`ಬೇಟಿ ಬಚಾವೋ ಬೇಟಿ ಪಢಾವೋ’ ಎಂದು ಹೆಣ್ಣುಮಕ್ಕಳಿಗೆ ಒತ್ತು ಕೊಡುವ ಈ ಘೋಷಣೆ ವಾಸ್ತವದ ಜಗತ್ತಿನಲ್ಲಿ `ಹೆಣ್ಣನ್ನು ರಕ್ಷಿಸಿ ನಂತರ ಹಾಳು ಮಾಡಿ’ ಎಂಬ ಮಟ್ಟಕ್ಕೆ ಬಂದು ನಿಂತಿದೆ. ಅನಾದಿ ಕಾಲದಿಂದಲೂ ಹೆಣ್ಣು ರೇಪ್‌ ಗೆ ಬಲಿಯಾಗುತ್ತಲೇ ಇದ್ದಾಳೆ. ಪ್ರತಿ ಆಕ್ರಮಣದಲ್ಲೂ ರಾಜ ಹೇಳುವುದೆಂದರೆ, ಪರದೇಶದಿಂದ ಹಣದ ಲೂಟಿ ಒಂದೇ ಅಲ್ಲ, ಉಚಿತವಾಗಿ ಹೆಂಗಸರೂ ಸಿಗುತ್ತಾರೆ ಅಂತ. ಆದ್ದರಿಂದಲೇ ಸೈನಿಕರು ಪ್ರಾಣದ ಹಂಗು ತೊರೆದು ಆಕ್ರಮಣಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಸುರಕ್ಷಿತರು, ಕಾನೂನು ವ್ಯವಸ್ಥೆಯುಳ್ಳವರು, ಸೇನಾಪಡೆ, ಪೊಲೀಸರಿಂದ ತುಂಬಿದ ದೇಶಗಳಲ್ಲೂ ಸುಲಭವಾಗಿ ಹಾಡುಹಗಲೇ ಹೆಣ್ಣಿನ ರೇಪ್ ಮಾಡಿ, ಎದೆ ಸೆಟೆಸಿ ಆರಾಮವಾಗಿ ಓಡಾಡುತ್ತಾರೆ.

ಉ.ಪ್ರದೇಶದ ಅಂಬೇಡ್ಕರ್‌ ಜಿಲ್ಲೆಯಲ್ಲಿ ಅಕ್ಟೋಬರ್‌ 5 ರಂದು 15ರ ಬಾಲೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. ಅದರ ಹಿಂದಿನ 2 ದಿನಗಳು ಅವಳನ್ನು ದಾರುಣವಾಗಿ ರೇಪ್‌ ಮಾಡಿ, ಸಾಯಿಸದೆ ಬಿಟ್ಟರು. ಪೊಲೀಸರಿಗೆ ದೂರಿತ್ತರೂ ಮೆಡಿಕಲ್ ಪರೀಕ್ಷೆ ಮಾಡಿಸಿದ್ದೊಂದು ಬಿಟ್ಟರೆ, ಕೇಸ್‌ ಮುಂದುವರಿಯಲೇ ಇಲ್ಲ. ಹಿಂದಿನ ಘೋಷಣೆ ಇದೀಗ ಸಮಾಜದಲ್ಲಿ `ಹೆಣ್ಣನ್ನು ಕಾಪಾಡಿ, ರೇಪ್‌ಮಾಡಿ, ಸಾಯಲು ಬಿಡಿ’ ಎಂಬಂತಾಗಿಬಿಟ್ಟಿದೆ.

ರೇಪ್‌ ನಂತರ ಹೆಣ್ಣುಮಕ್ಕಳು ಎಷ್ಟು ನರಳುತ್ತಾರೆ ಎಂಬುದು ಸುಪ್ರೀಂ ಕೋರ್ಟಿನ ಇತ್ತೀಚಿನ ಒಂದು ಹೇಳಿಕೆಯ ಮೂಲಕ ತಿಳಿಯುತ್ತದೆ. ಇಲ್ಲಿ ಸಂಸತ್ತಿನ ಕಾನೂನನ್ನು ತುಸು ತಿದ್ದುತ್ತಾ ಹೇಳಲಾಗಿದ್ದೆಂದರೆ, ರೇಪ್‌ ಗೆ ಬಲಿಯಾದ ಹೆಣ್ಣಿಗೆ 24 ಗಂಟೆಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳುವ ಮೌಲಿಕ ಹಕ್ಕಿದೆ, ಆಕೆ ವಿವಾಹಿತೆ ಆಗಿದ್ದರೂ ಸಹ, ಎಂಬುದು.

