ಮಹಾರಾಷ್ಟ್ರ ರಾಜ್ಯ ಸರ್ಕಾರದಲ್ಲಿ ಮೂಡಿದ ಪರಿವರ್ತನೆಯಿಂದಾಗಿ ಶಿವಸೇನಾದ ಮಹಾ ಅಗಾಡಿ ವಿಕಾಸ್‌ ಸಮ್ಮಿಶ್ರ ಸರ್ಕಾರದಿಂದಾಗಿ ಉದ್ಧವ್ ಠಾಕ್ರೆ ಡಿಫೆಕ್ಷನ್‌ ಗಳಿಂದ ಅಧಿಕಾರ ಮೊಟಕುಗೊಳಿಸಿದರು ಹಾಗೂ ಅಮೆರಿಕಾದ ಸುಪ್ರೀಂ ಕೋರ್ಟ್ ತೆಗೆದುಕೊಂಡ ನಿರ್ಣಯ, ಅರ ಸಂವಿಧಾನ ಹೆಂಗಸರ ಗರ್ಭಪಾತ ಯಾವುದೇ ಸಾಂವಿಧಾನಿಕ ಹಕ್ಕು ಅಲ್ಲ ಎಂದಿದೆ, ನಮ್ಮಲ್ಲಿನ ಸಾಧಾರಣ ಮನೆಗಳಲ್ಲಿ ಇದರ ಪರಿಣಾಮ ಆದೀತೇ?

ಈ ಪ್ರಕರಣಗಳು ಕಾನೂನಾತ್ಮಕ, ರಾಜಕೀಯ, ಪಕ್ಷಕ್ಕೆ ಸಂಬಂಧಿಸಿದ ನಿರ್ಣಯಗಳೇ ಹೊರತು ಒಬ್ಬ ಸಾಮಾನ್ಯ ಮನೆ, ಗೃಹಿಣಿ, ಮಕ್ಕಳು, ನೆಂಟರು ಮುಂತಾದವರಿಗೆ ಈ ಎರಡು ಘಟನೆಗಳಿಂದ ಯಾವುದೇ ಚಿಂತೆ ಇಲ್ಲ ಅಥವಾ ಇದರ ಕುರಿತು ತಿಳಿಯಲು ಯಾ ಯೋಚಿಸಲು ಹೋಗುವುದೂ ಇಲ್ಲ. ಆದರೆ ವಿಷಯ ಗಂಭೀರವಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಭಾರತ ಹಾಗೂ ಅಮೆರಿಕಾದ ಪ್ರತಿ ಮನೆಯ ಮೇಲೂ ಪರಿಣಾಮ ಆಗುತ್ತದೆ.

