ನಟಿ, ಆ್ಯಂಕರ್‌, ಲೇಖಕಿ, ನಿರ್ದೇಶಕಿಯಾಗಿ ಬಹುಮುಖ ವ್ಯಕ್ತಿತ್ವ ಹೊಂದಿರುವ ಸುಶೀಲಾ ಜಾಂಗೀರಾ ಬಾಲಿವುಡ್‌ ನ ಅಪರೂಪದ ಪ್ರತಿಭಾನ್ವಿತರಲ್ಲಿ ಒಬ್ಬರು. `ಖಾಕಿ, ಸ್ಪಶ್‌: ದಿ ಟಚ್‌,’ ಮುಂತಾದ ಅನೇಕ ಚಿತ್ರಗಳಲ್ಲಿ ಈಕೆಯ ನಟನೆಯ ಅದ್ಭುತ ಪ್ರತಿಭೆ ಪ್ರಶಂಸನೀಯ. ಕಳೆದ ವರ್ಷ ಈಕೆಯ ರಚನೆಯ, ನಿರ್ದೇಶನದ `ಮೇರಿ ರಾಕ್‌ ಸ್ಟಾರ್‌ ಲಾಲಿ ಜೀನ್ಸ್’ ಚಿತ್ರ ಬಿಡುಗಡೆಯಾದಾಗ ಈಕೆಗೆ `ದಾದಾ ಸಾಹೇಬ್‌ ಫಾಲ್ಕೆ’ ಅವಾರ್ಡ್‌ ಸಹಿತ ಅನೇಕ ಪ್ರಶಸ್ತಿಗಳು ಅರಸಿಬಂದವು.

ಇತ್ತೀಚೆಗೆ ಇವರ `ಫೀಡ್‌ ಆರ್‌ ಬ್ಲೀಡ್‌ ಇಂಡಿಯಾ’ ಬಹು ಚರ್ಚೆಯಲ್ಲಿದೆ. ಇದರಲ್ಲಿ ಮುಖ್ಯವಾಗಿ ಅನಾಥರಾದ ರಸ್ತೆ, ಜೋಪಡಿ, ಸ್ಲಂಗಳಲ್ಲಿ ಹೇಗೋ ಬದುಕುವ ಬಡ, ಭಿಕ್ಷುಕಿಯರ ಮುಟ್ಟಿನ ಸಮಸ್ಯೆಗಳನ್ನು ಕುರಿತಾಗಿ ಈ ಚಿತ್ರದಲ್ಲಿ ಚರ್ಚಿಸುತ್ತಾ, ಇಂಥವರು ಹೊಟ್ಟೆ ತುಂಬಿಸಿಕೊಳ್ಳಲು ನೋಡಬೇಕೋ ಅಥವಾ ಸ್ಯಾನಿಟರಿ ನ್ಯಾಪ್‌ ಕಿನ್‌ ಖರೀದಿಸಲು ಚಿಂತಿಸಬೇಕೋ ಎನ್ನುತ್ತಾರೆ. ಕೊರೋನಾ ಕಾಲದಲ್ಲಿ ಈ ಚಿತ್ರವನ್ನು ಸುಮಾರು 15 ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಿಂದ ಪುರಸ್ಕರಿಸಲಾಯಿತು.

ನಿಮ್ಮ ಹಿಂದಿನ `ಮೇರಿ ರಾಕ್ಸ್ಟಾರ್ಲಾಲಿ ಜೀನ್ಸ್ಚಿತ್ರಕ್ಕೆ ಪ್ರತಿಕ್ರಿಯೆ ಹೇಗಿತ್ತು?

