ಶ್ರಾವಣ ಮಾಸ ಬಂದೊಡನೆ ಹಬ್ಬಗಳ ಸಾಲು ಸಾಲು ಶುರು ಎಂದೇ ಅರ್ಥ. ಶ್ರಾವಣದ ವರಮಹಾಲಕ್ಷ್ಮಿ ಹಬ್ಬದಿಂದ ಭಾದ್ರಪದದ ಗೌರಿ ಗಣೇಶಕ್ಕೆ ಅಡಿಯಿಟ್ಟು, ಗೋಕುಲಾಷ್ಟಮಿ, ದಸರಾ ದೀಪಾವಳಿಗಳಿಗೆ ಮುಂದುವರಿಯುತ್ತದೆ. ಹಬ್ಬ ಎಂದೊಡನೆ ಎಲ್ಲೆಲ್ಲೂ ಸಂತಸ, ಸಂಭ್ರಮ, ಸಡಗರ! ಇಷ್ಟೆಲ್ಲ ಸಡಗರ, ಸಂಭ್ರಮ ಇದ್ದ ಮೇಲೆ ಹೆಂಗಳೆಯರು ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ ಎಂಬಂತೆ ಬಗೆಬಗೆಯ ರೇಷ್ಮೆ ಸೀರೆ, ಒಡವೆ, ಆಭರಣ ಧರಿಸಿ ಸರಭರ ಓಡಾಡದಿದ್ದರೆ ಆದೀತೇ?

ಹೀಗಾಗಿ ಹಬ್ಬಗಳು ಎಂದೊಡನೆ ಹೆಂಗಸರ ಶೃಂಗಾರವೇ ಪ್ರಧಾನ. ಬಿಂದಿ, ಸಿಂಧೂರ, ಮೆಹಂದಿ, ಹೊಸ ಬಳೆಗಳು, ಉಂಗುರ, ತೋಳುಬಂದಿ, ಗೆಜ್ಜೆ, ಸರ, ನೆಕ್ಲೇಸ್‌, ಓಲೆ, ಮಾಟ್ಲು, ಜುಮಕಿ, ಬೈತಲೆ ಬೊಟ್ಟು….. ಒಂದೇ ಎರಡೇ? ಇಂಥ ಒಡವೆ, ಸೀರೆ, ಶೃಂಗಾರ ಸಾಧನಗಳಿಂದ ಪ್ರತಿಯೊಬ್ಬ ಹೆಣ್ಣೂ ತನ್ನನ್ನು ತಾನು ಅತಿ ಚಂದವಾಗಿ ತೋರಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಹೀಗಾಗಿ ಹಬ್ಬಗಳ ಸಂದರ್ಭದಲ್ಲಿ ಲಭ್ಯವಿರುವ, ಹೆಚ್ಚಿನ ರಿಯಾಯಿತಿ ಒದಗಿಸುವ ಸ್ವರ್ಣಾಭರಣಗಳ, ಗೋಲ್ಡ್ ಡೈಮಂಡ್‌ ಒಡವೆಗಳನ್ನು ಖರೀದಿಸಿ, ಹಬ್ಬಕ್ಕೆ ಪರ್ಫೆಕ್ಟ್ ಲುಕ್ಸ್ ಗಳಿಸಬಹುದು.

