ನೇಹಾ ಬೋಲ್ಡ್ ನೆಸ್ ಗೆ ಗಳಿಸಿದಷ್ಟು ಖ್ಯಾತಿಯನ್ನು ತನ್ನ ನಟನೆಯಲ್ಲಿ ಗಳಿಸಿಲ್ಲ ಎಂಬುದು ಕಹಿ ಸತ್ಯ. ಇತ್ತೀಚೆಗಂತೂ ಅವಳ ಯಾವುದಾದರೊಂದು ಬೋಲ್ಡ್ ಇಮೇಜ್ FB ನಲ್ಲಿ ವೈರಲ್ ಆಗಿ ರಾಲಾಜಿಸುತ್ತಿರುತ್ತದೆ. ಯಾರಾದರೂ ಈಕೆಗೆ ಬಾಲಿವುಡ್ ನಲ್ಲಿ ಬೋಲ್ಡ್ ನೆಸ್ ಗೆ ಎಕ್ಸ್ ಪೈರಿ ಡೇಟ್ ಫಿಕ್ಸ್ ಆಗಿರುತ್ತೆ, ನಟನೆಗಲ್ಲ ಅಂತ ಅನ್ನುವುದನ್ನು ಮನವರಿಕೆ ಮಾಡಿಕೊಡಬೇಕಷ್ಟೆ. ಇನ್ನೂ ಟೈಂ ಇದೆ ಬೇಬಿ, ಬೆಟರ್ ಲರ್ನ್! ಅಂತಿದ್ದಾರೆ ಫ್ಯಾನ್ಸ್.
ಕೆರಿಯರ್ ನಲ್ಲೂ ಪರಿಣೀತಿ ಉನ್ನತಿಗೇರುವಳೇ?
`ಊಂಚಾಯಿ’ (ಔನ್ನತ್ಯ) ಚಿತ್ರದಲ್ಲಿ ಬಿಗ್ ಬಿ, ಅನುಪಮ್ ಖೇರ್, ಬೋಮನ್ ಇರಾನಿಯಂಥ ಘಟಾನುಘಟಿಗಳ ಜೊತೆ ನಟಿಸಿಯೂ ಪರಿಣೀತಿ ಚೋಪ್ರಾ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದಾಳೆ. ಈ ಚಿತ್ರದಲ್ಲಿ ಇವಳದು ಮಹತ್ತರ ಪಾತ್ರವೇನೂ ಅಲ್ಲ, ಆದರೆ ಪ್ರಭಾಶಾಲಿ ಎಂಬುದಂತೂ ನಿಜ. ಇದಾದ ನಂತರ ಈಕೆ ಇಮ್ತಿಯಾಜ್ ಅಲಿಯ ಮುಂದಿನ `ಚಮ್ಕೀಲಾ’ ಚಿತ್ರದಲ್ಲಿ ನಟಿಸಲಿದ್ದಾಳೆ. ಹಾಗಿದ್ದರೆ ಪರಿಣೀತಿ ತನ್ನ ಕೆರಿಯರ್ ನಲ್ಲೂ `ಊಂಚಾಯಿ’ (ಉನ್ನತಿ)ಗೇರುತ್ತಿದ್ದಾಳೆ ಅಂದುಕೊಳ್ಳೋಣವೇ?
