– ರಾಘವೇಂದ್ರ ಅಡಿಗ ಎಚ್ಚೆನ್.

ಸಾನ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿಲ್ಪ ಪ್ರಸನ್ನ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ರಾಜಕಿಶೋರ್ ಅವರ ಪುತ್ರಿ ಸಿಂಧುಗೌಡ ನಿರ್ದೇಶನದ “ಆಪಲ್ ಕಟ್ ” ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಾ ಮುನ್ನುಗ್ಗಿದೆ.   ನಟ ಸೂರ್ಯ.ಈ ಚಿತ್ರದ ಮೂಲಕ ಮೊದಲ ಬಾರಿಗೆ ಪರಿಪೂರ್ಣ ನಾಯಕನಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.  ಇಅವರಿಗೆ ನಾಯಕಿಯಾಗಿ ಅಶ್ವಿ‌ನಿ ಪೋಲೆಪಲ್ಲಿ ಕಾಣಿಸಿಕೊಂಡಿದ್ದಾರೆ. ವೀರ ಸಮರ್ಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Screenshot_20250308_200646_All-Document-768x1344

ಇದೊಂದು ಕ್ರೈಂ ಥ್ರಿಲ್ಲರ್ ಕಥಾನಕವಾಗಿದ್ದು ಸರಣಿ  ಕೊಲೆಗಳ ನಿಗೂಢವನ್ನು ಬೆಧಿಸುವುದೇ ಈ ಚಿತ್ರದ ಮೈನ್ ಹೈಲೈಟ್. ಆನ್ತ್ರೋಪಾಲಜಿ ಎಂಬ ವೈಧ್ಯಕೀಯ ಟೀಂ ಈ ಕೊಲೆಗಳ ರಹಸ್ಯ ಬೇಧಿಸುವುತ್ತದೆ.   ಇಂತಹಾ ಕ್ರೈಂ ಥ್ರಿಲ್ಲರ್ ಕಥಾನಕವೊಂದನ್ನು ಬಹುತೇಕ ಹೊಸ ಕಲಾವಿದರನ್ನೇ ಬಳಸಿಕೊಂಡು ಮಹಿಳಾ ನಿರ್ದೇಶಕಿಯೊಬ್ಬರು ತೆರೆಗೆ ತಂದಿರುವುದು ಒಂದು ಸಾಹಸ ಎನ್ನಲೇಬೇಕು.

Screenshot_20250308_195835_WhatsApp-768x1308

ಹಿರಿಯ ನಿರ್ದೇಶಕ ರಾಜ್ ಕಿಶೋರ್ ರವರ ಎರಡನೇ ಮಗಳಾದ ಸಿಂಧೂ ಈಗಾಗಲೇ ಕಿರುತೆರೆಯಲ್ಲಿ ಬಹಳಷ್ಟು ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ ಎನ್ನುವುದು ವಿಶೇಷ.  ಇನ್ನು “ಆಪಲ್ ಕಟ್” ಚಿತ್ರದ ನಿರ್ಮಾಪಕರೂ ಸಹ ಓರ್ವ ಹೆಣ್ಣು ಮಗಳೆನ್ನುವುದು ಸಹ ಮಹತ್ವದ ಸಂಗತಿ. ಶಿಲ್ಪಾ ಪ್ರಸನ್ನ ಈ ಚಿತ್ರ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕಿ ಹಾಗೂ ಹೊಸ ನಾಯಕ ನಾಯಕಿಯರನ್ನು ನೀಡಿದ್ದಾರೆ ಎನ್ನಬೇಕು.

APPP2

ಏನೇ ಇದ್ದರೂ ಪ್ರೇಕ್ಷಕರು ಸಹ ಇಂತಹಾ ಹೊಸಬರ ಪ್ರಯತ್ನಕ್ಕೆ ಮೆಚ್ಚಿ ಬೆನ್ನು ತಟ್ಟಿರುವುದು ಆಪಲ್ ಕಟ್ ಈ ವರ್ಷದ ಒಂದು ಯಶಸ್ವಿ ಚಿತ್ರವಾಗಲು ಕಾರಣವಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