ಪಾರ್ವತಿ ಹಾಗೂ ಪರಮೇಶ್ವರ್ ಇಬ್ಬರಿಗೂ ಮದುವೆ ಆಗಿ ಹತ್ತು ವರ್ಷ ಕಳೆದರೂ ಮಕ್ಕಳ ಭಾಗ್ಯ ಕರುಣಿಸಿರಲಿಲ್ಲ ಆ ಭಗವಂತ.. ಆಗುವುದು ಎಂಬ ಭರವಸೆ ಬೆಳಕಿನ ಜೊತೆಗೆ ಬದುಕು ಸಾಗಿಸುತಿದ್ದರು……’
“ಪಾರ್ವತಿಗೆ ಮಕ್ಕಳನ್ನು ನೋಡಿದರೆ ಸಾಕು ಕಣ್ತುಂಬಿ ಬಿಡುತ್ತಿತ್ತು. ನಮಗೂ ಒಂದು ಮುದ್ದಾದ ಮಗು ಮನೆಯಲ್ಲಿ ಇದ್ದರೆ ಎಷ್ಟು ಚೆನ್ನಾಗಿತ್ತು
ಎಂದೂ ಹಗಲು ರಾತ್ರಿ ಮಕ್ಕಳದೇ ಚಿಂತೆ ಇಬ್ಬರಿಗೂ….”
ಪರಮೇಶ್ವರ್ ಹಾಗೂ ಪಾರ್ವತಿ ಊರಿಗೆ ಹೋಗಿ ಬರುತ್ತಿರುವಾಗ ಸುಮಾರು ರಾತ್ರಿ 12 ಗಂಟೆಗೆ ರಸ್ತೆಯಲ್ಲಿ ಗರ್ಭಿಣಿ ಹುಡುಗಿಯೊಬ್ಬಳು ಜೋರಾಗಿ ಕಿರುಚುತ್ತಿರುತ್ತಾಳೆ.
“ಕಾರ್ ನಿಲ್ಲಿಸಿ ಇಬ್ಬರೂ ಆಸ್ಪತ್ರೆಗೆ ಸೇರಿಸುತ್ತಾರೆ ”
“ಎರಡು ಗಂಟೆಯ ಬಳಿಕ ಗಂಡು ಮಗುವಾಗಿದೆ ಎಂದೂ ಇವರಿಗೆ ಮಗುವನ್ನು ತೋರಿಸುತ್ತಾರೆ…..”

ಪಾರ್ವತಿಯ ಕಣ್ಣುಗಳಲ್ಲಿ ಆನಂದಬಾಷ್ಪ ಇಷ್ಟು ಪುಟ್ಟ ಕಂದನನ್ನು ನೋಡುವ ಸೌಭಾಗ್ಯ
“ಸ್ವಲ್ಪ ಗಂಟೆಯ ಬಳಿಕ ಮಗುವಿನ ತಾಯಿಯನ್ನು ವಾರ್ಡ್ ಗೆ ಶಿಫ್ಟ್ ಮಾಡುತ್ತಾರೆ….”
ಇನ್ನು 18 ರ ವಯಸು ಮಗುವಾಗಿರುವ ಖುಷಿ ಇಲ್ಲ ಮುಖದಲ್ಲಿ ಹತಾಶೆ….ಆ ಹುಡುಗಿಗೆ “ಇವರಿಬ್ಬರನ್ನು ನೋಡಿ ಆ ಹುಡುಗಿ ಕೈಮುಗಿದಳು.”ಹಾಗೆ ದುಃಖದ ಕಟ್ಟೆ ಹೊಡೆದು ಕಣ್ಣುಗಳಿಂದ ಒಂದೇ ಸಮನೆ ನೀರು ಸುರಿಯುತ್ತಿತ್ತು..
ಪಾರ್ವತಿ: ಬಾಣಂತಿ ಕಣ್ಣೀರು ಹಾಕುವುದು ಒಳ್ಳೆಯದಲ್ಲ… ಎಂದು ತಲೆ ಸವರಿ ನಿನ್ನ ಹೆಸರೇನು….? ಏಕೆ ಯಾರು ಇಲ್ವಾ ನಿನ್ನ ಕಡೆ ಅವರು….?ರಸ್ತೆಯಲ್ಲಿ ಒಬ್ಬಳೇ……??
