ್ರಸಂಗ ಮುಂದುವರಿಸಿದ ಜ್ಯಾಕ್ಲಿನ್‌, ಅತಿ ದುಬಾರಿ ಕುದುರೆ ಮತ್ತು ಕಾರನ್ನು ಗಿಫ್ಟ್ ಆಗಿ ಪಡೆದಳು, ತಕ್ಷಣ  ಕೆಂಗಣ್ಣಿಗೆ ಗುರಿಯಾದಳು! ಇದೀಗ ಆ ವಿಭಾಗದ ಮಂದಿ ಧುತ್ತೆಂದು ಮನೆ ಎದುರು ನಿಂತಾಗೆಲ್ಲ, ಮಾಡುತ್ತಿದ್ದ ಕೆಲಸ ಬಿಟ್ಟು ಅವರಿಗೆ ತನ್ನ ಮನೆಯ ದುಬಾರಿ ವಸ್ತುಗಳ ವಿವರ ನೀಡಬೇಕಾಗಿದೆ. ಅಯ್ಯೋ ಪಾಪ, ಜ್ಯಾಕ್ಲಿನ್‌ ಗೆ ಹಿತೈಷಿಗಳು ಹೇಳುತ್ತಿದ್ದಾರೆ, ಅಂಥ ದುಬಾರಿ ಗಿಫ್ಟ್ ಕೊಡಿಸುವ ಆ ಬಾಯ್‌ ಫ್ರೆಂಡ್‌ ಯಾವ ಮೂಲದಿಂದ ಅಂಥದ್ದು ಒದಗಿಸಿದವು ಎಂದೂ ನೋಡಬೇಕಲ್ಲವೇ…..? ಅಂತ. ಇಲ್ಲದಿದ್ದರೆ ತೆರಿಗೆ ವಿಭಾಗಕ್ಕೆ ಲೆಕ್ಕ ಒಪ್ಪಿಸೋದರಲ್ಲಿ ಜೀವನ ಅರೆ ಆಗಿಹೋದೀತು!

ದಕ್ಷಿಣದ ಚಿತ್ರಗಳು ಉತ್ತರದವರಿಗೆ ಸುಗ್ಗಿ!

ಇಲ್ಲಿಯವರೆಗೆ ದಕ್ಷಿಣದ ಚಿತ್ರಗಳು ಬಾಲಿವುಡ್‌ ಗೆ ಪೈಪೋಟಿ ಮಾತ್ರ ಎನಿಸಿತ್ತು. ಆದರೆ ಉತ್ತರಕ್ಕಿಂತ ದಕ್ಷಿಣವೇ ಮೇಲುಗೈ ಸಾಧಿಸಿದೆ! `ರೋಬೋ,’ `ಬಾಹುಬಲಿ’ಯಂಥ ಯಶಸ್ವಿ ಚಿತ್ರಗಳ ನಂತರ  `’ ಮತ್ತು `ಪುಷ್ಪಾ’ ಚಿತ್ರದ ಟ್ರೇಲರ್ಸ್‌ ಗೆ ಸಿಗುತ್ತಿರುವ ರೆಸ್ಪಾನ್ಸ್ ಕಂಡು ಬಾಲಿವುಡ್‌ ನ ಘಟಾನುಘಟಿಗಳೇ ಗಡಗಡ ನಡಗುತ್ತಿದ್ದಾರೆ. ಈ ಚಿತ್ರಗಳ ಯಶಸ್ಸು ಕಟ್ಟಿಟ್ಟ ಬುತ್ತಿ ಎನಿಸಿದೆ. ಬಾಲಿವುಡ್‌ ನ ಕರಣ್‌ ಜೋಹರ್‌ ಅಂಥ ದಿಗ್ಗಜ ನಿರ್ಮಾಪಕ ನಿರ್ದೇಶಕರುಗಳೇ ದಕ್ಷಿಣದ ಯಶಸ್ವೀ ಚಿತ್ರಗಳಿಗಾಗಿ ಬಾಯಿ ಬಿಟ್ಟುಕೊಂಡು ಕಾಯುವಂತಾಗಿದೆ! ಇದೇ ಪರಿಸ್ಥಿತಿ ಮುಂದುವರಿದರೆ, ಹಿಂದಿ ತಾರೆಯರೆಲ್ಲ ಹಾಸಿಗೆ ಸುರುಟಿಕೊಂಡು ಬೆಂಗಳೂರು, ಮದ್ರಾಸ್‌, ಹೈದರಾಬಾದಿಗೆ ರೈಲು ಹತ್ತುವ ದಿನ ದೂರವಿಲ್ಲ!

