ಶ್ರಾವಣ ಮಾಸ ಬಂದೊಡನೆ ಹಬ್ಬಗಳ ಸಾಲು ಸಾಲು ಶುರು ಎಂದೇ ಅರ್ಥ. ಶ್ರಾವಣದ ವರಮಹಾಲಕ್ಷ್ಮಿ ಹಬ್ಬದಿಂದ ಭಾದ್ರಪದದ ಗೌರಿ ಗಣೇಶಕ್ಕೆ ಅಡಿಯಿಟ್ಟು, ಗೋಕುಲಾಷ್ಟಮಿ, ದಸರಾ ದೀಪಾವಳಿಗಳಿಗೆ ಮುಂದುವರಿಯುತ್ತದೆ. ಹಬ್ಬ ಎಂದೊಡನೆ ಎಲ್ಲೆಲ್ಲೂ ಸಂತಸ, ಸಂಭ್ರಮ, ಸಡಗರ! ಇಷ್ಟೆಲ್ಲ ಸಡಗರ, ಸಂಭ್ರಮ ಇದ್ದ ಮೇಲೆ ಹೆಂಗಳೆಯರು ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ ಎಂಬಂತೆ ಬಗೆಬಗೆಯ ರೇಷ್ಮೆ ಸೀರೆ, ಒಡವೆ, ಆಭರಣ ಧರಿಸಿ ಸರಭರ ಓಡಾಡದಿದ್ದರೆ ಆದೀತೇ?

ಹೀಗಾಗಿ ಹಬ್ಬಗಳು ಎಂದೊಡನೆ ಹೆಂಗಸರ ಶೃಂಗಾರವೇ ಪ್ರಧಾನ. ಬಿಂದಿ, ಸಿಂಧೂರ, ಮೆಹಂದಿ, ಹೊಸ ಬಳೆಗಳು, ಉಂಗುರ, ತೋಳುಬಂದಿ, ಗೆಜ್ಜೆ, ಸರ, ನೆಕ್ಲೇಸ್‌, ಓಲೆ, ಮಾಟ್ಲು, ಜುಮಕಿ, ಬೈತಲೆ ಬೊಟ್ಟು..... ಒಂದೇ ಎರಡೇ? ಇಂಥ ಒಡವೆ, ಸೀರೆ, ಶೃಂಗಾರ ಸಾಧನಗಳಿಂದ ಪ್ರತಿಯೊಬ್ಬ ಹೆಣ್ಣೂ ತನ್ನನ್ನು ತಾನು ಅತಿ ಚಂದವಾಗಿ ತೋರಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಹೀಗಾಗಿ ಹಬ್ಬಗಳ ಸಂದರ್ಭದಲ್ಲಿ ಲಭ್ಯವಿರುವ, ಹೆಚ್ಚಿನ ರಿಯಾಯಿತಿ ಒದಗಿಸುವ ಸ್ವರ್ಣಾಭರಣಗಳ, ಗೋಲ್ಡ್ ಡೈಮಂಡ್‌ ಒಡವೆಗಳನ್ನು ಖರೀದಿಸಿ, ಹಬ್ಬಕ್ಕೆ ಪರ್ಫೆಕ್ಟ್ ಲುಕ್ಸ್ ಗಳಿಸಬಹುದು.

ಈ ಸಲದ ನವರಾತ್ರಿ ಹಬ್ಬವಂತೂ ಸತತ 10 ದಿನಗಳ ವಿವಿಧ ಉತ್ಸವಗಳಿಂದಾಗಿ ಹೆಂಗಸರಿಗೆ ಹೆಚ್ಚಿನ ಸಡಗರ ತರುತ್ತದೆ. ಮನೆಯಲ್ಲಿ ಪಟ್ಟದ ಗೊಂಬೆ ಜೊತೆ, ಸಾಲು ಸಾಲಾಗಿ ಬೇರೆ ಬೊಂಬೆಗಳನ್ನಿರಿಸಿ, ಸುತ್ತಲೂ ನಾನಾ ಬಗೆಯ ಅಲಂಕಾರ ಮಾಡಿ, ತಾವು ಒಡವೆಗಳಿಂದ ಅಲಂಕೃತರಾಗಿ ಸುತ್ತಮುತ್ತಲ ಮುತ್ತೈದೆಯರು, ಬಂಧು ಬಾಂಧವರು, ಆಪ್ತೇಷ್ಟರನ್ನು ಕರೆದು ಗೊಂಬೆಗಳ ವೈಭವ ಪ್ರದರ್ಶಿಸುವುದು ಪ್ರತಿಷ್ಠೆಯ ಪ್ರಶ್ನೆಯೇ ಸರಿ. ನವರಾತ್ರಿ ವೈಭವ ಎಂದೊಡನೆ ಹೆಂಗಳೆಯರ ಓಡಾಟ ಹೆಚ್ಚು. ಮನೆ ಮನೆಗೂ ಹೆಣ್ಣುಮಕ್ಕಳ ಜೊತೆ ಹೋಗಿ ಬೊಂಬೆ ನೋಡಿಕೊಂಡು, ಗೆಳತಿಯರನ್ನು ಭೇಟಿ ಆಗುವುದು ವಾಡಿಕೆ.