ಇದೊಂದು ಶಾರ್ಟ್‌ ಫಿಲ್ಮ್, ಉತ್ತಮ ಪ್ರತಿಕ್ರಿಯೆ ದೊರಕಿತು. ಇದನ್ನು ಅನೇಕ ಪ್ಲಾಟ್‌ ಫಾರ್ಮ್ ಗಳಲ್ಲಿ ಗಮನಿಸಬಹುದಾಗಿದೆ. ಇದಕ್ಕೆ `ದಾದಾ ಸಾಹೇಬ್‌ ಫಾಲ್ಕೆ’ ಅವಾರ್ಡ್‌ ಸಹ ಬಂತು. ಬೆಂಗಳೂರು, ಪುಣೆ, ನಾಸಿಕ್‌ ಗಳ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಇದನ್ನು ಪುರಸ್ಕರಿಸಲಾಯಿತು. ನಾನು ನನ್ನ ಮೊದಲ ಚಿತ್ರದಿಂದಲೇ ಕಂಟೆಂಟ್‌ ಪ್ರಧಾನ ಚಿತ್ರಗಳನ್ನು ಮಾಡುತ್ತಾ ಬಂದಿದ್ದೇನೆ. ಹೀಗಾಗಿ ಇಂದಿನ ಜ್ವಲಂತ ಸಮಸ್ಯೆಯಾದ ಮುಟ್ಟಿನ ಕುರಿತಾಗಿ `ಫೀಡ್‌ ಆರ್‌ ಬ್ಲೀಡ್‌ ಇಂಡಿಯಾ’ ಚಿತ್ರ ಬಿಡುಗಡೆ ಮಾಡಿದ್ದೇನೆ.

ಚಿತ್ರದ ವಿಷಯ ನಿಮ್ಮ ಮನಸ್ಸಿಗೆ ಬಂದದ್ದು ಹೇಗೆ?

ಈ ಚಿತ್ರ ಬಡ ಹೆಂಗಸರ ಮುಟ್ಟು, ಅವರ ದೈಹಿಕ ಸುರಕ್ಷೆ, ಸ್ಯಾನಿಟರಿ ಪ್ಯಾಡ್‌ ಹಾಗೂ 2 ಹೊತ್ತಿನ ಊಟದ  ಕುರಿತಾದದ್ದು. ಮುಟ್ಟಿನ ಕುರಿತಾಗಿ ಈಗಾಗೀ ಅನೇಕ ಚಿತ್ರ, ಶಾರ್ಟ್‌ ಫಿಲ್ಮ್ಸ್, ಡಾಕ್ಯುಮೆಂಟರಿಗಳು ಬಂದಿವೆ ಎಂಬುದೇನೋ ನಿಜ, ವಿದೇಶಗಳಲ್ಲೂ ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಆದರೆ ಯಾರೂ ಈ ವಿಷಯದ ಕಡೆ ಗಂಭೀರವಾಗಿ ಗಮನಹರಿಸೋಲ್ಲ. ಯಾವ ಹೆಣ್ಣಿಗೆ 2 ಹೊತ್ತು ಊಟ, ತಲೆಗೊಂದು ಸೂರು ಇಲ್ಲವೇ, ಫುಟ್‌ ಪಾತ್‌ ಗಳಲ್ಲಿ ಭಿಕ್ಷೆ ಬಿಡುವಳೋ…. ಅಂಥವರಿಗೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದೇ ದೊಡ್ಡ ಚಿಂತೆ ಆಗಿರುತ್ತದೆ. ಇಂಥವರು ಸ್ಯಾನಿಟರಿ ಪ್ಯಾಡ್‌ ಕುರಿತು ಚಿಂತಿಸಲು ಅವಕಾಶವಾದರೂ ಎಲ್ಲಿ?

