ಅನೂಪ್‌ ಗೆ ಹೊಸದಾಗಿ ನೌಕರಿ ಸಿಕ್ಕಿತ್ತು. ಅವನು ಯಾವ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದನೊ, ಅದೇ ಆಫೀಸಿನಲ್ಲಿ ಅವನಿಗೆ ಕೋಮಲಾಳ ಪರಿಚಯ ಆಗುತ್ತದೆ. ಅದೇ ಪರಿಚಯ ಸ್ನೇಹವಾಗಿ ನಂತರ ಪ್ರೀತಿಯಲ್ಲಿ ಬದಲಾಯಿತು. ಅನೂಪ್‌ ಕೋಮಲಾಳ ಜೊತೆಗೆ ಮದುವೆ ಮಾಡಿಕೊಳ್ಳಲು ಇಚ್ಛಿಸುತ್ತಿದ್ದ. ಆದರೆ ಕೋಮಲಾ ಮದುವೆಗೆ ನಿರಾಕರಿಸುತ್ತಲೂ ಇರಲಿಲ್ಲ, ಒಪ್ಪಿಗೆಯನ್ನೂ ನೀಡುತ್ತಿರುಲಿಲ್ಲ. ಅನೂಪ್‌ ಇದಕ್ಕೆ ಕಾರಣ ತಿಳಿಯಲು ಬಯಸಿದ್ದ. ಒಂದು ದಿನ ಆ ಅವಕಾಶ ಬಂದೇಬಿಟ್ಟಿತು. ಇಬ್ಬರೂ ಮುಖಾಮುಖಿಯಾಗಿ ಕುಳಿತಿದ್ದರು........

ಮುಂದೆ ಓದಿ......

ಕೋಮಲಾಳ ಸಾಂಗತ್ಯ ಸಿಗುತ್ತಿದ್ದಂತೆ ಅನೂಪ್‌ ಗೆ ಜೀವನದ ದಿಕ್ಕು ದೆಸೆಯೇ ಬದಲಾಗಿಬಿಟ್ಟಿತು. ಒಂದೆಡೆ ಅವನು ಖುಷಿಗೊಂಡಿದ್ದನಾದರೆ, ಇನ್ನೊಂದೆಡೆ ಕೋಮಲಾಳ ನಿರ್ಧಾರದ ಬಗ್ಗೆ ಆತಂಕ ಇತ್ತು.....ಆಕಸ್ಮಿಕವಾಗಿ ಮೊಬೈಲ್ ನ ರಿಂಗ್‌ಹೊಡೆದುಕೊಳ್ಳತೊಗಿದಾಗ ಅವನಿಗೆ ನಿದ್ರೆಯಿಂದ ಎಚ್ಚರವಾಯಿತು. ಗಡಿಯಾರ ನೋಡಿದಾಗ 12 ಗಂಟೆ ತೋರಿಸುತ್ತಿತ್ತು. ಅದು ಕೋಮಲಾಳ ನಂಬರ್‌ ಆಗಿತ್ತು. ಅವನು ತಕ್ಷಣವೇ ಫೋನ್‌ ಎತ್ತಿಕೊಂಡ.

``ನೀವು ಮಲಕ್ಕೊಂಡಿದ್ರಾ? ನನ್ನಿಂದ ನಿಮ್ಮ ನಿದ್ರೆಗೆ ಅಡ್ಡಿಯುಂಟಾಗಿದ್ದರೆ ಕ್ಷಮಿಸಿ.''

``ಇಲ್ಲ... ಇಲ್ಲ..... ಹಾಗೇನೂ ಇಲ್ಲ. ಈಗಷ್ಟೆ ಮಲಗುತ್ತಿದ್ದೆ. ಸ್ವಲ್ಪ ನಿದ್ರೆ ಬಂದಿತ್ತು.....''

``ನೀವು ಸರಿಯಾಗಿ ಮನೆ ಸೇರಿದ್ರಾ.....?''

``ಹೌದು. ಯಾವುದೇ ತೊಂದರೆಯಾಗಲಿಲ್ಲ. ಅಲ್ಲಿಂದ ನಮ್ಮ ಮನೆ ಸಮೀಪವೇ ಅಲ್ವಾ....?''

