ಬಾಲಿವುಡ್‌ ಚಿತ್ರಗಳಲ್ಲಿ ತನ್ನ ನಟನೆಯ ಸಾಮರ್ಥ್ಯದಿಂದ ಸದಾ ಪ್ರಗತಿ ಪಥದಲ್ಲಿರುವ ನಟಿ ರಿಚಾ ಚಡ್ಡಾ ಈಗಾಗಲೇ `ಗ್ಯಾಂಗ್ಸ್ ಆಫ್‌ ವಾಸಿಪುರ್‌, ಪಕ್ರೆ, ರಾಮಲೀಲಾ, ಲವ್ ಸೋನಿಯಾ, ಮಸಾನ್‌, ಸೆಕ್ಷನ್‌ 375, ಪಂಗಾ……’ ಮುಂತಾದ ತನ್ನ ಚಿತ್ರಗಳಿಂದ ಯಶಸ್ವಿ ಎನಿಸಿದ್ದಾಳೆ. ಇತ್ತೀಚೆಗೆ, ದ. ಭಾರತದ ಐಟಂ ಕ್ವೀನ್‌`ಶಕೀಲಾ’ಳ ಬಯೋಪಿಕ್‌ ಕುರಿತಾಗಿ ಬಹಳ ಚರ್ಚೆಯಲ್ಲಿದ್ದಾಳೆ. ಕನ್ನಡವನ್ನೂ ಒಳಗೊಂಡಂತೆ ಶಕೀಲಾ ದ. ಭಾರತದ ಎಲ್ಲಾ ಭಾಷೆಗಳಲ್ಲೂ ತನ್ನ ಅದ್ಭುತ ಅಡಲ್ಟ್ ಚಿತ್ರಗಳು, ಬಾಡಿ ಮ್ಯಾನರ್ಸ್ ನಿಂದ ಐಟಂ ಧಮಾಕಾ ಎನಿಸಿದ್ದಾಳೆ. ವಿದ್ಯಾ ಬಾಲನ್‌ ಸಿಲ್ಕ್ ಸ್ಮಿತಾ ಕುರಿತಾದ `ಡರ್ಟಿ ಪಿಕ್ಚರ್‌’ ಬಯೋಪಿಕ್‌ ನಂತೆ ಇದು ಧಮಾಕಾ ಮಾಡಲಿದೆಯೇ…. ಕಾದು ನೋಡಬೇಕು. ಹಿಂದಿ ಮಾತ್ರವಲ್ಲದೆ, ದ. ಭಾರತದ ಎಲ್ಲಾ ಭಾಷೆಗಳಲ್ಲೂ ಈ ಚಿತ್ರ ಡಬ್ ಆಗಿರುವುದೇ ಇದರ ಪ್ಲಸ್‌ ಪಾಯಿಂಟ್‌.

ಲಾಕ್ಡೌನ್ಕಾರಣ ಏನೇನು ಬದಲಾವಣೆ ಎದುರಿಸಬೇಕಾಯಿತು?

ಮುಖ್ಯ ಬದಲಾವಣೆ ಅಂದ್ರೆ ಎಲ್ಲಾ ಕೆಲಸಗಳನ್ನೂ ನಾನೇ ಮಾಡಿಕೊಳ್ಳಬೇಕಾಯ್ತು. ನಮ್ಮ ಮನೆಗೆಲಸ ನಾವೇ ಮಾಡಿಕೊಳ್ಳುವುದರಲ್ಲಿ ಸೋಮಾರಿತನ ಅಥವಾ ಪ್ರೆಸ್ಟೀಜ್‌ ಪ್ರಶ್ನೆ ಏನಿಲ್ಲ. ನನ್ನ ಶೂಟಿಂಗ್‌ ಬಿಸಿ ಶೆಡ್ಯೂಲ್ ‌ನಿಂದಾಗಿ ಮನೆಗೆಲಸದವಳು ಅನಿವಾರ್ಯ. ಲಾಕ್‌ ಡೌನ್‌ ಕಾರಣ ಅವಳು ಬಾರದಿದ್ದಾಗ, ಎಲ್ಲಾ ಕೆಲಸ ನಾನೇ ಮಾಡಿಕೊಳ್ಳತೊಡಗಿದೆ. ಅಂಗಡಿಗೆ ಹೋಗಿ ಹಾಲು, ತರಕಾರಿ, ರೇಶನ್‌….. ಇತ್ಯಾದಿ ಎಲ್ಲಾ ನಾನೇ ತರಬೇಕಾದಾಗ ಬದುಕಲು ಇದೆಲ್ಲ ಎಷ್ಟು ಅನಿವಾರ್ಯ ಎಂದು ಈಗೀಗ ಗೊತ್ತಾಗುತ್ತಿದೆ.