ನನ್ನ ಮನದಲ್ಲಿ ಸದಾ ಏಳುತ್ತಿದ್ದ ಒಂದು ಪ್ರಶ್ನೆ ಎಂದರೆ, ಇಂಥವರನ್ನು ನಾವೇಕೆ ನಿರ್ಲಕ್ಷಿಸುತ್ತಿದ್ದೇವೆ? ಮುಟ್ಟಿನ ಕುರಿತಾಗಿ ಎಲ್ಲಾ ಸಾಮಾನ್ಯ ಹೆಂಗಸರಿಗೂ ಇರುವ ಚಿಂತೆ, ಸಮಸ್ಯೆಗಳು ಇವರುಗಳನ್ನೂ ಕಾಡುತ್ತದಲ್ಲವೇ? ಅವರ ಅಗತ್ಯಗಳು ಬೇರೆಯವರ ತರಹವೇ ಅಲ್ಲವೇ? ಆದರೆ ಈ ಸಮಾಜ ಇಂಥವರನ್ನು ಕಡೆಗಣಿಸುವುದೇಕೆ?

ಸಣ್ಣ ದೊಡ್ಡ ಮನೆಗಳಲ್ಲಿ ವಾಸಿಸುವ ಹೆಂಗಸರಂತೆಯೇ ಇವರೂ ಸಮಾಜದಲ್ಲಿ ಮಾನ್ಯರಲ್ಲವೇ? ಬೀದಿ ಬೀದಿ ಸುತ್ತಾಡುವ ಇವರು ಈ ಕುರಿತಾಗಿ ಏನು ತಾನೇ ಕ್ರಮ ಕೈಗೊಂಡಾರು? ಇವರುಗಳು ಅಂಥ ಸಂದರ್ಭದಲ್ಲಿ ಸ್ನಾನ ಮಾಡೋದೂ ಉಂಟೆ? ಮುಟ್ಟಿನ ದಿನಗಳಲ್ಲಿ ಎಂಥ ಸುರಕ್ಷತಾ ಕ್ರಮ ಕೈಗೊಳ್ಳುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕಲಿ. ನನ್ನ ಇಬ್ಬರು ಸಿಬ್ಬಂದಿ ಜೊತೆ ಕ್ಯಾಮೆರಾ ಹಿಡಿದು ಸ್ಲಂ ಕಡೆ ಹೊರಟೆ. ಕಷ್ಟಪಟ್ಟು ಅಂತೂ ಇವರುಗಳ ಜೊತೆ ಮಾತನಾಡಿ ಸಂಗ್ರಹಿಸಿದ ಫೋಟೋ ಸಂಭಾಷಣೆಗಳನ್ನೇ ಆಧರಿಸಿ ಒಂದು ಚಿತ್ರ ಮಾಡಿದ್ದಾಯಿತು, ಅದೇ `ಫೀಡ್‌ ಆದ ಬ್ಲೀಡ್‌ ಇಂಡಿಯಾ!’

ಕ್ಯಾಮೆರಾ ಹಿಡಿದು ಇವರನ್ನು ಮಾತನಾಡಿಸುವ ಮೊದಲು ಕುರಿತಾಗಿ ಏನಾದರೂ ರಿಸರ್ಚ್ಮಾಡಿದ್ದಿರಾ?

ನಾನು ಈ ವಿಷಯದ ಕುರಿತಾಗಿ ಬಹಳ ಚಿಂತೆ ನಡೆಸಿದ್ದೆ, ಹಾಗಾಗಿ ಸ್ಪಷ್ಟ ಇವರ ಬಾಯಿಂದಲೇ ಈ ವಿಷಯ ಕೇಳಿ ರೆಕಾರ್ಡ್ ಮಾಡೋಣ ಎಂದು ಕ್ಯಾಮೆರಾ ಹಿಡಿದು ಹೊರಟೆ. ಅದಕ್ಕೆ ಮೊದಲೇ ಈ ಕುರಿತಾಗಿ ಹಲವು ಪಾಯಿಂಟ್ಸ್ ಬರೆದಿಟ್ಟುಕೊಂಡಿದ್ದೆ. ಆ ಪ್ರಶ್ನೆಗಳಿಗೆ ಉತ್ತರ ಪಡೆಯಲೆಂದೇ ನಾನು ಬೀದಿ ಬೀದಿ ಸುತ್ತಾಡಿದೆ. ದೈಹಿಕ ಮಾನಸಿಕವಾಗಿ ಯಾವ ಸಮಸ್ಯೆಗಳು ನನ್ನನ್ನು ಕಾಡುತ್ತಿವೆಯೋ ಅದು ಇವರುಗಳನ್ನು ಹೇಗೆ ಕಾಡುತ್ತಿರಬಹುದು ಎಂದು ನನ್ನ ಮನದಾಳದಲ್ಲಿ ಕೊರೆಯುತ್ತಿತ್ತು. ಇವರುಗಳು ಅದನ್ನು ಹೇಗೆ ಸಂಭಾಳಿಸುತ್ತಾರೋ ತಿಳಿಯಬೇಕಿತ್ತು.

ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು 1 ಹೊತ್ತಿನ ಕೂಳಿಗೂ ಗತಿ ಇಲ್ಲದ ಇವರು, ನಮ್ಮಂತೆ ನೆಮ್ಮದಿಯ ಮನೆ ಎಲ್ಲಿ ಕಂಡಾರು? ನಮ್ಮ ಬಳಿ ಉತ್ತಮ ಹೈಜೀನ್‌, ಔಷಧಿ, ಪೌಷ್ಟಿಕ ಆಹಾರ ದೊರಕಿಸಿಕೊಳ್ಳಲು ಅವಕಾಶ ಇದೆ. ಆದರೆ ಈ ಪಾಪದವರ ಬಳಿ ಅಂಥ ಎಲ್ಲಿಂದ ಬರಬೇಕೇ? ಹಾಗಿರುವಾಗ ಇದನ್ನು  ಹೇಗೇ ಸಹಿಸುತ್ತಾರೆ? ಈ ಎಲ್ಲಾ ಸಮಸ್ಯೆಗಳಿಗೂ ಈ ಚಿತ್ರದಲ್ಲಿ ಉತ್ತರ ಹುಡುಕಲಾಗಿದೆ.

ನೀವು ಎಂಥ ಏರಿಯಾದ ಸ್ಲಂಗಳಿಗೆ ಹೋದಿರಿ? ಎಂತೆಂಥ ಬಡ ಹೆಂಗಸರನ್ನು ಭೇಟಿ ಆದಿರಿ?

ನಾನು ಈ ಚಿತ್ರವನ್ನು ಮುಂಬೈ, ದೆಹಲಿ, ಅಮೃತಸರ್‌ ನಗರಗಳಲ್ಲಿ 1 ವರ್ಷದ ಶೂಟಿಂಗ್‌ ನಡೆಸಿದೆ. ದಕ್ಷಿಣ ಭಾರತದ ಬೆಂಗಳೂರು, ಚೆನ್ನೈ, ಹೈದರಾಬಾದ್‌ ಕವರ್‌ ಮಾಡಬೇಕಿತ್ತು, ಬಜೆಟ್‌ ಸರಿಹೊಂದಲಿಲ್ಲ. ವರ್ಷವಿಡೀ ಚಳಿ, ಮಳೆ, ಬಿಸಿಲೆನ್ನದೆ ಹೊರಾಂಗಣದ ಶೂಟಿಂಗ್‌ ನಡೆಸಿದೆ. ಪ್ರತಿ ಋತುವಿನಲ್ಲೂ ಸಮಸ್ಯೆ ಬೇರೆ ಬೇರೆ  ಆಗಿರುತ್ತೆ. ನಾವು ಸ್ಲಂನ ಗಲ್ಲಿಗಲ್ಲಿಗಳನ್ನೂ, ಕೊಳಗೇರಿಯ ಬೀದಿ ಬೀದಿಗಳ ಹೆಂಗಸರನ್ನೂ ಈ ಬಗ್ಗೆ ವಿಚಾರಿಸಿದೆವು.