ಆಲಿಯಾ ಈಸ್ಲವ್ ವಿತ್

ಆಲಿಯಾ ರಣಬೀರ್‌ನ ಜೊತೆ ಹೊಂದಿರುವ ಕನೆಕ್ಷನ್‌ ಈಗ ರಹಸ್ಯವಲ್ಲ. ಆದರೆ ಸುದ್ದಿಗಾರರು ಸದಾ ಇವರ ಬೆನ್ನುಬಿದ್ದು, ಈ ಸಂಬಂಧದ ಎಳೆಗಳನ್ನು ಬಿಡಿಸುತ್ತಿರುತ್ತಾರೆ. `’ ಚಿತ್ರದ ಪ್ರಮೋಶನ್‌ ಗಾಗಿ ಬಂದಿದ್ದ ಆಲಿಯಾಳನ್ನು, ಅವಳ ಮೆಚ್ಚಿನ  ಬಗ್ಗೆ ಕೇಳಿದಾಗ, ಅವಳು ಬಯಸಿಯೂ ತನ್ನ ನಾಚಿಕೆ ಅಡಗಿಸಲು ಆಗಲೇ ಇಲ್ಲ. ರಣಬೀರ್‌ ತನ್ನ ಮಾಜಿ ಸಂಬಂಧಗಳಲ್ಲಿ ಸ್ಟಿಕ್‌ ಆನ್ ಆಗಲಿಲ್ಲ. ಹೀಗಾಗಿ ಆಲಿಯಾ ಬೀ ಕೇರ್‌ ಫುಲ್ ಎನ್ನುತ್ತಾರೆ ಹಿತೈಷಿಗಳು. ಈ ಪ್ರೇಮದ ಕಣ್ಣಾಮುಚ್ಚಾಲೆ ಪಾಪ್‌ ರಾಝಿ  ಸುದ್ದಿಗಾರರಿಗೆ ಮಸಾಲಾ ಒದಗಿಸಬಹುದು, ಆದರೆ ನಿನ್ನ ಭವಿಷ್ಯದ ಕಾದಂಬರಿ ಬರೆಯುವವಳು ನೀನೇ ಎಂದು ಎಚ್ಚರಿಸುತ್ತಿದ್ದಾರೆ.

ನೋರಾಳಿಗೆ ಸಿಕ್ಕನೆ ಅಸಲಿ ಗುರು?

nora_1

ನೋರಾ ಮತ್ತು ಗುರು ರಾಂಧ್ವಾರ ರೊಮಾನ್ಸ್ ಗೋವಾದಲ್ಲಿ ಸಿಕ್ಕಿಬಿತ್ತು. ಇಬ್ಬರೂ ಪರಸ್ಪರ ಬಲು ಕಂಫರ್ಟ್‌ ಆಗಿದ್ದರು. ಇದನ್ನು ಗಮನಿಸಿದ ಸುದ್ದಿಗಾರರು, ನೋರಾ ಗುರುವಿಗೆ ಶರಣಾದಳು ಎಂದು ಘೋಷಿಸಿದರು. ಇದನ್ನು ಇವರಿಬ್ಬರೂ ಎಷ್ಟೇ ನಾಜೂಕಾಗಿ ಖಂಡಿಸಿದರೂ, ಈ ಫಿಲ್ಮೀ ಜೋಡಿಯ ಮಿಲನದ ಹಳೆಯ ಟ್ರೆಂಡ್‌ ಗಮನಿಸಿದರೆ, ಪ್ರತಿ ಸಂಬಂಧದ ಆರಂಭ, ಯಾವುದೋ ವೆಕೇಶನ್‌ ನಿಂದಲೇ ಆಗಿರುವುದು ಕಾಕತಾಳೀಯ. ಈ ಜೋಡಿ ಕ್ಲಿಕ್‌ ಆಗಿ ಮುಂದುವರಿದರೆ, ಇವರ ಅಭಿಮಾನಿಗಳಿಗೆ ನಿರಾಸೆ ತಪ್ಪಿದ್ದಲ್ಲ. ಒಬ್ಬರು ಸಿನಿಮಾ ಹಾಡಿನಲ್ಲಿ ಮಿಂಚಿದರೆ, ಇನ್ನೊಬ್ಬರು ಹಾಡುಗಾರಿಕೆಯಲ್ಲಿ! ಇಂಥವರ ಜುಗಲ್ ಬಂದಿ ತೆರೆಯಲ್ಲಿ ಇನ್ನೆಷ್ಟು ಮಿಂಚಬಲ್ಲದೋ?