ಮಹಾರಾಷ್ಟ್ರದ ಸರ್ಕಾರದ ಪರಿವರ್ತನೆ ಮತ್ತೊಮ್ಮೆ ನೆನಪಿಸುವುದೆಂದರೆ, ನೀವು ಯಾವದರ ಮೇಲೂ ಸಂಪೂರ್ಣ ಭರವಸೆ ಇಡುವಂತಿಲ್ಲ. ಅದು ಸ್ಪಷ್ಟಪಡಿಸುವ ಮತ್ತೊಂದು ವಿಷಯವೆಂದರೆ, ನಿಮ್ಮ ರಾಜಕೀಯ ನಾಯಕರು, ಮಾಲೀಕರು, ಸರಪಂಚರು ತಮ್ಮ ತಮ್ಮಲ್ಲಿ ಯಾವಾಗ ಬೇಕಾದರೂ ಬೆನ್ನಿಗೆ ಚೂರಿ ಹಾಕಿಕೊಳ್ಳಬಹುದು, ಅವರು ಅಪರಾಧಿ ಆಗಬೇಕೆಂದಿಲ್ಲ, ಯಾ ಮಹಾನ್ ವ್ಯಕ್ತಿಯೂ ಆಗಬಹುದು. ವಾಲಿಯನ್ನು ತಮ್ಮ ಸುಗ್ರೀವ ಕೊಲ್ಲಿಸಿದ ಹಾಗೆ ಅಥವಾ ರಾವಣನನ್ನು ವಿಭೀಷಣ ಕೊಲ್ಲಿಸಿದ ಹಾಗೆ! ಈ ಅಧಿಕಾರ ಬದಲಾವಣೆಯನ್ನು ಬಹಳಷ್ಟು ಚಾನೆಲ್ ‌ಗಳು ತೋರಿಸಿ ಚಪ್ಪಾಳೆ ಗಿಟ್ಟಿಸಿದ. ಬಹಳಷ್ಟು ನೇತಾರರು ಕಂಗ್ರಾಟ್ಸ್ ಎಂದರು, ಉದ್ಧವ್ ಠಾಕ್ರೆ ವಿರುದ್ಧ ಸಿಡಿದೆದ್ದವರಿಗೆ ಲಡ್ಡು ಹಂಚಿದರು. ಹೀಗೆ ಮಾಡಿದ್ದು ಸರಿ ಎಂದರೆ, ನಿಮ್ಮ ನಾಯಕರ ವಿರುದ್ಧ ಸಂಚು ಹೂಡುವುದು ಸರಿ ಎನಿಸಿದರೆ, ಅತ್ತಿಗೆ ನಾದಿನಿ ಪಿತೂರಿ ನಡೆಸುವುದು ಏಕೆ ತಪ್ಪು? ಅಣ್ಣ ತಮ್ಮಂದಿರು ಪರಸ್ಪರ ಮೋಸ ಮಾಡುತ್ತಾ ಅಪ್ಪನ ಆಸ್ತಿ ಲಪಟಾಯಿಸುವುದು ಹೇಗೆ ತಪ್ಪು? ಚಿಕ್ಕ ವಯಸ್ಸಿನ ಪತ್ನಿಗೆ ಫ್ರಿಫರೆನ್ಸ್ ನೀಡಿ ತಾಯಿ ತಂದೆಯರನ್ನು ಬೇರೆ ಇರಿಸುವುದು ಹೇಗೆ ತಪ್ಪಾದೀತು? ರಾಜಕೀಯ ಧುರೀಣರು ಹೀಗೆ ಮೋಸ ಮಾಡಬಹುದಾದರೆ ಅಣ್ಣ, ತಂಗಿ, ನೆಂಟರು,  ಮಗ, ಮಗಳು ಯಾಕೆ ಮೋಸ ಮಾಡಬಾರದು? ಗುರಿ ಸ್ವಾರ್ಥ ಸಾಧನೆ ಆಗಿರುವಾಗ ಅದು ಏಕನಾಥ್‌ ಶಿಂದೆಗೆ ಲಾಭ ತಂದುಕೊಟ್ಟು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿಸಿತು. `ಯಥಾ ರಾಜಾ ತಥಾ ಪ್ರಜಾ’ ಎಂಬಂತೆ ನಮ್ಮ ಮಹಾನ್‌ ನಾಯಕರು ಕರ್ನಾಟಕ, ಮ.ಪ್ರ., ಗೋವಾ, ಅರುಣಾಚಲಾ ಪ್ರದೇಶಗಳಲ್ಲಿ ಹೀಗೇ ಮಾಡಿದರೆ, ನಾವು ನಮ್ಮ ಮನೆಗಳಲ್ಲಿ ಏಕೆ ಮಾಡಬಾರದು? ರಾಜನ ಆಜ್ಞೆಯಂತೆ ಅಲ್ಲವೇ ಪ್ರಜೆಗಳು ನಡೆಯುವುದು…..?