ಈ ಪ್ರಕರಣ ಸುಪ್ರೀಂ ಕೋರ್ಟ್‌ ವರೆಗೂ ತಲುಪಿದ್ದರಿಂದಲೇ, ರೇಪ್‌ ಇಂದಿಗೂ ನಮ್ಮ ದೇಶದಲ್ಲಿ ಎಷ್ಟು ಸೀರಿಯಸ್‌ ಎಂದು ತಿಳಿಯುತ್ತದೆ. ಇಷ್ಟೆಲ್ಲ ಶಿಕ್ಷಣ ದೊರಕಿದರೂ, ಹುಡುಗಿಯರು ತಮ್ಮ ದೇಹವನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿರಿಸಿಕೊಳ್ಳಬೇಕಾಗಿದೆ. ಯಾರಿಗೆ ಗೊತ್ತು? ಯಾರು ಇವರ ದೇಹ, ಇವರ ಜೀವಿಸುವ ಹಕ್ಕು, ಖುಷಿಗಳನ್ನೂ ರೇಪ್ ಮಾಡಿಬಿಡುತ್ತಾರೋ ಏನೋ?

Rape-and-kanoon-1

ರೇಪ್‌ ನ ಬಹು ಅಲ್ಪ ಪ್ರಕರಣಗಳು ಮಾತ್ರ ಕಣ್ಣೆದುರು ಬರುತ್ತವೆ. ಏಕೆಂದರೆ ಇಂಥ ಕುಕೃತ್ಯಕ್ಕೆ ಒಳಗಾದ ಹೆಣ್ಣು ತನ್ನೊಳಗೇ ಅದನ್ನು ಮುಚ್ಚಿಟ್ಟುಕೊಂಡು ನೋವು ಸಹಿಸುತ್ತಾಳೆ. ಈ ಸಮಾಜ, ದೇಶ, ಮನೆಯವರು ಇದಕ್ಕಾಗಿ ಅವಳನ್ನು ರೇಪ್‌ ವಿಕ್ಟಿಮ್ ಬದಲು ಅಕ್ಯೂಸ್ಡ್ ಎಂದೇ ಭಾವಿಸುತ್ತದೆ. `ನೀನೇಕೆ ಹೊರಗೆ ಹೋದೆ? ನೀನೇಕೆ ಅವನನ್ನು ಎದುರಿಸಲಿಲ್ಲ? ಅಂಥವರನ್ನು ಯಾಕೆ ಫ್ರೆಂಡ್‌ ಮಾಡಿಕೊಂಡೆ? ನಿನ್ನದೇ ಏನೋ ತಪ್ಪಿರಬೇಕು, ನೀನೇ ಒಪ್ಪಿಕೊಂಡು ಅವನ ಹಿಂದೆ ಹೋಗಿರಬೇಕು, ಈಗ ರೇಪ್ ಅಂತಿದ್ದೀಯಾ’ ಮುಂತಾದ ಕಟುಮಾತನ್ನು ಪ್ರತಿ ಸಂತ್ರಸ್ತೆಯೂ ಸಹಿಸಲೇಬೇಕು.

ಪೊಲೀಸರಂತೂ ಈ ಪ್ರಕರಣಗಳಲ್ಲಿ ಕೆಲಸ ಮಾಡುವುದೇ ಕಡಿಮೆ. ಎಷ್ಟೋ ಸಲ ದೂರು ನೀಡಿದರು, ನಂತರ ಕೋರ್ಟಿನ ಸತತ ವಿಚಾರಣೆಗಳಿಂದ ಗಾಬರಿಗೊಂಡು ಈ ಕೇಸನ್ನೇ ಹಿಂಪಡೆಯುವಂತೆ ಗೋಗರೆಯುತ್ತಾರೆ. ಹಾಗಾಗಿ ಪೊಲೀಸರು ತೆಪ್ಪಗಾಗುತ್ತಾರೆ. ರೇಪ್‌ ಮಾಡಿದವನಿಂದ ಪೊಲೀಸರಿಗೆ ಧಾರಾಳ `ಲಾಭ’ ಆಗಿರುತ್ತದೆ.