ನನ್ನ ಡ್ರೆಸ್ನನ್ನ ಮರ್ಜಿ

ವಿಶ್ವ ಈಗಾಗಲೇ 21 ಬಿಟ್ಟು 22ನ್ನು ಅಪ್ಪಿಕೊಂಡಿದೆ, ಆದರೆ ಕಂದಾಚಾರಿಗಳು ಮಾತ್ರ ಮುಂದುರಿಯುತ್ತಿರುವ ಮಂದಿಯನ್ನು ಹಿಂದಕ್ಕೆ ಎಳೆಯುತ್ತಿದ್ದಾರೆ. ಆಧುನಿಕ ಹುಡುಗಿಯರು ಹೀಗ್ಹೀಗೆ ಡ್ರೆಸ್‌ ಮಾಡಿಕೊಳ್ಳಬೇಕೆಂದು ಇವರು ಆ ಕಾಲದಿಂದಲೂ ಉಪದೇಶ ಮಾಡುತ್ತಲೇ ಬಂದಿದ್ದಾರೆ. ಇಂಥವರ ಕಾಕದೃಷ್ಟಿ ಇದೀಗ ಶ್ವೇತಾ ತಿವಾರಿಯ ಮಗಳು ಪಲಕ್‌ ಮೇಲೆ ವಕ್ರಿಸಿದೆ. ಇತ್ತೀಚೆಗೆ ಪಲಕ್‌ ಬೋಲ್ಡ್ ಡ್ರೆಸ್‌ ಧರಿಸಿ, ತನ್ನ ಮೀ ಟೈಂ ವಿಡಿಯೋವನ್ನು FB‌ಗೆ ಅಪ್‌ ಲೋಡ್‌ ಮಾಡಿದಾಗ, ಟ್ರೋಲಿಗರು ಅವಳ ಬೆನ್ನುಬಿದ್ದರು. ಎಲ್ಲರೂ ಇವಳಿಗೆ ಹಾಗಲ್ಲ ಹೀಗೆ ಅಂತ ಉಪದೇಶ ಮಾಡುವವರೇ. ಇದೆಂಥ ಡ್ರೆಸ್‌….. ಛೀ ಛೀ….. ಹೆಣ್ಣು ಎಂಬ ಮರ್ಯಾದೆ ಬೇಡವೇ….. ಇತ್ಯಾದಿ. ಪಲಕ್‌ ಇಂಥ ಮಂದಿಗೆ ಸದ್ದು ಹೊಡೆದು ತನ್ನ ವಿಡಿಯೋ ಡಿಲೀಟ್‌ ಮಾಡಲೇ ಇಲ್ಲ. ಬಾಲಿವುಡ್‌ ಅಂತಿದೆ, ವೆರಿ ಗುಡ್‌ ಪಲಕ್‌, ಡೋಂಟ್‌ ಕೇರ್‌!

