ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಕೋಟಿ ಕೋಟಿ ಭಕ್ತರು ಆಗಮಿಸುತ್ತಿದ್ದಾರೆ.. ಪುಣ್ಯಸ್ನಾನ ಮಾಡುತ್ತಿದ್ದಾರೆ. ಈ ಬಾರಿ ಕುಂಭಮೇಳದ ವಿಶೇಷತೆ ಏನಂದ್ರೆ ನಟ, ನಟಿಯರು, ಮಾಡೆಲ್ಗಳು ಬಂದು ಗಂಗೆಯಲ್ಲಿ ಮಿಂದೇಳುತ್ತಿರುವುದು.
ಬಾಲಿವುಡ್ ನಟಿ ಮಮತಾ ಕುಲಕರ್ಣಿ ಸನ್ಯಸತ್ವ ಪಡೆದು ಬಳಿಕ ಕಿನ್ನರ ಅಖಾಡದಿಂದ ಹೊರಹಾಕಲ್ಪಟ್ಟಿದ್ದು, ಖ್ಯಾತ ಉದ್ಯಮಿ ಸ್ಟೀವ್ ಜಾಬ್ಸ್ ಪತ್ನಿ ಬಂದಿದ್ದು, ಕನ್ನಡದ ಕಲಾವಿದರಾದ ರಾಜ್ಬಿ ಶೆಟ್ಟಿ, ನಿರೂಪಕಿ ಅನುಶ್ರೀ, ನಟ ದರ್ಶನ್ ಗೆಳತಿ ಪವಿತ್ರಾಗೌಡ ಸೇರಿದಂತೆ ಬಾಲಿವುಡ್ನ ಹಲವರು.. ಮಾಡೆಲ್ಗಳು ಬಂದು ಹೋಗ್ತಾನೇ ಇದಾರೆ.. ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟಿ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿ ಸಖತ್ ಸುದ್ದಿಯಾಗಿದ್ದಾರೆ.
ಯಾರಿಗೂ ಕಾಣದ ಹಾಗೇ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಗುರುತು ಸಿಗದಂತೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ಆ ನಟಿಯೇ ನಮ್ಮ ಕೆಜಿಎಫ್ ಖ್ಯಾತಿಯ ಶ್ರೀನಿಧಿಶೆಟ್ಟಿ.
ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿದ್ದನ್ನು ಖುದ್ದು ವಿಡಿಯೋ ಮಾಡಿರುವ ಶ್ರೀನಿಧಿಶೆಟ್ಟಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಇಂಗ್ಲಿಷ್ನಲ್ಲಿ ಬರೆದುಕೊಂಡಿದ್ದಾರೆ.
‘ಮೌನಿ ಅಮಾವಾಸ್ಯೆಯಂದು ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವಾಗ ನಾನು ಜೀವನದಲ್ಲಿ ಒಮ್ಮೆಯಾದರೂ ಈ ವಿದ್ಯಮಾನವನ್ನು ಅನುಭವಿಸುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ.
ನಾನು ಅಂತಹ ಜೀವನವನ್ನು ಊಹಿಸಿದ್ದು, ನೀವು ಎಂದಿಗೂ ಊಹಿಸದ ಸಂಗತಿಗಳು ನಿಮಗೆ ಸಂಭವಿಸುತ್ತವೆ. ಮತ್ತು ಯಾವಾಗಲೂ, ನನ್ನ ಹೃದಯವು ಎಲ್ಲಾ ದೈವಿಕ ಅನುಗ್ರಹ ಮತ್ತು ಆಶೀರ್ವಾದಗಳಿಗಾಗಿ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿದೆ.’ ಅಂತಾ ಪೋಸ್ಟ್ ಹಾಕಿ ಖುಷಿ ಹಂಚಿಕೊಂಡಿದ್ದಾರೆ.
ಆದ್ರೆ, ನಟಿ ಶ್ರೀನಿಧಿ ಶೆಟ್ಟಿ ಕುಂಭಮೇಳದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ಯಾಕೆ ಅಂತಾನೂ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಕೆಲವರು ಆರೋಗ್ಯದ ದೃಷ್ಟಿಯಿಂದ ಅಂತಾ ಹೇಳಿದ್ರೆ, ಇನ್ ಕೆಲವರು ತಮ್ಮ ಗುರುತನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಅಂತಾ ಹೇಳಿದ್ದಾರೆ. ಆದ್ರೆ, ಗಂಗೆಯಲ್ಲಿ ಮುಳುಗುವಾಗಲೂ ಮಾಸ್ಕ್ ಹಾಕಿಕೊಂಡಿದ್ದು ಸರಿನಾ ಅಂತಾನೂ ಪ್ರಶ್ನೆ ಮಾಡಿದ್ದಾರೆ.