(ಬಿಹಾರ್ ಮೂಲ) ಚಿತ್ರಗಳ ಬೆಡಗಿ ನಮ್ರತಾ, ಬಾಲಿವುಡ್ ಗೆ ಕಾಲಿಟ್ಟು ಇದೀಗ ಇಲ್ಲಿನ ಪಡ್ಡೆಗಳ ಹೃದಯದಲ್ಲಿ ಜನಪ್ರಿಯಗೊಳ್ಳುತ್ತಿದ್ದಾಳೆ! ಇವಳ ಕುಣಿತಕ್ಕೆ ಮಾರುಹೋಗದವರೇ ಇಲ್ಲ. ಹೊಸ ಚಿತ್ರದಲ್ಲಿ ಇವಳ ಹಾಡಿಗೆ ಹುಚ್ಚು ಕುಣಿತ ಕಂಡು ಈ ಚಿತ್ರ ಮೈ ಕೊಡವಿಕೊಂಡು ಏಳುವಂತೆ ಆಗಿದೆ. ನೂರಾ ಫತೇಹಿ, ಮಲೈಕಾ ಅರೋರಾ, ಸನಿ ಲಿಯೋನ್ ಹಾಗೂ ಎಲೀ ಆ್ಯರಾಮ್ ಮುಂತಾದವರ ಹೃದಯ ಇದೀಗ ಬಾಯಿಗೆ ಬರುವಂತಾಗಿದೆ. ಬಿಹಾರಿನವಳು ನಮ್ಮಂಥ ಮುಂಬೈ ಗ್ಲಾಮರ್ ಗೆ ಸಡ್ಡೇ ಎಂದು ಹುಬ್ಬೇರಿಸಿದ್ದಾರೆ. ಬಾಲಿವುಡ್ ನಲ್ಲಿ ನಮ್ರತಾಳ ಈ ಪಯಣ ಖಂಡಿತಾ ಸುಲಭವಲ್ಲ, ಪೈಪೋಟಿ ಹಾಗಿದೆ!
ರಿಜೆಕ್ಟ್ ಆದವಳು ಮೋದೀಜಿ ಬೇಟಿ
ಶೀರ್ಷಿಕೆ ಓದಿ ನೀವು ಏನೇನೋ ಊಹಿಸಿಕೊಳ್ಳಬೇಡಿ! ಇಲ್ಲಿ ಹೇಳುತ್ತಿರುವ ವಿಷಯ `ಮೋದೀಜಿ ಕೀ ಬೇಟಿ’ ಚಿತ್ರದ ಕುರಿತು. ಇದರ ನಾಯಕಿ ಅನಿ ಮೋದಿ. ಈಕೆ ಬಾಲಿವುಡ್ ಗೆ ಬರುವ ಮೊದಲು ಗುಜರಾತಿ, ದಕ್ಷಿಣದ ಚಿತ್ರಗಳಲ್ಲೂ ಗೆದ್ದು ಬಂದಳು. ಮಧು ಭಂಡಾರ್ಕರ್ ಈಕೆಯನ್ನು ಮೊದಲೇ ರಿಜೆಕ್ಟ್ ಮಾಡಿರದೆ ಇದ್ದಿದ್ದರೆ, ಅನಿ ಇಷ್ಟು ಹೊತ್ತಿಗೆ ಬಾಲಿವುಡ್ ನಲ್ಲಿ ಹಳಬಳಾಗಿರುತ್ತಿದ್ದಳು. ಅದಕ್ಕೆ ಸಡ್ಡು ಹೊಡೆದು ಇವಳು ಹೇಗೋ ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡೇ ಬಿಟ್ಟಳು! ವೆರಿಗುಡ್ ಅನಿ…. ಆಲ್ ದಿ ಬೆಸ್ಟ್!