ಕಡಿಮೆ ಇದ್ದಾಗ ಅಡ್ಜೆಸ್ಟ್ ಮಾಡಿಕೊಳ್ಳುವುದು ಹೇಗೆ ಎಂದು ಮುಖ್ಯವಾಗಿ ಕಲಿತೆ. ಎಲ್ಲರೂ ಲಾಕ್‌ ಡೌನ್‌ ನಲ್ಲಿ ಫೋನಿನಲ್ಲಿ ಹರಟುತ್ತಿದ್ದರೆ, ನಾನು ಮಾತ್ರ ಅದರಿಂದ ದೂರವೇ ಇರುತ್ತಿದ್ದೆ. ನನ್ನ ಪುಸ್ತಕ ರಚನೆ, ಶಾರ್ಟ್‌ ಫಿಲ್ಮ್ ಚಿತ್ರಕಥೆ, ಕಿಚನ್ ಗಾರ್ಡನಿಂಗ್‌….. ಇತ್ಯಾದಿಗಳಲ್ಲಿಯೇ ಸಮಯ ಕಳೆದೆ. ಪರಿಸರ ಸಂರಕ್ಷಣೆಯ ಕೆಲಸಗಳತ್ತಲೂ ಗಮನ ಹರಿಸುತ್ತಿದ್ದೆ.

. ಭಾರತದ ಮಾಡರ್ನ್ಸಿಲ್ಕ್ ಸ್ಮಿತಾ ಎಂದೇ ಖ್ಯಾತಳಾದ ಐಟಂ ಬಾಂಬ್ಶಕೀಲಾ ಕುರಿತಾದ ಬಯೋಪಿಕ್ಬಗ್ಗೆ ಆಸಕ್ತಿ ಹೇಗೆ ಬಂತು?

ಇದಕ್ಕೆ ಹಲವು ಕಾರಣಗಳಿವೆ. ಶಕೀಲಾಳ ಕಥೆಯಲ್ಲಿ ಇಂಟರೆಸ್ಟಿಂಗ್‌ ಪಾಯಿಂಟ್‌ ಅಂದ್ರೆ, ದಢೂತಿ ವ್ಯಕ್ತಿತ್ವ ಹೊಂದಿದ್ದರೂ ಆಕೆ ಹೇಗೆ ಈ ಮಟ್ಟದಲ್ಲಿ ಐಟಂ ಬಾಂಬ್‌ ಎನಿಸಿ ಖ್ಯಾತಳಾದಳು ಎಂಬುದು ನಿಜಕ್ಕೂ ರೋಚಕ. ಪಕ್ಕಾ ಮುಸ್ಲಿಂ ಕಂದಾಚಾರಿ. ಜೀವನವಿಡೀ ಬುರ್ಖಾ ಇಲ್ಲದೆ ಹೊರಗೆ ಬಂದಳಲ್ಲ. ತನ್ನ ಗ್ಲಾಮರಸ್‌ ಸೆಕ್ಸಿ ಪಾತ್ರಗಳಿಗೂ ಹೆವಿ ಬಾಡಿಗೂ ತೊಂದರೆ ಆಗದಂತೆ ನಿಭಾಯಿಸಿದಳು. ಭಾರೀ ದೇಹವಿದ್ದರೂ ಎಲ್ಲಾ ಚಟುವಟಿಕೆಗಳಲ್ಲೂ ಬಲು ಚುರುಕಾಗಿದ್ದಳು.

ಈ ಪುರುಷ ಪ್ರಧಾನ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾಳೆ, ದಕ್ಷಿಣದ ಎಷ್ಟೋ ಸೂಪರ್‌ ಸ್ಟಾರ್‌ ಗಳ ಜೊತೆ ತೆರೆ ಹಂಚಿಕೊಂಡಿದ್ದಾಳೆ.

