ಪ್ರಕೃತಿ ಮಾನವರಿಗೆ ನೈಕಸರ್ಗಿಕವಾಗಿ ಒದಗಿಸಿರುವ ಕೊಡುಗೆಯೇ ಸೆಕ್ಸ್. ನಿಮ್ಮ ಪಾರ್ಟನರ್ಏನಾದರೂ ಮೂಲಕ ನಿಮಗೆ ದೊಡ್ಡ ಫೇವರ್ನೀಡುತ್ತಿರುವಂತೆ ಭಾವಿಸಿದರೆ, ಅಂಥವರಿಗೆ ಹೀಗೆ ತಿಳಿಯ ಹೇಳಿ……!

ಫಿಝಿಕಲ್ ರಿಲೇಶನ್‌ ನಿಂದ ಫಿಝಿಕಲಿ ಕನೆಕ್ಷನ್‌ ಸಿಗುತ್ತದೆ ಎನ್ನುತ್ತದೆ ಆಧುನಿಕ ಮನೋವಿಜ್ಞಾನ. ಸೆಕ್ಸ್ ಯಾವುದೇ ರಿಲೇಶನ್‌ ಶಿಪ್‌ ಗೆ ಅತ್ಯಗತ್ಯ, ಏಕೆಂದರೆ ಇದರಿಂದ ಸಂಗಾತಿಗಳು ಪರಸ್ಪರ ಅತಿ ನಿಕಟರಾಗುತ್ತಾರೆ. ಹಾಗಾಗಿ ಅನಾದಿ ಕಾಲದಿಂದಲೂ ಇದೊಂದು ಬ್ಯೂಟಿಫುಲ್ ಸಂಬಂಧವಾಗಿ ಉಳಿದುಕೊಂಡಿದೆ.

ಪ್ರಕೃತಿಯ ಕೊಡುಗೆ

ಪ್ರೀತಿ ಮತ್ತು ಅಂಕುಶ್‌ ಕಳೆದ 1 ವರ್ಷದಿಂದ ಲಿವ್ ಇನ್‌ ರಿಲೇಶನ್‌ ನಲ್ಲಿದ್ದಾರೆ. ಇಬ್ಬರಿಗೂ ಉತ್ತಮ ಕಂಪನಿಗಳಲ್ಲಿ ಕೆಲಸವಿದೆ. ತಮ್ಮ ಈ ಸಂಬಂಧದ ಕುರಿತಾಗಿ ಇಬ್ಬರೂ ಹೇಳುವುದೆಂದರೆ, ಆಕರ್ಷಣೆಗೆ ಒಳಗಾಗಿ ತಾವಿಬ್ಬರೂ ಈ ದೈಹಿಕ ಸಂಬಂಧ ಬೆಳೆಸಿದಾಗಿನಿಂದ, ಅವರಿಬ್ಬರ ನಡುವಿನ ಸಂಬಂಧ ಗಟ್ಟಿಗೊಂಡಿದೆಯಂತೆ.

ಪ್ರೀತಿ ಹೇಳುತ್ತಾಳೆ, ಇದಕ್ಕಾಗಿ ಅಂಕುಶ್‌ ಮೇಲೇನೂ ಅಧಿಕಾರ, ಜೋರು ಜಬರ್ದಸ್ತು ಮಾಡಲಿಲ್ಲ, ತಾವಾಗಿಯೇ ಇಬ್ಬರೂ ಪ್ರೀತಿಯಿಂದ ಒಪ್ಪಿ ಮುಂದುವರಿದದ್ದು ಎಂದು ತೃಪ್ತಿ ಪಡುತ್ತಾಳೆ.