ಈ ಸಲದ ನವರಾತ್ರಿ ಹಬ್ಬವಂತೂ ಸತತ 10 ದಿನಗಳ ವಿವಿಧ ಉತ್ಸವಗಳಿಂದಾಗಿ ಹೆಂಗಸರಿಗೆ ಹೆಚ್ಚಿನ ಸಡಗರ ತರುತ್ತದೆ. ಮನೆಯಲ್ಲಿ ಪಟ್ಟದ ಗೊಂಬೆ ಜೊತೆ, ಸಾಲು ಸಾಲಾಗಿ ಬೇರೆ ಬೊಂಬೆಗಳನ್ನಿರಿಸಿ, ಸುತ್ತಲೂ ನಾನಾ ಬಗೆಯ ಅಲಂಕಾರ ಮಾಡಿ, ತಾವು ಒಡವೆಗಳಿಂದ ಅಲಂಕೃತರಾಗಿ ಸುತ್ತಮುತ್ತಲ ಮುತ್ತೈದೆಯರು, ಬಂಧು ಬಾಂಧವರು, ಆಪ್ತೇಷ್ಟರನ್ನು ಕರೆದು ಗೊಂಬೆಗಳ ವೈಭವ ಪ್ರದರ್ಶಿಸುವುದು ಪ್ರತಿಷ್ಠೆಯ ಪ್ರಶ್ನೆಯೇ ಸರಿ. ನವರಾತ್ರಿ ವೈಭವ ಎಂದೊಡನೆ ಹೆಂಗಳೆಯರ ಓಡಾಟ ಹೆಚ್ಚು. ಮನೆ ಮನೆಗೂ ಹೆಣ್ಣುಮಕ್ಕಳ ಜೊತೆ ಹೋಗಿ ಬೊಂಬೆ ನೋಡಿಕೊಂಡು, ಗೆಳತಿಯರನ್ನು ಭೇಟಿ ಆಗುವುದು ವಾಡಿಕೆ.

ಹೀಗೆ ವಿಭಿನ್ನವಾಗಿ ಕಂಗೊಳಿಸಿ

ನವರಾತ್ರಿ ಹಬ್ಬ ವಿಶೇಷವಾಗಿ ಹೆಂಗಸರ ಹಬ್ಬವೆಂದೇ ಪ್ರಸಿದ್ಧ. ಹಲವು ದಿನಗಳ ಹಿಂದಿನಿಂದಲೇ ಇದರ ಪೂರ್ವ ತಯಾರಿ ಶುರು. ಇದಕ್ಕೆ ಮನೆಯ ಗಂಡಸರ ನೆರವು ಇದ್ದೇ ಇರುತ್ತದೆ. ಎಲ್ಲರೂ ಕೂಡಿ ಗೊಂಬೆಗಳನ್ನು ಅಲಂಕಾರಿಕವಾಗಿ ಜೋಡಿಸಿದಾಗ ಮಾತ್ರ ಆ ವೈಭಕ್ಕೆ ಲುಕ್‌ ಬರುತ್ತದೆ.

ಒಂದೊಂದು ದಿನ ಒಂದೊಂದು ಬಗೆಯ ಬಣ್ಣದ ಸೀರೆ, ಮ್ಯಾಚಿಂಗ್‌ ಬ್ಲೌಸ್‌, ಬಳೆಗಳು, ಹೇರ್‌ ಸ್ಟೈಲ್ ಬಿಂದಿ, ಹೂ ಇದ್ದರೆ  ಇನ್ನಷ್ಟು ಸೊಗಸು. ಹಾಗೆಯೇ ಬಗೆಬಗೆಯ ಮ್ಯಾಚಿಂಗ್‌ ಒಡವೆಗಳು ಹೆಚ್ಚು ಸೂಕ್ತ. ಇದಕ್ಕಾಗಿ ಕೆಳಗಿನ ಮೇಕಪ್‌ ಟ್ರಿಕ್ಸ್ ಟ್ರೈ ಮಾಡಿ :

ಮೇಕಪ್‌ ಗೆ ಮೊದಲು ನಿಮ್ಮ ಮುಖವನ್ನು ಉತ್ತಮ ಗುಣಮಟ್ಟದ ಕ್ಲೆನ್ಸಿಂಗ್‌ ಮಿಲ್ಕ್ ನಿಂದ ಶುಚಿಗೊಳಿಸಿ.