ಜಗ್ಗು ಕೇ ಲಾಲ್ ಟೇನ್
ರಘುವೀರ್ ಯಾದವ್ ನ ಅದ್ಭುತ ನಟನೆಯ `ಜಗ್ಗು ಕೇ ಲಾಲ್ ಟೇನ್’ ಬಹಳ ಶ್ರಮಪಡುವವರ ಕುರಿತದ್ದಾಗಿದೆ. ಇವರ ಬೆಳಗು ಆರಂಭವಾಗುವುದೇ ಕಷ್ಟಗಳಿಂದ, ಸಂಜೆ ಮುಳುಗುವುದೇ ನಷ್ಟಗಳಿಂದ. ಕತ್ತಲೆ ಹರಡಿದಾಗ ಮನೆಯಲ್ಲಿ ಕರೆಂಟ್ ಇಲ್ಲದೆ ಲಾಲ್ ಟೇನ್ ಅಂದ್ರೆ ಕೆಂಪು ಲಾಂದ್ರ ಉರಿಯ ತೊಡಗುತ್ತದೆ. ಸ್ವಲ್ಪ ಹೊತ್ತಿನವರೆಗೂ ಚೆನ್ನಾಗಿ ಉರಿಯುವ ಇದು, ನಂತರ ಮಂದ ಆಗ ತೊಡಗುತ್ತದೆ. ಮನುಷ್ಯರ ಆಶಾಭಾವನೆಗಳೂ ಹೀಗೇ! ರಘುವೀರ್ ಈ ಚಿತ್ರದಲ್ಲಿ ತನ್ನ ತಾತನ ಕಾಲದಿಂದ ಬಂದಂಥ ಈ ಲಾಂದ್ರವನ್ನು ಸದಾ ಎದೆಗೆ ಅಪ್ಪಿಹಿಡಿದು, ಕೆಲಸ ಮಾಡುತ್ತಾನೆ. ಎಂಥ ಕಷ್ಟ ಬಂದರೂ ಅದನ್ನು ಮಾರುವುದಿಲ್ಲ. ಇಂದಿನ ಆಧುನಿಕ ಗ್ಲಾಮರ್ ಲೋಕದ ಮಧ್ಯೆ ಇದು ತುಸು ಫೇಡ್ ಅನಿಸಿದರೂ, ಉತ್ತಮ ಕಥೆ ನಿರ್ದೇಶನ ಹೊಂದಿದೆ.
OTT ಯಲ್ಲಿ ಈಗ ಎಲ್ಲ ಮುಕ್ತ ಮುಕ್ತ
ನಿಮ್ಮ ತುಸು ಬೆಳೆದ ಮಕ್ಕಳು ಅಂದ್ರೆ ಟಿವಿ ರಿಮೋಟ್ ಚಲಾಯಿಸುವಂಥವರು, OTT ನೋಡಿಕೊಳ್ಳಲಿ ಎಂದು ಬಿಟ್ಟರೆ, ಅಲ್ಲಿನ ಅಶ್ಲೀಲ ಡೈಲಾಗ್ ಕೇಳಿ ನೀವೇ ಓಡಿಬಂದು ಅವರ ಕೈಯಿಂದ ರಿಮೋಟ್ ಕಿತ್ತು ಬೇರೆ ಬದಲಾಯಿಸುತ್ತೀರಿ! ಮಕ್ಕಳಂತೂ ಪೂರ್ತಿ ಕಕ್ಕಾಬಿಕ್ಕಿ! ಹಿಂದೆಲ್ಲ OTTಯಲ್ಲಿ ಅಶ್ಲೀಲ ಬೈಗುಳಗಳಿಗಷ್ಟೇ ಅದು ಖ್ಯಾತಗೊಂಡಿತ್ತು, ಈಗಂತೂ ಎಂಥ ನಗ್ನ ದೃಶ್ಯಗಳು ಇದರಲ್ಲಿ ದಿಢೀರ್ ಸುಳಿಯುತ್ತಲೇ ಹೇಳಲಾಗದು! ಇತ್ತೀಚೆಗೆ ಮೂಡಿಬರುತ್ತಿರುವ ಇದರಲ್ಲಿ ಶೋ, ಚಿತ್ರಗಳು ಖಂಡಿತಾ ಕುಟುಂಬ ಸಮೇತ ಕುಳಿತು ನೋಡಲು ಲಾಯಕ್ ಅಲ್ಲ. ಹೀಗಾಗಿ OTT ಚಿತ್ರ ಗಮನಿಸುವ ಮುನ್ನ ಜಾಗ್ರತೆ ವಹಿಸಿ.