ಮಾನರ ಪಾಲಿಗೆ ಸೆಕ್ಸ್ ಎಲ್ಲಕ್ಕಿಂತ ಹೆಚ್ಚಿನ ಸುಖ ನೀಡುವ ಸಾಧನ, ಪ್ರೇಮಕಾಮಗಳ ರಸಾನುಭೂತಿಯ ಪರಾಕಾಷ್ಠೆ. ಗಂಡುಹೆಣ್ಣು ಇಬ್ಬರಿಗೂ ಇದರ ಅನುಭವ, ಅಭಿಪ್ರಾಯ ಬೇರೆಯೇ ಇರುತ್ತದೆ. ಇಬ್ಬರೂ ಇದರಿಂದ ಸಮಾನ ಸುಖಿಗಳು ಎಂಬುದಂತೂ ಗ್ಯಾರಂಟಿ, ಆದರೆ ಈ ಕುರಿತಾಗಿ ಅವರ ವಿಚಾರಧಾರೆ ಭಿನ್ನ ಆಗಿರಬಹುದು. ಗಂಡಿಗೆ ಇದು ಒತ್ತಡ ನಿವಾರಿಸುವ ಸಾಧನವಾದರೆ, ಹೆಣ್ಣಿಗೆ ಇದು ಪ್ರೀತಿ ಪ್ರೇಮದ ಸುಖಾನುಭೂತಿ.

45 ವರ್ಷದ ಮನೋಜ್‌ ಹೇಳುತ್ತಾನೆ, ಹಿರಿಮಗನಾಗಿ ಮನೆಯ ಜವಾಬ್ದಾರಿ ನಿಭಾಯಿಸುತ್ತಾ, ನಿಭಾಯಿಸುತ್ತಾ ಯಾವಾಗ ತನಗೆ ಮದುವೆ ವಯಸ್ಸು ಮೀರಿಹೋಯ್ತು ಎಂದು ತಿಳಿಯಲೇ ಇಲ್ಲ. ಅಂತೂ ಆರ್ಥಿಕವಾಗಿ ತಾನು ಸದೃಢನಾದೆ ಎಂದು ಖಾತ್ರಿಯಾದಾಗ, ಇದೀಗ ಖಾಸಗಿ ಬದುಕಿನ ಬಗ್ಗೆ ವಿಚಾರ ಮೂಡಿತು. ಆತ ಹೇಳುವುದೆಂದರೆ, ತನ್ನದೇ ಆಫೀಸಿನ 35ರ ಸಿಂಗಲ್ ಸುಜಾತಾಳೊಂದಿಗೆ ಕಳೆದ 1 ವರ್ಷದಿಂದ ಲಿವ್ ಇನ್‌ ನಲ್ಲಿದ್ದಾನೆ. “ನಾನು ಸುಜಿಯ ಪ್ರತಿ ಅವಶ್ಯಕತೆಯನ್ನೂ ಗಮನವಿಟ್ಟು ಪೂರೈಸುತ್ತೇನೆ, ಹಾಗೇ ಅವಳೂ ನನ್ನನ್ನು ನೋಡಿಕೊಳ್ಳುತ್ತಾಳೆ. ನಮ್ಮ ನಡುವೆ ಈಗ ದೈಹಿಕ ಸಂಬಂಧ ಮಾಮೂಲಿ ಆಗಿದೆ, ಅದು ನಮ್ಮಿಬ್ಬರ ಸಂಪೂರ್ಣ ಸಹಮತಿಯಿಂದ ಮಾತ್ರ. ಪರಸ್ಪರರ ಅಗತ್ಯ ಪೂರೈಸುವುದರಿಂದ ಇದು ನಮ್ಮ ಫೇವರ್‌ ಎಂದು ನಾವಿಬ್ಬರೂ ಭಾವಿಸುವುದಿಲ್ಲ. ನಾವು ಸದಾ ಪರಸ್ಪರರ ಸಾಂಗತ್ಯ ಬಯಸುತ್ತೇವೆ!”

