ದುಬೈ ಗೋಲ್ಡ್ ಸ್ಮಗ್ಲಿಂಗ್ ಕೇಸ್​ನಲ್ಲಿ ತಗ್ಲಾಕ್ಕೊಂಡಿರೋ ನಟಿ ರನ್ಯಾ ರಾವ್​​​ ಲೈಫ್​​​ನ
ಒಂದೊಂದೇ ಚಾಪ್ಟರ್​ಗಳು ಓಪನ್ ಆಗ್ತಿವೆ. ಇದೀಗ ಈಕೆ ಎಷ್ಟು ಬೇಗ ಮದ್ವೆ ಆದ್ಲು.. ಎಷ್ಟು
ಬೇಗ ಕಳ್ಳಿ ಆದ್ಲು ಅನ್ನೋದು ಕೂಡ ರಿವೀಲ್ ಆಗ್ತಿದೆ. ರನ್ಯಾ ರಾವ್ ಅವರು ಜತಿನ್ ಹುಕ್ಕೇರಿ
ಅನ್ನೋ ಬೆಳಗಾವಿಯ ಬಿಸಿನೆಸ್ ಮ್ಯಾನ್ ಜೊತೆ ಮದುವೆಯಾಗಿದ್ದಾರೆ. ಅಚ್ಚರಿ ಅಂದ್ರೆ,
ಪರಿಚಯವಾಗಿದ್ದು ಅಕ್ಟೋಬರ್ 6ನೇ ತಾರೀಕು. ನಿಶ್ಚಿತಾರ್ಥ ಅಕ್ಟೋಬರ್ 27, 2024.
ಮದುವೆಯಾಗಿದ್ದು ನವೆಂಬರ್ 27ನೇ ತಾರೀಕು. ಜನವರಿ 2025ರಲ್ಲಿ ಡಿವೋರ್ಸ್ ಅರ್ಜಿ. ನಾಲ್ಕು
ತಿಂಗಳಲ್ಲಿ ಪರಿಚಯ.. ಮದುವೆ.. ಡಿವೋರ್ಸ್.. ಅದಾದ ತಿಂಗಳಿಗೆ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ
ಅರೆಸ್ಟ್.

Ranya Rao-2
ಹೀಗೆ ಸ್ಮಗ್ಲಿಂಗ್ ಬ್ಯೂಟಿಯ ರಣರೋಚಕ ಹಿಸ್ಟರಿಯ ಒಂದೊಂದು ಅಧ್ಯಾಯದ ಒಂದೊಂದು
ಪುಟದಲ್ಲಿರುವ ರಹಸ್ಯವನ್ನ ಡಿಆರ್ ಐ ಅಧಿಕಾರಿಗಳು ಹೊರಗೆ ತರ್ತಿದ್ದಾರೆ. ತೊಡೆಯಲ್ಲಿ
ಕೆಜಿಗಟ್ಟಲೆ ಚಿನ್ನ ಕದ್ದು ತಂದಿದ್ದ ನಟಿ, ಸಿಕ್ಕಿಬಿದ್ದಿದ್ದು ಎಷ್ಟು ರೋಚಕವೋ.. ಆಕೆಯ ಮದುವೆಯ
ಕಥೆಯೂ ಅಷ್ಟೆ ರೋಚಕವಾಗಿದೆ.
ನಾವೆಲ್ಲ ರನ್ಯಾ ರಾವ್ ಅವರ ಮಲ ತಂದೆ ಡಿಜಿಪಿ ರಾಮಚಂದ್ರರಾವ್. ತಂದೆಯ ಹೆಸರು ಬಳಸಿ,
ಪ್ರೋಟೋಕಾಲ್ ರಿಲ್ಯಾಕ್ಸ್ ತಗೊಂಡು ಏರ್ ಪೋರ್ಟಿನಲ್ಲಿ ಚಿನ್ನ ಕಳ್ಳಸಾಗಾಣಿಕೆ ಮಾಡ್ತಿದ್ದರು
ಅನ್ನೋ ಕಥೆಯನ್ನಷ್ಟೇ ತಿಳ್ಕೊಂಡಿದ್ದೀವಿ. ಸದ್ಯಕ್ಕೆ ರಾಮಚಂದ್ರ ರಾವ್, ಕಂಪಲ್ಸರಿ ರಜೆಯ
ಮೇಲಿದ್ದಾರೆ. ಇನ್ನು ರನ್ಯಾ ರಾವ್ ಅವರು ಸ್ಮಗ್ಲಿಂಗ್ ಮಾಡ್ತಿದ್ದಾರೆ ಅನ್ನೋ ಕ್ಲೂ ಕೊಟ್ಟಿದ್ದೇ
ಪತಿ ಜತಿನ್ ಹುಕ್ಕೇರಿ ಅನ್ನೋ ಇನ್ನೊಂದು ಮಿಸ್ಟೀರಿಯಸ್ ಕಥೆನೂ ಇದೆ. ಇದೆಲ್ಲದರ ಮಧ್ಯೆ ರನ್ಯಾ
ರಾವ್ ಅವರ ಮದುವೆಯ ರೋಚಕ ಕಥೆ ಇದು.


