ಪ್ರತಿಯೊಬ್ಬ ಹೆಣ್ಣೂ ತನ್ನ ಸ್ಕಿನ್‌ ಗ್ಲೋಯಿಂಗ್‌, ಅಟ್ರಾಕ್ಟಿವ್ ‌ಆಗಿರುವುದರ ಜೊತೆ, ಎಲ್ಲಾ ತರಹದ ಪ್ರಾಬ್ಲಮ್ಸ್ ನಿಂದಲೂ ಫ್ರೀ ಆಗಿರಬೇಕೆಂದು ಬಯಸುತ್ತಾಳೆ. ಆದರೆ ಲಕ್ಷ ಸಲ ಯೋಚಿಸಿದರೂ ಎಲ್ಲಾ ಹೆಂಗಸರ ಸ್ಕಿನ್‌ ಸರಿಯಾಗಿರುತ್ತದೆ ಎಂದು ಹೇಳಲಾಗದು. ಏಕೆಂದರೆ ಸ್ಕಿನ್‌ ಒಂದು ಪ್ರೊಟೆಕ್ಟಿವ್ ‌ಲೇಯರ್‌ ನಿಂದ ಆಗಿರುತ್ತದೆ. ಆದರೆ ಋತು ಬದಲಾವಣೆ, ಕೆಮಿಕಲ್ಸ್ ಯುಕ್ತ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್, ಧೂಳು ಮಣ್ಣು, ಕೊಳಕಿನ ಹೆಚ್ಚಿನ ಸಂಪರ್ಕಕಕ್ಕೆ ನಾವು ಬಂದಾಗ, ಅದು ನಮ್ಮ ಸ್ಕಿನ್‌ ಸೆನ್ಸಿಟಿವಿಟಿಯ ತೊಂದರೆಗೆ ಕಾರಣವಾಗುತ್ತದೆ, ಅದರಿಂದಾಗಿ ನಾವು ಅನೇಕ ಸ್ಕಿನ್‌ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹೀಗಾಗಿ ಸೂಕ್ತ ಸ್ಕಿನ್‌ ಕೇರ್‌ ಜೊತೆಗೆ ಉತ್ತಮ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಬಳಸಬೇಕು. ಆಗ ಮಾತ್ರ ನಮ್ಮ ಸ್ಕಿನ್ ಹೊಳೆಯುತ್ತಿರುತ್ತದೆ. ಹೀಗಾಗಿ ಬಯೋಡರ್ಮಾದ ಸೆನ್ಸಿಬಯೋ  ಕ್ಲೆನ್ಸರ್‌, ಒಂದು ವಿಶೇಷ ಪ್ರಾಡಕ್ಟ್ ಆಗಿದ್ದು, ನಿಮ್ಮ ಸ್ಕಿನ್ನಿನ ವಿಶೇಷ ಎಚ್ಚರಿಕೆ ವಹಿಸುತ್ತದೆ.

ಹಾಗಾದರೆ ಬನ್ನಿ, ವಿವರವಾಗಿ ತಿಳಿಯೋಣ, ಸ್ಕಿನ್‌ ಕೇರ್‌ಪ್ರಕ್ರಿಯೆ :

ಸ್ಕಿನ್ಸೆನ್ಸಿಟಿವಿಗೆ ಕಾರಣಗಳು

ಹಾನಿಕಾರಕ ಘಟಕಗಳು : ದೀರ್ಘಕಾಲ ಮಿನರಲ್ ಆಯಿಲ್‌, ಸಿಲಿಕಾನ್‌, ಸ್ಕಿನ್‌ ಗೆ ಹಾನಿ ಮಾಡುವ ಘಟಕಗಳು ತುಂಬಿರುವ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಬಳಸುವುದರಿಂದ, ಚರ್ಮದ ಪೋರ್ಸ್‌ ಕ್ಲೋಸ್‌ ಆಗುವುದರ ಜೊತೆಯಲ್ಲೇ ಚರ್ಮದಲ್ಲಿ ಹೆಚ್ಚು ಆ್ಯಕ್ನೆ, ಉರಿಯಂಥ ಸಮಸ್ಯೆಗಳು ಹೆಚ್ಚುತ್ತವೆ. ಇದರ ಪರಿಹಾರಕ್ಕಾಗಿ ಗಮನಿಸಬೇಕಾದ ಮುಖ್ಯ ವಿಷಯವೆಂದರ, ನೀವು ಸ್ಕಿನ್‌ ಕೇರ್ ಪ್ರಾಡಕ್ಟ್ಸ್ ಕೊಳ್ಳುವಾಗ ಅದರಲ್ಲಿನ ಘಟಕಗಳನ್ನು ಗಮನಿಸಿಯೇ ಕೊಳ್ಳಬೇಕು. ಆದಷ್ಟೂ ನೀವು ನೈಸರ್ಗಿಕ ಘಟಕಗಳಿಂದ ತುಂಬಿದ ಪ್ರಾಡಕ್ಟ್ಸ್ ಮತ್ತು ಮೈಲ್ಡ್ ಪ್ರಾಡಕ್ಟ್ಸ್ ನ್ನೇ ಬಳಸಬೇಕು. ರಾತ್ರಿ ಮಲಗುವ ಮುನ್ನ ಮೇಕಪ್‌ ಕಳಚಲು ಮರೆಯದಿರಿ.

