*ಅದು ಕೆನರಾ ಬ್ಯಾಂಕ್ ನ ಕ್ಯಾಶ್ ಕೌಂಟರ್ ರಶ್ ಇತ್ತು ಅಲ್ಲಿ ಒಬ್ಬರು ಸುಮಾರು 75 ವರ್ಷದ ಅಜ್ಜ ಕೈಯ್ಯಲ್ಲಿ ಚೀಟಿ ಯೊಂದನ್ನು ಹಿಡಿದು ಬಂದಿದ್ದರು . ಕ್ಯಾಶಿಯರ್ ಅವರ ಅಕೌಂಟ್ ಚೆಕ್ ಮಾಡಿದ 660 ರೂ ಮಾತ್ರrr ಇತ್ತು ಕಳೆದ 2 ತಿಂಗಳಿಂದ 15 ಲಕ್ಷದ ಹೋಂ ಲೋನ್ ನ 14,000 ರೂ EMI ಕಟ್ಟಿರಲಿಲ್ಲ ಆ ಮನುಷ್ಯ .. ಕ್ಯಾಶಿಯರ್ ಸಿಟ್ಟಲ್ಲಿದ್ದ..* *"ಏನಜ್ಜ 2ತಿಂಗಳಿಂದ EMI ಕಟ್ಟಿಲ್ಲ ಅಕೌಂಟ್ ಅಲ್ಲಿ ಹಣ ಇಲ್ಲ ಏನಾಗಿದೆ ನಿಮಗೆ? " ಮತ್ತೆ ಕೂಗಿದ.. ನೋಡಿ ಮಗ ಅಕೌಂಟ್ ಗೆ ಹಣ ಹಾಕಿರ್ತಾನೆ ಚೆಕ್ ಮಾಡಿ ಅಜ್ಜ ಮೆಲ್ಲಗೆ ಹೇಳಿದಾಗ ಈ ಬಾರಿ ಕ್ಯಾಶಿಯರ್ ನ ಬಿಪಿ ಏರಿತ್ತು..*
*ನೋಡಿ ಅಜ್ಜ ಆಗ ದಿಂದ ಹೇಳಿದ್ದೇ ಹೇಳುತ್ತೀರಲ್ವ, ತಲೆ ಸರಿ ಇಲ್ವಾ?, ಮಗ ಹಣ ಹಾಕಿಲ್ಲ ಅಕೌಂಟ್ ಅಲ್ಲಿ ಹಣ ಇಲ್ಲ.. ಎಲ್ಲೆಲ್ಲಿಂದ ಬರ್ತೀರಾ ನೀವೆಲ್ಲ"....ಈ ಬಾರಿ ಜೋರಾಗಿ ಕೂಗಿದ. ಆ ಸ್ವರ ಇಡೀ ಬ್ಯಾಂಕ್ ಗೆ ಪ್ರತಿಧ್ವನಿಸಿತ್ತು.ಎಲ್ಲರೂ ಆ ವೃದ್ಧರನ್ನು ಅಸಹ್ಯವಾಗಿ ಕಂಡರು..*
*ವೃದ್ಧರಿಗೂ ನಾಚಿಕೆ ಯಾಗಿದ್ದು ಅಲ್ಲೇ ಸೈಡ್ ಗೆ ಹೋಗಿ ತಮ್ಮ ಮೊಬೈಲ್ ಅಲ್ಲಿ ಮಗನ ಸಂಖ್ಯೆಗೆ ಕಾಲ್ ಮಾಡುತಿದ್ದರು.. ಕಾಲ್ ತಾಗುತ್ತಿರಲಿಲ್ಲ.. ಕ್ಯಾಶಿಯರ್ ನ ಸಿಟ್ಟು ತಗ್ಗಿರಲಿಲ್ಲ ನೋಡಿ ಅಜ್ಜ ನಿಮ್ಮ ಹೋಂ ಲೋನ್ ಮುಗಿಯಲು 7 ಒಟ್ಟು ಕಂತು ಬಾಕಿ ಇದೆ,ಈಗಾಗಲೇ 2 ಕಂತು ಕಟ್ಟಿಲ್ಲ ಮುಂದಿನ ತಿಂಗಳು ಕಟ್ಟದಿದ್ದಲ್ಲಿ ಮನೆ ಜಪ್ತಿ ಮಾಡುತ್ತೇವೆ ನೋಡಿ ಆಗಲೇ ನಿಮ್ಮಂಥವರಿಗೆ ಬುದ್ದಿ ಬರುವುದು ಎಂದ ಸಿಟ್ಟಲ್ಲಿ.*