ಹೀಗೆ ಅಮೆರಿಕಾದಲ್ಲೂ ಸಹ ನಡೆದಿದೆ. ಅಲ್ಲಿ, ಒಬ್ಬ ಹೆಂಗಸಿಗೆ ನಿನ್ನ ದೇಹದ ಮೇಲೆ ನಿನಗೆ ಹಕ್ಕಿಲ್ಲ ಎಂದು ಸಾರಲಾಗಿದೆ. ಏಕೆಂದರೆ ಸಂವಿಧಾನ ಹಿಂದೆ ಗರ್ಭಪಾತವನ್ನು ಅವೈಜ್ಞಾನಿಕ ಎಂದು ಹೇಳಿದಾಗ, ಮೆಡಿಕಲ್ ಇಷ್ಟು ಮುಂದುವರಿದಿರಲಿಲ್ಲ. ಸಂವಿಧಾನದಲ್ಲಿ ಹೇಳದಿದ್ದ ಮೇಲೆ ಅದು ಖಂಡಿತಾ ತಪ್ಪೇ! ನಾಳೆ ಹೆಣ್ಣನ್ನು ಹೊಡೆದು ಬಡಿದು ಮಾಡುವುದನ್ನು ಅಮೆರಿಕಾ ಸುಪ್ರೀಂ ಕೋರ್ಟ್‌ ಸರಿ ಎಂದರೂ ಆಶ್ಚರ್ಯವಿಲ್ಲ. ಏಕೆಂದರೆ ಕ್ರೈಸ್ತ ಧರ್ಮದಲ್ಲಿ ಪತಿ ಪತ್ನಿಯನ್ನು ಹೊಡೆಯುವುದನ್ನು ತಪ್ಪೆಂದು ಹೇಳಿಲ್ಲ ಹಾಗೂ ಸಂವಿಧಾನ ಪತ್ನಿಗೆ ಸ್ಪಷ್ಟ ಹಕ್ಕನ್ನೂ ನೀಡಿಯೇ ಇಲ್ಲ.

ಸುಪ್ರೀಂ ಕೋರ್ಟ್‌ ಹೇಳುವುದೆಂದರೆ ಬೈಬಲ್ ಹೇಳಿದಂತೆ ಕೇಳಿ, ಚರ್ಚ್‌ ನ ಫಾದರ್‌ ಏನು ಹೇಳುತ್ತಾರೋ ಅದುವೇ ವೇದವಾಕ್ಯ ಮತ್ತು ಫಾದರ್‌ ಹೊಡೆಸಿಕೊಳ್ಳುವವಳಿಗೆ ಹೇಳುವುದೆಂದರೆ, ಹೊಡೆದವನಿಗೆ ದೇವರೇ ಶಿಕ್ಷಿಸುತ್ತಾನೆ, ನೀನು ಅನುಭವಿಸುತ್ತಲೇ ಇರು. ಸುಪ್ರೀಂ ಕೋರ್ಟ್‌ ಮತ್ತೂ ಹೇಳುವುದೆಂದರೆ ಅಮೆರಿಕಾದ ಸಂವಿಧಾನದಲ್ಲಿ ರೇಪ್‌ ವಿರುದ್ಧ ಏನೂ ಹೇಳಿಲ್ಲ, ಹೀಗಾಗಿ ರೇಪ್‌ ತಪ್ಪೇ ಅಲ್ಲ!