ನವರಾತ್ರಿಯಂಥ ವಿಶೇಷ ಹಬ್ಬಗಳಿಗಾಗಿ ನೀವು ಮೇಕಪ್‌ ಗಾಗಿ ಗೋಲ್ಡ್ ಫೌಂಡೇಶನ್‌ ಆರಿಸಿಕೊಳ್ಳಬಹುದು. ಇದನ್ನು ಮುಖದ ಮೇಲೆ ಹಚ್ಚಿಕೊಂಡು, ಒದ್ದೆ ಸ್ಪಾಂಜಿನಿಂದ ಬ್ಲೆಂಡ್‌ ಮಾಡಿ. ಕೆನ್ನೆಗಳನ್ನು ಬ್ಲಶರ್‌ ನಿಂದ ಟಚ್‌ ನೀಡಿ. ಇದನ್ನು ಚೀಕ್‌ ಬೋನ್‌ ಮೇಲೆ ತೀಡಿ, ನಿಧಾನವಾಗಿ ಮೇಲೆ ಮತ್ತು ಕೆಳಗೆ ಹರಡಿರಿ. ನಂತರ ಚೀಕ್‌ ಬೋನ್‌ ಮೇಲೆ ವೈಟ್‌ ಕಲರ್‌ ಹೈಲೈಟರ್‌ ನಿಂದ ಚೆನ್ನಾಗಿ ಬ್ಲೆಂಡ್‌ ಮಾಡಿ.

ಕಂಗಳ ಸೌಂದರ್ಯ ಹೆಚ್ಚಿಸಲು ಗೋಲ್ಡ್ ಐ ಶ್ಯಾಡೋ ಬಳಸಿರಿ. ಕಂಗಳಿಗೆ ಡಾರ್ಕ್‌ ಕಲರ್‌ ನ ಪೆನ್ಸಿಲ್ ‌ಬಳಸಿಕೊಳ್ಳಿ.

ನಿಮ್ಮ ಡ್ರೆಸ್‌ ಬಹಳ ಭಾರಿ ಅನಿಸದಿದ್ದರೆ, ಡಾರ್ಕ್‌ಮೇಕಪ್‌ ಬೇಡ. ಬದಲಿಗೆ ಲಿಪ್‌ ಸ್ಟಿಕ್‌ಐ ಶೇಡ್ಸ್ ನಲ್ಲಿ ಲೈಟ್‌ ಕಲರ್ಸ್‌ ಬಳಸಿರಿ. ಕಂಗಳಿಗೆ ಅಗತ್ಯ ಮಸ್ಕರಾ ತೀಡಿರಿ.

ನಂತರ ನಿಮ್ಮ ಕೂದಲಿಗೆ ಉತ್ತಮ ಹೇರ್‌ ಸ್ಟೈಲ್ ‌ನೀಡಿ. ನಿಮ್ಮ ಕೂದಲು ತೀರಾ ಚಿಕ್ಕದಾಗಿದ್ದರೆ ಅದನ್ನು ಹಾಗೇ ಓಪನ್‌ ಆಗಿ ಬಿಡಿ. ಶಾರ್ಟ್‌ ಹೇರ್‌ ಗೆ ಸ್ಟೈಲ್ ನೀಡಲು ಮುಂಭಾಗದಿಂದ ಪಫ್‌ ನೀಡಿ. ಕ್ಲಿಪ್‌ ನೆರವಿನಿಂದ ಮುಂಭಾಗದ ಕೂದಲನ್ನು ತೆಗೆದು ಹಿಂಭಾಗಕ್ಕೆ ತಿರುಗಿಸುತ್ತಾ ಪಿನ್‌ ಅಪ್‌ ಮಾಡಿ. ನಿಮ್ಮ ಕೂದಲು ಉದ್ದಕ್ಕಿದ್ದರೆ, ಯಾವುದೇ ಸ್ಟೈಲಿಶ್‌ ಜಡೆ ಅಥವಾ ಕೊಂಡೆ ಟ್ರೈ ಮಾಡಿ.

ವಿಶಿಷ್ಟ ಉಡುಗೆಗಳು

ಈ ನವರಾತ್ರಿ ಸೀಸನ್‌ ನಲ್ಲಿ ಬೇರೆಯವರಿಗಿಂತ ವಿಭಿನ್ನವಾಗಿ ಕಾಣಿಸಲು, ನಿಮ್ಮ ಲುಕ್ಸ್ ನ್ನೂ ಸ್ಟೈಲಿಶ್‌ಟ್ರೆಂಡಿ ಮಾಡಬಯಸಿದರೆ, ಈ ಕೆಳಗಿನ ಸಲಹೆಗಳನ್ನು ಅನುಸರಿಸಿ :