ಎಷ್ಟೋ ಸಲ ಮಾಹಿತಿ ಸಿಗುತ್ತಿತ್ತು, ಮತ್ತೆ ಕೆಲವು ಸಲ ಸಿಗುತ್ತಿರಲಿಲ್ಲ. ಎಷ್ಟೋ ಹೆಂಗಸರು ಈ ಬಗ್ಗೆ ದಿವ್ಯ ಮೌನ ವಹಿಸಿದ್ದರು. ರೈಲ್ವೆ ಹಳಿಗಳಿಂದ, ಕೂಲಿ ಕಾರ್ಮಿಕ ಹೆಂಗಸರನ್ನೂ ಬಿಡದೆ ಎಲ್ಲರನ್ನೂ ಮಾತನಾಡಿಸಿದೆವು. ನಾವು ಮುಂಬೈನ ಹಾಜಿ ಅಲಿ ಮಸೀದಿ ಸುತ್ತಮುತ್ತಾ ಅಮೃತಸರ್‌ ದ ಗೋಲ್ಡನ್‌ ಟೆಂಪಲ್, ದೆಹಲಿಯ ಕನಾಟ್‌ ಪ್ಲೇಸ್‌, ಮಂದಿರಗಳ ಸುತ್ತಮುತ್ತಲೂ ತಡಕಾಡಿದೆವು. ಪ್ರತಿ ಋತುವಿನಲ್ಲೂ ಪ್ರತಿಯೊಬ್ಬರನ್ನೂ ಮಾತನಾಡಿಸಿದ್ದೇವೆ.

ನೀವೇನೋ ಇಷ್ಟೆಲ್ಲ ಮಾಡಿದಿರಿ, ಆದರೆ ನಮ್ಮ ದೇಶದಲ್ಲಿ ಹೆಂಗಸರಿಗೆ ಇಂಥ ದುಃಸ್ಥಿತಿ ಏಕೆ ಎಂದು ವಿಚಾರ ಮಾಡಿದಿರಾ? ಇಂದಿಗೂ ನಮ್ಮ ದೇಶದಲ್ಲಿ ದೈಹಿಕ ಸುರಕ್ಷೆ, ಪ್ಯಾಡ್‌ ಗೆ ಬದಲಾಗಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದೇ ಇವರಿಗೆ ದೊಡ್ಡ ಸಮಸ್ಯೆ ಆಗಿದೆ, ಅಲ್ಲವೇ? ಹಸಿದು ಕಂಗಾಲಾದವರು ಯಾವ ಭಕ್ತಿ ಆಚರಿಸಲು ಸಾಧ್ಯ? ಹಸಿವಿಗಿಂತ ದೊಡ್ಡ ಸಮಸ್ಯೆ ಇರಲು ಸಾಧ್ಯವೇ ಇಲ್ಲ! ಇದಕ್ಕೆ ನಮ್ಮ ಸಿಸ್ಟಂ ದೊಡ್ಡ ದೋಷ ಎನ್ನಬೇಕು. ನಮ್ಮಲ್ಲಿ ಎಲ್ಲರಿಗೂ ಸಮಾನ ಆದಾಯ ಎಲ್ಲಿದೆ? ಬಡವರು ಬಲ್ಲಿದರ ಮಧ್ಯೆ ನಮ್ಮ ದೇಶದಲ್ಲಿ ದೊಡ್ಡ ಕಂದಕವೇ ಇದೆ.