ಅಂದಹಾಗೆ 10 ವರ್ಷಗಳ ಹಿಂದೆ ತೆರೆಕಂಡಿದ್ದ ವಿದ್ಯಾಳ `ಡರ್ಟಿ ಪಿಕ್ಚರ್‌’ ಸಿಲ್ಕ್ ಸ್ಮಿತಾಳ ಬಯೋಪಿಕ್ಆಗಿತ್ತು. ಅದಕ್ಕೂ `ಶಕೀಲಾಗೂ ಎಷ್ಟು ವ್ಯತ್ಯಾಸ?

RICHA-CHADDHA-_97A2847

ಎರಡೂ ಚಿತ್ರಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಸಿಲ್ಕ್ ಸ್ಮಿತಾಳ ಸಾವಿನ ನಂತರ ಶಕೀಲಾಳ ಕೆರಿಯರ್‌ ಶುರುವಾಗಿತ್ತು. ಇವರಿಬ್ಬರೂ ಒಂದು ತಮಿಳು ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಅದೇ ಸ್ಮಿತಾಳ ಕೊನೆಯ ಚಿತ್ರ. ನಿಮಗೆ `ಡರ್ಟಿ ಪಿಕ್ಚರ್‌’ ಚಿತ್ರ ನೆನಪಿದ್ದರೆ, ಅದರಲ್ಲಿ ಸ್ಮಿತಾ ಒಬ್ಬ ಹೊಸ ನಟಿಗೆ ತನ್ನ ಅಸುರಕ್ಷತೆ ಬಗ್ಗೆ ಗಾಬರಿಯಾಗಿ, ಕೆನ್ನೆಗೆ ಬಾರಿಸುತ್ತಾಳೆ. ಆ ಪೆಟ್ಟು ಬಿದ್ದದ್ದು ಶಕೀಲಾಳಿಗೆ. ಈ ಘಟನೆ ನಂತರ ಶಕೀಲಾ ಬಹಳ ಚಿಂತೆಗೊಳಗಾದಳು.

ತನ್ನ ಕೆರಿಯರ್‌ ನ್ನು ಅಲ್ಲಿಗೇ ನಿಲ್ಲಿಸಿಬಿಡೋಣ ಎನ್ನುವಷ್ಟು ಟೆನ್ಶನ್‌ ಗೆ ಒಳಗಾದಳು. ಇವರಿಬ್ಬರ ನಡುವೆ ಮುಖ್ಯ ವ್ಯತ್ಯಾಸ ಎಂದರೆ, ಸ್ಮಿತಾ ಸದಾ ಸೂಪರ್‌ ಸ್ಟಾರ್‌ ಆಗಿಯೇ ಮೆರೆಯಲು ಬಯಸುತ್ತಿದ್ದಳು, ಅಷ್ಟು ಖ್ಯಾತಿಯೂ ಅವಳಿಗಿತ್ತು. ಆದರೆ ಶಕೀಲಾಗೆ ಅದೇನೂ ಬೇಕಿರಲಿಲ್ಲ, ಅಲ್ಪತೃಪ್ತಳು. ತನ್ನ ಸಂಪಾದನೆಯಿಂದಲೇ ಮನೆ ನಡೆಯಬೇಕು ಎಂಬ ಟೆನ್ಶನ್‌ ಸದಾ ಅವಳನ್ನು ಕಾಡುತ್ತಿತ್ತು.

ಶಕೀಲಾಳ ಜೀವನದಲ್ಲಿ 2 ಘಟ್ಟಗಳಿವೆ. ಒಂದು ಚಿತ್ರೋದ್ಯಮ ಅವಳನ್ನು ಬಳಸಿಕೊಂಡ ಪರಿ, ಮತ್ತೊಂದು, ಅವಳ ಕುಟುಂಬದವರು ಅವಳನ್ನು ಶೋಷಿಸಿದ ಪರಿ. ಚಿತ್ರದಲ್ಲಿ ಎರಡನ್ನೂ ಏಕೆ ತೋರಿಸಲಾಗಿದೆ?

ಈ ಚಿತ್ರರಂಗ ಅವಳನ್ನು ಹೇಗೆ ನಡೆಸಿಕೊಂಡಿತು ಎಂಬುದನ್ನು ಈ ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಇತ್ತೀಚೆಗೆ ಆಕೆ ಚಿತ್ರೋದ್ಯಮದಿಂದ ಬ್ಯಾನ್ಡ್ ಎಂದೇ ಹೇಳಬೇಕು.

