ಮಹಾರಾಷ್ಟ್ರ ರಾಜ್ಯ ಸರ್ಕಾರದಲ್ಲಿ ಮೂಡಿದ ಪರಿವರ್ತನೆಯಿಂದಾಗಿ ಶಿವಸೇನಾದ ಮಹಾ ಅಗಾಡಿ ವಿಕಾಸ್‌ ಸಮ್ಮಿಶ್ರ ಸರ್ಕಾರದಿಂದಾಗಿ ಉದ್ಧವ್ ಠಾಕ್ರೆ ಡಿಫೆಕ್ಷನ್‌ ಗಳಿಂದ ಅಧಿಕಾರ ಮೊಟಕುಗೊಳಿಸಿದರು ಹಾಗೂ ಅಮೆರಿಕಾದ ಸುಪ್ರೀಂ ಕೋರ್ಟ್ ತೆಗೆದುಕೊಂಡ ನಿರ್ಣಯ, ಅರ ಸಂವಿಧಾನ ಹೆಂಗಸರ ಗರ್ಭಪಾತ ಯಾವುದೇ ಸಾಂವಿಧಾನಿಕ ಹಕ್ಕು ಅಲ್ಲ ಎಂದಿದೆ, ನಮ್ಮಲ್ಲಿನ ಸಾಧಾರಣ ಮನೆಗಳಲ್ಲಿ ಇದರ ಪರಿಣಾಮ ಆದೀತೇ?

ಈ ಪ್ರಕರಣಗಳು ಕಾನೂನಾತ್ಮಕ, ರಾಜಕೀಯ, ಪಕ್ಷಕ್ಕೆ ಸಂಬಂಧಿಸಿದ ನಿರ್ಣಯಗಳೇ ಹೊರತು ಒಬ್ಬ ಸಾಮಾನ್ಯ ಮನೆ, ಗೃಹಿಣಿ, ಮಕ್ಕಳು, ನೆಂಟರು ಮುಂತಾದವರಿಗೆ ಈ ಎರಡು ಘಟನೆಗಳಿಂದ ಯಾವುದೇ ಚಿಂತೆ ಇಲ್ಲ ಅಥವಾ ಇದರ ಕುರಿತು ತಿಳಿಯಲು ಯಾ ಯೋಚಿಸಲು ಹೋಗುವುದೂ ಇಲ್ಲ. ಆದರೆ ವಿಷಯ ಗಂಭೀರವಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಭಾರತ ಹಾಗೂ ಅಮೆರಿಕಾದ ಪ್ರತಿ ಮನೆಯ ಮೇಲೂ ಪರಿಣಾಮ ಆಗುತ್ತದೆ.

