-ಶರತ್ ಚಂದ್ರ 

ಸ್ಯಾಂಡಲ್ ವುಡ್ ಕ್ವೀನ್ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಲ್ಪಡುವ ರಮ್ಯಾ ಕೆಲವು ವರ್ಷಗಳಿಂದ ಚಿತ್ರರಂಗದ ಯಾವುದೇ ಸಮಾರಂಭದಲ್ಲಿ ಕಾಣಿಸಿ ಕೊಳ್ಳುತ್ತಿರಲಿಲ್ಲ. ಆದರೆ ಈ ವರ್ಷ ನಟಿ ಮತ್ತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ತಿಂಗಳು 8 ನೇ ತಾರೀಕಿನದು ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದ ರಕ್ಷಿತಾ ತಮ್ಮ ರಾಣಾ ಮದುವೆಯಲ್ಲಿ ಗ್ರಾಂಡ್ ಸೀರೆಯಲ್ಲಿ ಕಂಗೊಳಿಸಿದ ರಮ್ಯಾ ಬಹುದಿನಗಳ ನಂತರ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು.

1000422587

ಚಿತ್ರ ಜೀವನದ ಆರಂಭದಲ್ಲಿ ನಿರ್ದೇಶಕ ಪ್ರೇಮ್ಸ್   ರಮ್ಯಾಗೆ 'ಎಕ್ಸ್‌ಕ್ಯೂಸ್ ಮಿ 'ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ್ದರು. ಇನ್ನು ರಕ್ಷಿತಾ ಜೊತೆ ಸ್ಟಾರ್ ವಾರ್ ಇದ್ದ ಸಂದರ್ಭದಲ್ಲಿ 'ತನನಂ ತನನಂ ' ಚಿತ್ರದಲ್ಲಿ ನಟಿಸಿದ್ದರು ಕೂಡ .ಬಹುಷಃ ಈ ಒಂದು ನಂಟು ರಾಣಾ ಮದುವೆ ಗೆ ಬರಲು ಕಾರಣವಿರಬಹುದು ಎಂದು ಜನ ಮಾತಾಡಿಕೊಂಡಿದ್ದರು.

ಇತ್ತೀಚಿಗೆ ಸದಾಶಿವನಗರದ ಪ್ರತಿಷ್ಠಿತ ಹೋಟೆಲೊಂದರಲ್ಲಿ 'ರಾಜು ಜೇಮ್ಸ್ ಬಾಂಡ್' ಚಿತ್ರದ ಪ್ರಿ ರಿಲೀಸ್ ಇವೆಂಟ್ ಗೆ ಮುಖ್ಯ ಅತಿಥಿಯಾಗಿ    ಕರೆಸುವಲ್ಲಿ ಚಿತ್ರದ ನಿರ್ಮಾಪಕರಾದ ಕಿರಣ್ ಮತ್ತು ಮಂಜುನಾಥ್ ಯಶಸ್ವಿಯಾಗಿದ್ದರು ಕೂಡ.

1000422886

ಚಿತ್ರದ ಹಾಡುಗಳು ಮತ್ತು  ಟ್ರೈಲರ್ ನೋಡಿ ಮೆಚ್ಚುಗೆ ಸೂಚಿಸಿ ಕಾರ್ಯಕ್ರಮ  ಮುಗಿಯುವರೆಗೂ ಎಲ್ಲರ ಜೊತೆಗೆ ಕಾಲ ಕಳೆದಿದ್ದು ವಿಶೇಷ.. ಚಿತ್ರದ ನಾಯಕ ಗುರುನಂದನ್ ನಾಯಕಿ ಮೃದುಲ ನೀಡಿದ ಗಿಫ್ಟ್ ಗಳನ್ನು ವೇದಿಕೆಯಲ್ಲಿ ಸಂತೋಷದಿಂದ ಸ್ವೀಕರಿಸಿ ಸಂಭ್ರಮದ ವಾತಾವರಣ ಸೃಷ್ಟಿ ಮಾಡಿದರು.