“ಅಳುತ್ತಾ, ನನ್ನ ಹೆಸರು ದಿಯಾ….ನನಗೆ ಮದುವೆನೇ ಆಗಿಲ್ಲ. ಕಾಲೇಜಿನಲ್ಲಿ ಓದುತ್ತಿರುವಾಗ ಪ್ರೀತಿಯನ್ನು ನಂಬಿ ನನ್ನ ಸರ್ವಸ್ವವನ್ನೆ ಧಾರೆಯೆರೆದ ಅವನಿಗೆ. ಮದುವೆ ಆಗಲು ಬೇಡಿಕೊಂಡೆ ನಿರಾಕರಿಸಿಬಿಟ್ಟ ಪಾಪಿ, ಅವನಿಗೆ ಪ್ರೀತಿ ಬೇಕಾಗಿರಲಿಲ್ಲ,? ತನ್ನ ಬಯಕೆಯನ್ನು ತೀರಿಸಿಕೊಳ್ಳುವ ದಾಹ ಇತ್ತು. ಹೆಣ್ಣು ಮಕ್ಕಳ ಜೀವನದಲ್ಲಿ ಆಟ ಆಡುವುದೇ ಅವನ ಕೆಲಸ…. ಮನೆಯಲ್ಲಿ ಗರ್ಭಿಣಿ ಆಗಿರುವ ವಿಷಯ ತಿಳಿದು ಮನೆ ಇಂದ ಹೊರಗಡೆ ಹಾಕಿದರೂ…” ನನ್ನ ಕೈ ಇಂದ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಸಾಯಿಸಲು ಮನಸ್ಸು ಬರಲಿಲ್ಲ.
ಇಷ್ಟು ದಿವಸ ಗೆಳತಿಯ ಮನೆಯಲ್ಲಿ ಇದ್ದೆ. ಆದರೆ ಅವಳ ಗಂಡನಿಗೆ ನಾನಿರುವುದು ಸ್ವಲ್ಪ ಕೂಡ ಇಷ್ಟ ಇಲ್ಲ ರಾತ್ರಿ ನನ್ನ ಗೆಳತಿ ಅವಳ ಗಂಡ ಜಗಳವಾಡುತ್ತಿದ್ದರು ನನ್ನ ಸಲುವಾಗಿ ಅದಕ್ಕೆ ಹೇಳದೆ ಕೇಳದೆ ತುಂಬು ಗರ್ಭಿಣಿ ಮನೆಯಿಂದ ಹೊರಗೆ ಕಾಲಿಟ್ಟ ಅಷ್ಟರಲ್ಲಿ ಹೆರಿಗೆ ನೋವು ನೀವು ದೇವರಂತೆ ಬಂದು ಕಾಪಾಡಿ ನನಗೆ ಮರು ಜೀವ ಕೊಟ್ಟವರು….”
“ಎಂದೂ ಮತ್ತೊಮ್ಮೆ ಅಳುತ್ತಾ ಕೈ ಮುಗಿದಳು….”
ಇವಳ ಕರುಣಾಜನಕ ಕಥೆಯನ್ನು ಕೇಳಿ ಪರಮೇಶ್ವರ ಹಾಗೂ ಪಾರ್ವತಿಗೆ ಕಣ್ಣೀರು ಬಂತು…
“ಭಗವಂತ ಎಷ್ಟು ಕ್ರೂರ ಮಕ್ಕಳನ್ನು ಬಯಸುವವರಿಗೆ ಮಕ್ಕಳನ್ನು ಕೊಡದೆ ಆಟ ಆಡಿಸುತ್ತಾನೆ…
ಮಕ್ಕಳೇ ಬೇಡ ಎನ್ನುವವರಿಗೆ ಮಕ್ಕಳನ್ನು ಕೊಟ್ಟು ತಮಾಷೆ ನೋಡುತ್ತಾನೆ…..”
ದಿಯಾ ಹಾಗೂ ಮಗುವನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು.ತಾಯಿಗಿಂತ ಹೆಚ್ಚಾಗಿ ದಿಯಾ ಹಾಗೂ ಮಗುವನ್ನು ನೋಡಿಕೊಳ್ಳುತ್ತಿದ್ದರು ಪಾರ್ವತಿ. ಇಬ್ಬರಿಗೂ ಇದ್ದ ಕೊರಗು ಈಗ ಮಗುವನ್ನು ನೋಡಿ ಸ್ವಲ್ಪ ಕಮ್ಮಿ ಆಯಿತು…..”