ಪರಿಸರ ಮಾಲಿನ್ಯ : ನಾವು ಮನೆಯಲ್ಲೇ ಇರಲಿ, ಹೊರಗೇ ಹೋಗಲಿ, ಸದಾ ಮಾಲಿನ್ಯದಿಂದ ಸುತ್ತುವರಿದಿರುತ್ತೇವೆ. ಇದರ ಕಾರಣ ನಮ್ಮ ಸ್ಕಿನ್‌ ಕೊಳಕು ಅನಿಸುವುದಷ್ಟೇ ಅಲ್ಲ, ಮಾಲಿನ್ಯದ ಕಾರಣ, ಅದರಲ್ಲಿನ ಕೆಲವು ಕೆಮಿಕಲ್ಸ್ ಚರ್ಮದ ಪದರ ಪ್ರವೇಶಿಸಿ, ಆಕ್ಸಿಡೇಶನ್‌ ಸ್ಟ್ರೆಸ್‌ ಉಂಟು ಮಾಡುತ್ತದೆ. ಈ ಕಾರಣ ನಮ್ಮ ಚರ್ಮದ ಹೊರ ಪದರ ದುರ್ಬಲ ಆಗುವುದಲ್ಲದೆ, ಊತ, ಏಜಿಂಗ್‌ ನ ಹಿಂಸೆಯೂ ಸೇರಿಕೊಳ್ಳುತ್ತದೆ. ಇದರಿಂದ ಸೆನ್ಸಿಬಯೋ ಕ್ಲೆನ್ಸರ್‌ ನಿಮಗೆ ಫುಲ್ ಪ್ರೊಟೆಕ್ಷನ್‌ ನೀಡುತ್ತದೆ.

ಕೊಳಕು : ನಿಮ್ಮ ಸ್ಕಿನ್‌ ಕೆಮಿಕಲ್ಸ್ ಮತ್ತು ರೋಗಕಾರಕಗಳ ವಿರುದ್ಧ ಒಂದು ನೈಸರ್ಗಿಕ ಗೋಡೆಯಾಗಿ ಕೆಲಸ ಮಾಡುತ್ತದೆ. ಹೀಗಾಗಿ ನೀವು ಸ್ಕಿನ್‌ ಗೆ ಹೈಜೀನ್‌ ಅಂದ್ರೆ ಅದಕ್ಕೆ ಪ್ರಾಪರ್‌ ಕ್ಲೆನ್ಸಿಂಗ್‌ ಒದಗಿಸಿದರೆ, ಆಗ ಅದು ಚರ್ಮದ ಪದರದಲ್ಲಿನ ಡೆಡ್ ಸ್ಕಿನ್‌ ಸೆಲ್ಸ್, ಕೊಳಕು, ರೋಗಾಣುಗಳನ್ನು ತೊಲಗಿಸುವಲ್ಲಿ ಸಕ್ಷಮಗೊಳ್ಳುತ್ತದೆ.

ಟ್ಯಾಪ್ವಾಟರ್‌ : ನಲ್ಲಿ ನೀರಲ್ಲಿ ಬ್ಯಾಕ್ಟೀರಿಯಾ, ಕ್ಯಾಲ್ಶಿಯಂ, ಇತರ ಕೆಮಿಕಲ್ಸ್ ತುಂಬಿರುತ್ತವೆ. ಇದು ನಮ್ಮ ಚರ್ಮದ ಹೊರಪದರ ಎಪಿಡರ್ಮಿಸ್‌ ಗೆ ಹಾನಿ ಮಾಡಬಹುದು. ಇದರಿಂದ ಚರ್ಮಕ್ಕೆ ಉರಿ, ಅಲರ್ಜಿ ತಪ್ಪಿದ್ದಲ್ಲ. ಹೀಗಾಗಿ ಸೂಕ್ತ ಫೇಸ್ ಕ್ಲೆನ್ಸರ್‌ ಬಳಸಿ ನೀವು ಸೆನ್ಸಿಟಿವ್ ‌ಸ್ಕಿನ್‌ ಸಮಸ್ಯೆಯಿಂದ ಪಾರಾಗಬಹುದು.