ರೇಪ್‌ಎಂಬುದು ಎಷ್ಟು ಕಾನೂನಿಗೆ ಸೇರಿದ್ದೋ, ಅದಕ್ಕೂ ಹೆಚ್ಚು ಸಮಾಜಕ್ಕೆ ಸೇರಿದೆ. ಹುಡುಗರು ಎಂದೂ ಇಂಥ ಕುಕೃತ್ಯ ಎಸಗಬಾರದು ಎಂದು ಅವರಿಗೆ ಕಲಿಸಲೇಬೇಕು. ರೇಪ್‌ ಮಾಡುವ ಇಂಥ ಸಶಕ್ತ ಹುಡುಗರು, ಸಣಕಲ ಹುಡುಗರಿಂದ ಪಿಕ್ ಪಾಕೆಟ್‌ ಮಾಡುವುದಿಲ್ಲ. ಇಂಥವರಿಗೆ ಬಾಲ್ಯದಿಂದಲೇ, ಹುಡುಗಿ ಇರುವುದೇ ಮೋಜು, ಮಸ್ತಿ ಮಾಡಲಿಕ್ಕೆ ಎಂದು ಕಲಿಸಲಾಗಿರುತ್ತದೆ. ಪೋರ್ನ್‌ ಸಾಹಿತ್ಯ ಈ ಬೆಂಕಿಗೆ ತುಪ್ಪ ಸುರಿಯುತ್ತದೆ.

ರೇಪ್‌ ನ ಎಷ್ಟೋ ಪ್ರಕರಣಗಳಲ್ಲಿ ಸಂತ್ರಸ್ತೆಗೆ ಸಾವೇ ಮೇಲು ಎನಿಸುತ್ತದೆ. ಆದರೆ ಈ ಸಾವು ಮನೆಯವರ ಮುಖಕ್ಕೆ ಮಸಿ ಬಳಿಯುತ್ತದೆ, ಇದನ್ನವಳು ಅರಿಯಲಾರಳು. ಅವಳೇನೋ ಸತ್ತಳು, ಅವಳ ಪರಿವಾರ ರೇಪ್‌ ನ ಅವಮಾನ, ನಂತರ ಆತ್ಮಹತ್ಯೆಯ ನೋವು ಸಹಿಸಬೇಕಾಗುತ್ತದೆ. ಸಮಾಜದಲ್ಲಾಗುವ ಅಪಮಾನ ಇದಕ್ಕಿಂತ ಹೆಚ್ಚು.

ಕಂಗಳನ್ನು ಬಿಟ್ಟು ಕ್ಯಾಮೆರಾ ಜೊತೆ ಮಸ್ತಿ

ಇತ್ತೀಚೆಗೆ ಜನ ಯಾವ ಪ್ರವಾಸಿ ತಾಣಕ್ಕೆ ಹೋದರೂ ಎದುರಿನ ಐತಿಹಾಸಿಕ ಸ್ಮಾರಕ, ಸುತ್ತಮುತ್ತಲ ಪ್ರಕೃತಿ, ಪರಿಸರದ ಚೆಲುವು….. ಇತ್ಯಾದಿಗಳನ್ನು ತಮ್ಮ ಕಂಗಳಲ್ಲಿ ತುಂಬಿಕೊಳ್ಳುವುದನ್ನು ಬಿಟ್ಟು, ತಮ್ಮ ಮೊಬೈಲ್ ‌ಸ್ಕ್ರೀನ್‌ ನಲ್ಲಿ ಕಣ್ಣು ನೆಟ್ಟು  ಅದನ್ನೇ ನೋಡುತ್ತಾರೆ. ಎಲ್ಲಿ ಏನೇ ಒಳ್ಳೆಯದ್ದು ಕೆಟ್ಟದ್ದು ನಡೆಯಲಿ, ಕ್ಯಾಮೆರಾ ಸ್ಟಾರ್ಟ್‌! ಅಲ್ಲಿನ ಪ್ರಕೃತಿಯ ರಮಣೀಯತೆ ಬಿಟ್ಟು, ಸದಾ ಫೋಟೋ, ಸೆಲ್ಛಿ ಇವುಗಳಲ್ಲೇ ಕಾಲ ಕಳೆಯುತ್ತಾರೆ.