*ಅಜ್ಜನ ಕಣ್ಣುಗಳು ಮಂಜಾಗಿದ್ದವು ಮತ್ತೆ ಮತ್ತೆ ಅದೇ ನಂಬರ್ಗೆ ಕಾಲ್ ಮಾಡುತಿದ್ದರು ಅವರು .. ಇದನ್ನೆಲ್ಲಾ ವೀಕ್ಷಿಸುತಿದ್ದ ಅದೇ ಬ್ಯಾಂಕಿನ ಸಹುದ್ಯೋಗಿಯೊಬ್ಬರು ಅಜ್ಜನಲ್ಲಿ ಬಂದರು.. ಅಜ್ಜನನ್ನು ಪಕ್ಕಕ್ಕೆ ಕರೆಸಿ ಅಜ್ಜನಲ್ಲಿ ಮಗನ ನಂಬರ್ ಕೇಳಿ ತಮ್ಮ ಫೋನ್ ಅಲ್ಲಿ ರಿಂಗ್ ಮಾಡಿದಾಗ ಆಶ್ಚರ್ಯ ಎಂಬಂತೆ ಫೋನ್ ರಿಂಗ್ ಆಗಿತ್ತು .*
*ಹಲೋ ಎಂಬ ಹೆಂಗಸಿನ ಧ್ವನಿ ಅವರನ್ನು ಆಶ್ಚರ್ಯ ಗೊಳಿಸಿತ್ತು ಅಜ್ಜ ಇದು ಮಗನ ನಂಬರ್ ಎಂದಿದ್ದರು. ತಕ್ಷಣ ಅವರು ಅಜ್ಜನ ವಿಷಯ ತಿಳಿಸಿದರು... ಆ ಹೆಂಗಸಿನ ಧ್ವನಿ ಬದಲಾಗಿತ್ತು ಆಕೆ ಅಳುತಿದ್ದಳು. ಒಂದು ಕ್ಷಣ ಸ್ತಬ್ದ ವಾಗಿದ್ದು.ಆಕೆ ಮುಂದುವರಿಸಿದಳು... "ಹಾ ನಾನು ರೂಪ, ಅವರು ನಮ್ಮ ಮಾವ.. ನನ್ನ ಗಂಡನ ತಂದೆ, ಅಲ್ಲಿ ಅವರ ಮನೆ ಕಟ್ಟಿದ್ದು, ತಂದೆ ತಾಯಿಯರನ್ನು ನೋಡಿ ಕೊಂಡಿದ್ದು, ಮನೆ ನೋಡಿ ಕೊಂಡಿದ್ದು, ಮನೆಯ ಹೋಂ ಲೋನ್ ಕಟ್ಟುತಿದ್ದದ್ದು ಎಲ್ಲವೂ ನನ್ನ ಗಂಡನೇ, ಆದರೆ ಕಳೆದ ತಿಂಗಳ ಹಿಂದೆ ನನ್ನ ಸಮು(ಸಮನ್ವಯ್ ).. ಬೈಕ್ ಆಕ್ಸಿಡೆಂಟ್ ಅಲ್ಲಿ ತೀರಿಕೊಂಡರು... ಆಕೆಯ ಅಳು ಜೋರಾಗಿತ್ತು... ಜೀವನದ ಕೊನೆ ತನಕ ನನ್ನೊಂದಿಗೆ ಇರುತ್ತೇನೆ ಎಂದವರು ಅರ್ಧಕ್ಕೆ ನೆನಪುಗಳು ಹಾಗು ನೋವುಗಳನ್ನಷ್ಟೇ ಬಿಟ್ಟು ಹೊರಟು ಹೋದರು ಎನ್ನುವಾಗ ಆಕೆಯ ಅಳು ಮತ್ತಷ್ಟು