ಕಣ್ಣಾಮುಚ್ಚಾಲೆಯ ನಂತರವೇ ಕಿಯಾರಾಳ ಮದುವೆ
`ಶೇರ್ ಶಾಹ್’ ಚಿತ್ರದ ನಂತರ ಸುದ್ದಿಗಾರರು ತಂದ ಬ್ರೇಕಿಂಗ್ ನ್ಯೂಸ್ ಅಂದ್ರೆ ಸಿದ್ದಾರ್ಥ್ ಕಿಯಾರಾ ನಡುವೆ ಗುಟ್ಟುಗುಟ್ಟಾಗಿ ಏನೇನೋ ನಡೆಯುತ್ತಿದೆ ಅಂತ. ಆದರೆ ಇವರಿಬ್ಬರೂ ಇದನ್ನು ಗಾಳಿಮಾತು ಅಂತ ತಳ್ಳಿಹಾಕಿದರು. ಸುದ್ದಿಗಾರರು ಅಷ್ಟಕ್ಕೆ ಸುಮ್ಮನೆ ಬಿಟ್ಟಾರೆಯೇ? ಇವರ ಗುಟ್ಟನ್ನು ರಟ್ಟು ಮಾಡದೆ ಬಿಡುವುದಿಲ್ಲ ಎಂದರು. ಕ್ರಮೇಣ ಈ ವಿಷಯ ಮಾಮೂಲಿ ಎನಿಸಿದರೂ ಇವರಿಬ್ಬರೂ ತುಟಿ ಪಿಟಕ್ ಎನ್ನದೆ ಸುಮ್ಮನಿದ್ದಾರೆ. ಕದ್ದುಮುಚ್ಚಿ ಆಡುವ ಕಣ್ಣಾಮುಚ್ಚಾಲೆಯಿಂದ ಈ ಸೆಲೆಬ್ರಿಟೀಸ್ ಗೆ ಏನು ಲಾಭಿವೋ ಏನೋ? ಮುಂದೆ ಹೇಗಿದ್ದರೂ ಒಟ್ಟಿಗೆ ಸಪ್ತಪದಿ ತುಳಿಯಲಿದ್ದೀರಿ, ಹಾಗಿದ್ದರೆ ಖುಲ್ಲಂ ಖುಲ್ಲ ಏಕೆ ಹೇಳಿಕೊಳ್ಳಬಾರದು….?
ಮ್ಯಾಡಿಯ ತಂಟೆಗೆ ಮಾತ್ರ ಬರಬೇಡಿ
ಮ್ಯಾಡಿ ಅಂದ್ರೆ ಮಾಧವನ್ ನ ಅಭಿಮಾನಿಗಳು ಈತನ ಮೂಲದ ದಕ್ಷಿಣದಲ್ಲಿ ಎಷ್ಟಿದ್ದಾರೋ ಉತ್ತರದಲ್ಲೂ ಅಷ್ಟೇ ಇದ್ದಾರೆ. ಈತ ಸೋಶಿಯಲ್ ಮೀಡಿಯಾ ಜಂಜಾಟಗಳಿಗೆ ಸಿಲುಕುವುದೂ ಕಡಿಮೆ. ಆದರೆ ಈ ಸಲ ಏನಾಯಿುತು ಅಂದ್ರೆ, ಟ್ರೋಲಿಗರಿಗೆ ಈತ ಸರಿಯಾಗಿ ತಿರುಗೇಟು ನೀಡಿದ್ದಾನೆ. ಏನೇನೋ ಊಹಿಸಬೇಡಿ, ನಡೆದಿದ್ದು ಇಷ್ಟೆ. ಹುಚ್ಚುಚ್ಚಾಗಿ ಬಣ್ಣಬಣ್ಣದ ಡ್ರೆಸ್ (?) ಧರಿಸುವ ರಣವೀರ್ ಸಿಂಗ್ ನ್ನು ಈತ FBನಲ್ಲಿ ಒಂದು ಕಡೆ ಅನ್ ಫಾಲೋ ಮಾಡುವುದಾಗಿ ಆಂಗ್ಲದಲ್ಲಿ ಸ್ಪಷ್ಟವಾಗಿ ಬರೆದಿದ್ದ, ಅದರಲ್ಲಿ ವ್ಯಂಗ್ಯ ಇರಲಿಲ್ಲ, ತಮಾಷೆ ಇತ್ತು. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ರಣವೀರ್ ನ ಅರೆಬೆಂದ ಅಭಿಮಾನಿಗಳು, ಮ್ಯಾಡಿಗೆ ಏನೇನೋ ಜ್ಞಾನ ನೀಡಲಾರಂಭಿಸಿದರು. ಅಂಥವರಿಗೆ ಈತ ಸರಿಯಾಗಿ ತಿರುಗೇಟು ಕೊಟ್ಟಿದ್ದಾನೆ. ತಮ್ಮ ತಪ್ಪು ಅರಿತ ಅವರು ಈತನ ತಂಟೆಗೆ ಯಾಕಪ್ಪ ಹೋದೆ ಅನ್ನುತ್ತಿದ್ದಾರೆ.