ಫೇಸ್ಮಾಸ್ಕ್ : ಕೋವಿಡ್‌ ವೈರಸ್‌ ಕಾರಣ ಇಂದು ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕಾದುದು ಅನಿವಾರ್ಯ. ಆದರೆ ಇದು ಚರ್ಮಕ್ಕೆ ಅನೇಕ ತೊಂದರೆಗಳನ್ನೂ ತಂದೊಡ್ಡುತ್ತದೆ. ಇದರಿಂದಾಗಿ ಮುಖದ ಕೆಳಭಾಗದಲ್ಲಿ ಆ್ಯಕ್ನೆ, ಮೊಡವೆಗಳ ಸಮಸ್ಯೆ ಎದುರಾಗುತ್ತದೆ. ಜೊತೆಗೆ ಸೆನ್ಸಿಟಿವ್ ‌ಸ್ಕಿನ್‌ ನವರಿಗೆ ಇದರಿಂದಾಗಿ ಹೆಚ್ಚಿನ ಉರಿ, ಚರ್ಮ ಕೆಂಪಾಗುವಿಕೆ, ಒಮ್ಮೊಮ್ಮೆ ಎಗ್ಸಿಮಾ ಸಮಸ್ಯೆ ಸಹ ಉಂಟಾಗಬಹುದು. ಇದಕ್ಕಾಗಿ ಮುಖ ಚರ್ಮವನ್ನು ಸದಾ ಶುಚಿಯಾಗಿಟ್ಟುಕೊಳ್ಳಬೇಕು, ಆಗ ಮಾತ್ರ ಚರ್ಮಕ್ಕೆ ತಾಜಾತನ, ತಂಪು ದೊರಕುತ್ತದೆ.

ಬಯೋಡರ್ಮಾದ ಸೆನ್ಸಿಬಯೋ ಕ್ಲೆನ್ಸರ್‌ ವರ್ಷಗಳ ಹಿಂದೆಯೇ ಬಯೋ ಡರ್ಮಾ ಒಂದು ಹೊಸ ಉತ್ಪನ್ನದ ರೂಪದಲ್ಲಿ ಮಿಸೆಲರ್ ಟೆಕ್ನಾಲಜಿಯನ್ನು ಕಂಡುಹಿಡಿಯಿತು, ಅದು ಇಂದು ಒಂದು ಪ್ರತಿಷ್ಠಿತ ಪ್ರಾಡಕ್ಟ್ ರೂಪದಲ್ಲಿ ಸ್ಥಾಪಿತಗೊಂಡಿದೆ. ಸೆನ್ಸಿಬಯೋ  ಒಂದು ಡರ್ಮಟಾಲಾಜಿಕ್‌ ಮಿಸೆಲರ್‌ ವಾಟರ್‌ ಆಗಿದ್ದು, ಸೆನ್ಸಿಟಿವ್ ‌ಸ್ಕಿನ್‌ ಕೇರ್‌ ಗೆ ಮುಂದಾಗುತ್ತದೆ. ಇದರ ಯೂನಿಕ್‌ ಫಾರ್ಮುಲಾ ಚರ್ಮದ ಲೆವೆಲ್ ‌ನ್ನು ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ, ಚರ್ಮವನ್ನು ಸದಾ ಕ್ಲೀನ್‌ಸ್ಮೂತ್‌ ಆಗಿಡುತ್ತದೆ. ಮಿಸೆಲರ್‌ ಟೆಕ್ನಾಲಜಿ ಪ್ರತಿ ಬಗೆಯ ಅಶುದ್ಧ, ಮಾಲಿನ್ಯದ ಕಣಗಳನ್ನು ಪ್ರಭಾವಶಾಲಿಯಾಗಿ ತೊಲಗಿಸಿ, ಚರ್ಮವನ್ನು ಶುದ್ಧವಾಗಿಡುವಲ್ಲಿ ಸಶಕ್ತವಾಗಿದೆ. ಇದಕ್ಕಾಗಿ ನೀವು ಇದರ ತುಸುವೇ ಪ್ರಮಾಣವನ್ನು ಕಾಟನ್‌ ಮೇಲೆ ಹಾಕಿಕೊಂಡು, ಬೆಳಗ್ಗೆ ಸಂಜೆ ಅದರಿಂದ ಮುಖದ ಚರ್ಮವನ್ನು ನಾಜೂಕಾಗಿ ಕ್ಲೀನ್‌ ಮಾಡಬೇಕು. ಇದರ ವೈಶಿಷ್ಟ್ಯವೆಂದರೆ, ಇದರಿಂದ ಮುಖವನ್ನು ರಬ್ ಮಾಡುವುದಾಗಲಿ, ನಂತರ ನೀರಿನಿಂದ ತೊಳೆಯುವುದಾಗಲಿ, ಇಲ್ಲವೇ ಇಲ್ಲ! ಹಾಗಾದರೆ ಸಿಗ್ತಲ್ಲ ನಿಮಗೆ ಎಫೆಕ್ಟಿವ್‌ಸುಲಭ ವಿಧಾನ, ಜೊತೆಗೆ ಈಝಿ ಅವೆಲಬಲ್ ಸಹ!

