`ಬೇಟಿ ಬಚಾವೋ ಬೇಟಿ ಪಢಾವೋ' ಎಂದು ಹೆಣ್ಣುಮಕ್ಕಳಿಗೆ ಒತ್ತು ಕೊಡುವ ಈ ಘೋಷಣೆ ವಾಸ್ತವದ ಜಗತ್ತಿನಲ್ಲಿ `ಹೆಣ್ಣನ್ನು ರಕ್ಷಿಸಿ ನಂತರ ಹಾಳು ಮಾಡಿ' ಎಂಬ ಮಟ್ಟಕ್ಕೆ ಬಂದು ನಿಂತಿದೆ. ಅನಾದಿ ಕಾಲದಿಂದಲೂ ಹೆಣ್ಣು ರೇಪ್‌ ಗೆ ಬಲಿಯಾಗುತ್ತಲೇ ಇದ್ದಾಳೆ. ಪ್ರತಿ ಆಕ್ರಮಣದಲ್ಲೂ ರಾಜ ಹೇಳುವುದೆಂದರೆ, ಪರದೇಶದಿಂದ ಹಣದ ಲೂಟಿ ಒಂದೇ ಅಲ್ಲ, ಉಚಿತವಾಗಿ ಹೆಂಗಸರೂ ಸಿಗುತ್ತಾರೆ ಅಂತ. ಆದ್ದರಿಂದಲೇ ಸೈನಿಕರು ಪ್ರಾಣದ ಹಂಗು ತೊರೆದು ಆಕ್ರಮಣಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಸುರಕ್ಷಿತರು, ಕಾನೂನು ವ್ಯವಸ್ಥೆಯುಳ್ಳವರು, ಸೇನಾಪಡೆ, ಪೊಲೀಸರಿಂದ ತುಂಬಿದ ದೇಶಗಳಲ್ಲೂ ಸುಲಭವಾಗಿ ಹಾಡುಹಗಲೇ ಹೆಣ್ಣಿನ ರೇಪ್ ಮಾಡಿ, ಎದೆ ಸೆಟೆಸಿ ಆರಾಮವಾಗಿ ಓಡಾಡುತ್ತಾರೆ.

ಉ.ಪ್ರದೇಶದ ಅಂಬೇಡ್ಕರ್‌ ಜಿಲ್ಲೆಯಲ್ಲಿ ಅಕ್ಟೋಬರ್‌ 5 ರಂದು 15ರ ಬಾಲೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. ಅದರ ಹಿಂದಿನ 2 ದಿನಗಳು ಅವಳನ್ನು ದಾರುಣವಾಗಿ ರೇಪ್‌ ಮಾಡಿ, ಸಾಯಿಸದೆ ಬಿಟ್ಟರು. ಪೊಲೀಸರಿಗೆ ದೂರಿತ್ತರೂ ಮೆಡಿಕಲ್ ಪರೀಕ್ಷೆ ಮಾಡಿಸಿದ್ದೊಂದು ಬಿಟ್ಟರೆ, ಕೇಸ್‌ ಮುಂದುವರಿಯಲೇ ಇಲ್ಲ. ಹಿಂದಿನ ಘೋಷಣೆ ಇದೀಗ ಸಮಾಜದಲ್ಲಿ `ಹೆಣ್ಣನ್ನು ಕಾಪಾಡಿ, ರೇಪ್‌ಮಾಡಿ, ಸಾಯಲು ಬಿಡಿ' ಎಂಬಂತಾಗಿಬಿಟ್ಟಿದೆ.

ರೇಪ್‌ ನಂತರ ಹೆಣ್ಣುಮಕ್ಕಳು ಎಷ್ಟು ನರಳುತ್ತಾರೆ ಎಂಬುದು ಸುಪ್ರೀಂ ಕೋರ್ಟಿನ ಇತ್ತೀಚಿನ ಒಂದು ಹೇಳಿಕೆಯ ಮೂಲಕ ತಿಳಿಯುತ್ತದೆ. ಇಲ್ಲಿ ಸಂಸತ್ತಿನ ಕಾನೂನನ್ನು ತುಸು ತಿದ್ದುತ್ತಾ ಹೇಳಲಾಗಿದ್ದೆಂದರೆ, ರೇಪ್‌ ಗೆ ಬಲಿಯಾದ ಹೆಣ್ಣಿಗೆ 24 ಗಂಟೆಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳುವ ಮೌಲಿಕ ಹಕ್ಕಿದೆ, ಆಕೆ ವಿವಾಹಿತೆ ಆಗಿದ್ದರೂ ಸಹ, ಎಂಬುದು.