ಟೆನ್ಶನ್ ನಿಂದ ಹೊರಬರಲು ಯಾರಾದರೂ ನಮ್ಮವರು ಬೇಕು
ಹಿಂದಿಯ ಬಿಗ್ ಬಾಸ್ ಎಂಟ್ರಿ ಪಡೆದಿದ್ದ ರುಬೀನಾ ದಿವೇಕ್, ಈಗ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾಳೆ. ಆದರೆ ಕೆಲವು ವರ್ಷಗಳ ಹಿಂದೆ ಇವಳನ್ನು ಕಾಡುತ್ತಿದ್ದ ಟೆನ್ಶನ್ ನಿಂದ ರುಬೀನಾಳನ್ನು ಹಿತೈಷಿಗಳು ಕಾಪಾಡಿರದಿದ್ದರೆ ಬಹುಶಃ ಇಂದು ಅವಳು ಉಳಿಯುತ್ತಿದ್ದಳೋ ಇಲ್ಲವೋ….. ಡಿಪ್ರೆಶನ್ ನ ಕಾಟದಿಂದ ಹೊರ ಬಂದ ರುಬೀನಾ, ಇಂಥ ಸಮಯದಲ್ಲಿ ತೀರಾ ಆಪ್ತರು ಎನಿಸಿಕೊಂಡರು ಮಾತ್ರವೇ ಈ ಸ್ಥಿತಿಯಿಂದ ನಮ್ಮನ್ನು ಹೊರತರಲು ಸಾಧ್ಯ ಎನ್ನುತ್ತಾಳೆ. ಈ ಯಾಂತ್ರಿಕ ಓಡು ಜಗತ್ತಿನ ಮಧ್ಯೆ ಯಾವಾಗ ಡಿಪ್ರೆಶನ್ ನಮ್ಮನ್ನು ಆರಿಸುತ್ತದೋ ಹೇಳಲಾಗದು. `ಆಪತ್ತಿಗಾದನೇ ನೆಂಟ’ ಎಂಬಂತೆ ಹಿತೈಷಿಗಳು ಮಾತ್ರವೇ ನಮ್ಮನ್ನು ಪಾರು ಮಾಡಲು ಸಾಧ್ಯ.ನಿರ್ಮಾಪಕನಾದ ದುಲ್ಕರ್ ಸಲ್ಮಾನ್ ಇತ್ತೀಚೆಗಷ್ಟೇ `ಚುಪ್, ಸೀತಾರಾಮ್’ ಚಿತ್ರಗಳಲ್ಲಿ ಮಿಂಚಿ ಎಲ್ಲರ ಮನಸೆಳೆದ ಮಲೆಯಾಳಂ ನಟ ದುಲ್ಕರ್ ಸಲ್ಮಾನ್, ನಟನೆ ನಿರ್ವಹಿಸುತ್ತಲೇ ನಿರ್ಮಾಪಕನೂ ಆಗಿದ್ದಾನೆ. ಈ ನಿಟ್ಟಿನಲ್ಲಿ ಈತನ ಮೊದಲ ಚಿತ್ರ `ಕಿಂಗ್ ಆಫ್ ಕೋಠಾ.’ ನಾವು ಯಾವುದರಲ್ಲಿ ಪಳಗಿದ್ದೇವೋ ಅದನ್ನೇ ಮುಂದುವರಿಸುವುದು ಲೇಸು, ಅದನ್ನು ಬಿಟ್ಟು ಕತ್ತಲೆಯಲ್ಲಿ ಬಾಣ ಬಿಡುವು ಪ್ರಯತ್ನ ಏಕೆ? ಆಗ ಇದೂ ಇಲ್ಲ ಅದೂ ಇಲ್ಲ ಅಂತ ಆಗಿಬಿಟ್ಟೀತು! ಎನ್ನುತ್ತಾರೆ ಈತನ ಹಿತೈಷಿಗಳು. ಈತ ಸದ್ಯಕ್ಕೆ ರಾಜ್ ಕುಮಾರ್ ರಾವ್ ಜೊತೆ ವೆಬ್ ಸೀರೀಸ್ `ಗನ್ಸ್ ಔರ್ ಗುಲಾಬ್’ನಲ್ಲಿ ಬಿಝಿಯಾಗಿದ್ದಾನೆ.