ಪಾರ್ವತಿ ಭಟ್

ಸ್ಕಿನ್ಸೆನ್ಸಿಟಿವಿಟಿಯ ಬೇಸಿಕ್ಸೋರ್ಸ್

ಇಡೀ ದಿನದ ಮಾಲಿನ್ಯದ ವಿರುದ್ಧ ಸುರಕ್ಷಾತ್ಮಕ ಪಾತ್ರ ವಹಿಸಲು ಚರ್ಮ ತಂತಾನೆ ತಯಾರಿ ಮಾಡಿಕೊಳ್ಳುತ್ತದೆ. ಇದಕ್ಕಾಗಿ ಅಗತ್ಯವಾದುದೆಂದರೆ, ನೀವು ಇಡೀ ರಾತ್ರಿಯ ಅಶುದ್ಧಿಗಳನ್ನು ದೂರ ಮಾಡಲು ಚರ್ಮವನ್ನು ಜೆಂಟಲ್ ಕ್ಲೆನ್ಸರ್‌ ನಿಂದ ಕ್ಲೀನ್‌ಮಾಡಬೇಕಷ್ಟೆ. ಇದೇ ತರಹ ಇಡೀ ದಿನದ ಚರ್ಮದಲ್ಲಿನ ಕೊಳಕನ್ನು ನಿವಾರಿಸುವುದೂ ಬಲು ಅಗತ್ಯ, ಇಲ್ಲದಿದ್ದರೆ ಚರ್ಮದ ಮೇಲೆ ಜಮೆಗೊಂಡ ಕೊಳಕು ಸುಲಭವಾಗಿ ಚರ್ಮದ ಒಳಗೆ ಪ್ರವೇಶಿಸಿ, ಅದಕ್ಕೆ ಹಾನಿ ಮಾಡುತ್ತದೆ. ಹೀಗಾಗಿ ನಿಮ್ಮ ಚರ್ಮವನ್ನು ಹಗಲೂ ರಾತ್ರಿ ಸೆನ್ಸಿಬಯೋ ಕ್ಲೆನ್ಸರ್‌ ನಿಂದ ಕ್ಲೀನ್‌ ಮಾಡಲು ಮರೆಯದಿರಿ.

ಸೆನ್ಸಿಟಿವಿ ‌ಸ್ಕಿನ್‌ ನವರು ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ, ಮುಖವನ್ನು ಯಾವುದೇ ಪ್ರಾಡಕ್ಟ್ ನಿಂದ ಕ್ಲೀನ್ ಮಾಡಿದ ನಂತರ, ಮುಖದಲ್ಲಿ ಟೈಟ್‌ ನೆಸ್‌ ಫೀಲ್ ‌ಆದರೆ, ಇದರರ್ಥ ಆ ಪ್ರಾಡಕ್ಟ್ ನಿಮಗೆ ಹೊಂದುತ್ತಿಲ್ಲ!

ನೀವು ಸನ್‌ ಸ್ಕ್ರೀನ್‌, ಮೇಕಪ್‌, ಕ್ರೀಂ….. ಇತ್ಯಾದಿಗಳನ್ನು ಎಂದೂ ಇಡೀ ರಾತ್ರಿ ಮುಖದಲ್ಲಿ ಹಾಗೇ ಇರುವಂತೆ ಬಿಡಬಾರದು. ಬದಲಿಗೆ ಮಲಗುವ ಮುನ್ನ ಕ್ಲೆನ್ಸರ್‌ ನಿಂದ ಕ್ಲೀನ್‌ ಮಾಡಿ, ಚರ್ಮವನ್ನು ಡೀಟಾಕ್ಸ್ ಗೊಳಿಸಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