ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಹೊಸ ಮತ್ತು ಆವಿಷ್ಕಾರಕ ಶ್ರೇಣಿಯ ಡಿಸೈನರ್ ಫಿನಿಷ್ ಅನ್ನು ಎರಡು ವಿಶೇಷ ಮತ್ತು ಫ್ಯೂಚರಿಸ್ಟಿಕ್ ಸಂಗ್ರಹಗಳ ಶ್ರೇಣಿಯನ್ನು ಬಿಡುಗಡೆ ಮಾಡಿದ್ದು ಅದು ಭಾರತದಲ್ಲಿ ಪ್ರೀಮಿಯಂ ಒಳಾಂಗಣ ವಿನ್ಯಾಸವನ್ನು ಬದಲಾಯಿಸಲಿದೆ. ಐಷಾರಾಮವನ್ನು ಮರು ವ್ಯಾಖ್ಯಾನಿಸಲು ರೂಪಿಸಲಾದ ಈ ಹೊಸ ಶ್ರೇಣಿಯು ಬ್ರಾಂಡ್ ತನ್ನ ಫ್ರಾಂಚೈಸಿ ಮಳಿಗೆಗಳ ಪ್ರಾರಂಭಿಸುವ ಮತ್ತು ಕಂಪನಿ ಮಾಲೀಕತ್ವದ ನಿರ್ವಹಣೆಯ ಎಕ್ಸ್ಪೀರಿಯೆನ್ಸ್ ಮಳಿಗೆಗಳಾದ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೋಗಳನ್ನು ಪ್ರಾರಂಭಿಸುವ ಮೂಲಕ ಗ್ರಾಹಕರಿಗೆ ಡಿಸೈನರ್ ಫಿನಿಷ್ ಶ್ರೇಣಿಯನ್ನು ನೇರ ಅನುಭವ ಪಡೆದುಕೊಳ್ಳುವ ಅವಕಾಶ ಕಲ್ಪಿಸಿ ತನ್ನ ವ್ಯಾಪ್ತಿ ವಿಸ್ತರಿಸುವ ಹಿನ್ನೆಲೆಯಲ್ಲಿ ಬಂದಿದೆ.
ಈ ವಿಶೇಷ ಶ್ರೇಣಿಯು ಎರಡು ಸಂಗ್ರಹಗಳನ್ನು ಪರಿಚಯಿಸುತ್ತದೆ: ಡ್ರೀಮ್ ಕಲೆಕ್ಷನ್ ಮತ್ತು ಟೈಮ್ ಲೆಸ್ ಕಲೆಕ್ಷನ್, ಪ್ರತಿಯೊಂದೂ ನಿಸರ್ಗದಿಂದ ಸ್ಫೂರ್ತಿ ಪಡೆದ ಸೊಗಸು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ವಿಶಿಷ್ಟ ಸಂಯೋಜನೆ ಹೊಂದಿರುತ್ತದೆ. ಹೈ-ಡೆಫನಿಷನ್ 3ಡಿ ಮಾದರಿಗಳು ಮತ್ತು ಮೆಟಾಲಿಕ್ ಬ್ರಿಲಿಯೆನ್ಸ್ ನಿಂದ ಸಮಯರಹಿತ ಮತ್ತು ಕೈಯಲ್ಲಿ ರೂಪಿಸಲಾದ ಫಿನಿಷ್ ಗಳವರೆಗೆ ಬಿರ್ಲಾ ಓಪಸ್ ಪೇಂಟ್ಸ್ ಡಿಸೈನರ್ ಫಿನಿಷ್ ಗೋಡೆಗಳಿಗೆ ಅತ್ಯಾಧುನಿಕತೆ ಮತ್ತು ಆಳ ನೀಡುವ ಮೂಲಕ ಜೀವ ತರುತ್ತವೆ. ಬರೀ ಬಣ್ಣಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವವರಿಗೆ ವಿನ್ಯಾಸಗೊಳಿಸಲಾದ ಡಿಸೈನರ್ ಫಿನಿಷ್ ನಿಮ್ಮ ಸ್ಥಳಗಳನ್ನು ವೈಯಕ್ತಿಕ ಸ್ಟೈಲ್ ನ ಅಭಿವ್ಯಕ್ತಿಗಳಾಗಿ ಮತ್ತು ಪರಿಸರದ ಅರಿವಿನ ವಾಸಸ್ಥಳವಾಗಿ ಪರಿವರ್ತಿಸುವುದಲ್ಲದೆ “ದುನಿಯಾ ಕೊ ರಂಗ್ ದೊ” ಎಂಬ ಬಿರ್ಲಾ ಓಪಸ್ ಪೇಂಟ್ಸ್ ಧ್ಯೇಯೋದ್ದೇಶವನ್ನು ಪೂರೈಸುವುದಲ್ಲದೆ ಹೆಚ್ಚುವರಿ ದೀರ್ಘಬಾಳಿಕೆ ಮತ್ತು ಔನ್ನತ್ಯ ನೀಡುತ್ತದೆ.