ಅಪ್ಪನ ಹೆಸರು ಭಾರಿ ಆಗಿಹೋಯ್ತೆ?

karan_1

ಹೆಸರಿನ ಕಾರಣ ಕೆಲಸ ಗಿಟ್ಟಿಸುವುದೇನೋ ಸುಲಭ, ಆದರೆ ಆ ಹೆಸರಿಗೆ ಅಂಟಿಕೊಳ್ಳದೆ, ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡುವುದು ಎಷ್ಟು ಕಷ್ಟಕರ ಎಂದು ಯಾರಾದರೂ ಕರಣ್‌ ಡಿಯೋಲ್ ‌ನನ್ನೇ ಕೇಳಿ. ತನ್ನ ಡೆಬ್ಯೂ ಚಿತ್ರ ತೋಪಾದ ನಂತರ, ಕರಣ್‌ ಇದೀಗ ಹೊಸ ಚಿತ್ರದಲ್ಲಿ ಕಾಣಿಸುತ್ತಿದ್ದಾನೆ. ಪ್ರತಿಯೊಬ್ಬರೂ ತನ್ನ ನಟನೆಯನ್ನು ತನ್ನಪ್ಪ ಸನ್ನಿ ಡಿಯೋಲ್ ‌ನ ಚಿತ್ರಗಳಿಗೆ ಹೋಲಿಸುತ್ತಿರುವುದು ಇವನಿಗೆ ನುಂಗಲಾರದ ತುತ್ತಾಗಿದೆ. ಅದಕ್ಕೆ ಕರಣ್‌ ನ ಉತ್ತರ ಎಂದರೆ, ನನ್ನನ್ನು ಯಾರೊಂದಿಗೂ ಹೋಲಿಸಬೇಡಿ, ಏಕೆಂದರೆ ನಾನು ನನ್ನ ಸ್ವಶಕ್ತಿಯಿಂದ ಐಡೆಂಟಿಟಿ ಕ್ರಿಯೇಟ್‌ ಮಾಡಬಯಸುತ್ತೇನೆ ಅಂತಾನೆ. ಅಂದಹಾಗೆ ಈ ಚಿತ್ರದಲ್ಲಿ ಕರಣ್‌ ಮೊದಲಿಗಿಂತ ಎಷ್ಟೋ ಸುಧಾರಿಸಿದ್ದಾನಂತೆ.

ಹೊಸ ಫ್ಯಾಷನ್ಐಕಾನ್ಅನನ್ಯಾ

Ananya_1

ಕೆಲವು ದಿನಗಳ ಹಿಂದೆ, ಅನನ್ಯಾ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಪತ್ರಿಕೆಯ ತಲೆಬರಹ ಆಗುತ್ತಿದ್ದಳು. ಆದರೆ ಈಗ ತನ್ನ ಫ್ಯಾಷನ್ ಕಾರಣ ಜನಪ್ರಿಯ ಆಗುತ್ತಿದ್ದಾಳೆ. ಸೋನಂಳನ್ನು ಮರೆತು ಆಧುನಿಕ ತರುಣಿಯರು ಇದೀಗ ಅನನ್ಯಾಳ ಫ್ಯಾಷನ್‌ ನ್ನೇ ಫಾಲೋ ಮಾಡ್ತಿದ್ದಾರೆ! ಮಿನಿಮಮ್ ಮೇಕಪ್‌ ಜೊತೆ ಬಾಡಿ ಟೈಪ್‌ ಗೆ ಸೂಟ್‌ ಆಗುವಂತೆ ಡ್ರೆಸ್‌ ಧರಿಸಿ, ಅನನ್ಯಾ ಇತ್ತೀಚೆಗೆ ಯಂಗ್ ಹುಡುಗಿಯರ ಮನ ಗೆದ್ದಿದ್ದಾಳೆ! ತೆಲುಗಿನ ಖ್ಯಾತ ನಟ ವಿಜಯ್‌ ದೇವರಕೊಂಡ ಜೊತೆ ತೆಲುಗು, ತಮಿಳು ಕನ್ನಡದಲ್ಲಿ ಏಕಕಾಲಕ್ಕೆ ಚಿತ್ರಿತವಾಗುತ್ತಿರುವ `ಲೈಗರ್‌’ನಲ್ಲಿ ಮಿಂಚುತ್ತಿದ್ದಾಳೆ. ಇವಳ ಹಿಂದಿ ಅಭಿಮಾನಿಗಳು ಇದಕ್ಕಾಗಿ ಇನ್ನೂ ಕಾಯಬೇಕು, ಏಕೆಂದರೆ ಸದ್ಯಕ್ಕಂತೂ ಇವಳ ಬಳಿ ಯಾ ಹಿಂದಿ ಚಿತ್ರ ಇಲ್ಲ.