ಈ ತರಹ ತಲೆ ಬಾಲವಿಲ್ಲದ ಮಾತುಗಳನ್ನು ಕೋರ್ಟುಗಳು ಮಾತ್ರ ಹೇಳುತ್ತವೆ, ಅದೇನೂ ಸರಿಯಲ್ಲ. ಕೋರ್ಟ್‌ ಗಳ ನಿರ್ಣಯವಂತೂ ತಲೆ ಬಾಲವಿಲ್ಲದ ಮಾತುಗಳಿಂದಲೇ ತುಂಬಿವೆ. ರಾಮಮಂದಿರದ ಕುರಿತಾಗಿ ನಮ್ಮ ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಸ್ಪಷ್ಟ ಹೇಳಿದ್ದೆಂದರೆ, ಅಯೋಧ್ಯೆಯಲ್ಲಿ ಮಸೀದಿಯನ್ನು ಕೆಡವಿದ್ದು ಕಾನೂನುಬಾಹಿರ, ಜೊತೆಗೆ ಹೇಳಿದ್ದೆಂದರೆ, ಆ ನೆಲವನ್ನು ಹಿಂದೂ ಮಂದಿರಕ್ಕೆ ನೀಡಿ ಎಂಬುದು, ಇದೆಂಥ ವಾದ? ವಿಶ್ವದೆಲ್ಲೆಡೆ ಕೋರ್ಟ್‌ ಗಳು ಪರಸ್ಪರರ ನಿರ್ಣಯಗಳನ್ನು ಗಮನಿಸುತ್ತಲೇ ಇರುತ್ತವೆ. ಮುಂದೆ ಭಾರತದಲ್ಲಿ ಗರ್ಭಪಾತದ ಕುರಿತು ತುಸು ಅವಕಾಶ ಸಿಕ್ಕಿದರೂ, ಅದನ್ನು ವಾಪಸ್ ಕಿತ್ತುಕೊಂಡರೆ ಆಶ್ಚರ್ಯವಿಲ್ಲ. ಸ್ವಾತಂತ್ರ ಸಿಕ್ಕಿದ 30 ವರ್ಷಗಳಲ್ಲಿ ಭಾರತದಲ್ಲಿ ಗರ್ಭಪಾತ ಕಾನೂನುಬಾಹಿರವೇ ಆಗಿತ್ತು. ಭಾರತೀಯ ಕೋರ್ಟ್‌ ಗಳು ಎಂದೂ ಅದನ್ನು ಸಾಂವಿಧಾನಿಕ ಹಕ್ಕು ಎಂದು ಒಪ್ಪಿರಲೇ ಇಲ್ಲ. ಯಾರಾದರೂ ತಲೆ ಕೆಟ್ಟವರು ಈಗ ಆಗಿರುವ ಕಾನೂನು ತಪ್ಪು ಎಂದು ಕೋರ್ಟ್‌ ಗೆ ಹೋದರೆ ಇಂದಿನ ಜಡ್ಜ್ ಏನು ತಾನೇ ಹೇಳಿಯಾರು? ಅವರೂ ಸಹ ಅಮೆರಿಕಾದ ಉದಾಹರಣೆಯನ್ನೇ ಪಾಲಿಸುತ್ತಾರೆ.

ಜನತೆ ತಮ್ಮನ್ನು ತಾವು ಜಾಗರೂಕರಾಗಿ ಇರಿಸಿಕೊಳ್ಳಬಯಸಿದರೆ, ಈ ತರಹದ ತಲೆ ಬಾಲವಿಲ್ಲದ ಮಾತುಗಳನ್ನು ಪ್ರಶ್ನಿಸುವ ಹಾಗೆ ಇಲ್ಲ. ಹೀಗಾಗಿ ಮಹಾರಾಷ್ಟ್ರ ಯಾ ಅಮೆರಿಕಾದಲ್ಲಿ ಏನಾಯಿತು ಎಂಬುದನ್ನು ಗಮನಿಸಿಕೊಂಡು ಅದು ನಿಮ್ಮನ್ನು ಎಷ್ಟು ಬಾಧೀಸಿತು ಎಂಬುದನ್ನು ಕಂಡುಕೊಳ್ಳಿ.