ಈ ಜತಿನ್ ಹುಕ್ಕೇರಿ, ಆರ್ಕಿಟೆಕ್ಟ್. ಯುಕೆ ಮೂಲದ ಕಂಪೆನಿಯೊಂದರಲ್ಲಿ ದೊಡ್ಡ
ಹುದ್ದೆಯಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಜತಿನ್ ಹುಕ್ಕೇರಿ, ರಮ್ಯಾ ಕಾಂಟ್ಯಾಕ್ಟಿಗೆ ಬಂದಿದ್ದೇ
ರೋಚಕ. ರನ್ಯಾ ರಾವ್ ಅವರು ಮದುವೆ ಬ್ರೋಕರ್ ಏಜೆನ್ಸಿ ಮೂಲಕ, ಜತಿನ್ ಹುಕ್ಕೇರಿ ಅವರನ್ನ
ಮೊದಲಿಗೆ ಪರಿಚಯ ಮಾಡ್ಕೊಳ್ತಾರೆ. ಆ ಡೇಟ್, ಅಕ್ಟೋಬರ್ 6, 2024. ಆ ಭೇಟಿ ಆಗೋದು
ವೈಲ್ಡ್ ಫೋಟೋಗ್ರಫಿ ಜರ್ನಿಯಲ್ಲಿ. ಕರ್ನಾಟಕದ ಒಂದು ಅಭಯಾರಣ್ಯದಲ್ಲಿ ಇಬ್ಬರೂ ಪರಸ್ಪರ
ಮೀಟ್ ಆದ್ರು ಅನ್ನೋದು ಸದ್ಯಕ್ಕೆ ಗೊತ್ತಾಗುತ್ತಿರುವ ಮಾಹಿತಿ.

Ranya-Rao-3
ಅದಾಗಿ ಸರಿಯಾದ 21 ದಿನಕ್ಕೆ ಎಂಗೇಜ್ಮೆಂಟ್ ಆಗುತ್ತೆ. ಅಕ್ಟೋಬರ್ 27ನೇ ತಾರೀಕು ನಿಶ್ಚಿತಾರ್ಥ
ಆಗಿದೆ. ನವೆಂಬರ್ 27ಕ್ಕೆ, ಅಂದ್ರೆ ನಿಶ್ಚಿತಾರ್ಥ ಆದ ಕರೆಕ್ಟ್ ಆಗಿ ಒಂದು ತಿಂಗಳಿಗೆ ತಾಜ್ ವೆಸ್ಟ್
ಎಂಡ್ನಲ್ಲಿ ನವೆಂಬರ್ 27ನೇ ತಾರೀಕು ಮದುವೆ ಆಗಿದೆ. ಈ ಮದುವೆ ಆಗಿ ಒಂದೂವರೆ ತಿಂಗಳಿಗೆ
ಡಿವೋರ್ಸ್ ನೋಟಿಸ್ ಬಂದಿದೆ. ಸದ್ಯಕ್ಕೀಗ ಡಿವೋರ್ಸ್ ಆಗಿಲ್ಲ. ನೋಟಿಸ್ ಹಂತದಲ್ಲೇ ಇದೆ. ಹೀಗೆ
ಲೈಫ್​​ನಲ್ಲಿ ಇಷ್ಟು ಸ್ಪೀಡಾಗಿ ಓಡಿರೋ ರನ್ಯಾ ರಾವ್​ ದುಡ್ಡು ಮಾಡೋ ಆಸೆಗೆ ಬಿದ್ದು ಅಷ್ಟೇ
ಸ್ಪೀಡಾಗಿ ಲಾಕ್ ಆದ್ರಾ ಅನ್ನೋ ಪ್ರಶ್ನೆ ಮೂಡ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