ಮಿಸ್ಅಲ್ಲ ಮಿಸೆಸ್ಆಗ್ತಾಳಾ ಜಾಹ್ನವಿ?

jhanvi_1

ಅರೆ, ಇದು ರಿಯಲ್ ಅಲ್ಲ, ಇವಳ ರೀಲ್ ‌ನಲ್ಲಿ!  ಅಂದ್ರೆ `ಮಿಸ್ಟರ್‌ಮಿಸೆಸ್‌ ಮಾಹಿ’ ಚಿತ್ರದಲ್ಲಿ ಬಿಝಿ ಆಗಿದ್ದಾಳೆ. ರಾಜ್‌ ಕುಮಾರ್ ರಾವ್ ಈ ಚಿತ್ರದ ನಾಯಕ. ಶ್ರೀದೇವಿ ಮಗಳು ಜಾಹ್ನವಿ ಇತ್ತೀಚೆಗೆ ತನ್ನ ತಂದೆ ಬೋನಿ ಕಪೂರ್‌ ನಿರ್ದೇಶನದ ದಕ್ಷಿಣದ ಒಂದು ರೀಮೇಕ್‌ ಚಿತ್ರ ಪೂರೈಸಿದ್ದಾಳೆ. ತನ್ನ ಹೊಸ ಪ್ರಾಜೆಕ್ಟ್ಸ್ ಬಗ್ಗೆ ಬಹಳ ಖುಷಿಯಾಗಿದ್ದಾಳೆ. ಇವಳೇನೋ ಖುಷ್‌, ಆದರೆ ಪಾಪ್ ರಾಝಿ ಕೋಪಗೊಂಡಿದ್ದಾರೆ. ಇತ್ತೀಚೆಗೆ ಇವಳು ಆಸ್ಪತ್ರೆಯೊಂದರಿಂದ ಹೊರಬಂದದ್ದೇ, ಸುದ್ದಿಗಾರರು ಮುತ್ತಿಕೊಂಡು ಪ್ರಶ್ನೆಗಳ ಮಳೆ ಸುರಿಸಿದರು. ಆದರೆ ಜಾಹ್ನವಿ ಅವರ ಮಾತುಗಳನ್ನು ಸಂಪೂರ್ಣ ನಿರ್ಲಕ್ಷಿಸಿ, ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಳು. ಹುಷಾರು ಕಣಮ್ಮ, ಈ ಕ್ಯಾಮೆರಾ ವೀರರೇ ನಿನ್ನನ್ನು ಅಭಿಮಾನಿಗಳರೆಗೂ ತಲುಪಿಸುತ್ತಾರೆ, ಇವರು ಕೆರಳಿದರೆ ನಿನ್ನ ಗತಿ ಗೋವಿಂದಾ….. ಅಂತಾರೆ ಹಿತೈಷಿಗಳು.

ಆ್ಯಸ್ಕ್ ಅಲಾಯಾ

Alia_1

 

