*ಕವನ: ಬಿಡುಗಡೆ*

 

ಸೂತ್ರದ ಗೊಂಬೆಯೇನು ನಾನು?

ನನಗೂ ಮನಸೆಂಬುದಿಲ್ಲವೇನು?

ತವರಿನಟ್ಟದಲಿ ಕನಸೆಲ್ಲ ಕಟ್ಟಿಟ್ಟು

ನಿನ್ನೆಡೆಗೆ ಬಂದೆನು ಅಡಿಯನಿಟ್ಟು

 

ಕಣ್ಣಂಚ ಕಂಬನಿ ಅಲ್ಲಲ್ಲೇ ಒರೆಸಿ

ಬಾರದ ನಗುವ ತುಟಿಯೊಳಿರಿಸಿ

ನೀ ಕುಣಿಸಿದಂತೆ ಕುಣಿದೆನು ನಲ್ಲ

ಥೈ ಥೈ ತಕ ಥೈ...

 

ಕುಣಿವ ಹೆಜ್ಜೆಯು ಸೋತಿಹುದು

ತೊಟ್ಟ ಗೆಜ್ಜೆಯೂ  ಸವೆದಿಹುದು

ಬಿಡುಗಡೆ ಬಯಸಿದೆ ಕಣ ಕಣವು

ಮುಗಿದಿದೆ ದೊರೆ ನಮ್ಮಋಣವು

 

ಬಹುಕಾಲ ಬಾಳಿದೆನು ನೆರಳಾಗಿ

ತುಸುಕಾಲ  ಬಾಳಲೇ ನನಗಾಗಿ?

ಮಾತಿಂದ ನೀ ಎನ್ನ ಜರಿಯದಿರು

ಕಣ್ಣಿಂದಲೇ ಇರಿದೆನ್ನ ಕೊಲ್ಲದಿರು

 

ಕಳುಹು ಬಾರ ಬಾಗಿಲಿಗೆ ಬಂದು.

ಬಂಧ ಮುಕ್ತವಾಗಿಸು ನೀ ಇಂದು...!

 

ಜಾನಕಿ ರಾವ್.

 

 

ಕಥೆ

*ನನಗಾಗಿ ನಾನು*

 

ಜಾಹ್ನವಿ!!! ಸೂರ್ಯ ನೆತ್ತಿಯ ಮೇಲೆ ಬಂದರೂ ಇನ್ನು ಮಲಗಿದೀಯಲ್ಲ ಏಳು...!  ನಾಳೆ ನಿನ್ನ ನೋಡಲು ವರನ ಕಡೆಯವರು ಬರ್ತಿದಾರೆ ತುಂಬಾ ಒಳ್ಳೆಯ ಸಂಬಂಧವಂತೆ ಜೋಯಿಸರು ಹೇಳ್ತಿದ್ರು.

ಅಮ್ಮಾ ಏನಮ್ಮಾ ನಿಂದು ಬೆಳಿಗ್ಗೆ ಬೆಳಿಗ್ಗೆನೇ...!?

ಪುಟ್ಟ ,ಈ ಸಂಬಂಧ ಕುದುರಿದರೆ ಶುಭಸ್ಯಶೀಘ್ರಂ ಅಂತ ಮದುವೆ ಕಾರ್ಯವೊಂದು ನೆರವೇರಲಿ ಅಷ್ಟು ಸಾಕು ನಮ್ಮ ಮನಸಿಗೂ ನೆಮ್ಮದಿ ಕಣಮ್ಮಾ...! ಅಂತ ಮನದ ಮಾತುಗಳನ್ನು ಹೇಳುತ್ತ ಒಂದು ಕ್ಷಣ ಭಾವುಕತೆ ಆವರಿಸಿತು ಅಚಲಾಳಿಗೆ.

ಅಷ್ಟರಲ್ಲಿ ಅಚಲಾ...! ಅಚಲಾ ಅಂತ ಕರೆಯುತ್ತಲೇ ಮನೆಯೊಳಗೆ ಬಂದ ಅಶೋಕ ನೋಡು ನೀನು ಹೇಳಿದ ಸಾಮಾನುಗಳನ್ನೆಲ್ಲ ತಂದಿದೀನಿ...ಅಂತ ಹೇಳುತ್ತ ಅರೇ ಏನಾಯ್ತು ಯಾಕೀ ಕಣ್ಣೀರು ಅಂತ ಗಾಬರಿಯಿಂದ ಕೇಳಿದಾಗ,

ಏನಿಲ್ಲ ಏನಿಲ್ಲ ರೀ ಅಂತ ಕಣ್ಣೀರ ಮರೆಮಾಚಿ ಕೈಯಲ್ಲಿನ ಚೀಲ ತೆಗೆದುಕೊಂಡು ಒಳನಡೆದಳು ಅಚಲ.

