ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಲ್ಲಿ ಒಬ್ಬರಾಗಿರುವ ನಟಿ ಐಶ್ವರ್ಯಾ ರಾಜೇಶ್​​ಗೆ ಒಂದು ದೊಡ್ಡ ಆಸೆ ಇದ್ಯಂತೆ. ಅದೇನಪ್ಪಾ ಅಂದ್ರೆ, ಸ್ಟಾರ್ ನಟನ ಜೊತೆ ಡೇಟಿಂಗ್ ಮಾಡುವಾಸೆ ಅಂತೆ. ಕಳೆದ ಎರಡೂವರೆ ದಶಕಗಳಿಂದಲೂ ಚಿತ್ರರಂಗದಲ್ಲಿರುವ ಐಶ್ವರ್ಯಾ ರಾಜೇಶ್​ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ.

AISHWARYA RAJESSH (4)

ಈ ನಟಿಯ ಮದುವೆ ಕುರಿತಂತೆ ಹಲವು ಬಾರಿ ಸುದ್ದಿಗಳು ಹರಿದಾಡಿದ್ರೂ ಕೂಡ ಇದುವರೆಗೂ ಮದ್ವೆ ಆಗದೇ ಸಿಂಗಲ್ ಆಗಿ ಸೂಪರ್ ಆಗಿದ್ದಾರೆ. ಈ ಬಗ್ಗೆ ಕೇಳಿದ್ರೆ ಅಯ್ಯೋ.. ನನಗೆ ಬಾಯ್​ಫ್ರೆಂಡ್ ಕೂಡ ಇಲ್ಲ ಅಂತಾ ಹೇಳೋ ಐಶ್ವರ್ಯಾ ರಾಜೇಶ್​​​​ಗೆ ಡೇಟಿಂಗ್​​​​ ಹೋಗೋ ಆಸೆ ಇದ್ಯಂತೆ. ಅದ್ರಲ್ಲೂ ಸ್ಟಾರ್ ನಟರೊಬ್ಬರ ಜೊತೆನೇ ಹೋಗಬೇಕಂತೆ.

AISHWARYA RAJESSH (3)

ತಮಿಳು ಚಿತ್ರರಂಗದ ಸ್ಟಾರ್ ನಟ ವಿಜಯ್​​ ದಳಪತಿ ಜೊತೆಗೆ ಡೇಟಿಂಗ್​ಗೆ ಹೋಗುವ ಅಸೆ ಐಶ್ವರ್ಯಾ ರಾಜೇಶ್​​​​ದ್ದಾಗಿದೆ. ಅಷ್ಟೇ ಅಲ್ಲ, ದಳಪತಿ ವಿಜಯ್ ಅವರ ಕಟ್ಟಾ ಫ್ಯಾನ್ ಆಗಿರೋ ನಟಿ ಐಶ್ವರ್ಯಾ, ಅವರ ಜೊತೆಗೇ ಕುಳಿತುಕೊಂಡು ಡಿನ್ನರ್ ಮಾಡಬೇಕಂತೆ. ಕೆಲ ಸೂಪರ್ ಹಿಟ್ ಸಿನಿಮಾಗಳಲ್ಲಿ ಆಕ್ಟ್ ಮಾಡಿರುವ ಈ ನಟಿ, ಕನ್ನಡದಲ್ಲೂ ಕೂಡ ಮೊಟ್ಟ ಮೊದಲ ಬಾರಿಗೆ ನಟಿಸುತ್ತಿದ್ದಾರೆ.

AISHWARYA RAJESSH (5)

ಡಾಲಿ ಧನಂಜಯ ಅವರ ಉತ್ತರಕಾಂಡ ಸಿನಿಮಾದಲ್ಲಿ ಕೀ ರೋಲ್​​ನಲ್ಲಿ ಮಿಂಚೋಕೆ ಹೊರಟಿರೋ ಐಶ್ವರ್ಯ ದಿಢೀರ್​​​ನೇ ಈ ಆಸೆ ಹೇಳಿದ್ದಕ್ಕೆ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ದಳಪತಿ ಫ್ಯಾನ್ಸ್​​​ ಕೂಡ.. ನಿಮ್ಮ ಡೇಟಿಂಗ್​ಗೆ ನಮ್​ ಬಾಸೇ ಬೇಕಿತ್ತಾ ಅಂತಾನೂ ಕಮೆಂಟ್ ಮಾಡುತ್ತಿದ್ದಾರೆ.

AISHWARYA RAJESSH (1)

ಇನ್ನು ಬಹುತಾರಾಗಣದ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕನ್ನಡದ ಉತ್ತರಕಾಂಡದಲ್ಲಿ ನಾಯಕಿ ಆಗಿರುವ ಐಶ್ವರ್ಯಾ ರಾಜೇಶ್​​​ ತಮ್ಮ ಸಂಭಾವನೆಯನ್ನು ದಿಢೀರ್​​ನೇ ಹೆಚ್ಚಿಸಿಕೊಂಡಿದ್ದಾರೆ. ನ್ಯಾಚುರಲ್​ ಬ್ಯೂಟಿ ಅಂತಾನೇ ಫೇಮಸ್ ಆಗಿರುವ ಐಶ್ವರ್ಯಾ ತೆಲುಗು, ತಮಿಳಿನಲ್ಲಿ ಭಾರೀ ಸಕ್ಸಸ್​​​ ನಟಿಯಾಗಿ ಮಿಂಚುತ್ತಿದ್ದಾರೆ.

AISHWARYA RAJESSH (2)

ಇತ್ತೀಚೆಗೆ ಬಿಡುಗಡೆಯಾದ ಸಂಕ್ರಾಂತಿಕಿ ವಸ್ತುನಾಂ ಅನ್ನೋ ಮೂವಿಯಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರಿಂದ ಆ ಚಿತ್ರ ಕೋಟಿ ಕೋಟಿ ಲಾಭ ಗಳಿಸುತ್ತಿದೆ. ಹೀಗೆ ಒಂದೆರಡು ಸಿನಿಮಾಗಳಲ್ಲಿ ಸಕ್ಸಸ್ ಕಾಣ್ತಿದ್ದಂತೇ ಐಶ್ವರ್ಯಾ ರಾಜೇಶ್ ತಮ್ಮ ಸಂಭಾವನೆಯನ್ನು ಒಂದು ಕೋಟಿಯಿಂದ 2 ಕೋಟಿ.. 3 ಕೋಟಿ ರೂಪಾಯಿಗೆ ಏರಿಸಿಕೊಂಡಿದ್ದಾರೆ.

AISHWARYA RAJESSH (6)

ಕನ್ನಡದ ಡಾಲಿ ಧನಂಜಯಗೆ ನಾಯಕಿ ಆಗಿರುವ ಉತ್ತರಕಾಂಡಕ್ಕೂ ಕೂಡ 2ರಿಂದ 3 ಕೋಟಿ ಕೇಳಿದ್ದಾರೆ ಎಂದು ಹೇಳಲಾಗ್ತಿದೆ. ಈಗಾಗಲೇ ನಾಯಕಿ ಆಗಿ ಸೆಲೆಕ್ಟ್ ಆಗಿರೋದ್ರಿಂದ ಉತ್ತರಕಾಂಡದ ನಿರ್ಮಾಪಕರು ಸುಮ್ಮನಾಗಿದ್ದಾರಂತೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