ನಿಮಗೆ ನಿಮ್ಮ ಮನೆಯಲ್ಲಿ ಸುಸ್ತು, ಸಂಕಟದ ವಾತಾವರಣದ ಬದಲು ಸಂತಸ ಖುಷಿಯ ವಾತಾವರಣ ಬೇಕೇ? ನಮ್ಮ ದೈನಂದಿನ ಜೀವನದಲ್ಲಿ ಲೈಟ್‌ಎಷ್ಟು ಮಹತ್ವಪೂರ್ಣ? ನಮ್ಮ ಮನೆಗಳಿಗೆ ಸೂಕ್ತ ಲೈಟಿಂಗ್‌ ವ್ಯವಸ್ಥೆ ನಿಜಕ್ಕೂ ಬೇಕೇ? ಹೌದು ಎಂದಾದರೆ ಏಕೆ?

ಇಂಟೀರಿಯರ್‌ ತಜ್ಞರು ಹಾಗೂ ವೈದ್ಯರು ಈ ಕುರಿತು ನೀಡುವ ಸಲಹೆ ಗಮನಿಸೋಣವೇ?

ಮನೆಯ ಯಾವ ಮೂಲೆಗೆ ಹೋದರೂ ನಿಮಗೆ ಧಾರಾಳ ಸಕಾರಾತ್ಮಕ ಶಕ್ತಿಯ ಅನುಭೂತಿ ದೊರೆತರೆ, ನಿಮ್ಮ ಮೂಡ್‌ ಸದಾ ಉತ್ತಮವಾಗಿದ್ದು, ನಿಮಗೆ ರಿಫ್ರೆಶಿಂಗ್‌ ಫೀಲಿಂಗ್‌ ಬರುತ್ತದೆ. ಇದು ಹೇಗೆ ಸಾಧ್ಯ ಎಂದು ಆಗ ನಿಮಗೆ ಅನಿಸದೆ ಇರದು. ಯಾವಾಗ ಇದು ತುಸು ಗೊಂದಲಮಯ ಅನಿಸುತ್ತೋ, ಆಗ ನೀವು ಇದನ್ನು `ಸಕಾರಾತ್ಮಕ ಶಕ್ತಿ'ಯ ಮೂಲ ಅಂದುಕೊಳ್ಳುವಿರಿ. ಮುಂದಿನ ಸಲ ಹೀಗನಿಸಿದಾಗ, ಅಗತ್ಯವಾಗಿ ನಿಮ್ಮ ಮನೆಯ ಲೈಟಿಂಗ್‌ ವ್ಯವಸ್ಥೆ ಕಡೆ ಕಣ್ಣು ಹಾಯಿಸಿ.

ಕೋಣೆಗಳಲ್ಲಿ ಬೆಳಕಿನ ಪ್ರಭಾವ

ಮನೆಗಳಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರದಿದ್ದರೆ, ಆಗ ನಾವು ಬಲವಂತವಾಗಿ ಕಣ್ಣರಳಿಸಿಕೊಂಡು ಕೆಲಸ ಮಾಡುವುದರಿಂದ, ಕಣ್ಣಿಗೆ ಹೆಚ್ಚು ಒತ್ತಡ ಹೇರಿದಂತೆ, ಹಿಂಸಕಾರಕ ಎಂಬುದು ಗೊತ್ತಿರುವ ವಿಚಾರ. ಅದೇ ತರಹ ಕಣ್ಣು ಕೋರೈಸುವ ಬೆಳಕಿದ್ದರೆ ಅದರಿಂದಲೂ ಕಣ್ಣಿಗೆ ಹಾನಿ ತಪ್ಪಿದ್ದಲ್ಲ. ಈ 2 ಅತಿರೇಕದ ಸ್ಥಿತಿಗಳೂ ಕಣ್ಣಿಗೆ ಹಾನಿಕಾರಕ. ಈ ತರಹದ ದೋಷಪೂರಿತ ಲೈಟಿಂಗ್ ವ್ಯವಸ್ಥೆ ಡಿಸೈನರ್‌ ಮನೆಗಳಲ್ಲಿ ದೀರ್ಘಾವಧಿಗೆ ತುಂಬಿಕೊಂಡಿದ್ದರೆ, ನಮ್ಮ ಆರೋಗ್ಯಕ್ಕೆ ಇದರಿಂದ ಎಂದೂ ಲಾಭವಿಲ್ಲ. ಈ ಕಾರಣದಿಂದಲೇ ನಮ್ಮ ಮನೆ ಮತ್ತು ವರ್ಕಿಂಗ್‌ ಸ್ಪಾಟ್‌ ನಲ್ಲಿ ಸಾಕಷ್ಟು ಗಾಳಿ ಬೆಳಕಿನ ವ್ಯವಸ್ಥೆ ಚೆನ್ನಾಗಿರಬೇಕು.