ಇಂದಿನ ಶಾರೂಖ್ ಕಾಜೋಲ್ ಅಂದ್ರೆ ರಾಲಿಯಾ
ರಣಬೀರ್ ನ ‘ಬ್ರಹ್ಮಾಸ್ತ್ರ’ ಏನೇನೂ ಗುಡುಗದೆ ಠುಸ್ ಆಯ್ತು. ಆದರೆ ಸಿನಿ ದಂಪತಿಗಳಾದ ರಣಬೀರ್ ಆಲಿಯಾರ ಜೋಡಿ ಯಾವ ಪರಿಯಲ್ಲಿ ಹಿಟ್ ಅಂದ್ರೆ, ಎಲ್ಲೆಲ್ಲೂ ಇವರದ್ದೇ ಚರ್ಚೆ! ನಿರ್ದೇಶಕ ಕರಣ್ ಜೋಹರ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಈ ಜೋಡಿಯನ್ನು ಶಾರೂಖ್ ಕಾಜೋಲ್ ಗೆ ಹೋಲಿಸಿದ್ದಾನೆ. ತನ್ನ ಬಸುರಿ ಪತ್ನಿಯ ಕುರಿತು ಈತ ಎಷ್ಟು ಕಾಳಜಿ ವಹಿಸುತ್ತಿದ್ದಾನೆ ಎಂದರೆ, ಈತ ಮೊದಲಿನಂತೆ ಹುಡುಗಾಟದ ಹುಡುಗ ಅಲ್ಲ ಎಂದು ಸಾಬೀತಾಗಿದೆ. ಈತನ ಹಳೆಯ ಗರ್ಲ್ ಫ್ರೆಂಡ್ಸ್ ಆದ ಕತ್ರೀನಾ, ದೀಪಿಕಾರ ಹೃದಯ ಮುರಿದ ಎಂದು ಇವನನ್ನು ಆಡಿಕೊಳ್ಳುತ್ತಿದ್ದರು. ಸದ್ಯಕ್ಕಂತೂ ಈ ಜೋಡಿಯ ಚಿತ್ರ ಓಡುತ್ತಿವೆ, ಆದರೆ ಮುಂದೆ ಆಲಿಯಾ ತಾಯಿಯಾಗಿ ಇಂಡಸ್ಟ್ರಿಯಲ್ಲಿ ಆಂಟಿ ಎನಿಸಿದರೆ, ಈ ಜನಪ್ರಿಯತೆ ಉಳಿದೀತೇ ಎಂಬುದೇ ಎಲ್ಲರನ್ನೂ ಕಾಡುತ್ತಿರುವ ಯಕ್ಷ ಪ್ರಶ್ನೆ!