ರಣಬೀರ್ ನ ಮುಗಿಯದ ಚಿಂತೆ
ಹೊಸದಾಗಿ ತಂದೆ ಆಗಿರುವ ರಣಬೀರ್ ಕಪೂರ್ ಅದರಿಂದ ಬಲು ಖುಷ್, ಆದರೆ ಭೀ ಚಿಂತೆಯಲ್ಲಿ ಮುಳುಗಿ ಹೋಗಿದ್ದಾನೆ. 40+ನಲ್ಲಿ ತಾನು ಮದುವೆಯಾಗಿ ತಂದೆ ಅಂತೂ ಆದೆ, ಆದರೆ ಮುಂದೆ ಮಗಳು 20+ ಆದಾಗ, ತಾನು 60+ ಆಗಿರುತ್ತೇನೆ, ಹಾಗಾಗಿ ಜನರೇಶನ್ ಗ್ಯಾಪ್ ಹೆಚ್ಚಿರುತ್ತದೆ ಅಂತ. ಅಷ್ಟು ಹೊತ್ತಿಗೆ ತನಗೆ ಹೆಚ್ಚು ಎನರ್ಜಿ ಇರುವುದೂ ಇಲ್ಲ ಎಂಬುದು ಮತ್ತೊಂದು ಚಿಂತೆ. ಒಬ್ಬ ಪ್ರೌಢ ತಂದೆ ತನ್ನ ಟೀನೇಜ್ ಮಗಳ ಜೊತೆ ಜೀವನ ಎಂಜಾಯ್ ಮಾಡುವಂತೆ ತನ್ನ ಪಾಡು ಇರುವುದಿಲ್ಲ ಎಂಬುದೇ ದೊಡ್ಡ ಚಿಂತೆ. ವಿಷಯ ಏನೋ ಸರಿ, ಆದರೆ ಉತ್ತಮ ಕೆರಿಯರ್ ರೂಪಿಸಿಕೊಳ್ಳಲು ಏನೋ ಒಂದನ್ನು ತ್ಯಾಗ ಮಾಡಲೇಬೇಕಲ್ಲವೇ…..?
ಕರಣ್ ನ ಮೋಡಿ
`ಏಕ್ ಹಜಾರೋಂ ಮೇ ಮೇರಿ ಬೆಹ್ನಾ ಹೈ, ರಂಗ್ ಬದಲ್ತೀ ಓಡ್ನಿ’ ಮುಂತಾದ ಟಿವಿ ಧಾರಾವಾಹಿಗಳಿಂದ ಖ್ಯಾತಿ ಪಡೆದು, ಆ್ಯಂಕರ್ ಆಗಿ ಯಶಸ್ಸು ಗಳಿಸಿದ ನಟ ಕರಣ್, ತನ್ನದೇ ವಿಶಿಷ್ಟ ಐಡೆಂಟಿಟಿ ಸ್ಥಾಪಿಸಿಕೊಂಡಿದ್ದಾನೆ. ಇತ್ತೀಚೆಗೆ ಆತ ಮುಂದುವರಿದು ವೆಬ್ ಸೀರೀಸ್ ನ `ಸ್ಪೆಷಲ್ ಆಪ್ಸ್’ನಲ್ಲಿ ಜಬರ್ದಸ್ತ್ ಪಾತ್ರ ನಿಭಾಯಿಸಿದ. ಈಗ ಈತ ಹಿಂತಿರುಗಿ ನೋಡುವ ಅಗತ್ಯವಿಲ್ಲ. ಈತನ ಲೇಟೆಸ್ಟ್ ವೆಬ್ ಸೀರೀಸ್ ಶೋ `ಖಾಕಿ ದಿ ಬಿಹಾರ್ ಚ್ಯಾಪ್ಟರ್’ ಬಲು ಚರ್ಚೆಯಲ್ಲಿದೆ. ಇದರಲ್ಲಿ ಈತ ಒರಿಜಿನಲ್ ಪೊಲೀಸ್ ಅಧಿಕಾರಿ ಅಮಿತ್ ಲೊಂಢಾರ ಪಾತ್ರ ಮಾಡಿದ್ದಾನೆ. ಈ ಸೀರೀಸ್ ನ ಕಥೆ ಹೆಚ್ಚು ಥ್ರಿಲ್ಲಿಂಗ್ ಆಗಿದೆ, ಅದರಲ್ಲಿ ಕರಣ್ ನ ಪಾತ್ರ ದಿ ಬೆಸ್ಟ್! ಕ್ರೈಂ ಆಧಾರಿತ ಕಥೆಯಾದರೂ ಇಲ್ಲಿ ಅವಾಚ್ಯ ಶಬ್ದಗಳ ಬಳಕೆ ಇಲ್ಲ ಎಂಬುದೇ ವಿಶೇಷ.
ಎಲ್ಲಿ ಹೋಯ್ತು ಭೇಡಿಯಾ?