ನಿರಾಯುಧರ ಮೇಲೆ ಯುದ್ಧ ಸಾರುವುದು ಹೇಡಿತನ

ಕಳೆದ ಕೆಲವು ವರ್ಷಗಳಿಂದ ಕಾಶ್ಮೀರ ಮತ್ತೊಮ್ಮೆ ಕೆಲವು ಗುಂಪುಗಾರಿಕೆಯವರ ಸ್ಪಾಟ್‌ ಆಗಿದೆ, ಅದರಲ್ಲೂ ವಿಶೇಷವಾಗಿ  ಚಳಿಗಾಲದಲ್ಲಿ ಗುಲ್ ಮರ್ಗ್‌ ನಲ್ಲಿ ಮಂಜು ತುಂಬಿಕೊಂಡಾಗ ಮತ್ತು ಸ್ಕೀಯಿಂಗ್‌, ಎಲೈಝಿಂಗ್‌ ನ ಮಜಾ ಪಡೆದುಕೊಳ್ಳುವ ಸಮಯದಲ್ಲಿ. ಈಗ ಕಾಶ್ಮೀರ ಮತ್ತೆ ಹಿಂದೂ ಮುಸ್ಲಿಂ ವಿವಾದಕ್ಕೆ ಸಿಲುಕಲಿದೆ.

ಭಾರತ ಸರ್ಕಾರ ಆತುರಾತುರವಾಗಿ ಕಾಶ್ಮೀರನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಅದನ್ನು ಉಪರಾಜ್ಯಪಾಲರ ವಶಕ್ಕೆ ನೀಡಿತು ಹಾಗೂ ಸಂವಿಧಾನದ ಕಲಂ 370ಯನ್ನು ಸಂಶೋಧಿಸಿ ಸಾರಿದ್ದರೆಂದರೆ, ಕಾಶ್ಮೀರ ಇದೀಗ ಸಂಪೂರ್ಣ ಭಾರತದ್ದೇ ಭಾಗ. ಆದರೆ ಮೇ-ಜೂನ್‌ ತಿಂಗಳಲ್ಲಿ ಉಂಟಾದ ಭಯೋತ್ಪಾದಕರ ಹಗರಣಗಳಿಂದ ಮತ್ತೆ ಆ ಹಳೆಯ ಕರ್ಮಕಾಂಡಗಳು ಮರಳಿ ಬಂದಂತಾಗಿವೆ. ದೇಶದ ಹೊರ ಭಾಗದಿಂದ ಜನ ಕಾಶ್ಮೀರದಲ್ಲಿ ವ್ಯಾಪಾರಕ್ಕೆ ಬರುವುದಕ್ಕೂ ಭಯಪಡುವಂತಾಗಿತ್ತು.

ಭಯೋತ್ಪಾದಕರು ಆರಿಸಿ ಆರಿಸಿ ದೇಶದ ಹೊರಗಿನ ಭಾಗಗಳಿಂದ ಬಂದ ಜನರನ್ನು ಹೊಡೆದು ಕೊಲ್ಲುತ್ತಿದ್ದಾರೆ. ಒಬ್ಬ ಟೀಚರ್‌ಮತ್ತು ನವವಿವಾಹಿತೆ ಬ್ಯಾಂಕ್‌ ಮ್ಯಾನೇಜರ್‌ ರ ಸಾವು ಮತ್ತೆ ಕಾಶ್ಮೀರನ್ನು ನಮ್ಮದಲ್ಲ ಎನಿಸಿದೆ. ಕೇಂದ್ರ ಸರ್ಕಾರದ ಸಮರ್ಥಕರು ತಮ್ಮ ಮೆಸೇಜ್‌, FB‌, ಟ್ವಿಟರ್‌ ಮುಖಾಂತರ ಕಾಶ್ಮೀರದಲ್ಲಿ ಸೈಟ್‌ ಕೊಳ್ಳಲು ಹೇಳುತ್ತಿದ್ದರು, ಈಗ ಅದೆಲ್ಲಿ ಹೋಗಿ ಬಾವಿಗಳಲ್ಲಿ ಅಡಗಿದ್ದಾರೋ ಗೊತ್ತಿಲ್ಲ. ಯಾವುದೇ ಪ್ರದೇಶ, ಜಾತಿ, ಧರ್ಮವನ್ನು ಶತ್ರುಗಳೆಂದು ಭಾವಿಸಿ ನಡೆಸುವ ನೀತಿ ಅಸಲಿಗೆ ಬಹಳ ಅಪಾಯಕಾರಿ. ಇಂದಿನ ನಗರ ಜೀವನದಲ್ಲಿ ಎಲ್ಲರಿಗೂ ಪರಸ್ಪರರ ಜೊತೆ ಹೊಂದಿಕೊಂಡು ಬಾಳುವ ಅಭ್ಯಾಸ ರೂಢಿಸಬೇಕು. ಏಕೆಂದರೆ ನಗರದ ಅರ್ಥವ್ಯವಸ್ಥೆ ಲಕ್ಷಾಂತರ ಜನರ ಒಗ್ಗಟ್ಟಿನಿಂದಾಗಿ ನಡೆಯುವಂಥದ್ದು.

