– ರಾಘವೇಂದ್ರ ಅಡಿಗ ಎಚ್ಚೆನ್.
ಸುಧಾರಾಣಿ ಅವರು ಸೀರಿಯಲ್ ಲೋಕಕ್ಕೂ ಬಂದಾಗಿದೆ. ಸಿನಿಮಾದಲ್ಲಿ ಯಾವಾಗಲೂ ಇದ್ದಾರೆ. ಅಮ್ಮನ ಪಾತ್ರವನ್ನ ಮಾಡುತ್ತಲೇ ಸಿನಿಮಾ ನಂಟು ಉಳಿಸಿಕೊಂಡಿದ್ದಾರೆ. ಇದರ ಮಧ್ಯೆ ಇದೀಗ ಘೋಸ್ಟ್ ದಿ ದೆವ್ವ ಅನ್ನುವ ಒಂದು ಚಿಕ್ಕ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ತಾವೂ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿಯೆ ಅಭಿನಯಿಸಿದ್ದಾರೆ.
ತಮ್ಮ ನಿರ್ಮಾಣದ ಈ ಚಿತ್ರದ ಪೋಸ್ಟರ್ ಅನ್ನ ಶಿವಣ್ಣನಿಗೆ ತೋರಿಸಬೇಕು. ಅವರಿಂದ ವಿಶ್ ತೆಗೆದುಕೊಳ್ಳಬೇಕು ಅಂತಲೇ ಸುಧಾರಾಣಿ ಯೋಚನೆ ಮಾಡಿದ್ದಾರೆ. ಅದಕ್ಕೆ ಸ್ಪಂಧಿಸಿದ ಶಿವರಾಜ್ ಕುಮಾರ್, ಆ ಕೂಡಲೇ ಓಕೆ ಅಂತಲೂ ಹೇಳಿದ್ದಾರೆ. ಹಾಗಾಗಿಯೇ ಶಿವಣ್ಣ ಮತ್ತು ಸುಧಾರಾಣಿ ಅಕ್ಕ-ಪಕ್ಕ ಕುಳಿತು ಘೋಸ್ಟ್ ದಿ ದೆವ್ವ ಚಿತ್ರದ ವಿಚಾರ ಹಂಚಿಕೊಂಡಿದ್ದಾರೆ.
ಸುಧಾರಾಣಿ ಅವರನ್ನ ಶಿವಣ್ಣ ಚುಮ್ಮಿ ಅಂತಲೇ ಕರೆಯುತ್ತಾರೆ. ಆನಂದ್ ಚಿತ್ರದಲ್ಲಿ ನಟಿಸಿದ್ದಾಗ ಸುಧಾರಾಣಿ ಅವರಿಗೆ 13 ವರ್ಷ ಇರಬಹದು. ಹಾಗಾಗಿಯೇ ಚುಮ್ಮಿ ಅನ್ನೋ ಹೆಸರಿಂದಲೇ ಶಿವಣ್ಣ ಕರೆಯುತ್ತಿದ್ದರು. ಈಗಲೂ ಸುಧಾ ಅವರನ್ನ ಚುಮ್ಮಿ ಅಂತಲೇ ಕರೆಯುತ್ತಾರೆ. ತಮ್ಮ ಮತ್ತು ಸುಧಾರಾಣಿ ಅವರ ಬಾಂಡಿಂಗ್ ಚೆನ್ನಾಗಿದೆ. ಪರಸ್ಪರ ಪ್ರೀತಿ ಮತ್ತು ವಿಶ್ವಾಸ ಶಾಶ್ವತವಾಗಿಯೇ ಇದೆ ಅಂತಲೂ ಹೇಳಿದ್ದಾರೆ. ತಮ್ಮ ಈ ಒಂದು ವಿಷಯವನ್ನ ಹೇಳುತ್ತಲೇ ಶಿವಣ್ಣ, ಘೋಸ್ಟ್ ದಿ ದೆವ್ವದ ಅವತಾರ್ ಬಗ್ಗೆ ಹೇಳಿದ್ದಾರೆ.

GHOST
ಸುಧರಾಣಿ ಅವರನ್ನ ಮೊದಲ ಬಾರಿಗೆ ಈ ರೀತಿಯ ಅವತಾರದಲ್ಲಿ ನೋಡುತ್ತಿದ್ದೇನೆ. ಇದು ಚೆನ್ನಾಗಿದೆ. ಇದು ಒಂದು ಸೈಕಾಲಜಿಕಲ್ ಸಿನಿಮಾ ಇದು ಅನಿಸುತ್ತದೆ. ಚಿತ್ರದ ಪೋಸ್ಟರ್ ಕೂಡ ಚೆನ್ನಾಗಿದೆ. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಅಂತಲೇ ಶಿವಣ್ಣ ಹೇಳುತ್ತಾರೆ.
ಘೋಸ್ಟ್ ದಿ ದೆವ್ವ ಚಿತ್ರದ ಪ್ರೀಮಿಯರ್ ಪ್ಲಾನ್ ಆಗಿದೆ. UK ನಲ್ಲಿ ಈ ಸಿನಿಮಾ ಪ್ರೀಮಿಯರ್ ಆಗುತ್ತಿದೆ. ಇದನ್ನ ಶಿವಣ್ಣ ಕೂಡ ಹೇಳಿದ್ದಾರೆ. ಹಾಗೇನೆ ಚಿತ್ರ ಬಂದ್ಮೇಲೆ ನೋಡುವುದಾಗಿಯೂ ತಿಳಿಸಿದ್ದಾರೆ. ಚಿತ್ರದ ಇತರ ಮಾಹಿತಿ ಅಂತ ಬಂದ್ರೆ, ಈ ಸಿನಿಮಾಕ್ಕೆ ಸುಧರಾಣಿ ಅವರು ನಿರ್ಮಾಪಕಿ ಆಗಿದ್ದಾರೆ. ಪ್ರಮುಖ ಪಾತ್ರವನ್ನು ಮಾಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