ವರುಣ್ ಧವನ್ ನ ಹೊಸ `ಭೇಡಿಯಾ’ (ತೋಳ) ಚಿತ್ರ ಕಾಡಿನಲ್ಲಿ ಅದು ಹೇಗೆ ಕಣ್ಮರೆ ಆಯ್ತೋ ಗೊತ್ತಾಗುತ್ತಿಲ್ಲ! ಅತಿ ಚೀಪ್ ಖೌ ಟ್ರಿಕ್ಸ್ ಅತಿ ಸಡಿಲ ಕಥಾಹಂದರ ಹೊಂದಿದ್ದ ಈ ಚಿತ್ರ ಥಿಯೇಟರ್ ನಲ್ಲಿ ರಿಲೀಸ್ ಆದದ್ದೇ ಹೆಚ್ಚು. ಆದರೆ ರಿಲೀಸ್ ಆದ 1-2 ದಿನಗಳಲ್ಲೇ ಈ ಚಿತ್ರದ ವೀಕ್ಷಕರು ಕಣ್ಮರೆ ಆಗತೊಡಗಿದರು. ವರುಣ್ ತಾನು ತೋಳನಾಗಿ ಬಂದು ಎಲ್ಲರನ್ನೂ ಸೆಳೆದುಬಿಡುವೆ ಎಂದೇ ಭ್ರಮಿಸಿದ್ದ. ಹಿಂದೆ ಇದೇ ತರಹ ರಾಹುಲ್ ರಾಯ್ (ಆಶಿಕಿ ಖ್ಯಾತಿ) ಹುಲಿಯಾಗಿ ಬಂದು `ಜುನೂನ್’ ಮೂಲಕ ಮುಗ್ಗರಿಸಿದ್ದು ನೆನಪಿದೆಯೇ? ಆದರೆ `ಭೇಡಿಯಾ’ದ ನಿರ್ಮಾಪಕರು ಅಸಲಿ ಜಂಗಲ್ ನ ಹುಲಿಗಳೆಂದರೆ ವೀಕ್ಷಕರು ಎಂಬುದನ್ನೇ ಮರೆತಂತಿದೆ. ಚಿತ್ರ ಉಳಿಸುವುದು, ಕಿತ್ತೊಗೆಯುವುದಂತೂ ಅವರ ಕೈಲಿ ತಾನೇ ಇದೆ? ಇದರಿಂದಾಗಿ ಕೃತಿ ಸೇನನ್ ಳಿಗಿದ್ದ ಬ್ರಾಂಡ್ ವ್ಯಾಲ್ಯೂ ಸಹ ತೋಪಾಯಿತು. ಕೃತಿ ವರುಣ್ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಏಜ್ ಅಂದ್ರೆ ಕೇವಲ ಒಂದು ನಂಬರ್ ಅಷ್ಟೇ!
ನೀವೀಗ 40+ ದಾಟಿದ್ದೀರೇನು? ನೀವು ನಿಮ್ಮ ಸಂಸಾರ, ಕುಟುಂಬ, ಪೂಜೆ ಪುನಸ್ಕಾರಗಳಲ್ಲಿ ಮುಳುಗಿಹೋಗಿ ನಿಮ್ಮನ್ನು ನೀವೇ ಮುದಿ ಅಂದುಕೊಳ್ಳುತ್ತಿದ್ದೀರಾ? ನಿಮ್ಮ ಉತ್ತರ ಹೌದು ಎಂದಾದರೆ, ಚೈಯಾ….ಚೈಯಾ…. ಖ್ಯಾತಿಯ ಮಲೈಕಾಳ ಈ ಮಾತುಗಳತ್ತ ಗಮನಹರಿಸಿ. 