ಜೋರಾಗಿತ್ತು.... ಹಾ ನಮ್ಮ ಮಾವನವರಿಗೆ ಅವರು ಒಬ್ಬನೇ ಮಗ ಈಗ ಯಾರೂ ಇಲ್ಲ ಅವರಿಗೆ, ಮಗ ಸತ್ತದ್ದು, ಮಗ ಇಲ್ಲ ಎನ್ನುವುದು ಯಾವುದೂ ನೆನಪಿಲ್ಲ ಅವರಿಗೆ... ಪದೇ ಪದೇ ಮಗನ ನಂಬರ್ ಗೆ ಫೋನ್ ಮಾಡುತಿದ್ದರು, ನನ್ನ ಎಲ್ಲಾ ಚಿನ್ನ ಬ್ಯಾಂಕಲ್ಲಿಟ್ಟಿದ್ದರು ಆ ಮನೆಯ ಲೋನ್ ತೀರಿಸಲು, ಕೇಳಿದರೆ ನಿನ್ನ ಚಿನ್ನ ನಾನೇ ಇದ್ದೀನಲ್ಲ ಎನ್ನುತಿದ್ದರು... ಈಗ ಅವರೂ ಇಲ್ಲ ಚಿನ್ನವೂ ಇಲ್ಲ ,ಕಳೆದ 14 ವರ್ಷಗಳಿಂದ ಒಂದೇ ಒಂದು EMI ತಪ್ಪಿಸಿರಲಿಲ್ಲ ಈಗ ಅವರೇ ಇಲ್ಲ, ರಾಣಿ ತರ ಇದ್ದ ನನ್ನ ಜೀವನ ಹಾಳಾಗಿದೆ, ನಾನೀಗ ಇಬ್ಬರು ಮಕ್ಕಳೊಂದಿಗೆ ತವರು ಮನೆಯಲ್ಲಿದ್ದೇನೆ, ನನ್ನ ಮುಂದೆ ಮಕ್ಕಳ ಹಾಗೂ ನನ್ನ ಭವಿಷ್ಯವಿದೆ ಹಾಗಾಗಿ ಮಾವ ನವರಿಗೆ ನಾನೇನೂ ಮಾಡಲಾಗುತ್ತಿಲ್ಲ ,ಪದೇ ಪದೇ ಮಗನಿಗೆ ಕಾಲ್ ಕೊಡು ಎನ್ನುವಾಗ ಕರುಳು ಕಿತ್ತು ಬರುತಿತ್ತು ಅದಕ್ಕೇ ಅವರ ನಂಬರ್ ಬ್ಲಾಕ್ ಮಾಡಿದ್ದೇನೆ ಎನ್ನುವಾಗ ಆಕೆ ಯ ಅಳು ಮತ್ತಷ್ಟು ಹೆಚ್ಚಿತ್ತು . ಮತ್ತೆ ಮಾತಾಡುವ ಧೈರ್ಯ ಫೋನ್ ಮಾಡಿದವರಿಗೂ ಇರಲಿಲ್ಲ. ಅಷ್ಟರಲ್ಲಿ ಫೋನ್ ಕಟ್ ಆಗಿತ್ತು.. ಆ ಸಹುದ್ಯೋಗಿಯ ಕಣ್ಣಲ್ಲೂ ನೀರಿತ್ತು.. ಫೋನ್ ಹಿಡಿದು ಮಾತನಾಡುತ್ತಾ ಹೊರಗೆ ಬಂದ ಆತ ಒಳ ಹೋಗುತಿದ್ದಂತೆ ಬಾಗಿಲ ಬಳಿ ಕಾಯುತಿದ್ದ ವೃದ್ಧರು " ಮಗ ಏನಂದ? "ಎನ್ನುತಿದ್ದರು ತೀರ್ವ ಕುತೂಹಲ ದಿಂದ..ಬನ್ನಿ ಸರ್ ಎಂದು ಅವರನ್ನು ತಮ್ಮ ಕೌಂಟರ್ ನತ್ತ ಕರೆದೋಯ್ದರು ಇವರು..*