``ಅನೂಪ್‌, ನಾನು ಮನೆ ಸೇರಿ ಬಹಳ ಯೋಚಿಸಿದೆ. ನಿಮ್ಮಂಥ ವ್ಯಕ್ತಿ ಲೈಫ್‌ ಪಾರ್ಟ್‌ ನರ್‌ ಆದರೆ ಜೀವನ ನೆಮ್ಮದಿಯಿಂದ ಸಾಗಬಹುದು ಅನಿಸಿತು. ನಾನು ನಿಮ್ಮ ಬಗ್ಗೆ ನನ್ನ ಅಪ್ಪ ಅಮ್ಮನಿಗೂ ವಿಷಯ ತಿಳಿಸಿದೆ. ಅವರು ನಿಮ್ಮನ್ನು ಭೇಟಿಯಾಗಲು ಇಚ್ಛಿಸಿದ್ದಾರೆ. ನಾಳೆಯೇ ಬರುವುದಾದರೆ ಬನ್ನಿ. ನಾನು ನಿಮಗೆ ವಾಟ್ಸ್ ಆ್ಯಪ್‌ ನಲ್ಲಿ ವಿಳಾಸ, ಲೊಕೇಶನ್‌ ಕಳಿಸುತ್ತೇನೆ.''

``ಹೀಗೂ ಆಗಬಹುದು ಎಂದು ನನಗೆ ನಂಬಿಕೆಯೇ ಬರ್ತಿಲ್ಲ. ಒಬ್ಬ ವ್ಯಕ್ತಿ ಅಪೇಕ್ಷಿಸಿದ್ದು ಇಷ್ಟು ಬೇಗ ಈಡೇರಲು ಸಾಧ್ಯವೇ? ಥ್ಯಾಂಕ್ಸ್ ಕೋಮಲಾ, ನಾನು ನಿಮಗೆ ಏನು ಹೇಳಬೇಕು ಎನ್ನುವುದಕ್ಕೆ ನನ್ನ ಬಳಿ ಪದಗಳೇ ಇಲ್ಲ. ನಾಳೆ ಬೆಳಗ್ಗೆವರೆಗೂ ಹೇಗೆ ಕಾಯುವುದು ಎಂದು ಯೋಚನೆ ಮಾಡ್ತಿರುವೆ. ನಾಳೆ 11 ಗಂಟೆಗೆ ನಿಮ್ಮ ಮನೆಗೆ ಬರುತ್ತೇನೆ.''

``ಬನ್ನಿ, ನಾಳೆ ನಾವೆಲ್ಲ ಜೊತೆ ಜೊತೆಗೆ ಕುಳಿತು ಊಟ ಮಾಡೋಣ. ನಾಳೆ ಭೇಟಿ ಆಗೋಣ. ಗುಡ್‌ ನೈಟ್‌.''

``ಟೇಕ್‌ ಕೇರ್‌ ಗುಡ್‌ ನೈಟ್‌.''

ಆಕಸ್ಮಿಕವಾಗಿ ಒದಗಿ ಬಂದ ಈ ಅವಕಾಶದಿಂದ ಅನೂಪ್‌ ತನ್ನನ್ನು ತಾನು ಜಗತ್ತಿನ ಅತ್ಯಂತ ಖುಷಿಯುಳ್ಳ ವ್ಯಕ್ತಿಯೆಂದು ಭಾವಿಸತೊಡಗಿದ. ಕಣ್ಣಿನಿಂದ ನಿದ್ರೆ ಮಾಯವಾಗಿ ಹೋಗಿತ್ತು. ಅವನಿಗೆ ಮರುದಿನ ಕೋಮಲಾಳ ಮನೆಗೆ ಹೋಗುವ ಕುರಿತಂತೆ ಟೆನ್ಶನ್‌ ಆಗುತ್ತಿತ್ತು. ಅವರ ಮನೆಯವರು ತನಗೆ ಏನೇನು ಪ್ರಶ್ನೆ ಕೇಳಬಹುದು, ತಾನು ಅದಕ್ಕೆ ಏನು ಉತ್ತರ ಕೊಡಬಹುದು, ಅದಕ್ಕೆ ಅವರ ಪ್ರತಿಕ್ರಿಯೆ ಹೇಗಿರುತ್ತದೋ ಎಂದೆಲ್ಲ ಅವನಿಗೆ ಯೋಚನೆ ಆಗುತ್ತಿತ್ತು. ಇಂತಹ ಸ್ಥಿತಿಯಲ್ಲಿ ಅವನಿಗೆ ನಿದ್ರೆಯಾದರೂ ಹೇಗೆ ಬರುತ್ತದೆ? ಅವನು ಟಿವಿ ಆನ್‌ ಮಾಡಿದ ಹಾಗೂ ಚಾನೆಲ್ ಗಳನ್ನು ಬದಲಿಸತೊಡಗಿದ. ಯಾವುದೊ ಒಂದು ಟಿ.ವಿ ಚಾನೆಲ್ ‌ಗಳಲ್ಲಿ ಹಳೆಯ ಸಿನಿಮಾ ಬರುತ್ತಿತ್ತು. ಅದನ್ನು ನೋಡುತ್ತಲೇ ಅವನು ನಿದ್ರೆಗೆ ಜಾರಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