ಪ್ರತಿ ಏರಿಯಾದಲ್ಲೂ, ಸೊಸೈಟಿಗಳಲ್ಲೂ, ಗಲ್ಲಿಗಳಲ್ಲೂ ಎಲ್ಲಾ ತರಹದ ಜನ ಇರುತ್ತಾರೆ, ಶಾಂತಿ ಸೌಹಾರ್ದತೆಯಿಂದ ಬೆರೆತು ಬಾಳಬೇಕು. ಆಗ ಮಾತ್ರ ಭಾರತದ ಕಾಶ್ಮೀರ್‌ ಅಥವಾ ನಾಗಾಲ್ಯಾಂಡ್‌ ನಲ್ಲಿ ಜನ ಭೇದಭಾವ ತೋರುವುದಿಲ್ಲ ಎಂಬುದರ ಬಗ್ಗೆ ಭರವಸೆ ಇಡಬಹುದು. ಇಲ್ಲಂತೂ ಸರ್ಕಾರದ ಆಜ್ಞೆಯಂತೆ ಎಲ್ಲಾ ಗಲ್ಲಿಗಳಲ್ಲೂ ಜಾತಿ ಧರ್ಮಗಳ ಸಾಲುಗಳು ನಿಂತಿರುತ್ತವೆ. ಆಗ ಜನ ತಮ್ಮ ತಮ್ಮಲ್ಲೇ ವಿಭಜಿತಗೊಂಡು ಅಥವಾ ಸರ್ಕಾರದ ಚಪ್ಪಲಿ ತೊಳೆಯುತ್ತಾ ಅಥವಾ ತಮ್ಮವರಿಗಾಗಿ ರಕ್ಷಣೆ ಬಯಸುತ್ತಾ ಬೇರೆ ಮನೆಗಳನ್ನು ಹುಡುಕಿಕೊಳ್ಳುವಂತಾಗಿದೆ.

ನಾವು ದೆಹಲಿಯ ಜಾಕೀರ್‌ ನಗರ್‌ ಮತ್ತು ಶಾಹೀನ್‌ ಬಾಗ್‌ ಗಳನ್ನು ಬೇರೆ ಎಂದು ಭಾವಿಸುವುದಾದರೆ, ಕಾಶ್ಮೀರವನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ?