ಸೀರೆ : ಯಾವುದೇ ಹಬ್ಬವಿರಲಿ, ಸೀರೆ ನಿಮಗೆ ಸಾಂಪ್ರದಾಯಿಕ ಕ್ಲಾಸಿಕ್‌ ಲುಕ್‌ ನೀಡುತ್ತದೆ. ಹೀಗಾಗಿ ದಕ್ಷಿಣದ ಹೆಂಗಸರು ಹೆಚ್ಚಾಗಿ ಸೀರೆಯನ್ನೇ ಉಡುತ್ತಾರೆ. ಇದು ಲೈಟ್‌ ವೆಯ್ಟ್ ಕಂಫರ್ಟೆಬಲ್ ಆಗಿರಬೇಕು. ಈ ಹಬ್ಬದಲ್ಲಿ ಡ್ರೇಪಿಂಗ್‌ ನಲ್ಲಿ ಬದಲಾವಣೆ ತಂದುಕೊಂಡು ಸ್ಟನಿಂಗ್‌ ಲುಕ್ಸ್ ಪಡೆಯಿರಿ. ಪ್ರತಿ ಹಬ್ಬಕ್ಕೂ ಸೀರೆ ಬೇಡ ಎನಿಸಿದರೆ ಬೇರೆ ಉಡುಗೆಗಳನ್ನೂ ಟ್ರೈ ಮಾಡಬಹುದು.

ಅನಾರ್ಕಲಿ ಸೂಟ್ಯಾ ಗೌನ್‌ : ಸೀರೆ ನಂತರದ ಸ್ಥಾನ ಅನಾರ್ಕಲಿ ಸೂಟ್‌ ಆಗಿದೆ, ಇದು ಸಹ ಸ್ಟೈಲಿಶ್‌ ಆಪ್ಶನ್‌ ಆಗಿದೆ. ಇತ್ತೀಚೆಗೆ ಚಿಕನ್‌ ಕಾರಿ ಸೂಟ್‌ ಗೆ ಬಹಳ ಡಿಮ್ಯಾಂಡ್‌ ಇದೆ. ಇದು ಎಲ್ಲಾ ತರಹದ ಬಾಡಿ ಟೈಪ್‌ ಗೂ ಸೂಟ್‌ ಆಗುತ್ತದೆ. ಫ್ಲೋರ್ ಲೆಂತ್‌ ಗೌನ್‌ ಯಾ ನೀವು ಲೆಂತ್‌ ಸೂಟ್‌ ನವರಾತ್ರಿಯ ಪರ್ಫೆಕ್ಟ್ ಆಯ್ಕೆ ಆಗಿದೆ. ಇದು ನಿಮಗೆ ಹೆಚ್ಚಿನ ಸ್ಟೈಲಿಶ್‌ ಲುಕ್ಸ್ ನೀಡುತ್ತದೆ.

ಶರಾರಾ : ಇತ್ತೀಚೆಗೆ ಶರಾರಾ ಸಹ ಸಾಕಷ್ಟು ಟ್ರೆಂಡಿ ಫ್ಯಾಷನ್‌ ಎನಿಸಿದೆ. ನವರಾತ್ರಿಯ ಸಂದರ್ಭದಲ್ಲಿ ಶರಾರಾ ನಿಮಗೆ ಸ್ಟೈಲಿಶ್ ಕಂಫರ್ಟೆಬಲ್ ಲುಕ್ಸ್ ನೀಡುತ್ತದೆ. ಶಾರ್ಟ್‌ ಕುರ್ತಿ ಜೊತೆ ಫ್ಲೇಯರ್ಡ್‌ ಬಾಟಂ ದುಪಟ್ಟಾ, ನಿಮ್ಮ ಚೆಲುವನ್ನು ಹೆಚ್ಚಿಸುತ್ತದೆ.