ಯಾರ ಬಳಿ ಇತ್ತೀಚೆಗೆ ಕೆಲಸದ ಕೊರತೆ ಇದೆಯೋ, ಅವರ ಬಳಿ FB ‌ಚಟುವಟಿಕೆ ಜಾಸ್ತಿ ಇರುತ್ತದೆ. ಟೈಂಪಾಸ್‌ ಮಾಡಲು ಏನಾದರೂ ಬೇಕು ತಾನೇ? ಹೀಗಾಗಿ ಅಲಾಯಾ ತನ್ನ ಅಭಿಮಾನಿಗಳಿಗಾಗಿ FB ‌ನಲ್ಲಿ ಫಿಟ್ನೆಸ್‌ಡಯೆಟಿಂಗ್‌ ಕುರಿತು ಜ್ಞಾನ ಬಿತ್ತರಿಸುತ್ತಾ, ಸಮಯ ಕಳೆಯುತ್ತಿದ್ದಾಳೆ. ಯಾರಿಗೋ ಡೀಟಾಕ್ಸ್ ಕುರಿತು ವಿವರಿಸಿದರೆ, ಇನ್ನಾರಿಗೋ ದೇಹ ತೂಕ ತಗ್ಗಿಸುವ ಬಗ್ಗೆ ಬೋಧಿಸುತ್ತಿರುತ್ತಾಳೆ. ಇದೆಲ್ಲ ಸರಿ ಕಣಮ್ಮ, ಆದಷ್ಟು ಬೇಗ ಸಿನಿಮಾದಲ್ಲಿ ಅವಕಾಶ ಗಿಟ್ಟಿಸೋದು ಹೇಗೆ ಅಂತ ಪ್ರಚಾರ ಮಾಡು ಇಲ್ಲದಿದ್ದರೆ ಬಾಲಿವುಡ್‌ ನಿಂದ ಕಣ್ಮರೆಯಾದ ನಿನ್ನನ್ನು ಜನ ಗೂಗಲ್ ಮಾಡಿ ಹುಡುಕಬೇಕಾಗುತ್ತೆ, ಅಂತಾರೆ ಹಿತೈಷಿಗಳು.

ಬೋಲ್ಡ್ ಮೆಸೇಜ್ನೀಡುವ ಚಿತ್ರ

`ಚಂಡೀಗರ್ ಕರೇ ಆಶಿಕಿ’ ಚಿತ್ರ ಆಶಿಕಿ 1, 2 ಗಳ ಹೊಸ ಸೀಕ್ವೆಲ್ ‌ಆಗಿ ಕ್ರಾಂತಿಕಾರಿ ಹೆಜ್ಜೆ ಇರಿಸಿದೆ. ಇದನ್ನು ಖಂಡಿತಾ ಕಂದಾಚಾರಿಗಳು ಸಹಿಸಲಾರರು, ಹಾಗೆ ಮೂಡಿಬಂದಿದೆ. ಈ ಚಿತ್ರದ ಕಥೆ ಟ್ರಾನ್ಸ್ ಮನ್‌ ಳ ಪ್ರೇಮದ ಕುರಿತಾದುದು. ಅವಳ ಸ್ವಾಭಿಮಾನ, ಪ್ರಗತಿಯ ಕುರಿತಾದ ಕಥೆ. ಚಿತ್ರದ ಮುಖ್ಯ ಮೆಸೇಜ್‌ ಎಂದರೆ, ಮನೆಯ ಕಂದಾಚಾರಿಗಳು ಹಿರಿತನದ ಹೆಸರಲ್ಲಿ ಮಕ್ಕಳ ಮೇಲೆ ತಮ್ಮ ದಬ್ಬಾಳಿಕೆ ನಡೆಸಬಾರದು ಎಂಬುದು. ಇಂದಿನ ಪೀಳಿಗೆ ತಮ್ಮ ಆಯ್ಕೆ ಬಗ್ಗೆ ಸಮರ್ಥರು. ಈಗ ಟ್ರಾನ್ಸ್ ಮನ್‌ ಕುರಿತು ಹೇಳುವುದಾದರೆ, ನಿರ್ದೇಶಕರು ಬಹಳ ತಾಳ್ಮೆಯಿಂದ ಈ ಪಾತ್ರ ಪೋಷಣೆ ಮಾಡಿದ್ದಾರೆ. `ಮಾನ್ವಿ’ಯಾಗಿ ಇಲ್ಲಿ ವಾಣಿ ಎಲ್ಲರ ಮನ ಗೆಲ್ಲುತ್ತಾಳೆ. ಈ ಚಿತ್ರ ಯುವ ಪೀಳಿಗೆಯ ಮನ ಗೆದ್ದದ್ದೇ ಆದರೆ, ಭಗವಾ ಮಂದಿ ತಮ್ಮ ಭಯದ ಅಂಗಡಿಗೆ ಕಲ್ಲು ಬೀಳುತ್ತಲ್ಲ ಎಂದು ಅಂಜುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