ಈ ಪ್ರಕರಣ ಸುಪ್ರೀಂ ಕೋರ್ಟ್‌ ವರೆಗೂ ತಲುಪಿದ್ದರಿಂದಲೇ, ರೇಪ್‌ ಇಂದಿಗೂ ನಮ್ಮ ದೇಶದಲ್ಲಿ ಎಷ್ಟು ಸೀರಿಯಸ್‌ ಎಂದು ತಿಳಿಯುತ್ತದೆ. ಇಷ್ಟೆಲ್ಲ ಶಿಕ್ಷಣ ದೊರಕಿದರೂ, ಹುಡುಗಿಯರು ತಮ್ಮ ದೇಹವನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿರಿಸಿಕೊಳ್ಳಬೇಕಾಗಿದೆ. ಯಾರಿಗೆ ಗೊತ್ತು? ಯಾರು ಇವರ ದೇಹ, ಇವರ ಜೀವಿಸುವ ಹಕ್ಕು, ಖುಷಿಗಳನ್ನೂ ರೇಪ್ ಮಾಡಿಬಿಡುತ್ತಾರೋ ಏನೋ?

Rape-and-kanoon-1

ರೇಪ್‌ ನ ಬಹು ಅಲ್ಪ ಪ್ರಕರಣಗಳು ಮಾತ್ರ ಕಣ್ಣೆದುರು ಬರುತ್ತವೆ. ಏಕೆಂದರೆ ಇಂಥ ಕುಕೃತ್ಯಕ್ಕೆ ಒಳಗಾದ ಹೆಣ್ಣು ತನ್ನೊಳಗೇ ಅದನ್ನು ಮುಚ್ಚಿಟ್ಟುಕೊಂಡು ನೋವು ಸಹಿಸುತ್ತಾಳೆ. ಈ ಸಮಾಜ, ದೇಶ, ಮನೆಯವರು ಇದಕ್ಕಾಗಿ ಅವಳನ್ನು ರೇಪ್‌ ವಿಕ್ಟಿಮ್ ಬದಲು ಅಕ್ಯೂಸ್ಡ್ ಎಂದೇ ಭಾವಿಸುತ್ತದೆ. `ನೀನೇಕೆ ಹೊರಗೆ ಹೋದೆ? ನೀನೇಕೆ ಅವನನ್ನು ಎದುರಿಸಲಿಲ್ಲ? ಅಂಥವರನ್ನು ಯಾಕೆ ಫ್ರೆಂಡ್‌ ಮಾಡಿಕೊಂಡೆ? ನಿನ್ನದೇ ಏನೋ ತಪ್ಪಿರಬೇಕು, ನೀನೇ ಒಪ್ಪಿಕೊಂಡು ಅವನ ಹಿಂದೆ ಹೋಗಿರಬೇಕು, ಈಗ ರೇಪ್ ಅಂತಿದ್ದೀಯಾ' ಮುಂತಾದ ಕಟುಮಾತನ್ನು ಪ್ರತಿ ಸಂತ್ರಸ್ತೆಯೂ ಸಹಿಸಲೇಬೇಕು.

ಪೊಲೀಸರಂತೂ ಈ ಪ್ರಕರಣಗಳಲ್ಲಿ ಕೆಲಸ ಮಾಡುವುದೇ ಕಡಿಮೆ. ಎಷ್ಟೋ ಸಲ ದೂರು ನೀಡಿದರು, ನಂತರ ಕೋರ್ಟಿನ ಸತತ ವಿಚಾರಣೆಗಳಿಂದ ಗಾಬರಿಗೊಂಡು ಈ ಕೇಸನ್ನೇ ಹಿಂಪಡೆಯುವಂತೆ ಗೋಗರೆಯುತ್ತಾರೆ. ಹಾಗಾಗಿ ಪೊಲೀಸರು ತೆಪ್ಪಗಾಗುತ್ತಾರೆ. ರೇಪ್‌ ಮಾಡಿದವನಿಂದ ಪೊಲೀಸರಿಗೆ ಧಾರಾಳ `ಲಾಭ' ಆಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