ಕುರ್ತಿ ಸ್ಟೈಲ್ ವಿತ್ಪ್ಲಾಜೋ : ನವರಾತ್ರಿಯ ಸಂದರ್ಭದಲ್ಲಿ ಕುರ್ತಿ ಸ್ಟೈಲ್ ವಿತ್‌ ಪ್ಲಾಜೋ ಸಾಕಷ್ಟು ಜನಪ್ರಿಯ ಎನಿಸಿದೆ. ಜೊತೆಗೆ ದುಪಟ್ಟಾ ಕಾಂಬಿನೇಶನ್‌, ಇದಕ್ಕೆ ಇಂಡಿಯನ್‌ವೆಸ್ಟರ್ನ್‌ಎರಡೂ ಲುಕ್ಸ್ ನೀಡುತ್ತವೆ.

ಹಬ್ಬಕ್ಕೆ ಬಂದವರಿಗೆ ಉಡುಗೊರೆ : ನವರಾತ್ರಿಗೆಂದು ಹಬ್ಬಕ್ಕೆ ಬಂದ ಅಕ್ಕ, ತಂಗಿ, ಅತ್ತಿಗೆ, ನಾದಿನಿ, ಓರಗಿತ್ತಿ, ನೆಂಟರಿಷ್ಟರ ಹೆಣ್ಣುಮಕ್ಕಳು ಎಲ್ಲರಿಗೂ ಬಜೆಟ್‌ ಗೆ ತಕ್ಕಂತೆ ಸೀರೆ, ಡ್ರೆಸ್‌, ಸಣ್ಣಪುಟ್ಟ ಒಡವೆ, ಫ್ರೆಂಡ್ಸ್ ಮತ್ತಿತರರಿಗೆ ಕಾಲಕ್ಕೆ ತಕ್ಕಂತೆ ಮಾಡರ್ನ್‌ಫ್ಯಾಷನೆಬಲ್ ಫ್ಯಾನ್ಸಿ ಉಡುಗೊರೆ ನೀಡಿರಿ.

ಜ್ಯೂವೆಲರಿ : ನಿಮ್ಮ ಬಜೆಟ್‌ ಧಾರಾಳ ಎನಿಸಿದರೆ, ಆಯ್ದ ಕೆಲವರಿಗೆ ಸ್ಲೀಕ್‌ಬ್ಯೂಟಿಫುಲ್ ಲೇಟೆಸ್ಟ್ ಸ್ಟೈಲಿನ ಒಡವೆಯನ್ನೂ ಉಡುಗೊರೆ ಆಗಿ ಕೊಡಬಹುದು. ಮುಖ್ಯವಾಗಿ ಮೊದಲೇ ಪ್ಲಾನಿಂಗ್‌ ಮಾಡಿಕೊಂಡು, ಬಜೆಟ್‌ ಏರುಪೇರಾಗದಂತೆ ಉತ್ತಮ ಗುಣಮಟ್ಟದ ಒಡವೆ ಆರಿಸುವುದರಲ್ಲಿ ನಿಮ್ಮ ಜಾಣತನ ಅಡಗಿದೆ.

ಪ್ರೇಮಲತಾ

ಹಬ್ಬಕ್ಕೆ ಒದಗುವ ಒಡವೆಗಳು

ಆ್ಯಕ್ಸೆಸರೀಸ್‌ಜ್ಯೂವೆಲರಿ ಇಲ್ಲದೆ ಫೆಸ್ಟಿವ್ ‌ಲುಕ್‌ ಕಂಪ್ಲೀಟ್‌ ಎನಿಸದು. ಹೀಗಾಗಿ ನಿಮ್ಮ ಆಯ್ಕೆಗೆ ತಕ್ಕಂತೆ ಉತ್ತಮ ಗುಣಮಟ್ಟದ ಗೋಲ್ಡ್ ಡೈಮಂಡ್‌ ಸಂಗ್ರಹದಿಂದ ನೀವು ಬೆಲ್ಟ್ ಫೆಸ್ಟಿವ್ ‌ಲಕ್ಸ್ ಹೀಗೆ ಪಡೆಯಬಹುದು :

ಹಬ್ಬಗಳಲ್ಲಿ ಹೆಂಗಸರು ತಮ್ಮ ಉಡುಗೆಯ ಜೊತೆಗೆ ಒಡವೆಗಳಲ್ಲೂ ಸಾಂಪ್ರದಾಯಿಕ ಟಚ್‌ ಮೆಚ್ಚುತ್ತಾರೆ. ಪೋಲ್ಕಾ ನೆಕ್ಲೇಸ್‌, ಓಲೆ, ಜುಮಕಿ, ಡೈಮಂಡ್‌ ಪೆಂಡೆಂಟ್‌ ಇತ್ಯಾದಿ ಧರಿಸಿ ನೀವು ಇಂಥ ಲುಕ್ಸ್ ಪಡೆಯಬಹುದು.