ಟ್ಯಾಕ್ಸ್ ಗಳ ಜೇಡರಬಲೆ

ಹಿಂದೆಲ್ಲಾ ಸ್ಟಾಂಪ್‌ ಡ್ಯೂಟಿ ಆಸ್ತಿಯ ರೆಜಿಸ್ಟ್ರೇಷನ್‌ ಗಾಗಿ ಖರ್ಚಿನ ದಾರಿಯಾಗಿತ್ತು. ಬ್ರಿಟಿಷ್‌ ಸರ್ಕಾರ ಈ ಆಸ್ತಿಯ ಮಾಲೀಕರಿಗೆ ಒಂದು ದಸ್ತಾವೇಜನ್ನು ನೀಡಿ ಕೊಡು ಕೊಳ್ಳುವಿಕೆಯನ್ನು ಸ್ಟಾಂಪ್‌ ಡ್ಯೂಟಿ ಮೂಲಕ ಪಕ್ಕಾ ಮಾಡಿಸಿತ್ತು. ಆದರೆ ನಿಧಾನವಾಗಿ ದೇಶವಿಡೀ ಸರ್ಕಾರಗಳು ಈ ಟ್ಯಾಕ್ಸಿಗೆ ಹೊಸ ರೂಪ ನೀಡಿವೆ ಹಾಗೂ ಒಲ್ಲದ ಅತಿಥಿಯನ್ನು ಓಲೈಸುವಂತೆ ಯಾವುದೇ ವ್ಯಾಪಾರದಲ್ಲಿ ಮಧ್ಯದಲ್ಲಿ ನುಸುಳುತ್ತದೆ ಹಾಗೂ ಅದರ ಬೆಲೆಯ 8-12% ವರೆಗೂ ಕಬಳಿಸುತ್ತದೆ. ಕೆಲವು ರಾಜ್ಯಗಳಲ್ಲಂತೂ ಮನೆಮಂದಿಯ ಪರಸ್ಪರ ಹಸ್ತಾಂತರಕ್ಕೂ ಭಾರಿ ಸ್ಟಾಂಪ್‌ ಡ್ಯೂಟಿ ಅನ್ವಯಿಸುತ್ತದೆ. ಇದರಿಂದ ಗಾಬರಿಗೊಂಡು ಜನ ಪವರ್‌ ಆಫ್‌ ಅಟಾರ್ನಿಯ ಆಧಾರದಿಂದ ಮಾರಾಟ ಮಾಡುತ್ತಿದ್ದಾರೆ.

ಈಗ ಎಷ್ಟೋ ಹಗರಣಗಳ ನಂತರ ಕೆಲವು ರಾಜ್ಯಗಳು ಅರಿತಿರುವುದೆಂದರೆ, ಈ ಮಾಫಿಯಾಗಿರಿ ಜಾಸ್ತಿಯೇ ಆಯಿತು. ಮಹಾರಾಷ್ಟ್ರ, ಕರ್ನಾಟಕ, ಹರಿಯಾಣಾ, ಉ.ಪ್ರ.ಗಳಂತಹ ರಾಜ್ಯಗಳಲ್ಲಿ ಈಗಲೂ ಆಸ್ತಿಯ ಹಸ್ತಾಂತರ ಕುಟುಂಬದ ಸದಸ್ಯರ ನಡುವೆ ನಡೆದವರೂ ಹೆಸರಿಗೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಆಗ ಕೌಟುಂಬಿಕ ಆಸ್ತಿಯ ವಿಂಗಡಣೆ ಕಾಗದ ಪತ್ರಗಳಲ್ಲಿ ಸಮರ್ಪಕವಾಗಿ ನಡೆದಿದ್ದು, ವಿವಾದರಹಿತವಾಗಿದೆ. ಆಸ್ತಿಯ ಮಾರಾಟ ಅಸಲಿಗೆ ಯಾವುದೇ ವಸ್ತುವಿನ ಮಾರಾಟದಂತೆಯೇ ಇರಬೇಕು. ಪ್ರತಿ ಮಾರಾಟದ ಮೇಲೂ ದೊಡ್ಡ ಮೊತ್ತದ ಟ್ಯಾಕ್ಸ್ ದುಬಾರಿ ಆದೀತು. ಜನ ಈ ಖರ್ಚನ್ನು ವಿವಿಧ ರೀತಿಯಲ್ಲಿ ಉಳಿಸಲು ಯತ್ನಿಸುತ್ತಾರೆ. ಬ್ಯ್ಲಾಕ್‌ ಮಾರ್ಕೆಟಿಂಗ್‌, ಆದಾಯ ತೆರಿಗೆಯ ವಂಚನೆ ಇತ್ಯಾದಿಗಳಿಂದ ಸ್ಟಾಂಪ್‌ ಡ್ಯೂಟಿ ಕೊಡದಿರಲು ಯತ್ನಿಸುತ್ತಾರೆ. ಏಕೆಂದರೆ ಜನರಿಗೆ ತಮ್ಮ ಹಣ ಉಳಿಸಿಕೊಳ್ಳುವುದೇ ಮುಖ್ಯ.