ಈಗೆಲ್ಲ ಎಲ್ಲರ ಬಳಿಯೂ ಕ್ಯಾಮೆರಾ, ಮೊಬೈಲ್ ‌ಇರುವುದರಿಂದ, ಸಾವಿರಾರು ವಿಧಾನಗಳಿಂದ ಕಂಡವರು ಕ್ಯಾಮೆರಾದಲ್ಲಿ ಸೆರೆಹಿಡಿದು ಫಾರ್ವರ್ಡ್ ಮಾಡಿದ್ದನ್ನು ಸಾವಧಾನವಾಗಿ ಕುಳಿತು ನೋಡುತ್ತಾರೆ. ಆದರೆ ತಾವು ಒಂದು ಕಡೆ ಹೋದಾಗ, ಅದನ್ನು ಇಡೀ ವಿಶ್ವಕ್ಕೆ ತಕ್ಷಣ FB ‌ಮೂಲಕ ಸಾರಿಕೊಳ್ಳಬೇಕೆಂಬ ಅತಿಯಾದ ಚಪಲದಿಂದಾಗಿ, ಜನ ತಾವು ಪ್ರವಾಸ ಎಂಜಾಯ್‌ ಮಾಡಲು ಹೋಗಿದ್ದೇವೆ ಎಂಬುದನ್ನೇ ಮರೆತು ಎಲ್ಲವನ್ನೂ ಫೋಟೋದಲ್ಲಿ ತುಂಬಿಕೊಳ್ಳುವುದರತ್ತಲೇ ಮಗ್ನರಾಗುತ್ತಾರೆ. ಬಂದಿರುವುದು ನೋಡುವುದಕ್ಕಾಗಿ ಅಲ್ಲ, ನೋಡಿದ್ರಾ….. ನಾವು ಏನೇನು ನೋಡಿದೆ ಎಂದು ಕೊಚ್ಚಿಕೊಳ್ಳುವುದೇ ಆಗಿಹೋಗುತ್ತದೆ.

ಇದಕ್ಕೆ ನಮ್ಮ ಪ್ರಧಾನಿಯೂ ಕಾರಣ ಎನ್ನಬಹುದು. ಸೋಶಿಯಲ್ ಮೀಡಿಯಾ ಎಷ್ಟು ಲಕ್ಷಾಂತರ ಕ್ಲಿಪ್ಪಿಂಗ್ಸ್ ನಿಂದ ತುಂಬಿದೆ ಎಂದರೆ, ಅಲ್ಲೆಲ್ಲ ಅವರು ಜನರನ್ನು ಓಡಿಸುವುದೇ ಆಗಿದೆ, ಆಗ ತಾನು ಫೋಟೋ ಫ್ರೇಂನಲ್ಲಿ ಸಂಪೂರ್ಣ ಬರಬಹುದು ಅಂತ. ಇದೇ ರೋಗ ಅವರ ಭಕ್ತರಿಗೂ ತಗುಲಿದೆ. ಒಂದಂತೂ ನಿಜ, ಇದು ವಿಶ್ವದಲ್ಲಿ ಎಲ್ಲೆಡೆ ಅಂಟುರೋಗವಾಗಿದೆ. ನಾವು  ಭಾರತೀಯರೂ ಇದಕ್ಕೆ ಹೊರತಲ್ಲ. ಸೆಲ್ಛಿ ಟೆಕ್ನಿಕ್ಸ್, ಬೆಟರ್‌ ಫೋನ್ಸ್, 4ಜಿ, 5ಜಿಗಳಲ್ಲಿ ಅಪ್‌ ಲೋಡ್‌ ಮಾಡಿ, ಡೌನ್‌ ಲೋಡ್ ಮಾಡಿ ವೀಕ್ಷಿಸುವ ಗುಲಾಮಗಿರಿ ಎಲ್ಲರನ್ನೂ ಮೊಬೈಲ್ ಫೋಟೋ ಹುಚ್ಚರನ್ನಾಗಿಸಿದೆ.