ಹಬ್ಬಗಳಲ್ಲಿ ಹೆವಿ ನೆಕ್ಲೇಸ್‌ ಧರಿಸುವುದು ವಾಡಿಕೆ. ಇದು ನಿಮಗೆ ಹೆಚ್ಚಿನ ಫೆಸ್ಟಿವ್ ‌ಟಚ್‌ ನೀಡುತ್ತದೆ. ಹೀಗಾಗಿ ಗೋಲ್ಡ್ ಡೈಮಂಡ್‌ ನ  ಹೆವಿ ನೆಕ್ಲೇಸ್‌ ಇದೀಗ ಟ್ರೆಂಡಿ ಎನಿಸಿದೆ.

ಇತ್ತೀಚೆಗೆ ವಿಂಗ್ಸ್ ಸ್ಟೈಲ್ ಕಿವಿಯೋಲೆ ಬಹಳ ಟ್ರೆಂಡ್‌ ನಲ್ಲಿದೆ. ಇಷ್ಟು ಮಾತ್ರವಲ್ಲ, ದೊಡ್ಡ ಗಾತ್ರದ ಜುಮಕಿ, ಲೋಲಾಕು ಇತ್ಯಾದಿ ದಾವಣಿ ಧರಿಸುವ ತರುಣಿಯರಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ. ಇದನ್ನು ದಾವಣಿ ಮಾತ್ರವಲ್ಲದೆ, ಸೀರೆ, ಶರಾರಾ, ಲೆಹಂಗಾ ಜೊತೆಗೂ ಧರಿಸಬಹುದು. ಜುಮಕಿ, ಲೋಲಾಕುಗಳು ಎಲ್ಲಾ ಬ್ರಾಂಡ್‌ ಗಳಲ್ಲೂ ಲಭ್ಯವಿದ್ದು, ಪೋಲ್ಕಾ ಸ್ಟೈಲ್ ಜುಮಕಿಗಳೂ ನಿಮ್ಮ ಲುಕ್ಸ್ ಗೆ ಹೆಚ್ಚಿನ ಪರ್ಫೆಕ್ಷನ್‌ ನೀಡುತ್ತವೆ.

ನೇಚರ್‌ ನಿಂದ ಪ್ರಭಾವಿತಗೊಂಡ ಜ್ಯೂವೆಲರಿ ಕಲೆಕ್ಷನ್‌ ಇದೀಗ ಹೆಚ್ಚು ಜನಪ್ರಿಯ. ಈ ಸಂಗ್ರಹದಲ್ಲಿ ಫ್ಲೋರ್‌ ಡಿಸೈನಿನ ಪೆಂಡೆಂಟ್‌, ರಿಂಗ್ಸ್, ಓಲೆ ಲಭ್ಯ. ಈ ಡಿಸೈನ್‌ ಗಳು ಗೋಲ್ಡ್ ಡೈಮಂಡ್‌ ಎರಡರಲ್ಲೂ ಲಭ್ಯ. ಫ್ಲೋರ್‌ ಡ್ರೆಸ್‌ ಜೊತೆ ಈ ಸಂಗ್ರಹ, ನಿಮ್ಮ ಲಕ್ಸ್ ನ್ನು ಕಂಪ್ಲೀಟ್‌ ಮಾಡುತ್ತವೆ.

ಒಡವೆ ಮಾತ್ರವಲ್ಲದೆ, ಹೇರ್‌ ಆ್ಯಕ್ಸೆಸರೀಸ್‌ ಸಹ ಫೆಸ್ಟಿಲ್ ‌ಲುಕ್ಸ್ ಗೆ ಪೂರಕ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