ಸೀನಿಯರ್ ಪತ್ರಕರ್ತರನ್ನು, ಛಾಯಾಗ್ರಾಹಕರನ್ನು ಮಾತಾಡಿಸಿ ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿ ಕೊಂಡು ಅಪರೂಪಕೊಮ್ಮೆ ಸಮಾರಂಭವೊಂದರಲ್ಲಿ ಸಾಕಷ್ಟು ಸಮಯ ಕಳೆದರು.

1000422888

ಕೆಲವು ವರ್ಷಗಳಿಂದ ರಮ್ಯಾರ ಮದುವೆ ಬಗ್ಗೆ ಮಾಧ್ಯಮದಲ್ಲಿ ಆಗಾಗ ಸುದ್ದಿಗಳು ಬರುತ್ತಿದ್ದವು. ಇತ್ತೀಚಿಗೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರಿಗೆ ಎಂಗೇಜ್ಮೆಂಟ್ ಆಗಿದೆಯಂತೆ, ಸಾಧ್ಯದಲ್ಲೇ ಮದುವೆಯಾಗ್ತಾರೆ ಹೀಗೆ ಊಹ ಪೊಹ ಗಳು ಹರಿದಾಡುತ್ತಿವೆ.

ಕೆಲವರ ಪ್ರಕಾರ ರಮ್ಯಾ ಮತ್ತೆ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ, ಅದಕ್ಕೆ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳಿತ್ತಿದ್ದಾರೆ ಎಂಬ ಸುದ್ದಿ ಕೂಡ ಹರಡುತ್ತಿದೆ.

ನಿಮಗೆ ನೆನಪಿರುವಂತೆ ಈ ಹಿಂದೆ ರಮ್ಯ ರಾಜ್. ಬಿ. ಶೆಟ್ಟಿ ಸಹಯೋಗದೊಂದಿಗೆ ಆಪಲ್ ಬಾಕ್ಸ್ ಸ್ಟುಡಿಯೋಸ್   ಎನ್ನುವ ನಿರ್ಮಾಣ ಸಂಸ್ಥೆಯನ್ನು ರಮ್ಯಾ ಹುಟ್ಟುಹಾಕಿದ್ದು,ಸ್ವಾತಿ ಮುತ್ತಿನ ಮಳೆ ಹನಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ರೀ ಎಂಟ್ರಿ ಮಾಡಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಆ ಪಾತ್ರವನ್ನು ಸಿರಿ ರವಿಕುಮಾರ್  ನಿಭಾಯಿಸಿದ್ದರು. ಡಾಲಿ ಧನಂಜಯ ನಾಯಕನಾಗಿ ನಟಿಸಿರುವ 'ಉತ್ತರಕಾಂಡ 'ಚಿತ್ರದಲ್ಲಿ ಕೂಡ ನಾಯಕಿಯಾಗಿ ಅಭಿನಯಿಸುವ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಹೇಳಿತ್ತು. ಆನಂತರ ಆ ಚಿತ್ರದಿಂದ ಕೂಡ ರಮ್ಯಾ ಹೊರ ಬಂದಿದ್ದರು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಸದ್ಯಕ್ಕೆ ಕನ್ನಡ ಚಿತ್ರದಲ್ಲಿ ರಮ್ಯಾ ಅಭಿನಯಿಸುವ ಸಾಧ್ಯತೆ ಕಂಡು ಬರುತ್ತಿಲ್ಲ. ಒಟ್ಟಿನಲ್ಲಿ ಒಂದಷ್ಟು ದಿನಗಳು ಮಾಯವಾಗಿದ್ದ ರಮ್ಯಾರನ್ನು ಸಾರ್ವಜನಿಕ ಸಮಾರಂಭಗಳಲ್ಲಿ ಕಂಡು ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಹಿತೈಷಿಗಳು ಖುಷಿಪಟ್ಟಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