ಒಂದು ಫೋಟೋ ಬಹಳಷ್ಟು ಹೇಳುತ್ತದೆ ಎಂಬುದು ನಿಜ, ಆದರೆ ಇದೇ ಪ್ರವಾಹದಂತೆ ಉಕ್ಕಿ ಬಂದರೆ, ಅದರಲ್ಲಿ ಎಲ್ಲ ಉತ್ತಮಿಕೆಯೂ ಕೊಚ್ಚಿ ಹೋಗುತ್ತದೆ. ಇಂದು ಎಲ್ಲರ ಫೋನುಗಳಲ್ಲೂ ಎಷ್ಟು ರಾಶಿ ಫೋಟೋಗಳು ತುಂಬಿವೆ ಎಂದರೆ, ಯಾವ ಫೋಟೋಗೂ ಬೆಲೆ ಇಲ್ಲವಾಗಿದೆ. ಇಂದು ಪ್ರತಿಯೊಬ್ಬರೂ ಸಹನೆಯಿಲ್ಲದೆ ತಾವು ತೆಗೆದ ಫೋಟೋ ಬೇರೆಯವರಿಗೆ ತೋರಿಸಿಕೊಳ್ಳುವುದೇ ಆಗಿದೆ, ಅವರಿಗೆ ಬೇರೆಯವರ ಫಟೋ ನೋಡುವ ಆಸೆ, ಸಹನೆ ಎರಡೂ ಇಲ್ಲ. ತಮ್ಮನ್ನು ಇತರರ ಮೇಲೆ  ಹೇರುವ ಈ ಟೆಕ್ನಿಕ್‌ ನ್ನು ಮೊಬೈಲ್ ಚೆನ್ನಾಗಿಯೇ ಕಲಿಸಿದೆ. ಒಂದು ಕ್ಲಾಸಿನಲ್ಲಿ ಎಲ್ಲರೂ ತಾವು ಕಲಿತದ್ದನ್ನು ಇನ್ನೊಬ್ಬರಿಗೆ ಜೋರಾಗಿ ಒದರಿ ಹೇಳುತ್ತಿದ್ದರೆ, ಯಾವುದು ಮುಖ್ಯ ಎಂಬುದು ಯಾರಿಗೂ ಗೊತ್ತಾಗಲ್ಲ, ಎಂಬಂತಿದೆ ಈ ಸ್ಥಿತಿ.

ಎಲ್ಲಾದರೂ ಸುತ್ತಾಡಿ, ಫ್ರೆಂಡ್ಸ್ ಮೀಟ್‌ ಮಾಡಿ, ಚೆನ್ನಾಗಿ ಕಂಡದ್ದನ್ನು 1-2 ಫೋಟೋ ತಗೊಳ್ಳಿ, ಆದರೆ ಇದೆಲ್ಲ ಕೇವಲ ನಿಮಗಾಗಿ. ಅದು ಬಿಟ್ಟು ನಿಮ್ಮ ಇಡೀ ಸಮಯವನ್ನು ಫೋಟೋ ಕ್ಲಿಕ್‌ ಮಾಡುವುದರಲ್ಲೇ ಹಾಳು ಮಾಡಬೇಡಿ. ನೀವು ಯಾವುದೇ ಶುಭ ಸಮಾರಂಭಕ್ಕೆ ಹೋಗಿದ್ದರೆ, ಅದನ್ನು ಎಂಜಾಯ್‌ ಮಾಡಿ, ಸದಾ ಅದರ ಫೋಟೋ ತೆಗೆಯುತ್ತಿರಬೇಡಿ. ನಿಮ್ಮ ಮೊಬೈಲ್‌ಮೇಲೆ ಹಿಡಿದು, ನಿಮ್ಮ ಹಿಂದಿನವರು ಫಂಕ್ಷನ್‌ ನೋಡಲಾಗದಂತೆ ಮಾಡಬೇಡಿ. ಮೊಬೈಲ್ ‌ನಿಮ್ಮ ನೆನಪುಗಳನ್ನು ತಾಜಾ ಆಗಿರಿಸಲಿ, ಪ್ರಪಂಚಕ್ಕೆಲ್ಲ ಡಂಗೂರ ಸಾರುವುದಕ್ಕಲ್ಲ!