ಶ್ರೀಮಂತರ ಬಳಿ ಎಷ್ಟು ಜಾಸ್ತಿ ಆಹಾರ ಸಾಮಗ್ರಿ ಉಳಿಯುತ್ತದೆ  ಎಂದರೆ, ತಾವು ತಿಂದುಳಿದಿದ್ದನ್ನು ಸೀದಾ ಅವರು ತಿಪ್ಪೆಗೆ ಸುರಿಯುತ್ತಾರೆ. ಅದೇ ದಟ್ಟ ದರಿದ್ರ ಸ್ಲಂನವರಿಗೆ ಒಂದು ಹೊತ್ತಿನ ಕೂಳಿಗೂ ಗತಿ ಇರೋಲ್ಲ. ಇದು ನಮ್ಮ ಸಿಸ್ಟಂ ಮಾಡಿರುವ ದೊಡ್ಡ ತಪ್ಪಲ್ಲವೇ? ಈ ಕುರಿತಾಗಿ ಸರ್ಕಾರ ಏನೇ ಸೌಲಭ್ಯ ಕಲ್ಪಿಸಿದರೂ ಅದು ತಲುಪಬೇಕಾದ ಬಡವರನ್ನು ಖಂಡಿತಾ ತಲುಪೋಲ್ಲ! ಜೊತೆಗೆ ಇವರು ನಿರಕ್ಷರ ಕುಕ್ಷಿಗಳು, ಸ್ವಲ್ಪವಾದರೂ ಶಿಕ್ಷಣ ದೊರಕಿದರೆ ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆ ಸ್ವಲ್ಪವಾದರೂ ಅರಿತಾರು.

ಭಿಕಾರಿಗಳದೂ ದೊಡ್ಡ ರಾಕೆಟ್ಇರುತ್ತಂತೆ……?

ನಾನೂ ಈ ಬಗ್ಗೆ ಕೇಳಿದ್ದೇನೆ. ಆದರೆ ಇದು ಖಂಡಿತಾ ಅಪರಾಧ! ಇಂಥ ರಾಕೆಟ್‌ ನಡೆಸುವವರನ್ನು ಹಿಡಿದು ಸರ್ಕಾರ ಶಿಕ್ಷಿಸಬೇಕು. ಇಂಥ ರಾಕೆಟ್‌ ನಿಂದ ಮಕ್ಕಳನ್ನು ಬಿಡಿಸಿ, ಅವರಿಗೆ ವೃತ್ತಿನಿರತ ತರಬೇತಿ ಸಿಗುವಂತೆ ಮಾಡಿದರೆ ಮುಂದೆ ಹೇಗೋ ಬದುಕಿಕೊಂಡಾರು.

ನಮ್ಮ ದೇಶದ ಇಂಥ ಹೆಂಗಸರ ಕಷ್ಟ ನಿವಾರಣೆ ಮಾಡುತ್ತಿಲ್ಲವೇ?

ಆ ಬಗ್ಗೆ ಸ್ಪಷ್ಟ ಐಡಿಯಾ ಇಲ್ಲ. ನಾನು `ಸೀರಾ’ ಎಂಬ ಜೊತೆ ನಂಟು ಹೊಂದಿರುವೆ. ಆ ಸಂಸ್ಥೆ ಈ ನಿಟ್ಟಿನಲ್ಲಿ ಬಹಳ ಒಳ್ಳೆಯ ಕ್ರಮ ಕೈಗೊಂಡಿದೆ. ಆ ಸಂಸ್ಥೆ  ಹ್ಯೂಮನ್‌ ಹೈಜೀನ್‌, ಚೈಲ್ಡ್ ವೆಲ್ ‌ಫೇರ್‌, ಪ್ಯಾಡ್‌ ಸಹಿತ ಎಲ್ಲಾ ವಿಭಾಗಗಳಲ್ಲೂ ಸಾಕಷ್ಟು ಕೆಲಸ ಮಾಡುತ್ತಿದೆ. ನಾನೂ ಈ ಸಂಸ್ಥೆಯ ಸಕ್ರಿಯ ಸದಸ್ಯೆ.ನನ್ನ ಅಭಿಪ್ರಾಯದಲ್ಲಿ ಎಲ್ಲಾ ಹೆಂಗಸರ ಯಾವುದೇ ಸಮಸ್ಯೆ ಇರಲಿ, ಅದರ ನಿವಾರಣೆಗೆ ಯತ್ನಿಸುತ್ತಾ ಅವರ ಪರವಾಗಿ ಜೋರು ದನಿ ಎತ್ತಬೇಕು. ಎಲ್ಲದಕ್ಕೂ ಸೋಶಿಯಲ್ ಮೀಡಿಯಾಗಳ ವಿಚಾರ ಇದೆ…. ಯಾರ ಬಳಿ ಹಣಬಲ ಇಲ್ಲವೋ, ಯಾರು ಅತಿ ಧನಿಕರೋ ಅಂಥವರು ಸುಲಭವಾಗಿ ತಮ್ಮ ದನಿ ಎತ್ತುತ್ತಾರೆ. ಆದರೆ ಮಧ್ಯಮ, ಕೆಳಮಧ್ಯಮ ವರ್ಗದ ಹೆಂಗಸರ ದನಿ ಕೇಳುವವರೇ ಇಲ್ಲ! ಜೊತೆಗೆ ಕಡು ಬಡವರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸಿ, ಅದಕ್ಕೆ ಪರಿಹಾರ ನೇರ ಅವರಿಗೇ ಸಿಗುವಂತೆ ಮಾಡುವಲ್ಲಿಯೂ ಮೀಡಿಯಾ  ಪ್ರಮುಖ ಪಾತ್ರ ವಹಿಸಬೇಕು.

