ಸಿನಿಮಾ ಮತ್ತು ಕ್ರಿಕೆಟ್‌ ನಡುವಿನ ಸಂಬಂಧ ಬಹಳ ಅವಿನಾಭಾವವಾದದ್ದು. ಅನೇಕ ನಟಿಯರು ಸ್ಟಾರ್‌ ಕ್ರಿಕೆಟರ್‌ಗಳನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ಸ್ಯಾಂಡಲ್‌ವುಡ್‌ ನಟಿಯೊಬ್ಬರು ಕೂಡ ಅದೇ ಸಾಲಿಗೆ ಸೇರಲಿದ್ದಾರೆ.

ಅರ್ಚನಾ ಕೊಟ್ಟಿಗೆ ನಿಶ್ಚಿತಾರ್ಥ

ಸ್ಯಾಂಡಲ್‌ವುಡ್‌ ನಟಿ ಅರ್ಚನಾ ಕೊಟ್ಟಿಗೆ ತಮ್ಮ ನಟನೆಯ ಮೂಲಕವೇ ಸಿನಿಪ್ರಿಯರ ಮನಗೆದ್ದವರು. ಇದೀಗ ಸ್ಟಾರ್‌ ಕ್ರಿಕೆಟರ್‌ ಶರತ್‌ ಬಿ ಆರ್‌ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಹಸೆಮಣೆ ಏರಲು ಸಜ್ಜಾಗಿದ್ದು, ಈ ಮೂಲಕ ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಒತ್ತಲಿದ್ದಾರೆ. ‌

ಅರ್ಚನಾ ಅವರ ಭಾವಿ ಪತಿ ಶರತ್‌ ಬಿ ಆರ್‌, ಕರ್ನಾಟಕ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರ. ಬ್ಯಾಟ್ಸ್‌ಮನ್‌, ವಿಕೆಟ್‌ ಕೀಪರ್‌ ಆಗಿ ಶರತ್‌ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಗುಜರಾತ್‌ ಟೈಟನ್ಸ್‌ ತಂಡದ ಆಟಗಾರ ಕೂಡ ಆಗಿದ್ದರು.

ಕ್ರಿಕೆಟ್‌ ಹಿನ್ನೆಲೆ

ಕರ್ನಾಟಕ ರಾಜ್ಯ ಸಂಸ್ಥೆ ಶರತ್‌ ಅವರ ಪ್ರತಿಭೆ ಗುರುತಿಸಿ 2015ರಲ್ಲಿ ಡರ್ಹ್ಯಾಮ್‌ ಕೌಂಟಿ ಕ್ರಿಕೆಟ್‌ ಕ್ಲಬ್‌ನಲ್ಲಿ ತರಬೇತಿಗೆ ಕಳುಹಿಸಲು ನಿರ್ಧರಿಸಿತು. ಶರತ್‌ ಅವರು 2018ರಲ್ಲಿ ಕೋಲ್ಕತ್ತಾದಲ್ಲಿ ಜಾರ್ಖಂಡ್‌ ವಿರುದ್ಧ ಕರ್ನಾಟಕ ಪರ ಟ್ವೆಂಟಿ-20 ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಶರತ್‌ ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದು, ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ.

ಎಂಟು ವರ್ಷಗಳ ಪ್ರೀತಿ

ಅರ್ಚನಾ ಕೊಟ್ಟಿಗೆ ಮತ್ತು ಶರತ್‌ ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಅರ್ಚನಾಗೆ ಶರತ್‌ ಕಾಲೇಜಿನಿಲ್ಲಿ ಸೀನಿಯರ್‌ ಆಗಿದ್ದರು. 2018ರಲ್ಲಿ, ಸ್ನೇಹಿತರ ಮೂಲಕ ಭೇಟಿಯಾದ ಈ ಜೋಡಿಗೆ ಮೊದಲ ಭೇಟಿಯಲ್ಲಿ ಪ್ರೀತಿ ಹುಟ್ಟಿತ್ತು. ಎಂಟು ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇಷ್ಟು ವರ್ಷಗಳ ಪ್ರೀತಿಗೆ ಇದೀಗ ಮದುವೆಯ ಮುದ್ರೆ ಒತ್ತಲು ಈ ಜೋಡಿ ತಯಾರಾಗಿದೆ.

ಅರ್ಚನಾ ಕೊಟ್ಟಿಗೆ ʻಡಿಯರ್‌ ಸತ್ಯʼ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ʻಹೊಂದಿಸಿ ಬರೆಯಿರಿʼ, ʻಶಬರಿ ಸರ್ಚಿಂಗ್‌ ರಾವಣʼ, ʻರಾಕ್ಷಸʼ, ʻಅಲಂಕಾರ್‌ ವಿದ್ಯಾರ್ಥಿʼ, ʻಟ್ರಿಪಲ್‌ ರೈಡಿಂಗ್‌ʼ, ʻಅರಣ್ಯ ಕಾಂಡʼ, ʻಫಾರೆಸ್ಟ್‌ʼ, ʻಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅರ್ಚನಾ ಕೊಟ್ಟಿಗೆ ನಟಿಸಿದ್ದು, ಇಂಡಸ್ಟ್ರಿಯ ಪ್ರಾಮಿಸಿಂಗ್ ಫೇಸ್ ಎನ್ನುವ ಬಿರುದು ಕೂಡ ಪಡೆದುಕೊಂಡಿದ್ದಾರೆ.

ಉಷಾ ಗೋವಿಂದರಾಜು ನಿರ್ಮಾಣದ “ಎಲ್ರ ಕಾಲೆಳಿಯತ್ತೆ ಕಾಲ” ಸಿನಿಮಾದಲ್ಲಿ ಚಂದನ್ ಶೆಟ್ಟಿ ಜೊತೆಗೆ ನಾಯಕಿ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ. ಒಂದು ಅಲಂಕಾರ ವಿದ್ಯಾರ್ಥಿ ಹಾಗೂ ಶಬರಿ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡದ ಬಹುನಿರೀಕ್ಷಿತ ʻಅಯ್ಯನ ಮನೆʼ ವೆಬ್‌ ಸರಣಿಯಲ್ಲೂ ಅರ್ಚನಾ ಕೊಟ್ಟಿಗೆ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