ಮೂಕ ಪ್ರಾಣಿಗಳಿಗೂ ಬದುಕುವ ಹಕ್ಕುಂಟು

ಮಾಂಸಾಹಾರ ಸೇವನೆ ತಮ್ಮ ಇಷ್ಟಾನಿಷ್ಟಗಳಿಗೆ ಸಂಬಂಧಿಸಿದ್ದು, ಬದುಕಿರುವ ಪ್ರಾಣಿಗಳ ಕುರಿತು ದಯೆ, ಕ್ರೂರತೆಗೆ ಸಂಬಂಧಿಸಿದಂತೆ ಅದಕ್ಕೂ ಇದಕ್ಕೂ ನೆಂಟಸ್ತಿಕೆ ಇಲ್ಲ. ಮುಂಬೈ ಹೈಕೋರ್ಟಿಗೆ ಕೆಲವು ಜೈನ್‌ ಸಂಘಟನೆಗಳಿಂದ ಮಾಂಸಾಹಾರ ಸೇವನೆ ಹಾಗೂ ಅವುಗಳ ಜಾಹೀರಾತನ್ನು ಮುದ್ರಿಸುವ, ಟಿವಿಯಲ್ಲಿ ಪ್ರದರ್ಶಿಸುವ ವಿರುದ್ಧ ನಿಷೇಧಕ್ಕೆ ಅರ್ಜಿ ಬಂದಾಗ ಕೋರ್ಟ್ ಅದನ್ನು ತಿರಸ್ಕರಿಸಿತು.

ಪಶು ಪ್ರೇಮಿಗಳಾದ ಇವರು ಗೋಪೂಜೆಯಲ್ಲೂ ವಿಶ್ವಾಸವಿರಿಸುತ್ತಾರೆ. ಆದರೆ ಹಸು ಹಾಲು ಮಾತ್ರ ತಮ್ಮ ಸೇವನೆಗೆ ಬೇಕು ಎನ್ನುತ್ತಾರೆ. ಯಾವ ಪ್ರಾಣಿಗಳಿಗೆ ದಯೆ, ಕರುಣೆ ತೋರಿಸದೆ ರೈತರು ಶೋಷಿಸಿ ದುಡಿಸಿಕೊಂಡಿರುತ್ತಾರೋ ಅಂಥ ಬೆಳೆಯ ಆಹಾರ ಸೇವಿಸುವಲ್ಲಿ ಇವರಿಗೆ ಬೇಸರವಿಲ್ಲ. ಯಾವ ಮರದ ಹಣ್ಣುಗಳು ಪಕ್ಷಿ, ಪ್ರಾಣಿಗಳದಾಗಬೇಕಿತ್ತೋ ಇವರು ನಿರ್ದಾಕ್ಷಿಣ್ಯವಾಗಿ ಅವನ್ನು ಕಿತ್ತು ತಿನ್ನುತ್ತಾರೆ. ಹಕ್ಕಿಗಳು ಹಸಿವಿನಿಂದ ನರಳುತ್ತವೆ.

ಸಸ್ಯಾಹಾರ ಯಾ ಮಾಂಸಾಹಾರದಲ್ಲಿ ಯಾವುದು ಬೆಟರ್‌ ಎಂದು ಚರ್ಚಿಸುವುದರಲ್ಲಿ ಹುರುಳಿಲ್ಲ. ಒಂದು ಸಮುದಾಯ, ಒಬ್ಬ ವ್ಯಕ್ತಿ ಮೀಟ್‌ ಸೇವಿಸದಿದ್ದರೆ ಅದು ಅವರ ವೈಯಕ್ತಿಕ ವಿಚಾರ. ಸನಾತನ ಕಾಲದಿಂದಲೂ ಆ ಪರಿವಾರದವರು ಹಾಗೇ ರೂಢಿಸಿಕೊಂಡಿದ್ದರಿಂದ ಇಂದು ಅವರು ಹಾಗಾಗಿರಬಹುದು. ಆದರೆ ಇವರಿಗೆ ಬೇರೆಯವರನ್ನು ಮಾಂಸಾಹಾರ ಸೇವಿಸಬೇಡಿ ಎಂದು ಹೇಳುವ ಹಕ್ಕಿಲ್ಲ.