“ಯಾರು ಏನೇ ಹೇಳಲಿ ಇಂದಿನಿಂದ ನೀನು ನನ್ನ ಒಡಹುಟ್ಟಿದ ತಂಗಿ ಗಿಂತ ಹೆಚ್ಚು ಎಂದು ದಿಯಾಳಿಗೆ ಭರವಸೆಯ ಬೆಳಕು ಚೆಲ್ಲಿದರು ಪರಮೇಶ್ವರ್ ಅವರು..”
“ದಿಯಾ ಳ ಬಾಳಲ್ಲಿ ಸ್ವಲ್ಪ ಖುಷಿ ಪಡೆಯುವಂತಾಯಿತು ಇವರಿಬ್ಬರ ದಯೆಯಿಂದ… ”
“ಹೀಗೆ ಒಂದು ವರ್ಷ ಕಳೆಯಿತು…”
ದಿಯಾಗೆ ಅರಿವಾಗಿತ್ತು. ಇವರಿಬ್ಬರಿಗೆ ಮಕ್ಕಳಿಲ್ಲದ ಕೊರಗಿದೆ ಎಂದೂ.. ಇಬ್ಬರ ಬಳಿ ಬಂದ ದಿಯಾ…..: ಅಣ್ಣಾ ಅತ್ತಿಗೆ ಈ ಮಗೂಗೆ ನೀವೇ ಅಪ್ಪ ಅಮ್ಮ ಆಗುತ್ತೀರಾ…..?? ಈ ಜಗತ್ತಿನಲ್ಲಿ ಈ ಮಗೂಗೆ ಒಳ್ಳೆ ಸ್ಥಾನಮಾನ ಸಿಗುವುದು ನಿಮ್ಮ ಬಳಿಯಲ್ಲಿ ಇದ್ದರೆ…
ನನ್ನ ಜೊತೆಗೆ ಇದ್ದರೆ ಅವಮಾನ ಕೊನೆಯವರೆಗೂ
ಪರಮೇಶ್ವರ್ : ದಿಯಾ ಯಾಕಮ್ಮ ಇವತ್ತು ಏನೇನೋ ಮಾತಾಡ್ತಾ ಇದ್ದೀಯಾ…..????
ಏಕೋ ನಾನು ತುಂಬಾ ದಿವಸ ಬದುಕಿರುವುದಿಲ್ಲ ಅಂತಾ ಅನಿಸ್ತಾ ಇದೆ ಎಂದವಳೇ ಹಾಗೆ ಕುಸಿದು ಬಿದ್ದಳು. ಆಸ್ಪತ್ರೆಗೆ ಸೇರಿಸಿದಾಗ ತಿಳಿಯಿತು ದಿಯಾ ಗೆ ಬ್ರೈನ್ ಟ್ಯೂಮರ್”
ಸ್ವಲ್ಪ ದಿನಗಳಲ್ಲಿ ದಿಯಾ ಮಗುವನ್ನು ಪಾರ್ವತಿ ಮಡಿಲಿಗೆ ಹಾಕಿ ಕೊನೆಯುಸಿರೆಳೆದಳು……”
ದಿಯಾ ಳನ್ನು ಕಳೆದುಕೊಂಡು ತುಂಬಾ ನೋವಾಗಿತ್ತು ಇಬ್ಬರಿಗೂ ಒಂದೇ ಸಂತಸ ಈ ಮಗುವಿಗೆ ನಾವಿಬ್ಬರು ಅಪ್ಪ ಅಮ್ಮ ಅದೆವು ಎಂದೂ…..
“ಹೇಗಿರುತ್ತೆ ಪ್ರಪಂಚ ಹೆಣ್ಣು ಒಂದುಸಾರಿ ಮೈಮರೆತರೆ ಏನೆಲ್ಲಾ ಆಗುತ್ತೆ ಅಲ್ವಾ……. ಮಕ್ಕಳಿಲ್ಲದ ದಂಪತಿಗಳು ಎಷ್ಟು ಕೊರಗುತ್ತಾರೆ ಮಕ್ಕಳಿಲ್ಲ ಅಂತ…
ವಾಣಿ ಮೈಸೂರು