ಮಧುರ್ ತಮನ್ನಾರ ಫ್ಲಾಪ್ ಚಿತ್ರ
ಮಧುರ್ ಭಂಡಾರ್ ಕರ್ ನಂಥ ನಿರ್ಮಾಪಕ ತಲೆಬಾಲ ಇಲ್ಲದ ಚಿತ್ರ ನಿರ್ಮಿಸತೊಡಗಿದರೆ ಏನು ಹೇಳುವುದೋ ತಿಳಿಯುತ್ತಿಲ್ಲ! ಈತನ ಇತ್ತೀಚಿನ ಚಿತ್ರ `ಬಬಲೀ ಬೌನ್ಸರ್’ನ ಕಥೆಯಲ್ಲಿ ಹುರುಳಿಲ್ಲ ತಿರುಳಿಲ್ಲ, ಯಾವ ಪುಣ್ಯಾತ್ಮ ಬರೆದನೋ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದಾರೆ. ಮೊದಲಿನಿಂದಲೇ ಸಡಿಲ ಕಥೆ, ಕ್ಲೈಮ್ಯಾಕ್ಸ್ ಬರುವ ಹೊತ್ತಿಗೆ ಕೂದಲು ಕಿತ್ತುಕೊಳ್ಳುವ ಹಾಗಾಗುತ್ತೆ! ಚಿತ್ರದ ಹೆಸರು ಕೇಳಿದಾಕ್ಷಣ, ಇದು ಯಾರೋ ಮಹಿಳಾ ಬೌನ್ಸರ್ ಳ ಕಷ್ಟಕಾರ್ಪಣ್ಯದ ಕಥೆ ಇರಬೇಕು ಎನಿಸೀತು. ಆದರೆ ಚಿತ್ರ ನೋಡಿದ ಮೇಲೆ ಎಲ್ಲಾ ಠುಸ್! ಏನೇನೂ ಇಲ್ಲ…… ತಮನ್ನಾಳ ಹುಚ್ಚು ನಟನೆ, ಬಲವಂತವಾಗಿ ತುರುಕಲಾದ ಹರಿಯಾಣದ ಭಾಷೆ, ಬೌನ್ಸರ್ ಳ ಸಂಘರ್ಷದ ಬದಲು ಒನ್ ವೇ ಲವ್ ಬಿಟ್ಟರೆ ಇದರಲ್ಲಿ ಹೇಳಿಕೊಳ್ಳುವಂಥದ್ದು ಏನೇನೂ ಇಲ್ಲ.
ಸಿನಿಮಾ ಹೇಟ್ರೆಸಿ ಎರಡೂ ಜೊತೆ ಜೊತೆಯಲಿ……
`ಲಾಲ್ ಸಿಂಗ್ ಚಡ್ಡಾ, ಬ್ರಹ್ಮಾಸ್ತ್ರ, ವಿಕ್ರಮ್ ವೇಧಾ, ಗಾಡ್ ಫಾದರ್’ ಗಳ ನಂತರ ಇದೀಗ `ಆದಿಪುರುಷ್’ ನಂಥ ಎಷ್ಟೋ ಚಿತ್ರಗಳು ಸಿನಿಮಾ ಮಂದಿರ ಸೇರುವ ಮೊದಲೇ, ಬಾಯ್ ಕಾಟ್ ಟ್ರೆಂಡ್ ಗೆ ಬಲಿಯಾಗುತ್ತವೋ ಅಥವಾ ಅಪವಾದ ಹೊತ್ತು ಕೋರ್ಟ್ ಸೇರುತ್ತವೋ. ಇವೆಲ್ಲದರ ಹಿಂದೆ ಕಂದಾಚಾರ, ಭಗಾಪಂತಿ ಇದ್ದೇ ಇರುತ್ತವೆ. ಸನಾತನ ಸರ್ಕಾರದ ಡಂಗೂರ ಸಾರುತ್ತಿರುವ ಈ ಜನ, ಇತ್ತೀಚೆಗೆ ನಿರ್ಧರಿಸುತ್ತಿರುವ ವಿಷಯಗಳು…. ಭಾರತದಲ್ಲಿ ಉಳಿಯಬೇಕಾದರೆ ಏನು ತಿನ್ನಬೇಕು, ಏನು