45+ ಆಗಿರುವ ಮಲೈಕಾ ತನಗಿಂತ ಎಷ್ಟೋ ಕಿರಿಯನಾದ ಅರ್ಜುನ್ ಕಪೂರ್ (ಶ್ರೀದೇವಿಯ ಹಿರಿ ಮಲಮಗ) ಜೊತೆ ಖುಲ್ಲಂಖುಲ್ಲ ಡೇಟಿಂಗ್ ನಡೆಸುತ್ತಿದ್ದಾಳೆ! ಎಂದೂ ಜಿಮ್ ತಪ್ಪಿಸುವುದಿಲ್ಲ. ಇಂದಿಗೂ ಈಕೆಯ ಹಾಟ್ ನೆಸ್ ಮುಂದೆ ಸಣ್ಣ ಪ್ರಾಯದ ನಾಯಕಿಯರು ಮುಗ್ಗರಿಸುತ್ತಿದ್ದಾರೆ. ಅರೆ, ಈಕೆ ಸೆಲೆಬ್ರಿಟಿ ಆದ್ದರಿಂದ ಇದು ಸಹಜ, ನಮ್ಮ ನಿಮ್ಮಂಥವರಿಗಲ್ಲ ಅಂತ ಕುಂಟು ನೆಪ ಹೇಳಬೇಡಿ. ನೀವು ಮಾಡದೆ ಇರುವಂಥದ್ದನ್ನು ಆಕೆ ಏನು ಮಾಡುತ್ತಿದ್ದಾಳೆ ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ. ವಯಸ್ಸು ಅಂದ್ರೆ ಕೇವಲ ಒಂದು ನಂಬರ್, ತುಸು ಶ್ರದ್ಧೆ ವಹಿಸಿ ಅದನ್ನು ಹಿಂದಕ್ಕೆಳೆದು, ಚಿರಯೌವನ ಪಡೆಯಿರಿ ಎಂಬುದೇ ಇವಳ ಸಲಹೆ.
ಹಿಟ್ ಚಿತ್ರದ ಹುಡುಕಾಟದಲ್ಲಿ ಟೈಗರ್
ಟೈಗರ್ ನ ಕೊನೆಯ ಹಿಟ್ ಚಿತ್ರ ಎಂದರೆ `ವಾರ್’ ಇದು 2019ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದ ಅಸಲಿ ಕ್ರೆಡಿಟ್ ಹೃತಿಕ್ ರೋಶನ್ ಗೆ ಹೋಯ್ತು ಅನ್ನೋದು ಬೇರೆ ಮಾತು. ಕಳೆದ 3 ವರ್ಷಗಳಿಂದ ಈತ ಚಿತ್ರದ ನಂತರ ಚಿತ್ರ ಅಂತ ಚಿತ್ರೀಕರಣ ಮಾಡುತ್ತಲೇ ಇದ್ದಾನೆ, ಒಂದೂ ಗೆಲ್ಲುತ್ತಿಲ್ಲ! ಅಕ್ಷಯ್ ಜೊತೆ `ಬಡೆ ಮಿಯಾ ಛೋಟೆ ಮಿಯಾ’ ಚಿತ್ರದಲ್ಲಿ ಟೈಗರ್ ಇದ್ದರೂ, ಈ ಚಿತ್ರ ರಿಲೀಸ್ ಆಗಲು ಬಹಳ ತಡ ಆಗುತ್ತಿದೆ, ವೀಕ್ಷಕರಂತೂ ಬೇಸತ್ತು ಹೋಗಿದ್ದಾರೆ. ಟೈಗರ್ ಭೈಯಾ, ಸ್ವಲ್ಪ ಜೋರಾಗಿ ಘರ್ಜಿಸು, ಇಲ್ಲದಿದ್ದರೆ ದಕ್ಷಿಣದ ಚಿತ್ರಗಳ ಮಹಾಪೂರದೆದುರು ಕೊಚ್ಚಿ ಹೋಗ್ತೀಯಾ, ಅಂತಾರೆ ಹಿತೈಷಿಗಳು.
ಅಜಯ್ ನಿಂದ ಬಾಲಿವುಡ್ ಗೆ ಬಂತು ಜೀವ!