ಮನೆಯಲ್ಲಿ ಬೆಳಕಿನ ವ್ಯವಸ್ಥೆ

ಬೆಳಕಿನ ಪ್ರಮಾಣವನ್ನು `ಲಕ್ಸ್' ಘಟಕದಲ್ಲಿ ಅಳೆಯುತ್ತಾರೆ. ಒಂದು ಮನೆಯಲ್ಲಿ ಪ್ರತಿ ಕೋಣೆಯಲ್ಲೂ ಇಂತಿಷ್ಟೇ ಲಕ್ಸ್ ನ  ಬೆಳಕು ಇರಬೇಕು ಎಂಬ ನಿಯಮವಿದೆ. ಹಗಲು ರಾತ್ರಿಗಳ ವಿಭಿನ್ನ ಸಮಯಗಳಲ್ಲಿ ನಾವು ಮನೆಯಲ್ಲಿ ಮಾಡುವ ಕೆಲಸ ಆಧರಿಸಿ, ಅದಕ್ಕೆ ತಕ್ಕಂತೆ ಬೆಳಕಿನ ವ್ಯವಸ್ಥೆ ಮಾಡಿರಬೇಕು.

ಲೈಟಿಂಗ್ಅರೇಂಜ್ಮೆಂಟ್

ಇದರ ಬಗ್ಗೆ ಮಾತನಾಡುವಾಗ, ಇದರ ವಿಭಿನ್ನ ಘಟ್ಟಗಳು ನಮ್ಮ ಕಣ್ಣೆದುರು ಸುಳಿದಾಡುತ್ತವೆ. ಮನೆಯ ಮೂಲೆ ಮೂಲೆಯನ್ನೂ ಝಗಮಗಿಸುವಂಥ ಬೆಳಕಿನ ವ್ಯವಸ್ಥೆ ಇದ್ದರೆ ಮಾತ್ರ ಅದನ್ನು ಉತ್ತಮ ಲೈಟಿಂಗ್‌ ಅರೇಂಜ್‌ ಮೆಂಟ್‌ ಎಂದು ಜನ ಭಾವಿಸುತ್ತಾರೆ. ಪ್ರತಿ ಸಲ ಇದರಿಂದ ಉತ್ತಮ ಪರಿಣಾಮವೇ ದೊರಕುತ್ತದೆ ಎಂಬ ಗ್ಯಾರಂಟಿ ಏನೂ ಇಲ್ಲ. ಸಾಮಾನ್ಯವಾಗಿ ನಾವು ಇದನ್ನು ಗಮನಿಸಲಿಕ್ಕೇ ಹೋಗುವುದಿಲ್ಲ ಅಥವಾ ನಮ್ಮ ಸುತ್ತಮುತ್ತಲಿನ ಲೈಟ್‌ ಅರೇಂಜ್‌ ಮೆಂಟ್‌ ಗೆ ನಾವು ಹೆಚ್ಚಿನ ಮಹತ್ವವನ್ನೂ ನೀಡುವುದಿಲ್ಲ. ಆದರೆ ಒಂದಂತೂ ನಿಜ, ಇದು ನಮ್ಮ ಮನಃಸ್ಥಿತಿ, ಆರೋಗ್ಯ, ದೃಷ್ಟಿ ಮತ್ತು ನಮ್ಮ ಸಾಮಾನ್ಯ ಜೀವನದ ಮೇಲೂ ಖಂಡಿತಾ ಗಾಢ ಪರಿಣಾಮ ಬೀರುತ್ತದೆ.

ಸಮರ್ಪಕ ಲೈಟ್‌ ಅರೇಂಜ್‌ ಮೆಂಟ್‌ ಖಾತ್ರಿ ಪಡಿಸುವುದೆಂದರೆ, ನೀವು ಮಾಡಬೇಕೆಂದಿರುವ ಯಾವುದೇ ಕೆಲಸಕ್ಕೆ ಅದನ್ನು ಸಲೀಸಾಗಿ, ಸುಸೂತ್ರವಾಗಿ ಮಾಡಲು ಉತ್ತಮ ಲೈಟಿಂಗ್‌ ಅರೇಂಜ್‌ ಮೆಂಟ್‌ ಬೇಕೇಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