*ಮಗಳು*
*ಮಗಳು* ಈ ಹೆಸರಲ್ಲಿ ಎಂಥ ಸುಖ, ಎಂಥ ಅದ್ಭುತ ಜೀವನ ರಹಸ್ಯವೆಂದರೆ, ದೇವರು ಯಾವಾಗ ತನ್ನ ಭಕ್ತನ ಮೇಲೆ ತುಂಬಾ ಹೆಚ್ಚು ಸಂತೃಪ್ತಗೊಂಡಾಗ ಅತೀ ಸಂತೋಷಗೊಂಡಾಗ ಭಕ್ತನಿಗೆ ಮಗಳನ್ನು ಪಡೆಯುವ ಸಂತಾನ ಭಾಗ್ಯದ ವರ ಕೊಡುತ್ತಾನೆ.
ಮಗಳು ಮದುವೆ ಮಂಟಪದಿಂದ ಅತ್ತೆಯ ಮನೆಗೆ ಹೋಗುತ್ತಾಳೆ, ಆಗ ಆಕೆ ಬೇರೆಯವಳಾಗಿ ಕಾಣುವುದಿಲ್ಲ,
ಆದರೆ ಆಕೆ *ತವರುಮನೆಗೆ ಬಂದಾಗ ಮುಖ ತೊಳೆದು ಎದುರಿಗೇ ಇರುವ ಟವೆಲ್ ನ ಬದಲಿಗೆ ತನ್ನ ಬ್ಯಾಗಿನಲ್ಲಿರುವ ಕರವಸ್ತ್ರದಿಂದ ಮುಖ ಒರೆಸಿಕೊಂಡಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ*
*ಆಕೆ ಅಡುಗೆ ಮನೆಯ ಬಾಗಿಲಲ್ಲಿ ಅಪರಿಚಿತಳಾಗಿ ನಿಂತಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ* ಅವಳು *ವಾಷಿಂಗ್ ಮಷೀನ್ ಬಳಸಲೇ, ಫ್ಯಾನ್ ಹಾಕಲೇ ಎಂದಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ.*
*ಟೇಬಲ್ ಮೇಲೆ ಊಟ ಬಡಿಸಿದ್ದಾಗಲೂ ಆಕೆ ಮುಚ್ಚಳ ತೆಗೆದು ನೋಡುವುದಿಲ್ಲ, ಆಗ ಆಕೆ ಬೇರೆಯವಳಾಗಿ ಕಾಣುತ್ತಾಳೆ.* *ದುಡ್ಡು ಎಣಿಸುತ್ತಿದ್ದಾಗ ತನ್ನ ದೃಷ್ಟಿಯನ್ನು ಆಕಡೆ ಈಕಡೆ ತಿರುಗಿಸಿದಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ*.
*ಮಾತುಮಾತಿಗೂ ತಮಾಷೆ ಮಾಡಿ ನಗುವ ನಾಟಕ ಮಾಡುತ್ತಿರುವಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ*.
ಹಾಗೂ ಮರಳಿ ಹೋಗುವಾಗ ಮತ್ತೆ ಯಾವಾಗ ಬರ್ತೀಯಾ, ಎಂದಾಗ *ನೋಡೋಣ-ಯಾವಾಗ ಬರಲು ಆಗುತ್ತೋ…. ಎಂದು ಉತ್ತರ ನೀಡುವಾಗ ಆಕೆ ಶಾಶ್ವತವಾಗಿ ಬೇರೆಯವಳಾಗಿಬಿಟ್ಟಳು ಎಂದೆನಿಸುತ್ತದೆ.*
ಆದರೆ…..ಆಕೆ ಗಾಡಿಯಲ್ಲಿ ಕುಳಿತು, *ಮೌನವಾಗಿ ತನ್ನ ಕಣ್ಣುಗಳನ್ನು ಪಕ್ಕಕ್ಕೆ ತಿರುಗಿಸಿ-ಕಣ್ಣೀರು ವರೆಸುವ ಪ್ರಯತ್ನ ಮಾಡುವಾಗ* ಆ ಬೇರೆತನ ಒಂದೇ ಕ್ಷಣದಲ್ಲಿ ಹರಿದು ಹೋಗಿಬಿಡುತ್ತದೆ
*ಮೊದಲು ಆಕೆ ಸೆರಗಿನಲ್ಲಿ ಅಡಗಿಕೊಳ್ಳುತ್ತಿದ್ದಳು, ಈಗ ಬೇರೆಯವರನ್ನು ಸೆರಗಿನಲ್ಲಿ ಅಡಗಿಸಿಕೊಳ್ಳುತ್ತಾಳೆ.*
*ಮೊದಲು ಆಕೆ ಬೆರಳು ಸುಟ್ಟುಹೋದರೂ ಇಡೀ ಮನೆಯವರನ್ನು ತನ್ನತ್ತ ಗಮನ ಸೆಳೆಯುತ್ತಿದ್ದಳು…. ಈಗ ಕೈ ಸುಟ್ಟುಹೋದರೂ ಅಡುಗೆ ಮಾಡುತ್ತಾಳೆ,*