ಇದಕ್ಕೆ ಮುಖ್ಯ ಕಾರಣ, ಶಕೀಲಾ ದ. ಭಾರತದ ಒಬ್ಬ ಸೂಪರ್‌ ಸ್ಟಾರ್‌ ಹೀರೋಗೆ ತಾನು ಅಷ್ಟೆಲ್ಲ ಕಾಂಪ್ರಮೈಸ್‌ ಆಗಲು ಸಾಧ್ಯವೇ ಇಲ್ಲ ಎಂದು ಖಂಡಿಸಿ ಹೇಳಿದ್ದು, ಇನ್ನು ಅವಳ ಕುಟುಂಬದವರ ಶೋಷಣೆ ಎಂದರೆ, ಅದೆಲ್ಲ ಅವರ ಬಡತನ, ಪರಿಸ್ಥಿತಿಗಳಿಂದ ಬಂದದ್ದು. ಅವಳ ತಾಯಿ, ತಂಗಿ ಇಬ್ಬರೂ ಶಕೀಲಾಳ ಜೀವನದಲ್ಲಿ ಪ್ರಮುಖರು. ಶಕೀಲಾ ತಾಯಿ ಒಬ್ಬ ಜೂ. ಆರ್ಟಿಸ್ಟ್. ಹೈಸ್ಕೂಲ್ ‌ದಾಟುವ ಮೊದಲೇ 14-15ರ ವಯಸ್ಸಿನಲ್ಲಿ ಅವಳನ್ನು ತಾಯಿ ಬಲವಂತವಾಗಿ ಸಿನಿಮಾಗೆ ಎಳೆತಂದರು.

ತಾಯಿ ತನ್ನಿಂದ ಎಂಥ ಪಾತ್ರ ಮಾಡಿಸಲಿದ್ದಾರೆ ಎಂಬುದೂ ಗೊತ್ತಿಲ್ಲದ ಸ್ಥಿತಿ ಅವಳದು. ಅವಳಿಂದ ಅಂಥ ಐಟಂ ಸಾಂಗ್ ಮಾಡಿಸಲು ತಾಯಿಯೇ ಅವಳಿಗೆ ಹೆಂಡ ಕುಡಿಸಿದ್ದರು. ಕ್ರಮೇಣ ಹೆಂಡದ ದುಶ್ಚಟ ಅಂಟಿಕೊಂಡಿತು. ಆಗ ಮಾತ್ರ ಅವಳು ಅಂಥ ಸೆಕ್ಸೀ ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ಸಾಧ್ಯವಾಗುತ್ತಿತ್ತು. ದಕ್ಷಿಣದಲ್ಲಿ ಈಗಲೂ ಪೆಟಿಕೋಟ್‌, ಬ್ಲೌಸ್‌ ಇದ್ದರೆ ಸೆಕ್ಸೀ ದೃಶ್ಯ ಎನಿಸುತ್ತದೆ. ಆದರೆ 16 ದಾಟಿರದ ಹುಡುಗಿ ಮೇಲೆ ಇದೆಲ್ಲ ಎಂಥ ವಿಕೃತ ಪ್ರಭಾವ ಬೀರಿರಬಹುದು ಎಂದು ನಾವು ಊಹಿಸಬಹುದು.

richa-chadda

ಕ್ರಮೇಣ ಅವಳದು ಬಹಳ ದುಃಸ್ಥಿತಿಯಾಯಿತು. ಎಲ್ಲಾ ಮರೆಯಲು ಸಿಗರೇಟ್‌, ಡ್ರಗ್ಸ್ ಚಟ ಸಹ ಅಂಟಿಸಿಕೊಂಡಳು. ಮುಂದೆ ಡಿಪ್ರೆಶನ್‌ ಗೂ ಜಾರಿದಳು. ಕಾಯಬೇಕಾದ ಬೇಲಿಯೇ ಹೊಲ ಮೇಯ್ದರೆ ಯಾರನ್ನು ನಂಬುವುದು? ಇದನ್ನೇ ನಮ್ಮ ಈ ಚಿತ್ರದಲ್ಲಿ ನೇರ ತೋರಿಸಲಾಗಿದೆ, ಶಕೀಲಾಳ ಕ್ರೂರ ತಾಯಿಯ ಮುಖ ಇಲ್ಲಿ ಅನಾವರಣಗೊಂಡಿದೆ.