42-26019549

ದಿನೇದಿನೇ ಹೆಚ್ಚು ಪ್ರೀತಿ ಪ್ರೇಮ

ಇಂಥ ಲಿವ್ ಇನ್‌ ನಲ್ಲಿ ಸೆಕ್ಸ್ ಇದ್ದರೆ ಅದು ಕೇವಲ ಲೈಂಗಿಕ ಸಂತೃಪ್ತಿಗೆ ಮಾತ್ರ ಸೀಮಿತ ಎಂದು ಭಾವಿಸಬಾರದು. ಬದಲಿಗೆ ಸಂಗಾತಿಯ ಜೊತೆ ಒಂದು ಸದೃಢ ಸಂಬಂಧ ಖಾಯಂ ಆಗಲು ಹಾಗೂ ಪ್ರೀತಿಪ್ರೇಮ ಹೆಚ್ಚಿಸುವ ಒಂದು ಸಾಧನವಾಗಿದೆ. ಒಂದು ರಿಸರ್ಚ್‌ ಪ್ರಕಾರ, ಇಂಥ ಲಿವ್ ‌ಇನ್‌ ನಲ್ಲಿ ಸೆಕ್ಸ್ ಇರುವುದರಿಂದ, ಈ ಜೋಡಿ ಮಧ್ಯೆ ಒಂದು ಆರೋಗ್ಯಕರ ಸಂಬಂಧ ಖಾಯಂ ಆಗುತ್ತದೆ. ಇದರಿಂದ ಈ ಸಂಬಂಧ ಮುಂದೆ ಮುರಿದು ಬೀಳುವುದಿಲ್ಲ.

ಲಿವ್ ‌ಇನ್‌ ಎಕ್ಸ್ ಪರ್ಟ್‌ ವಿಶಾಲ್ ‌ನೇಗಿ ಹೇಳುತ್ತಾರೆ, ಸೆಕ್ಸ್ ಈ ಸಂಬಂಧವನ್ನು ಇನ್ನೂ ಒಂದು ಹೆಜ್ಜೆ ಮುಂದೆ ಕೊಂಡೊಯ್ಯುತ್ತದೆ. ಇಂಥ ಸಂಬಂಧದಲ್ಲಿ ದೈಹಿಕ ಆಕರ್ಷಣೆಗೆ ಅತಿ ಹೆಚ್ಚಿನ ಮಹತ್ವ ಇದೆ. ಇದು ಮೊದ ಮೊದಲು ಸಂಬಂಧವನ್ನು ಉಳಿಸಿಕೊಳ್ಳಲು ಇರಲಿ, ಅಥವಾ ತಮ್ಮ ಪ್ರೀತಿ ಪ್ರೇಮವನ್ನು ಖಾಯಂ ಆಗಿ ಉಳಿಸಿಕೊಳ್ಳಲಿಕ್ಕಿರಲಿ, ಸೆಕ್ಸ್ ಇಂಥ ಸಂಬಂಧದಲ್ಲಿ ಒಂದು ಮುಖ್ಯ ಪಾತ್ರ ವಹಿಸುತ್ತದೆ. ಸೆಕ್ಸ್ ನಿಂದ ಇಬ್ಬರಿಗೂ ಅಧಿಕ ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

ಆನಂದದ ಅನುಭೂತಿ

ಯೋಗ ಇನ್‌ ಸ್ಟ್ರಕ್ಟರ್‌ ಕಪಿಲ್ ‌ಹೇಳುತ್ತಾರೆ, ಒಬ್ಬ ಹುಡುಗ ಹುಡುಗಿ ಜೊಡಿ ಪರಸ್ಪರ ಒಪ್ಪಿಗೆಯಿಂದ ಕಪಲ್ ತರಹ ರಿಲೇಶನ್ ಉಳಿಸಿಕೊಳ್ಳುವುದಾದರೆ, ಅವರು ತಮ್ಮ ಪ್ರೀತಿ ಪ್ರೇಮ ವ್ಯಕ್ತಪಡಿಸುವ ಬೇರೆ ಬೇರೆ ವಿಧಾನ ಅನುಸರಿಸುತ್ತಾರೆ. ಇದರಲ್ಲಿ ಸೆಕ್ಸ್ ಸಹ ಒಂದು. ಇದರಿಂದ ಕೇವಲ ದೈಹಿಕ ಮಾತ್ರವಲ್ಲ, ಭಾವನಾತ್ಮಕ ರೂಪದಲ್ಲೂ ಪರಸ್ಪರರ ಬೆಸುಗೆ ಭದ್ರವಾಗುತ್ತದೆ.