ಕಳೆದ ಕೆಲವು ವರ್ಷಗಳಿಂದ ಜನ ಬೇಕೆಂದೇ ಬೇರೆಯವರ ವಿಚಾರದಲ್ಲಿ ಹೀಗೆ ಮೂಗು ತೂರಿಸುವ ಅಭ್ಯಾಸ ಜಾಸ್ತಿಯಾಗುತ್ತಿದೆ. ಹಿಂದೆಲ್ಲ ಧರ್ಮವೇ ಈ ಕುರಿತು ನಿರ್ಧರಿಸುತ್ತಿತ್ತು, ಬೇರೆಯವರು ಅದನ್ನು ಚಾಚೂ ತಪ್ಪದೆ ಪಾಲಿಸಬೇಕಿತ್ತು. ಆದರೆ ಸ್ವಾತಂತ್ರ್ಯ ಯುಗ ಬಂದಾಗಿನಿಂದ ಜನ ತಮ್ಮ ತರ್ಕ, ಸತ್ಯಾಸತ್ಯತೆ, ಸೌಲಭ್ಯಗಳ ಆಧಾರದಿಂದ ತಂತಮ್ಮ ವೈಯಕ್ತಿಕ ನಿರ್ಧಾರ ತಳೆಯುತ್ತಾರೆ. ಇನ್ನೊಬ್ಬರ ಹಕ್ಕುಗಳ ಕುರಿತಾಗಿ ಹಸ್ತಕ್ಷೇಪ ಮಾಡದಿರುವವರೆಗೂ ಇವರು ಸ್ವತಂತ್ರರು. ಆಗಿನಿಂದ ಸಮಾಜದಲ್ಲಿ ವೈವಿಧ್ಯತೆ ಹೆಚ್ಚತೊಡಗಿದೆ.

ಇಂದು ಹೋಟೆಲ್ ಗಳಲ್ಲಿ ಸಸ್ಯಾಹಾರಿ, ಮಾಂಸಾಹಾರಿ ಎರಡೂ ಸಮಾನ ಸಂಖ್ಯೆಯಲ್ಲಿ ರಾರಾಜಿಸುತ್ತಿವೆ. ಕೆಲವರು ಬೇಕೆಂದೇ ತಮ್ಮ ಶ್ರದ್ಧಾಭಕ್ತಿಗಳ ವಿಚಾರವನ್ನು ಪರರ ಮೇಲೆ ಹೇರಲು ನೋಡುತ್ತಾರೆ. ಭಾರತವಂತೂ ಬಿಡಿ, ಅಮೆರಿಕಾದಂಥ ಅಲ್ಟ್ರಾಪಾಶ್‌ದೇಶ ಸಹ, ಚರ್ಚ್‌ ಆದೇಶದ ಮೇರೆಗೆ ಗರ್ಭಪಾತ ನಿಷೇಧಿಸಿದೆ! ಇದರ ಅರ್ಥ ಹೆಣ್ಣಿನ ಗರ್ಭದ ಮೇಲೆ ಚರ್ಚ್‌ ನ ಹಕ್ಕು ಅಂತ.

ಮಾಂಸಾಹಾರ ಬೇಕೋ ಬೇಡವೋ ಎಂಬುದನ್ನು ವೈದ್ಯರು ಆಯಾ ರೋಗಿಗಳಿಗೆ ಹೇಳಲಿ, ಧರ್ಮದ ಗುತ್ತಿಗೆದಾರರಲ್ಲ. ತಮ್ಮ ಬಾವುಟ ಎಲ್ಲಿ ಹಾರಿಸುವುದು ಎಂದು ಇವರು ಕಾಯುತ್ತಿರುತ್ತಾರೆ. ಧಾರ್ಮಿಕ ಸಮಾರಂಭ ಅಂದ್ರೆ ಎಲ್ಲರೂ ಧಾರಾಳ ಚಂದಾ ನೀಡುತ್ತಾರೆ, ಆದರೆ ಧರ್ಮ ಮಾಂಸಾಹಾರಕ್ಕೆ ತಡೆ ಆಗಬಾರದು. ಹ್ಞಾಂ, ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂದು ಇತ್ತೀಚೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಹೆಚ್ಚಾಗಿ ಜನ ವಾಲಂಟಿಯರ್‌ ಆಗಿ ವೆಜ್‌ ಆಗುತ್ತಿದ್ದಾರೆ, ಅದು ಅವರವರ ಭಾವಕ್ಕೆ ಬಿಟ್ಟದ್ದು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