ಆಸ್ತಿಯ ಮಾರಾಟ ಸರಾಗವಾಗಿ ನಡೆಯುವುದೆಂದರೆ, ಮಾರಾಟ ಮಾಡುವವನು ಕಷ್ಟದಲ್ಲಿದ್ದು 1-1 ಪೈಸೆಯನ್ನೂ ಉಳಿಸಲು ಹೋರಾಡುತ್ತಿರುತ್ತಾನೆ. ಸರ್ಕಾರದ ಇಂತಹ ಕಾನೂನು, ನಿಯಮಗಳು ಹಾಗೂ ಟ್ಯಾಕ್ಸ್ ಗಳನ್ನು ಜೇಡರಬಲೆಯಂತೆ ಮಾಡಿ ಜನ ಮೈಪರೆಚಿಕೊಳ್ಳುವಂತೆ ಮಾಡಿಟ್ಟಿದೆ.

ಸರ್ಕಾರದ ಖಜಾನೆ ತುಂಬಲು ಜನ ಸುಲಭವಾಗಿ ಆಸ್ತಿಯ ಮಾರಾಟ ಮಾಡಿ ಸ್ಟಾಂಪ್‌ ಡ್ಯೂಟಿ ತುಂಬಬೇಕಾಗುತ್ತದೆ. ಜನ ತಮ್ಮ ಬಟ್ಟೆ ವ್ಯಾಪಾರದ ತರಹ ಅಗತ್ಯದ ಆಸ್ತಿ ಎನಿಸಿಕೊಂಡು ಉಳಿದದ್ದನ್ನು ಮಾರಾಟ ಮಾಡಲು ಅನುಕೂಲ ಆಗಬೇಕು.

ಮನೆಗಳಲ್ಲಿ ಆಸ್ತಿಯ ವಿಂಗಡಣೆ ಬಹಳ ಕಷ್ಟಕರವಾಗುತ್ತಿದೆ. ಏಕೆಂದರೆ ಸ್ಟಾಂಪ್‌ ಡ್ಯೂಟಿಯ ನಿರರ್ಥಕ ಖರ್ಚು ಹೆಚ್ಚಾಗುತ್ತಿದೆ. ಹಿರಿಯರು ಸದಾ ಬಯಸುವುದೆಂದರೆ, ಅವರು ಬದುಕಿರುವಾಗಲೇ ಮಕ್ಕಳಿಗೆ ಆಸ್ತಿ ವಿಂಗಡಣೆ ಮಾಡಿಕೊಡಬೇಕು. ಆದರೆ ಸ್ಟಾಂಪ್ ಡ್ಯೂಟಿ ಕೊಡಬಾರದು. ಈ ಕಾರಣದಿಂದ ಅದು ಮುಂದೂಡಲ್ಪಡುತ್ತಿರುತ್ತದೆ.

ಯಾರದೇ ಮರಣದ ನಂತರ ಉಳಿದವರಿಗೆ ಏನು ಪಾಲು ಬರುತ್ತದೆ, ಈ ವಿವಾದ ದೊಡ್ಡದಾಗಿ ಏಳುತ್ತದೆ. ಅದು ಬಗೆಹರಿದಾಗ ಯಾರ ಹೆಸರಿಗೆ ಎಷ್ಟು ಮಾಡಬೇಕು, ಈ ಪ್ರಶ್ನೆ ಸ್ಟಾಂಪ್‌ ಡ್ಯೂಟಿಯ ಜೇಡರ ಬಲೆಯಿಂದಾಗಿ ಸಿಕ್ಕುಸಿಕ್ಕಾಗುತ್ತದೆ. ಈ ಸ್ಟಾಂಪ್ ಡ್ಯೂಟಿಯ ವ್ಯವಹಾರ ಕುಟುಂಬಗಳನ್ನು ಒಡೆದು ಹೋಳು ಮಾಡಿ ಹಿಂಸಿಸುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