ಸೆಕ್ಸ್ ನಿಂದ ಯಾರೂ ಯಾರಿಗೂ ಫೇವರ್‌ ಮಾಡುವುದಿಲ್ಲ! ಇದು ಇಬ್ಬರಿಗೂ ಅತ್ಯಗತ್ಯವಾದ ದೈಹಿಕ ಹಸಿವು ಮಾತ್ರವಲ್ಲದೆ, ಪರಸ್ಪರ ಆಳವಾದ ಪ್ರೀತಿ ಪ್ರೇಮ ವ್ಯಕ್ತಪಡಿಸುವ ವಿಶೇಷ ವಿಧಾನ ಆಗಿದೆ. ಇದರಿಂದ ಇಬ್ಬರ ದೇಹಗಳೂ ಸದಾ ಆ್ಯಕ್ಟಿವ್ ಮೋಡ್‌ ನಲ್ಲಿರುತ್ತದೆ.

ಪರಸ್ಪರರ ನಡುವೆ ಮುಖ್ಯ ಪಾತ್ರ

ಐಟಿ ಮ್ಯಾನೇಜರ್‌ ಸಾರಾಂಶ್‌ ಪ್ರಕಾರ, ಮಾನವರ ಜೀವನದಲ್ಲಿ ಸೆಕ್ಸ್ ಎಲ್ಲಕ್ಕಿಂತ ಪ್ರಧಾನ ಪಾತ್ರ ವಹಿಸುತ್ತದೆ. ಯಾರಾದರೂ ಇದನ್ನು ತಾವು ಫೇವರ್‌ ಮಾಡುತ್ತಿದ್ದೇವೆ ಎಂದು ಭಾವಿಸಿದರೆ, ಅದು ಅವರ ಕೆಳಮಟ್ಟದ ವಿಚಾರಧಾರೆ ಅಷ್ಟೆ. ಇದು ಯಾರೂ ಯಾರಿಗೂ ಮಾಡುತ್ತಿರುವ ಉಪಕಾರ ಅಲ್ಲ. ಇದೊಂದು ಸಾಮೂಹಿಕ ಪ್ರೀತಿಭರಿತ ಅನುಭೂತಿಯಾಗಿದ್ದು, ಇಬ್ಬರ ನಡುವಿನ ಪ್ರೇಮ ಬೆಸುಗೆಯನ್ನು ಗಟ್ಟಿಗೊಳಿಸುತ್ತದೆ.

ಕೆಲವು ಹುಡುಗಿಯರು, ಸಂಗಾತಿ ತನ್ನೆಲ್ಲ ಖರ್ಚು ವೆಚ್ಚ ಗಮನಿಸಿಕೊಂಡರೆ ಮಾತ್ರ ತಾನು ಅವನಿಗೆ ಸೆಕ್ಸ್ ಸುಖ ನೀಡಬಲ್ಲೆ ಎಂದು ಷರತ್ತು ಒಡ್ಡುತ್ತಾರೆ. ಇಂಥ ಹುಡುಗಿಯರ ಬಗ್ಗೆ IT ಉದ್ಯೋಗಿ ಮುಕ್ತಾ ಹೇಳುತ್ತಾರೆ, ಇಂಥ ಹುಡುಗಿಯರು ಹೀಗೆ ದೈಹಿಕ ಸಂಬಂಧ ಮಾಡಿಕೊಂಡಿದ್ದೇ ಆದಲ್ಲಿ, ಅದರಲ್ಲಿ ಅವರ ಸಹಮತಿ ಇದ್ದೇ ಇರುತ್ತದೆ. ಯಾರೂ ಇವರನ್ನು ಯಾವ ವಿಧದಲ್ಲೂ ಒತ್ತಾಯ ಮಾಡುವುದಿಲ್ಲ. ಇದು ಅವರವರ ಭಾವಕ್ಕೆ ಬಿಟ್ಟದ್ದು, ದೈಹಿಕ ಸಂಬಂಧವೇ ಇಲ್ಲದಿದ್ದ ಮೇಲೆ ಅದೆಂಥ ಲಿವ್ ‌ಇನ್‌ ಆಗಲು ಸಾಧ್ಯ ಶಿಮೊಗ್ಗದಿಂದ ಬೆಂಗಳೂರಿಗೆ ಬಂದು ಕಲಿಯುತ್ತಿರುವ 20 ವರ್ಷದ ಜಾಹ್ನವಿ ಹೇಳುತ್ತಾಳೆ, ಅವಳು ಕಳೆದ 1 ವರ್ಷದಿಂದ ಒಬ್ಬ ಹುಡುಗನ ಜೊತೆ ಲಿವ್ ‌ಇನ್‌ ನಲ್ಲಿದ್ದಾಳಂತೆ. ಆ ಬಾಯ್‌ ಫ್ರೆಂಡ್‌ ಇವಳ ಸಮಸ್ತ ಖರ್ಚು ವೆಚ್ಚ ಭರಿಸುತ್ತಾ, ಸದಾ ಬೈಕ್ ನಲ್ಲಿ ಕೇಳಿದೆಡೆಗೆ ಸುತ್ತಾಡಿಸುತ್ತಾನೆ, ಬೇಕಾದ ಹೋಟೆಲ್‌, ಮಾಲ್ ಗೆ ಕರೆದೊಯ್ಯುತ್ತಾನೆ. ಸಿನಿಮಾ, ಶಾಪಿಂಗ್‌, ಔಟಿಂಗ್ಲ್, ಪಿಕ್ನಿಕ್‌….. ಎಲ್ಲ ಸರಾಗವಾಗಿ ನಡೆಯುತ್ತದೆ. ಕಾಲೇಜ್‌ ಫೀಸ್‌, ಬುಕ್ಲ್ ಗೊಡವೆಯೂ ಅವಳಿಗಿಲ್ಲ. ಬದಲಿಗೆ ಅವಳು ಅವನೊಂದಿಗೆ ಬೇಕಾದಂತೆ ಸುತ್ತಾಡಿ, ಧಾರಾಳ ಪ್ರೀತಿ ಪ್ರೇಮ ತೋರುತ್ತಾಳೆ. ಈ ರೀತಿ ಮಾಡುವುದರಿಂದ ಏಕಕಾಲದಲ್ಲಿ ಇಬ್ಬರ ಅಗತ್ಯಗಳೂ ಪೂರೈಸುತ್ತಿವೆ ಎನ್ನುತ್ತಾಳೆ.