ಬಾಲಿವುಡ್ ನ ಸ್ಟಾರ್ ಗಳು ಎಷ್ಟೋ ದಿನಗಳಿಂದ ಕಳೆಗುಂದಿದ್ದಾರೆ. ಒಮ್ಮೆ ಚಿತ್ರದಲ್ಲಿ ಹುರುಳಿಲ್ಲ ಅಂತಾದರೆ, ಮತ್ತೊಮ್ಮೆ ಬಾಯ್ ಕಾಟ್ ಗ್ಯಾಂಗ್ ನಿಂದ ಚಿತ್ರ ಮುಳುಗಿ ಹೋಗುತ್ತದೆ. ಈ ಮಧ್ಯೆ `ದೃಶ್ಯಂ-2′ ಚಿತ್ರ ಬಾಲಿವುಡ್ ಗೆ ಹೊಸ ಜೀವ ತುಂಬಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಈ ಚಿತ್ರದಲ್ಲಿ ದಮ್ ಇದೆ, ಹೀಗಾಗಿ ಜನ ಕೈ ಹಿಡಿದು ಆದರಿಸುತ್ತಿದ್ದಾರೆ. ಈ ಚಿತ್ರದಿಂದಾಗಿ ಅಜಯ್ ದೇವಗನ್ ದೆಸೆಯೂ ತಿರುಗಿದೆ ಎನ್ನಬಹುದು, ಆತ ಒಂದು ಹಿಟ್ ಚಿತ್ರಕ್ಕಾಗಿ ಬಹಳ ಕಾಯುತ್ತಿದ್ದ. ಈಗ ಇವನ ಮುಂದಿನ ಚಿತ್ರಗಳು ಎಷ್ಟು ಮಾತ್ರ ಈತನ ಕೈ ಹಿಡಿಯುತ್ತವೇ….. ಕಾಲವೇ ಹೇಳಬೇಕು!
ಭರವಸೆ ಮೂಡಿಸಿದ ವಿಜಯಾನಂದ
ಕನ್ನಡದ ಚಿತ್ರ `ವಿಜಯಾನಂದ’ ಇಲ್ಲಿನ ಮೊದಲ ಬಯೋಪಿಕ್ ಆಗಿ ವಿಜಯ್ ಸಂಕೇಶ್ವರ ಅವರ ಕಥೆ ತಿಳಿಸುತ್ತದೆ, ಸಾಕಷ್ಟು ಚರ್ಚೆಯಲ್ಲಿದೆ. ಎಂದಿನಂತೆ ದಕ್ಷಿಣದ ಈ ಚಿತ್ರ ಉತ್ತರದವರಲ್ಲಿ ಸಾಕಷ್ಟು ಕುತೂಹಲ ಕೆಳಿಸಿದೆ. ಸಣ್ಣ ಊರುಗಳಿಂದ ಬಂದವರು ದೊಡ್ಡ ಕನಸು ಕಾಣುತ್ತಾ ಅದನ್ನು ನನಸಾಗಿಸಿಕೊಳ್ಳುವ ಪರಿಯೇ ಇದರ ಕಥಾಹಂದರ. ವಿ. ರವಿಚಂದ್ರನ್ ಇಲ್ಲಿ ಅತಿಥಿ ನಟರಾಗಿ ಮಿಂಚಿದ್ದಾರೆ. ಇದರ ಹಿಂದಿ ವರ್ಷನ್ ಯಾ ಮೋಡಿ ಮಾಡಲಿದೆಯೋ ಎಂದು ಬಾಲಿವುಡ್ ಮಂದಿ ಕಾಯುತ್ತಿದ್ದಾರೆ.