ಸಿಹಿಗನಸಿನ ಲೋಕದಲ್ಲಿ ವಿಹರಿಸುತ್ತ ಮಲಗಿರುವ ಮಗಳ ತಲೆ ಮೇಲೆ ಪ್ರೀತಿಯಿಂದ ಕೈ ಸವರುತ್ತ ಎಷ್ಟು ಬೇಗ ದೊಡ್ಡವಳಾಗಿ ಬಿಟ್ಟೆ ಕಂದ ಎನ್ನುತ್ತಲೇ,

ತಂದೆಯ ಬೆಚ್ಚನೆಯ ಸ್ಪರ್ಶದಿಂದ ಥಟ್ಟನೆ ಎ‌ಚ್ಚೆತ್ತ ಜಾಹ್ನವಿ ಅಪ್ಪ ನೋಡಿಪ್ಪ ಈ ಅಮ್ಮಂದು ಯಾವಾಗಲೂ ಇದೇ ಗೋಳು ನನಗಂತೂ ಅರ್ಥವಾಗ್ತಿಲ್ಲ...!

Bharatanatyam-Costumes

ಯಾವುದೋ ತುಂಬಾ ಒಳ್ಳೆಯ ಸಂಬಂಧವಂತೆ ಜೋಯಿಸರು ಹೇಳಿದ್ರಂತೆ...! ಇವಳದ್ದು ಮತ್ತದೇ ರಾಗ ಶುರುವಾಯ್ತು. ಅಪ್ಪ ನನಗೆ ಇಷ್ಟು ಬೇಗ ಮದುವೆ ಮಾಡಿಕೊಳ್ಳುವ ಆಸೆ ಖಂಡಿತ ಇಲ್ಲ,ನೀವಾದರೂ ನನ್ನ ಮನದ ಆಸೆಯನು ಅರ್ಥ ಮಾಡ್ಕೋಳ್ಳಿ ಅಪ್ಪ ಪ್ಲೀಸ್...!

ಜಾಹ್ನವಿ ನನ್ನ ಮಾತು ಸಮಾಧಾನದಿಂದ ಕೇಳು ಕಂದಾ... ! ನೀನು ಇಂಜಿನಿಯರಿಂಗ್ ಮುಗಿಸಿ ಕೆಲಸ ಸಿಕ್ಕ ಮೇಲೆ ಮದುವೆ ಮಾಡಬೇಕೆಂಬುದು ನಿಮ್ಮ ಅಮ್ಮನದಷ್ಟೇ ಅಲ್ಲ ನನ್ನ ಹೊಂಗನಸು ಕೂಡ.

ದೇವರ ದಯೆಯಿಂದ ಇಷ್ಟು ಒಳ್ಳೆಯ ಸಂಬಂಧ ನಮ್ಮ ಮನೆಗೇ ಹುಡುಕಿಕೊಂಡು ಬಂದಿರುವಾಗ ಬೇಡ ಅನ್ನುವುದು ಸರಿಯಲ್ಲ ಪುಟ್ಟ, ನೋಡಿ ಪರಸ್ಪರ ಒಪ್ಪಿಗೆಯಾದರೆ ಮಾತ್ರ ಮುಂದುವರೆಯೋಣ...! ಇಲ್ಲದಿದ್ದರೆ ಬೇಡಾ ಓಕೆ ನಾ.. ಅಂತ ರಮಿಸಿದಾಗ,

ಒಲ್ಲದ ಮನಸ್ಸಿನಿಂದಲೇ ಅಪ್ಪನ ಕೈ ಕುಲುಕಿ ಸರಿಯೆಂದು ಎದ್ದು ಬಾತ್ ರೂಮಿನತ್ತ ಹೆಜ್ಜೆ ಹಾಕಿದಳು ಜಾಹ್ನವಿ.

ಮರುದಿನ ಬೆಳಿಗ್ಗೆಯೇ ಮನೆಯಲ್ಲಿ ಸಂಭ್ರಮದ ವಾತಾವರಣ...! ಅಜ್ಜ ಅಜ್ಜಿಯರ ಜೊತೆಗೆ ಸೋದರ ಮಾವನ ಪರಿವಾರವೂ ಬಂದಿಳಿದಾಗ ಮನೆಯು ನಿಜಕ್ಕೂ ಮದುವೆ ಮನೆಯಂತೆ ಕಂಗೊಳಿಸುತ್ತಿತ್ತು.ಅಂತೂ ಇಂತೂ ಮನೆಯವರೆಲ್ಲರ ಒತ್ತಾಯದ ಮೇರೆಗೆ ಅವರಿಷ್ಟದಂತೆಯೇ...ಆಯ್ತು ಎನ್ನುತ್ತಲೇ ಜಾಹ್ನವಿ ಸಮರ್ಥನ ಮಡದಿಯಾಗಿ ಮನೆಮನದ ಹೊಸ ಬಾಳಿನ ಹೊಸ್ತಿಲಲಿ ನಿಂತಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