ಪ್ರೇಮದಲ್ಲಿ ಮೋಸವಾದಾಗ

30 ವರ್ಷದ ದೀಪಾ ಹೇಳುತ್ತಾಳೆ, ತನ್ನ ಎಕ್ಸ್ ಬಾಯ್‌ ಫ್ರೆಂಡ್‌ ಮದುವೆ ಆಗ್ತೀನಿ ಅಂತ ಕೈಕೊಟ್ಟ ಮೇಲೆ, ಅವಳು ಡಿಪ್ರೆಶನ್‌ ಗೆ ಜಾರಿದ್ದಳಂತೆ. ಇದರಿಂದ ಹೊರಬರಲು ಅವಳು `ಟಿಂಡರ್‌’ ಡೇಟಿಂಗ್‌ ಸೈಟ್‌ ಗೆ ಮೊರೆಹೋದಳು. ಹೀಗೇ ಅವಳು ಒಂದು ಸಲ 29ರ ಕಟ್ಟುಮಸ್ತಾದ ಹುಡುಗ ಸಾಕೇತ್‌ ನನ್ನು FB‌ನಲ್ಲಿ ಪರಿಚಯ ಮಾಡಿಕೊಂಡು, ಸ್ನೇಹ ಬೆಳೆಸಿ, ಇಂದು ಲಿವ್ ‌ಇನ್‌ ಸ್ಟೇಜಿಗೆ ಬಂದಿದ್ದಾಳೆ! ಶ್ರೀಮಂತರಾದ ಸಾಕೇತ್‌ ಈಗವಳ ಹೆಮ್ಮೆಯ ಪಾರ್ಟ್‌ನರ್‌, ಮದುವೆ ಗೊಡವೆ ಇಲ್ಲದೆ, ಇಬ್ಬರೂ ಹಾಯಾಗಿದ್ದಾರೆ. ಮನೆಯವರ ಒತ್ತಾಯದ ಮೇರೆಗೆ ಅವನು ಬೇರೆ ಮದುವೆಯಾಗಿ ಮನೆ ಹೂಡಿದರೂ, ತನ್ನ ಕೈ ಬಿಡಲಾರ ಎಂಬ ನಂಬಿಕೆ ಅವಳದ್ದು.