ಬಾಲಿವುಡ್ ಗೆ ಮತ್ತೆ ಮರಳಿದ ಮಲ್ಲು ಪೃಥ್ವಿ
ಮಲೆಯಾಳಂನ ಸೂಪರ್ ಸ್ಟಾರ್ ಪೃಥ್ವಿ ಸುಕುಮಾರನ್, ಈಗಾಗಲೇ ಬಾಲಿವುಡ್ ಗೆ ಎಂಟ್ರಿ ನೀಡಿ, ಯಶಸ್ಸು ಕಾಣದೆ ಎಡವಿದ್ದು ಇತಿಹಾಸ. ರಾಣಿ ಮುಖರ್ಜಿಯ ಜೊತೆ ಈತನ `ಅಯ್ಯ’ ಬಾಕ್ಸ್ ಆಫೀಸ್ ನಲ್ಲಿ ತೋಪೆದ್ದು ಹೋಗಿತ್ತು. ಹೊಸ ಸುದ್ದಿಗಳ ಪ್ರಕಾರ ಈತ ಈಗ `ಬಡೆ ಮಿಯಾ ಛೋಟೆ ಮಿಯಾ’ ಚಿತ್ರದ ವಿಲನ್ ಪಾತ್ರದಲ್ಲಿ ಮಿಂಚಲಿದ್ದಾನೆ. ಪೃಥ್ವಿ, ತುಸು ಹುಷಾರು! ಇಲ್ಲಿ ಈಗಾಗಲೇ ಈ ಚಿತ್ರದ ಅಕ್ಷಯ್, ಟೈಗರ್ ಗೆಲುವು ಕಾಣದೆ ಮಣ್ಣು ಮುಕ್ಕುತ್ತಿದ್ದಾರೆ, ನೀನು ದಕ್ಷಿಣದ ಆ ತುದಿಯಿಂದ ಉತ್ತರದ ಈ ತುದಿಗೆ ಬಂದು, ನಡುವೆ ತ್ರಿಶಂಕು ಸ್ಥಿತಿಗೇರಬಾರದು ಎಂದು ಹಿತೈಷಿಗಳು ಸಲಹೆ ನೀಡುತ್ತಿದ್ದಾರೆ. ದಕ್ಷಿಣದ ಖ್ಯಾತಿ ಉತ್ತರದಲ್ಲಿ ಧೂಳೆದ್ದು ಹೋಗದಿರಲಿ ಎಂಬುದು ಅವರ ಮುಖ್ಯ ಸಲಹೆ.
ಅನುಪಮ ಕಲಾವಿದ ವಿಶಾಲ್
`ಮರ್ದಾನಿ-2′ ಚಿತ್ರದ ವಿಲನ್ ಕಡ್ಡಿ ಪೈಲ್ವಾನ್ ಆಗಿದ್ದರೂ, ನಟನೆಯಲ್ಲಿ ಅತಿ ಭಯಂಕರ ಎನಿಸಿದ. ತಾನು ಆ ಪಾತ್ರದಿಂದ ಇಷ್ಟೆತ್ತರಕ್ಕೆ ಏರಬಲ್ಲೆ ಎಂದು ಅವನೂ ಎಣಿಸಿರಲಿಲ್ಲ. ವಿಶಾಲ್ ಜೇಠ್ವಾ ಈ ಪಾತ್ರದಿಂದ ಎಲ್ಲೆಡೆ ಮಿಂಚಿದ! ಇದೀಗ ಈತ `ಸಾಲೋಂಕಿ’ ಚಿತ್ರದಲ್ಲಿ ಪ್ರಬುದ್ಧ ನಟಿ ಕಾಜೋಲ್ ಳ ಮಗನಾಗಿ ಎಲ್ಲರ ಮನ ಸೂರೆಗೊಂಡಿದ್ದಾನೆ. ಸ್ಪೆಷಲ್ ಚೈಸ್ಡ್ ಆಗಿ ಬೆಳೆದ ವಿಶಾಲ್ ಇಲ್ಲಿ ವಿಭಿನ್ನ ಆಯಾಮ ಗುರುತಿಸಿಕೊಂಡಿದ್ದಾನೆ. ವಿಲನ್ ಆಗಿ ಎಷ್ಟು ಮಿಂಚಿದನೋ, ಈ ವಿಶೇಷ ಪಾತ್ರದಲ್ಲೂ ಅಷ್ಟೇ ಪರ್ಫೆಕ್ಟ್ ಎನಿಸಿದ್ದಾನೆ. ಇಂಥ ಪಾತ್ರದಲ್ಲೂ ಸಕಾರಾತ್ಮಕತೆ ತುಂಬಿದ್ದೇ ಈತನ ವೈಶಿಷ್ಟ್ಯ. ಪಳಗಿದ ನಟ ಮಾತ್ರ ಇಂಥ ಪಾತ್ರ ಮಾಡಬಲ್ಲ ಎನ್ನುತ್ತಿದ್ದಾರೆ ಬಾಲಿವುಡ್ ತಜ್ಞರು. ದಕ್ಷಿಣದ ಖ್ಯಾತ ನಟಿ ರೇವತಿ ಈ ಚಿತ್ರದ ನಿರ್ದೇಶಕಿ ಎಂಬುದು ಇಲ್ಲಿ ಪ್ಲಸ್ ಪಾಯಿಂಟ್!