ಈ ಬಿಡುಗಡೆ ಕುರಿತು ಬಿರ್ಲಾ ಓಪಸ್ ಪೇಂಟ್ಸ್ ಸಿಇಒ ರಕ್ಷಿತ್ ಹರ್ಗವೆ, “ಬಿರ್ಲಾ ಓಪಸ್ ಪೇಂಟ್ಸ್ ನಲ್ಲಿ ನಾವು ಬರೀ ಉತ್ಪನ್ನಗಳಿಗಿಂತ ಹೆಚ್ಚಿನದನ್ನು ನಿರೀಕ್ಷಿಸುವ ಗ್ರಾಹಕರನ್ನು ಅರ್ಥ ಮಾಡಿಕೊಂಡಿದ್ದೇವೆ; ಅವರು ಅನುಭವಗಳನ್ನು ಬಯಸುತ್ತಾರೆ ಮತ್ತು ಉದ್ದೇಶ ಹಾಗೂ ಮೌಲ್ಯವನ್ನು ಬಿಂಬಿಸುವ ಉತ್ಪನ್ನಗಳನ್ನು ಬಯಸುತ್ತಾರೆ. ನಮ್ಮ ಗುರಿ ಸುಧಾರಿತ ವಿನ್ಯಾಸ ತಂತ್ರಜ್ಞಾನದೊಂದಿಗೆ ಸೃಜನಶೀಲತೆಯನ್ನು ಮರು ವ್ಯಾಖ್ಯಾನಿಸುವುದೇ ಅಲ್ಲದೆ ಒಳಾಂಗಣ ಐಷಾರಾಮದಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸುವುದೂ ಆಗಿದೆ.
ಭಾರತದಾದ್ಯಂತ ನಮ್ಮ ಪೇಂಟ್ ಸ್ಟುಡಿಯೋ ಮತ್ತು ಫ್ರಾಂಚೈಸಿ ಮಳಿಗೆಗಳನ್ನು ಪ್ರಾರಂಭಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಗ್ರಾಹಕರಿಗೆ ನಿಸರ್ಗದ ಸೌಂದರ್ಯದಿಂದ ಹಾಗೂ ಇಟಲಿಯ ಕಲಾತ್ಮಕತೆಯಿಂದ ಸ್ಫೂರ್ತಿ ಪಡೆದ ಈ ವಿಶೇಷ ಫಿನಿಷ್ ಗಳನ್ನು ಈಗ ಪ್ರಸ್ತುತಪಡಿಸುತ್ತಿದ್ದು ಅವು ಖಂಡಿತವಾಗಿಯೂ ನಿಮ್ಮ ಮನೆಗೆ ಐಷಾರಾಮದ ರುಚಿಯನ್ನು ಸೇರ್ಪಡೆ ಮಾಡುತ್ತವೆ” ಎಂದರು.
ಡ್ರೀಮ್ ರೇಂಜ್ ಹೈ-ಡೆಫನಿಷನ್ 3ಡಿ ಪ್ಯಾಟ್ರನ್ ಮತ್ತು ಮೆಟಾಲಿಕ್ ಫಿನಿಷ್ ಗಳನ್ನು ತಂದಿದ್ದು ಅದು ಸ್ಟೇಟ್ಮೆಂಟ್ ವಾಲ್ ಗಳನ್ನು ಸೃಷ್ಟಿಸಲು ಪರಿಪೂರ್ಣವಾಗಿದ್ದು 150ಕ್ಕೂ ಹೆಚ್ಚು ಟ್ರೆಂಡಿ ಮತ್ತು ನೀರಿನ ನಿರೋಧಕ ಬಣ್ಣಗಳನ್ನು ದೀರ್ಘಬಾಳಿಕೆ ಮತ್ತು ದೀರ್ಘಕಾಲ ಉಳಿಯುವ ಸೌಂದರ್ಯದೊಂದಿಗೆ ನೀಡಲಾಗುತ್ತದೆ. ಇದು ಸಮುದ್ರ, ಮೋಡಗಳು ಮತ್ತು ಮರಗಳನ್ನು ಒಳಗೊಂಡು ನಿಸರ್ಗದ 14 ಅಂಶಗಳಿಂದ ಸ್ಫೂರ್ತಿ ಪಡೆದ 14 ವಿಶೇಷ ವಿನ್ಯಾಸಗಳನ್ನು ಹೊಂದಿದ್ದು ಪ್ರತಿ ವಿನ್ಯಾಸಕ್ಕೂ 10 ಬಣ್ಣದ ಸಂಯೋಜನೆಗಳನ್ನು ನೀಡುತ್ತದೆ. ಇದರಿಂದ ಸ್ಥಳಗಳನ್ನು ಐಷಾರಾಮಿ, ಆಕರ್ಷಕ ಪರಿಸರಗಳನ್ನಾಗಿ ಪರಿವರ್ತಿಸುವ 140 ವಿಶಿಷ್ಟ ಕೊಡುಗೆಗಳನ್ನು ನೀಡುತ್ತದೆ.