ಹೀಗಾಗಿ ಪರಸ್ಪರರ ಒಪ್ಪಿಗೆ ಮೇಲೆ ಇವರ ದೈಹಿಕ ಸಂಬಂಧ ಗಟ್ಟಿಯಾಗಿ ಮುಂದುವರಿದಿದೆ. ನಾವಿಬ್ಬರೂ ಮೇಜರ್‌, ನಾವೇನು ಮಾಡುತ್ತಿದ್ದೇವೆ ಎಂದು ನಮಗೆ ಗೊತ್ತು, ಇದರಲ್ಲಿ ನೈತಿಕತೆ, ಸಮಾಜ ಎಂಬ ಗೊಡವೆ ಅಥವಾ ಚಿಂತೆ ಇಲ್ಲ. ಪರಸ್ಪರರ ಸಹಮತಿ ಇದ್ದರೆ ಅಷ್ಟು ಸಾಕು ಎನ್ನುತ್ತಾಳೆ.

ಒಂದು ವರದಿಯ ಪ್ರಕಾರ, ವಿಶ್ವಾದ್ಯಂತ ಜನಪ್ರಿಯ ಆಗಿರುವ ಡೇಟಿಂಗ್‌ ಆ್ಯಪ್‌ ಟಿಂಡರ್‌ ಗೆ 2021ರಲ್ಲಿ 9.6 ಮಿಲಿಯನ್ ಗ್ರಾಹಕರಿದ್ದರು. ಇವರಲ್ಲಿ 75 ಮಿ. ಮಾಸಿಕ ಸಕ್ರಿಯ ಉಪಯೋಗಿಸುವ ಗ್ರಾಹಕರು. ಇದರಿಂದ ಈ ಸಂಸ್ಥೆ ಆ ವರ್ಷ 1.6 ಬಿಲಿಯನ್‌ ಡಾಲರ್‌ ಗಳಿಸಿತು! ಅದು ಹಿಂದಿನ ವರ್ಷಕ್ಕೆ ಹೋಲಿಸಿದಾಗ 17% ಮೀರಿತ್ತು. ಟಿಂಡರ್‌ ನ 60% ಗ್ರಾಹಕರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇದರಲ್ಲಿ ಮುಕ್ಕಾಲು ಪಾಲು ಗಂಡಸರು, ಉಳಿದವರು ಹೆಂಗಸರು.

ಇದೇ ತರಹ ಬಂಬ್‌ಟ್ರೂಲಿ ಮ್ಯಾಡ್ಲಿ ಡೇಟಿಂಗ್‌ ಆ್ಯಪ್ಸ್, ಭಾರತದಲ್ಲಿ ಅತಿ ಜನಪ್ರಿಯತೆ ಗಳಿಸಿವೆ. ಹಾಗೆಯೇ FB ‌ಸಹ ಡೇಟಿಂಗ್ ಗಾಗಿ ಬೇರೆಯೇ ವ್ಯವಸ್ಥೆ ಕಲ್ಪಿಸಿದೆ. ಹೀ ಹೀ, ಹ್ಯಾಪನ್‌, ದಿಲ್ ಮಿಲ್‌, ಮ್ಯಾಚ್‌ ಡಾಟ್‌ ಕಾಮ್….. ಇತ್ಯಾದಿ ಡೇಟಿಂಗ್‌ ಆ್ಯಪ್ಸ್ ಮೂಲಕ ಯುವಜನತೆ ರೊಮಾನ್ಸ್ ಲೋಕಕ್ಕೆ ಲಗ್ಗೆ ಹಾಕಬಹುದು.

ಇತ್ತೀಚೆಗೆ ಶುಗರ್‌ ಡ್ಯಾಡಿ ಎಂಬ ಕಾನ್ಸೆಪ್ಟ್ ಹೆಚ್ಚು ಚಾಲ್ತಿಯಲ್ಲಿದೆ. ಇದರ ಪ್ರಭಾವ ಪಾಶ್ಚಾತ್ಯರಲ್ಲಿ ಹೆಚ್ಚು. ಇದರಲ್ಲಿ ಮುದಿ ಶ್ರೀಮಂತರು ಸಂಗಾತಿಗಾಗಿ ಡೇಟ್‌ ಮಾಡಿ, ಅವರು ಕೇಳಿದಷ್ಟು ಹಣ ಸುರಿಯಲು ಮುಂದಾಗುತ್ತಾರೆ. ಆಗ ಸಂಗಾತಿ ಎಲ್ಲದರ ಜೊತೆ ದೈಹಿಕ ಸಂಬಂಧಕ್ಕೂ ಮುಂದಾಗಲೇಬೇಕು.