ಹೀಗೆ ವಿಭಿನ್ನವಾಗಿ ಕಂಗೊಳಿಸಿ

ನವರಾತ್ರಿ ಹಬ್ಬ ವಿಶೇಷವಾಗಿ ಹೆಂಗಸರ ಹಬ್ಬವೆಂದೇ ಪ್ರಸಿದ್ಧ. ಹಲವು ದಿನಗಳ ಹಿಂದಿನಿಂದಲೇ ಇದರ ಪೂರ್ವ ತಯಾರಿ ಶುರು. ಇದಕ್ಕೆ ಮನೆಯ ಗಂಡಸರ ನೆರವು ಇದ್ದೇ ಇರುತ್ತದೆ. ಎಲ್ಲರೂ ಕೂಡಿ ಗೊಂಬೆಗಳನ್ನು ಅಲಂಕಾರಿಕವಾಗಿ ಜೋಡಿಸಿದಾಗ ಮಾತ್ರ ಆ ವೈಭಕ್ಕೆ ಲುಕ್‌ ಬರುತ್ತದೆ.

ಒಂದೊಂದು ದಿನ ಒಂದೊಂದು ಬಗೆಯ ಬಣ್ಣದ ಸೀರೆ, ಮ್ಯಾಚಿಂಗ್‌ ಬ್ಲೌಸ್‌, ಬಳೆಗಳು, ಹೇರ್‌ ಸ್ಟೈಲ್ ಬಿಂದಿ, ಹೂ ಇದ್ದರೆ  ಇನ್ನಷ್ಟು ಸೊಗಸು. ಹಾಗೆಯೇ ಬಗೆಬಗೆಯ ಮ್ಯಾಚಿಂಗ್‌ ಒಡವೆಗಳು ಹೆಚ್ಚು ಸೂಕ್ತ. ಇದಕ್ಕಾಗಿ ಕೆಳಗಿನ ಮೇಕಪ್‌ ಟ್ರಿಕ್ಸ್ ಟ್ರೈ ಮಾಡಿ :

ಮೇಕಪ್‌ ಗೆ ಮೊದಲು ನಿಮ್ಮ ಮುಖವನ್ನು ಉತ್ತಮ ಗುಣಮಟ್ಟದ ಕ್ಲೆನ್ಸಿಂಗ್‌ ಮಿಲ್ಕ್ ನಿಂದ ಶುಚಿಗೊಳಿಸಿ.

ನವರಾತ್ರಿಯಂಥ ವಿಶೇಷ ಹಬ್ಬಗಳಿಗಾಗಿ ನೀವು ಮೇಕಪ್‌ ಗಾಗಿ ಗೋಲ್ಡ್ ಫೌಂಡೇಶನ್‌ ಆರಿಸಿಕೊಳ್ಳಬಹುದು. ಇದನ್ನು ಮುಖದ ಮೇಲೆ ಹಚ್ಚಿಕೊಂಡು, ಒದ್ದೆ ಸ್ಪಾಂಜಿನಿಂದ ಬ್ಲೆಂಡ್‌ ಮಾಡಿ. ಕೆನ್ನೆಗಳನ್ನು ಬ್ಲಶರ್‌ ನಿಂದ ಟಚ್‌ ನೀಡಿ. ಇದನ್ನು ಚೀಕ್‌ ಬೋನ್‌ ಮೇಲೆ ತೀಡಿ, ನಿಧಾನವಾಗಿ ಮೇಲೆ ಮತ್ತು ಕೆಳಗೆ ಹರಡಿರಿ. ನಂತರ ಚೀಕ್‌ ಬೋನ್‌ ಮೇಲೆ ವೈಟ್‌ ಕಲರ್‌ ಹೈಲೈಟರ್‌ ನಿಂದ ಚೆನ್ನಾಗಿ ಬ್ಲೆಂಡ್‌ ಮಾಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