ನಮ್ಮ ಭಾರತೀಯ ಚಿತ್ರೋದ್ಯಮದಲ್ಲಿ ಎಲ್ಲೆಡೆ ಹೆಣ್ಣುಮಕ್ಕಳ ಪರಿಸ್ಥಿತಿ ಹೀಗೇ ಇದೆಯೇ?

ಇಲ್ಲ, ಈಗೆಲ್ಲ ಇಷ್ಟು ಹೀನಾಯ ಸ್ಥಿತಿ ಇಲ್ಲ. ಆದರೆ `ಶಕೀಲಾ’ ಚಿತ್ರ 90ರ ದಶಕದ ತಮಿಳು, ಮಲೆಯಾಳಂ ಚಿತ್ರರಂಗದ್ದು. ನನ್ನ ಅಭಿಪ್ರಾಯದಲ್ಲಿ, ಆಗಿಗೂ ಈಗಿಗೂ ಬಹಳ ಮಾರ್ಪಡುಗಳಾಗಿವೆ. ಎಲ್ಲರಿಗೂ ಹೀಗೇ ಆಗುತ್ತದೆ ಎಂದು ಖಂಡಿತಾ ಹೇಳಲಾಗದು. ಅದು ಆಯಾ ನಟಿಯ ಅಗತ್ಯ, ಅನಿವಾರ್ಯತೆ, ಮನಸ್ಥಿತಿ ಆಧರಿಸಿದೆ. ಈಗ ಅಂಥ ಹಿಂಸೆಗಳಿಲ್ಲ ಎಂದೇ ಹೇಳಬಹುದು. ಈಗಿನ ಪರಿಸ್ಥಿತಿಯಲ್ಲಿ ನಿರ್ಮಾಪಕ ನಿರ್ದೇಶಕರ ದೃಷ್ಟಿ ಬಹಳ ಬದಲಾಗಿದೆ ಎಂದೇ ಹೇಳಬಹುದು. `ಮೀ ಟೂ’ ಹಗರಣಗಳ ನಂತರ ಯಾರೂ ತಾವಾಗಿ ತಪ್ಪೆಸಗಲು ಮುಂದಾಗುವುದಿಲ್ಲ.

ಸದ್ಯದ ಚಿತ್ರೋದ್ಯಮದಲ್ಲಿ ಹೆಣ್ಣಿನ ಜೊತೆ ಉತ್ತಮವಾಗಿ ವ್ಯವಹರಿಸಲಾಗುತ್ತದೆ ಅಂತೀಯಾ? ವುಮನ್ಎಂಪವರ್ಮೆಂಟ್ಎಷ್ಟು ಮಾತ್ರ ಸಕ್ರಿಯಾಗಿದೆ?

ಹಿಂದಿನ ದಶಕಗಳಿಗೆ ಹೋಲಿಸಿದರೆ ಸದ್ಯದ ಪರಿಸ್ಥಿತಿ ಎಷ್ಟೋ ಸುಧಾರಿಸಿದೆ ಎಂದೇ ಹೇಳಬೇಕು. ಆದರೆ ಹೆಣ್ಣು ತನ್ನ ಎಚ್ಚರದಲ್ಲಿ ತಾನಿರಬೇಕು! ಸಿನಿಮಾಗೆ ಇಳಿದ ಮೇಲೆ ಕೆರಿಯರ್‌ ಉಳಿಸಿಕೊಳ್ಳಲು ಕಾಂಪ್ರಮೈಸಿಂಗ್‌ ಅನಿವಾರ್ಯ ಎಂಬುದೂ ನಿಜ. ಬದಲಾವಣೆ ಎಂಬುದು ಎಲ್ಲರ ಮನದಲ್ಲಿ ಪ್ರಾಕ್ಟಿಕಲ್ ಆಗಿ ಮೂಡಬೇಕು. ವಾಸ್ತವದಲ್ಲಿ ಫಿಲ್ಮ್ ಇಂಡಸ್ಟ್ರಿಯಲ್ಲಿ ಕೇವಲ ಕಲಾವಿದರು ಮಾತ್ರವಲ್ಲ, ಜೊತೆಗೆ ಪ್ರೊಡಕ್ಷನ್‌, ನಿರ್ದೇಶನ, ಬರವಣಿಗೆ, ಫೋಟೋಗ್ರಫಿ, ಸಂಗೀತ ಸಹಿತ ಅನೇಕ ವಿಭಾಗಗಳಿವೆ. ಈ ಎಲ್ಲಾ ವಿಭಾಗಗಳ್ಲೂ ಹೆಣ್ಣು ಇಂದು ಮಿಂಚುತ್ತಿದ್ದಾಳೆ. ಇದರ ಪರಿಣಾಮವನ್ನು ಹೊಸ ಚಿತ್ರಗಳಲ್ಲಿ ಗಮನಿಸಬಹುದು.