ಸಹಮತಿಯೊಂದಿಗೆ ಸಂಬಂಧ

ಬೆಂಗಳೂರಿನ 23 ವರ್ಷದ ಅದಿತಿ ಹೇಳುತ್ತಾಳೆ, ಬೇರೆ ಬೇರೆ ಖಾಸಗಿ ಕಂಪನಿಗಳಲ್ಲಿ 3-4 ವರ್ಷ ಸತತ ಕಷ್ಟಪಟ್ಟರೂ ಯಾವ ಪ್ರಮೋಶನ್‌ ಸಿಗಲಿಲ್ಲವಂತೆ. ಆಗ ಹೊಸ ಬಾಸ್‌, ತನ್ನ ಜೊತೆ ದೈಹಿಕ ಸಂಬಂಧ ಬೆಳೆಸಿಕೊಳ್ಳುವ ಹುಡುಗಿಯರಿಗೆ ಬೇಗ ಪ್ರಮೋಶನ್‌ ಕೊಡುತ್ತಾನೆ ಎಂದು ತಿಳಿಯಿತು. ಕೆರಿಯರ್‌ ನಲ್ಲಿ ಹೆಚ್ಚಿನ ಗ್ರೋಥ್‌ ಬಯಸುವ ಹುಡುಗಿಯರು ಇಂಥದಕ್ಕೆಲ್ಲ ಡೋಂಟ್‌ ಕೇರ್‌! ಇವಳೂ ಹಾಗೇ ಮಾಡಿ ಬಯಸಿದ ಪ್ರಮೋಶನ್‌, ಇನ್‌ ಕ್ರಿಮೆಂಟ್‌, ಸೌಲಭ್ಯ ಎಲ್ಲವನ್ನೂ ಪಡೆದಳು. ಹೀಗೆ ತಮ್ಮ ಕೆರಿಯರ್‌ ಬೆಳೆಸಿಕೊಳ್ಳಲು ಇಂದಿನ ಮಾಡೆಲ್ಸ್ ಹಿರಿಕಿರಿ ತೆರೆಯ ನಟ ನಟಿಯರು, ಅವಕಾಶವಾದಿ ಬಾಸ್‌, ಮ್ಯಾನೇಜರ್‌, ಸೀನಿಯರ್ಸ್‌ ಗಳ ದಾಹ ತೀರಿಸಿ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುತ್ತಾರೆ. ಹೀಗೆ ಯಾವ ಮೇಲಧಿಕಾರಿಗಳು ಬಲವಂತ ಪಡಿಸುವುದಿಲ್ಲ, ಸೂಕ್ಷ್ಣ ಅರಿತುಕೊಂಡು ಅಭ್ಯರ್ಥಿಗಳು ತಾವಾಗೇ ಸಹಮತಿಯಿಂದ ಇಂಥವಕ್ಕೆ ಮುಂದಾಗುತ್ತಾರೆ.

