ಶರತ್ ಚಂದ್ರ
ಕಲರ್ಸ್ ಕನ್ನಡ ದಲ್ಲಿ ಸಾಕಷ್ಟು ಜನಪ್ರಿಯಗೊಂಡಿದ್ದ’ಕನ್ನಡತಿ ‘ ಸೀರಿಯಲ್ ಬಗ್ಗೆ ನಿಮಗೆಲ್ಲ ಗೊತ್ತಿದೆ. ಈ ಸೀರಿಯಲ್ ಮೂಲಕ ಕನ್ನಡತಿ ರಂಜನಿ ರಾಘವನ್ ಮತ್ತು ನಾಯಕ ಕಿರಣ್ ರಾಜ್ ದಿನ ಬೆಳಗಾಗುವು ದರೊಳಗೆ ಕಿರುತೆರೆಯ ಸ್ಟಾರ್ ಗಳಾಗಿಬಿಟ್ಟಿದ್ದರು.
ಈ ಸೀರಿಯಲ್ ನಂತರ ಕಿರಣ್ ರಾಜ್ ಸ್ಯಾಂಡಲ್ ವುಡ್ ನಲ್ಲಿ ನಾಯಕ ನಟನಾಗಿ ತಕ್ಕ ಮಟ್ಟಿಗೆ ಯಶಸ್ಸು ಕಂಡಿದ್ದರು. ಕಿರಣ್ ರಾಜ್ ಈಗ ಒಂದಷ್ಟು ಗ್ಯಾಪುಗಳ ನಂತರ ಮತ್ತೆ ಕಿರುತೆರೆಗೆ ವಾಪಸ್ ಆಗಿದ್ದಾರೆ.
ಈ ಸಾರಿ ಕಿರಣ್ ರಾಜ್ ಎಂಟ್ರಿ ಕೊಟ್ಟಿರುವುದು ಕನ್ನಡದ ಮತ್ತೊಂದು ಜನಪ್ರಿಯ ವಾಹಿನಿ ಜೀ ಕನ್ನಡದ ಮೂಲಕ.
ಕೆಲವು ವಾರಗಳಿಂದ ಜೀ ಕನ್ನಡದಲ್ಲಿ ‘ಕರ್ಣ’ ಎಂಬ ಸೀರಿಯಲ್ ಪ್ರೊಮೊ ಸಾಕಷ್ಟು ಗಮನ ಸೆಳೆಯುತ್ತಿದೆ. ಚಿತ್ರದ ಪ್ರೊಮೊ ನೋಡಿದಾಗ ಇದು ಒಂದು ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಕಥೆ ಎಂದು ಕಂಡು ಬರುತ್ತಿದೆ.
ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿಯ ನಾಯಕಿ ಯಾಗಿ ಈ ಹಿಂದೆ ಕಲರ್ಸ್ ಕನ್ನಡ ದಲ್ಲಿ ‘ ಗೀತಾ’ ಸೀರಿಯಲ್ ಮೂಲಕ ಕನ್ನಡ ದ ಮನೆ ಮಗಳಾಗಿ ,ಕನ್ನಡ ಬಿಗ್ ಬಾಸ್ ಸೀಸನ್ 11 ರ ಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಿಟ್ಟಿಸಿ ಕೊಂಡಿರುವ ಭವ್ಯ ಗೌಡ ಆಯ್ಕೆಯಾಗಿದ್ದಾರೆ.
ಈಗಾಗಲೇ ಬಿಡುಗಡೆ ಯಾಗಿರುವ ಹಾಡಿನಲ್ಲಿ ಹಾಗೂ ಧಾರವಾಹಿಯ ಪ್ರೊಮೊ ದಲ್ಲಿ ಮೆಡಿಕಲ್ ಸ್ಟೂಡೆಂಟ್ ಪಾತ್ರದಲ್ಲಿ ಮುದ್ದಾಗಿ ಕಾಣುತ್ತಿರುವ ಭವ್ಯ ಗೌಡ ಅವರನ್ನು ಧಾರವಾಹಿ ಯಲ್ಲಿ ನೋಡಲು ಅವರ ಅಭಿಮಾನಿಗಳು ಸಾಕಷ್ಟು ಕಾತುರತೆ ಯಿಂದ ಕಾಯುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಕರ್ಣ ಧಾರವಾಹಿ ನಿಮ್ಮನ್ನು ರಂಜಿಸಲು ಬರಲಿದೆ