ಮಹಾರಾಷ್ಟ್ರದ ಸರ್ಕಾರದ ಪರಿವರ್ತನೆ ಮತ್ತೊಮ್ಮೆ ನೆನಪಿಸುವುದೆಂದರೆ, ನೀವು ಯಾವದರ ಮೇಲೂ ಸಂಪೂರ್ಣ ಭರವಸೆ ಇಡುವಂತಿಲ್ಲ. ಅದು ಸ್ಪಷ್ಟಪಡಿಸುವ ಮತ್ತೊಂದು ವಿಷಯವೆಂದರೆ, ನಿಮ್ಮ ರಾಜಕೀಯ ನಾಯಕರು, ಮಾಲೀಕರು, ಸರಪಂಚರು ತಮ್ಮ ತಮ್ಮಲ್ಲಿ ಯಾವಾಗ ಬೇಕಾದರೂ ಬೆನ್ನಿಗೆ ಚೂರಿ ಹಾಕಿಕೊಳ್ಳಬಹುದು, ಅವರು ಅಪರಾಧಿ ಆಗಬೇಕೆಂದಿಲ್ಲ, ಯಾ ಮಹಾನ್ ವ್ಯಕ್ತಿಯೂ ಆಗಬಹುದು. ವಾಲಿಯನ್ನು ತಮ್ಮ ಸುಗ್ರೀವ ಕೊಲ್ಲಿಸಿದ ಹಾಗೆ ಅಥವಾ ರಾವಣನನ್ನು ವಿಭೀಷಣ ಕೊಲ್ಲಿಸಿದ ಹಾಗೆ! ಈ ಅಧಿಕಾರ ಬದಲಾವಣೆಯನ್ನು ಬಹಳಷ್ಟು ಚಾನೆಲ್ ‌ಗಳು ತೋರಿಸಿ ಚಪ್ಪಾಳೆ ಗಿಟ್ಟಿಸಿದ. ಬಹಳಷ್ಟು ನೇತಾರರು ಕಂಗ್ರಾಟ್ಸ್ ಎಂದರು, ಉದ್ಧವ್ ಠಾಕ್ರೆ ವಿರುದ್ಧ ಸಿಡಿದೆದ್ದವರಿಗೆ ಲಡ್ಡು ಹಂಚಿದರು. ಹೀಗೆ ಮಾಡಿದ್ದು ಸರಿ ಎಂದರೆ, ನಿಮ್ಮ ನಾಯಕರ ವಿರುದ್ಧ ಸಂಚು ಹೂಡುವುದು ಸರಿ ಎನಿಸಿದರೆ, ಅತ್ತಿಗೆ ನಾದಿನಿ ಪಿತೂರಿ ನಡೆಸುವುದು ಏಕೆ ತಪ್ಪು? ಅಣ್ಣ ತಮ್ಮಂದಿರು ಪರಸ್ಪರ ಮೋಸ ಮಾಡುತ್ತಾ ಅಪ್ಪನ ಆಸ್ತಿ ಲಪಟಾಯಿಸುವುದು ಹೇಗೆ ತಪ್ಪು? ಚಿಕ್ಕ ವಯಸ್ಸಿನ ಪತ್ನಿಗೆ ಫ್ರಿಫರೆನ್ಸ್ ನೀಡಿ ತಾಯಿ ತಂದೆಯರನ್ನು ಬೇರೆ ಇರಿಸುವುದು ಹೇಗೆ ತಪ್ಪಾದೀತು? ರಾಜಕೀಯ ಧುರೀಣರು ಹೀಗೆ ಮೋಸ ಮಾಡಬಹುದಾದರೆ ಅಣ್ಣ, ತಂಗಿ, ನೆಂಟರು,  ಮಗ, ಮಗಳು ಯಾಕೆ ಮೋಸ ಮಾಡಬಾರದು? ಗುರಿ ಸ್ವಾರ್ಥ ಸಾಧನೆ ಆಗಿರುವಾಗ ಅದು ಏಕನಾಥ್‌ ಶಿಂದೆಗೆ ಲಾಭ ತಂದುಕೊಟ್ಟು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿಸಿತು. `ಯಥಾ ರಾಜಾ ತಥಾ ಪ್ರಜಾ' ಎಂಬಂತೆ ನಮ್ಮ ಮಹಾನ್‌ ನಾಯಕರು ಕರ್ನಾಟಕ, ಮ.ಪ್ರ., ಗೋವಾ, ಅರುಣಾಚಲಾ ಪ್ರದೇಶಗಳಲ್ಲಿ ಹೀಗೇ ಮಾಡಿದರೆ, ನಾವು ನಮ್ಮ ಮನೆಗಳಲ್ಲಿ ಏಕೆ ಮಾಡಬಾರದು? ರಾಜನ ಆಜ್ಞೆಯಂತೆ ಅಲ್ಲವೇ ಪ್ರಜೆಗಳು ನಡೆಯುವುದು.....?

ಹೀಗೆ ಅಮೆರಿಕಾದಲ್ಲೂ ಸಹ ನಡೆದಿದೆ. ಅಲ್ಲಿ, ಒಬ್ಬ ಹೆಂಗಸಿಗೆ ನಿನ್ನ ದೇಹದ ಮೇಲೆ ನಿನಗೆ ಹಕ್ಕಿಲ್ಲ ಎಂದು ಸಾರಲಾಗಿದೆ. ಏಕೆಂದರೆ ಸಂವಿಧಾನ ಹಿಂದೆ ಗರ್ಭಪಾತವನ್ನು ಅವೈಜ್ಞಾನಿಕ ಎಂದು ಹೇಳಿದಾಗ, ಮೆಡಿಕಲ್ ಇಷ್ಟು ಮುಂದುವರಿದಿರಲಿಲ್ಲ. ಸಂವಿಧಾನದಲ್ಲಿ ಹೇಳದಿದ್ದ ಮೇಲೆ ಅದು ಖಂಡಿತಾ ತಪ್ಪೇ! ನಾಳೆ ಹೆಣ್ಣನ್ನು ಹೊಡೆದು ಬಡಿದು ಮಾಡುವುದನ್ನು ಅಮೆರಿಕಾ ಸುಪ್ರೀಂ ಕೋರ್ಟ್‌ ಸರಿ ಎಂದರೂ ಆಶ್ಚರ್ಯವಿಲ್ಲ. ಏಕೆಂದರೆ ಕ್ರೈಸ್ತ ಧರ್ಮದಲ್ಲಿ ಪತಿ ಪತ್ನಿಯನ್ನು ಹೊಡೆಯುವುದನ್ನು ತಪ್ಪೆಂದು ಹೇಳಿಲ್ಲ ಹಾಗೂ ಸಂವಿಧಾನ ಪತ್ನಿಗೆ ಸ್ಪಷ್ಟ ಹಕ್ಕನ್ನೂ ನೀಡಿಯೇ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