ಮಾತನಾಡಬೇಕು, ಏನನ್ನು ಧರಿಸುವುದು, ಎಂಥ ಸಿನಿಮಾ ತಯಾರಿಸುವುದು ಅಂತ! ಇಷ್ಟು ಮಾತ್ರವಲ್ಲ, ಪೌರಾಣಿಕ ಚಿತ್ರಗಳಲ್ಲಿ ಯಾವ ಪಾತ್ರವನ್ನು ಯಾವ ತರಹ ತೋರಿಸಬೇಕು ಎಂಬ ನಿರ್ಧಾರ ಇವರದ್ದೇ! ಕಪೋಲಕಲ್ಪಿತ ಕಥೆಗಳ ಕಪೋಲಕಲ್ಪಿತ ಪಾತ್ರಗಳು ಇವರ ಕಸಿನ್ಸ್ ಎಂಬಂತೆ ಬೊಬ್ಬೆ ಹೊಡೆಯುತ್ತಾರೆ. ಚಿತ್ರದ ಟ್ರೇಲರ್ ಬರಲಿಕ್ಕಿಲ್ಲ, ಇವರು ಟ್ರೋಲಿಂಗ್ ಶುರು ಹಚ್ಚಿಕೊಳ್ತಾರೆ. ಇದರ ನೇರ ಪರಿಣಾಮ ಕೇವಲ ಕೋಟ್ಯಂತರ ಸಂಭಾವನೆ ಪಡೆಯುವ ನಟರ ಮೇಲಲ್ಲ, ಇಡೀ ಸಿನಿಮಾ ಯೂನಿಟ್ ನ ಬಡ ತಾಂತ್ರಿಕರ ವರ್ಗದವರನ್ನೂ ಬಾಧಿಸುತ್ತೆ ಎಂದು ನೋಡುವುದಿಲ್ಲ.
ಮಧುರ್ ತಮನ್ನಾರ ಫ್ಲಾಪ್ ಚಿತ್ರ
ಮಧುರ್ ಭಂಡಾರ್ ಕರ್ ನಂಥ ನಿರ್ಮಾಪಕ ತಲೆಬಾಲ ಇಲ್ಲದ ಚಿತ್ರ ನಿರ್ಮಿಸತೊಡಗಿದರೆ ಏನು ಹೇಳುವುದೋ ತಿಳಿಯುತ್ತಿಲ್ಲ! ಈತನ ಇತ್ತೀಚಿನ ಚಿತ್ರ `ಬಬಲೀ ಬೌನ್ಸರ್’ನ ಕಥೆಯಲ್ಲಿ ಹುರುಳಿಲ್ಲ ತಿರುಳಿಲ್ಲ, ಯಾವ ಪುಣ್ಯಾತ್ಮ ಬರೆದನೋ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದಾರೆ. ಮೊದಲಿನಿಂದಲೇ ಸಡಿಲ ಕಥೆ, ಕ್ಲೈಮ್ಯಾಕ್ಸ್ ಬರುವ ಹೊತ್ತಿಗೆ ಕೂದಲು ಕಿತ್ತುಕೊಳ್ಳುವ ಹಾಗಾಗುತ್ತೆ! ಚಿತ್ರದ ಹೆಸರು ಕೇಳಿದಾಕ್ಷಣ, ಇದು ಯಾರೋ ಮಹಿಳಾ ಬೌನ್ಸರ್ ಳ ಕಷ್ಟಕಾರ್ಪಣ್ಯದ ಕಥೆ ಇರಬೇಕು ಎನಿಸೀತು. ಆದರೆ ಚಿತ್ರ ನೋಡಿದ ಮೇಲೆ ಎಲ್ಲಾ ಠುಸ್! ಏನೇನೂ ಇಲ್ಲ…… ತಮನ್ನಾಳ ಹುಚ್ಚು ನಟನೆ, ಬಲವಂತವಾಗಿ ತುರುಕಲಾದ ಹರಿಯಾಣದ ಭಾಷೆ, ಬೌನ್ಸರ್ ಳ ಸಂಘರ್ಷದ ಬದಲು ಒನ್ ವೇ ಲವ್ ಬಿಟ್ಟರೆ ಇದರಲ್ಲಿ ಹೇಳಿಕೊಳ್ಳುವಂಥದ್ದು ಏನೇನೂ ಇಲ್ಲ.