" ತಿಂಡ್ಯೋಪದೇಶ...! "

ಇಡ್ಲಿಯ ತರಾ ಯಾವಾಗಲೂ ಸರಳವಾಗಿ
ನಗುನಗುತ್ತಾ ಇರಬೇಕು

ಎಷ್ಟೇ ಸರ್ತಿ ಮಗುಚಿ ಹಾಕಿದರೂ ದೋಸೆ ತರಾ
ತಾಳ್ಮೆಯಿಂದ ಇರಬೇಕು

ಎಷ್ಟೇ ಕಷ್ಟ ಬಂದರೂ ಸಹ, ಪೂರಿಯಂತೆ
ಸಂತೋಷದಿಂದ ಉಬ್ಬಿ ಇರಬೇಕು

ಅವಸರಕ್ಕೆ ಒದಗುವ ಒಗ್ಗರಣೆ ಅವಲಕ್ಕಿಯಂತೆ
ಎಲ್ಲರಿಗೂ ಸಹಾಯಕವಾಗಿ ಇರಬೇಕು

ಎಷ್ಟೇ ಬಾರಿ ಎತ್ತೆತ್ತಿ ಒಗೆದರೂ ಸ್ವಲ್ಪವೂ ಧೃತಿಗೆಡದ
ಪರೋಟದಂತೆ ಇರಲು ಕಲಿಯಬೇಕು

ಚಪಾತಿಯಂತೆ ಸರಳವಾಗಿ ಇರೋದನ್ನು ಕಲೀಬೇಕು
ಜಿಲೇಬಿಯಂತೆ ಸುತ್ತಿ ಬಳಸಿ ಮಾತನಾಡದಿರುವುದನ್ನು
ಕಲಿಯಬೇಕು.

Idly 1

ಉಪ್ಪಿಟ್ಟು ಕೇಸರಿ ಬಾತ್ ನಂತೆ ಎಂದೆಂದೂ ಒಳ್ಳೆಯ
ಸ್ನೇಹಿತರಂತೆ ಇರುವುದನ್ನು ಕಲಿಯಬೇಕು.

ಹಪ್ಪಳದಂತೆ ಎಲ್ಲರಿಗೂ ಇಷ್ಟ ವಾಗುವಂತೆ ಇರಬೇಕು
ಅವಿಯಲ್ಲಿನ ತರಕಾರಿಗಳಂತೆ ಒಗ್ಗಟ್ಟಾಗಿ ಇರುವುದನ್ನು
ಕಲಿಯಬೇಕು

ಫ್ರೂಟ್ ಸಲಾಡಿನಂತೆ ಶಕ್ತಿಶಾಲಿಯಾಗಿ ಇರಬೇಕು
ಐಸ್ ಕ್ರೀಂ ತರಾ ಸದಾ ಮನಸ್ಸು ತಣ್ಣಗೆ ಇರಬೇಕು

ಕೊನೆಗೆ..... ಚಿಕ್ಕಮಗಳೂರು ಫಿಲ್ಟರ್ ಕಾಫಿ ತರಾ
ನಮ್ಮ ಜೀವನ ಸದಾ ಗಮ ಗಮಿಸುತ್ತಾ ಇರಬೇಕು...!

ವಿ.ವಿಜಯೇಂದ್ರ ರಾವ್
401,3rd floor, SIRI snow drops
1st main, 1st cross, kanaka layout
Bangalore 560070
Cell: 9486836278

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