ಅಮೆಝಾನ್OTT ಅನ್ಪಾಸ್ಡ್  `ಅಪಾರ್ಟ್ಮೆಂಟ್‌’ ಲಘು ಚಿತ್ರದಲ್ಲಿ ನಟಿಸಿದ್ದೀಯ. ಇದರ ಬಗ್ಗೆ ಏನಾದರೂ ಹೇಳಲು ಬಯಸುವೆಯಾ?

ಈ ಚಿತ್ರದ ಮೂಲಕ ನಾವು ಸಾಮಾಜಿಕ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಹೆಣ್ಣು ಹಿಮ್ಮೆಟ್ಟಬಾರದು ಎಂದೇ ತೋರಿಸಿದ್ದೇವೆ. ಲಘು ಚಿತ್ರ ಎಂಬುದೇನೋ ನಿಜ, ಆದರೆ ಇದರ ನಿರ್ಮಾಪಕ ನಿರ್ದೇಶಕರಾದ ನಿಖಿಲ್ ಅಡ್ವಾಣಿಯಂಥ ಪ್ರತಿಭಾವಂತರ ಜೊತೆ ನಾನು ಕೆಲಸ ಕಲಿಯಬಯಸುವೆ. ಹೀಗಾಗಿ ಇದನ್ನು ಶಾರ್ಟ್‌ ಫಿಲ್ಮ್ ಎಂದು ನಿರ್ಲಕ್ಷಿಸಲಿಲ್ಲ. ನುರಿತ ನಿರ್ದೇಶಕರ ಈ ಪ್ರಯೋಗದಲ್ಲಿ ನನ್ನದೂ ಪಾಲಿರಲಿ ಎಂದು ಭಾವಿಸಿದೆ, ಜೊತೆಗೆ ಲಾಕ್‌ ಡೌನ್‌ ನಲ್ಲಿ ಎಲ್ಲರ ಆರ್ಥಿಕ ಸ್ಥಿತಿ ಬರ್ಬಾದಾಗಿತ್ತು!

ನಿನ್ನ ಮುಂದಿನ `ಲಾಹೋರ್ಕಾನ್ಛಿಡೆನ್ಶಿಯಲ್ಚಿತ್ರದ ಬಗ್ಗೆ ಹೇಳು?

ಹೌದು, ಇದು ಒಬ್ಬ ರಾ ಏಜೆಂಟ್‌ ಅನನ್ಯಾಳ ಕ್ರಾಸ್‌ ಬಾರ್ಡರ್‌ ಪ್ರೇಮಕಥೆ. ನಿರ್ದೇಶಕ ಮೃಣಾಲ್ ಕೊಹ್ಲಿ, `ಫನಾ’ ನಂತರ ಈ ಉತ್ತಮ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಲಾಕ್‌ ಡೌನ್‌ ರಗಳೆ ನಂತರ ನಾನು ಈ ಚಿತ್ರದಲ್ಲೇ ಮೊದಲು ಶೂಟ್‌ ಮಾಡಿದ್ದು. ಆದಷ್ಟು ಬೇಗ ಶೂಟಿಂಗ್‌ ಗೆ ಮರಳಬೇಕು ಎಂಬ ಅತಿ ಉತ್ಸಾಹವಿತ್ತು. ಲಾಕ್‌ ಡೌನ್‌ ಎಲ್ಲರಿಗೂ ಹಣದ ಅಭಾವ ಎಂದರೇನೆಂದು ಕಲಿಸಿದೆ. ನಾನು ಶೂಟಿಂಗ್‌ ಸ್ಪಾಟ್‌ ತಲುಪಿದಾಗ ಎಲ್ಲಾ ತಾಂತ್ರಿಕ ವರ್ಗದವರೂ ನನ್ನ ಆಯ್ಕೆ ಮೆಚ್ಚಿದರು. ನಾನು ಈ ಪಾತ್ರ ಒಪ್ಪಿದ್ದರಿಂದ ಅವರಿಗೆಲ್ಲ ಒಟ್ಟಿಗೆ ಕೆಲಸ ದೊರಕಿತು!