*ಮೊದಲು ಚಿಕ್ಕ ಚಿಕ್ಕ ಮಾತಿಗೂ ಅತ್ತುಬಿಡುತ್ತಿದ್ದಳು, ಈಗ ದೊಡ್ಡ ದೊಡ್ಡ ಮಾತುಗಳನ್ನೂ ಹೃದಯಲ್ಲಿ ಮುಚ್ಚಿಡುತ್ತಾಳೆ,* *ಮೊದಲು ಸಹೋದರ, ಸ್ನೇಹಿತರ ಜೊತೆಗೆ ಜಗಳ ಮಾಡುತ್ತಿದ್ದಳು, ಈಗ ಅವರ ಜೊತೆಗೆ ಮಾತನಾಡಲು ಕಾತರಿಸುತ್ತಾಳೆ*
*ಅಮ್ಮಾ, ಅಮ್ಮಾ, ಎಂದು ಮನೆಯ ತುಂಬಾ ಓಡಾಡುತ್ತಿದ್ದವಳು, ಈಗ ಅಮ್ಮಾ ಎಂಬ ಶಬ್ದ ಕೇಳಿ ನಿಧಾನವಾಗಿ ಮರುಗುತ್ತಾ ಮುಗುಳ್ನಗುತ್ತಾಳೆ,*
ಮೊದಲು *ಹತ್ತು ಗಂಟೆಗೆ ಎದ್ದರೂ ಬೇಗ ಎದ್ದುಬಿಟ್ಟೆ, ಎಂದು ಹೇಳುತ್ತಿದ್ದವಳು ಈಗ ಏಳು ಗಂಟೆಗೆ ಎದ್ದರೂ ತಡವಾಯಿತು ಎಂದುಕೊಳ್ಳುತ್ತಾಳೆ*
*ಆಗ ಇಡೀ ದಿನ ಖಾಲಿ ಇದ್ದರೂ ಬಿಜಿ ಇದ್ದೇನೆ ಎಂದು ಹೇಳುತ್ತಿದ್ದಳು….ಈಗ ಇಡೀ ದಿನ ಕೆಲಸ ಮಾಡಿದರೂ ಕೈಲಾಗದವಳು ಅನಿಸಿಕೊಳ್ಳುತ್ತಾಳೆ,* *ಒಂದು ಪರೀಕ್ಷೆಗೋಸ್ಕರ ಇಡೀ ವರ್ಷ ಓದುತ್ತಿದ್ದವಳು, ಈಗ ಅಣಿಯಾಗದೆಯೇ ಪ್ರತಿದಿನ ಪರೀಕ್ಷೆ ಎದುರಿಸುತ್ತಾಳೆ,* ಎಂಥ ವೇದನೆ ತನ್ನೊಳಗೆ ಬಚ್ಚಿಟ್ಟುಕೊಂಡ ಸಹನಾ- ಮೂರ್ತಿ ಇವಳಲ್ಲವೆ….
ಈ ಮನೆಯ *ಎಲ್ಲರ ಮುದ್ದಿನ ಮಗಳು ಯಾವಾಗ ತಾಯಿಯಾದಳೋ…ಯಾವಾಗ ಮಗಳ ಪಯಣ ತಾಯಿಯ ಪಯಣದಲ್ಲಿ ಬದಲಾಯಿತೋ ಗೊತ್ತಿಲ್ಲ*
ಯಾವಾಗ ಮಗಳು ದೊಡ್ಡವಳಾಗಿಬಿಟ್ಟಳೋ ಗೊತ್ತಿಲ್ಲ…
ಅದಕ್ಕೇ ಹೇಳೋದು
ಮಗಳೆಂದರೆ… *ವರ್ತಮಾನ* ಮಗಳೆಂದರೆ *ಭವಿಷ್ಯ* ಮಗಳು ಎಂದರೆ ಬೆಲೆ ಕಟ್ಟಲಾಗದು ದೇವರ ಸೃಷ್ಟಿ.
*ಮಗಳು ಎಂದರೆ ಮುಗ್ಧೆ, ಮಗಳು ಎಂದರೆ ಪ್ರೀತಿ, ಆದರೂ ಮಗಳು ಏಕೆ ಈಗಿನವರಿಗೆಲ್ಲ ಭಾರ ಎಂದು ಕಾಣುತ್ತಾಳೆ…. ಮಗಳೇ ಅಲ್ಲವೇ ದೇವೀರೂಪದಲ್ಲಿ ಪೂಜಿಸೋದು….
ಮಗಳೇ ಅಲ್ಲವೇ ನಮ್ಮ ಪ್ರವಾದಿಗಳ ವಂಶವನ್ನು ಬೆಳೆಸಲು ಕಾರಣವಾದದ್ದು.
ತಂದೆಯ ನಿಜವಾದ ಆಪಾದ್ಭಾಂದವಳೇ ಈ ಮಗಳು ಅದಕ್ಕೇ… *ಮಗಳು ಭಾರ ಅಲ್ಲ ಮಗಳು ಮನೆಯ ಲಕ್ಷ್ಮಿ-ಮಗಳು ಮನೆಯ ಸಮೃದ್ಧಿ-ಮನೆಯ ಕಾರುಣ್ಯ ಮಗಳಿಗೆ ಗೌರವ ಕೊಡಿ ಮಗಳನ್ನು ಮುದ್ದಿಸಿ-ಮಮತೆಯಿಂದ ಪ್ರೀತಿಸಿ*
…..
*One Daughter is equal to millions of Stars…..this is dedicated to all parents having those millions of stars*