ಸೋಶಿಯಲ್ ಮೀಡಿಯಾಗಳಲ್ಲಿ ಯಾರೇ ಸಾಮಾನ್ಯ ವ್ಯಕ್ತಿ ಟ್ವೀಟ್‌ ಮಾಡಿದರೂ, ಅದನ್ನು ಸಹಸ್ರಾರು ಜನ ಗಮನಿಸುತ್ತಾರೆ. ಅದು ಕಾಳ್ಗಿಚ್ಚಿನಂತೆ ಹರಡುತ್ತದೆ. ಮೀಡಿಯಾ ಈ ಕೆಲಸ ಮಾಡಲೇಬೇಕು. ಆದರೆ ನಿರಕ್ಷರರು ಮೀಡಿಯಾ ಬಳಿ ತಮ್ಮ ಸಮಸ್ಯೆ ಹೇಳಿಕೊಳ್ಳುವುದಾದರೂ ಹೇಗೆ? ಇಂಥವರಲ್ಲಿ ನಕಾರಾತ್ಮಕತೆ ಇಲ್ಲ ಅಂತಲ್ಲ, ಆದರೆ ಇರುವುದರಲ್ಲಿ ಅವುಗಳಿಂದ ತುಸು ಕೆಲಸ ಆಗುತ್ತದೆ ಎಂಬುದೇ ಸಮಾಧಾನ!

`ಸೀರಾಸಂಸ್ಥೆ ಮೂಲಕ ನೀವು ಏನೆಲ್ಲ ಮಾಡುತ್ತಿದ್ದೀರಿ?

ಈ ಸಂಸ್ಥೆ  ಹೆಣ್ಣಿನ ಏಳಿಗೆ, ಮಕ್ಕಳ ಬವಣೆ, ಅವರ ಕಲ್ಯಾಣ ಕಾರ್ಯಗಳು, ಆರೋಗ್ಯ, ಪೌಷ್ಟಿಕತೆ, ಪರಿಸರ ರಕ್ಷಣೆ….. ಇತ್ಯಾದಿ ಹಲವು ಕೆಲಸಗಳನ್ನು ಹಮ್ಮಿಕೊಂಡಿದೆ. ಈ ಸಂಸ್ಥೆ ದೇಶವಿಡೀ ಹರಡಿದೆ. ಸ್ಯಾನಿಟರಿ ನ್ಯಾಪ್‌ ಕಿನ್‌ ಕುರಿತಾಗಿ ಈ ಸಂಸ್ಥೆ ಎಷ್ಟು ಸಕ್ರಿಯವಾಗಿದೆ ಎಂದರೆ, ನಾನು ಈ ಹೊಸ ಚಿತ್ರದಲ್ಲಿ ಹೇಳಿರುವ ಬದಲಾವಣೆ ಕಾಣುತ್ತಿದ್ದೇವೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