ಕೊರೋನಾ ಕಾರಣ ನಿನ್ನ ಮದುವೆ ಪೋಸ್ಟ್ ಪೋನ್ಆಯ್ತು. ಮುಂದೆ ನಿನ್ನ ಪ್ಲಾನ್ಏನು?

ನಾನೇನೋ ಬೇಗ ಮದುವೆ ಆಗಬೇಕು ಅಂತ್ಲೇ ಇದ್ದೀನಿ. ಆದರೆ ವ್ಯಾಕ್ಸಿನೇಶನ್‌ ಮುಗಿದು, ಕೈಲಿರುವ ಚಿತ್ರಗಳು ಕಂಪ್ಲೀಟ್‌ ಆಗಲಿ. ಆಗ ಲಾಂಗ್‌ ಬ್ರೇಕ್‌ ಪಡೆಯಬಹುದೆಂದು ಕಾಯುತ್ತಿದ್ದೇನೆ. ಅದೂ ಅಲ್ಲದೆ ಯಾರೂ ಅತಿಥಿಗಳಿಲ್ಲದೆ ಕೇವಲ `ಕೆಲವೇ’ ಮಂದಿ ನಡುವೆ ಮದುವೆ ಆಗಲು ನಮ್ಮಿಬ್ಬರಿಗೂ ಇಷ್ಟವಿಲ್ಲ.

ನೀನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲಿಂಗ್ಫೇಸ್ಮಾಡ್ತಾ ಇರ್ತೀಯ. ಹೀಗೇಕೆ?

ಈ ಟ್ರೋಲಿಗರು ಇರುವುದೇ ಇಂಥ ಕೆಲಸಕ್ಕಾಗಿ! ಇದನ್ನೇ ದೊಡ್ಡ ನೌಕರಿಯಾಗಿ ಸ್ವೀಕರಿಸಿ, ಮೇಲಿನವರ ನಿರ್ದೇಶನದಂತೆ ಟ್ರೋಲಿಂಗ್‌ ಮಾಡುವುದು ಅವರ ವೃತ್ತಿ. ಹೀಗಾಗಿ ನಾನು ಟ್ರೋಲಿಂಗ್‌ ನ್ನು ಬಹಳ ಸೀರಿಯಸ್‌ ಆಗಿ ತೆಗೆದುಕೊಳ್ಳುವುದಿಲ್ಲ. ಕೊರೋನಾ ಮಹಾಮಾರಿಯ ಕಾಟದ ಮಧ್ಯೆ ಈ ನಿರುದ್ಯೋಗದ ಸಮಸ್ಯೆ ಹೀಗಾದರೂ ನಿವಾರಣೆಯಾಗಿ ಕೆಲವರಿಗಾದರೂ ಸಂಪಾದನೆ ಆಗುತ್ತಿದ್ದರೆ, ಇರಲಿ ಬಿಡಿ…. ಐ ಡೋಂಟ್‌ ಕೇರ್‌ ಫಾರ್‌ ಟ್ರೋಲಿಂಗ್‌! ಬೇರೆ ಒಳ್ಳೆಯ ಕಡೆ ನೌಕರಿ ಸಿಕ್ಕಾಗ ಅವರು ಈ ಕೆಲಸ ಬಿಟ್ಟುಬಿಡ್ತಾರೆ ಅಂದುಕೊಳ್ತೀನಿ. `ನಿಂದಕರಿರಬೇಕು… ಹಂದಿ ಹಾಗೆ ನಿಂದಕರಿರಬೇಕು!’ ಎಂಬ ದಾಸವಾಣಿ ಮರೆಯಲಾರೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