ಹೀಗೆ ಅನೇಕ ಕೇಸುಗಳು ಕೋರ್ಟಿನ ಕಟಕಟೆ ಹತ್ತಿವೆ. ಹುಡುಗಿ 18 ಮುಟ್ಟಿರದ ಕಾರಣ ಅವಳ ಬಾಯ್‌ ಫ್ರೆಂಡ್‌ ಇಂಥ ಭಾನಗಡಿ ಮಾಡಿ ಸಿಕ್ಕಿಬೀಳುತ್ತಾನೆ. ಇಲ್ಲಿ ಹುಡುಗಿಯ ಸಹಮತಿ ಗೌಣ, ಅವಳು ಅಪ್ರಾಪ್ತಳೆಂದು ಅವಳ ಕಡೆಯವರು ಈ ಹುಡುಗನನ್ನು ಕೋರ್ಟಿಗೆಳೆದು ಬೇಕಾದ ಮಾನನಷ್ಟ ಪರಿಹಾರ ಪಡೆದುಕೊಳ್ಳುತ್ತಾರೆ. ಕೌಟುಂಬಿಕ ಪ್ರತಿಷ್ಠೆಗಾಗಿ ಹುಡುಗನ ಮನೆಯವರು ತೆಪ್ಪಗಾಗುತ್ತಾರೆ. ಕಾನೂನು ಮಾತ್ರ 18ರ ಹರೆಯವನ್ನೇ `ಪ್ರಾಪ್ತ’ ಎನ್ನುತ್ತದೆ. ಇದರರ್ಥ, ಹುಡುಗಿ ಒಪ್ಪಿದ್ದರೂ, ಅವಳು 18 ದಾಟಿರದ ಕಾರಣ, ಹುಡುಗ ಅವಳೊಂದಿಗೆ ವ್ಯವಹರಿಸಿದರೆ, ಅವನಿಗೆ ಕಾನೂನಿಂದ ಶಿಕ್ಷೆ ತಪ್ಪಿದ್ದಲ್ಲ! 2012ರ ಪ್ರೊಟೆಕ್ಷನ್‌ ಆಫ್ ಚಿಲ್ಡ್ರನ್‌ ಫ್ರಂ ಸೆಕ್ಶುಯೆ್ ‌ಅಫೆನ್ಸಸ್‌ಆ್ಯಕ್ಟ್ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗ/ಹುಡುಗಿ ಹೀಗೆ ಲೈಂಗಿಕವಾಗಿ ಬಳಸಲ್ಪಟ್ಟರೆ. ಅಂಥವರನ್ನು `ಮಕ್ಕಳು’ ಎಂದೇ ಕಾನೂನು ಭಾವಿಸುತ್ತದೆ.

ಇದೇ ಕಾನೂನಿನ ಪ್ರಕಾರ 18 ದಾಟಿದ ನಂತರ ಸಹಮತಿಯಿಂದ ಸೆಕ್ಸ್ ನಡೆಸಿದರೆ ಅಡ್ಡಿಯಿಲ್ಲ. ಇಂಥ ಕೇಸುಗಳಲ್ಲಿ ಹುಡುಗಿ ಮನೆಯ ಕೆಂಗಣ್ಣಿಗೆ ಗುರಿಯಾಗುವ ಅವಳ ಬಾಯ್‌ ಫ್ರೆಂಡ್‌, ರೇಪ್‌ ಮಾಡಿದ್ದಾನೆಂದೇ ಶಿಕ್ಷೆಗೆ ಒಳಗಾಗುತ್ತಾನೆ.

ಸುಖದ ಸಂಭ್ರಮ

ವಿವಾಹಿತರಾಗಿದ್ದೂ ಕೂಡ, ಎಷ್ಟೋ ಜನರು ಮತ್ತೊಬ್ಬರ ಜೊತೆ ಲೈಂಗಿಕ ಸಂಬಂಧ ಹೊಂದುತ್ತಾರೆ. ಅಂಥವರ ಪ್ರಕಾರ ಇದು ತಪ್ಪಲ್ಲ, ನೈತಿಕತೆ ಇಲ್ಲಿ ಗೌಣ! 2014ರಲ್ಲಿ ಭಾರತದಲ್ಲಿ ಗ್ಲೋಬಲ್ ಡೇಟಿಂಗ್‌ ವೆಬ್‌ ಸೈಟ್‌ `ಆ್ಯಶ್ಲೆ ಮ್ಯಾಡಿಸನ್‌’ ಲಾಂಚ್‌ ಗೊಂಡಿತು. ಈ ಮೂಲಕ ನಡೆಸಲಾದ ಸರ್ವೆ ಪ್ರಕಾರ, 76% ಹೆಂಗಸರು ಹಾಗೂ 61% ಗಂಡಸರು ತಮ್ಮ ವಿವಾಹಿತ ಸಂಗಾತಿಗೆ ಹೀಗೆ ದ್ರೋಹ ಮಾಡುವುದನ್ನು ತಪ್ಪು ಎಂದು ಭಾವಿಸುವುದೇ ಇಲ್ಲವಂತೆ.

ಇಬ್ಬರು ಸಂಗಾತಿಗಳು ಪರಸ್ಪರರ ಸಹಮತಿಯಿಂದ ಸೆಕ್ಸ್ ನಡೆಸಿದರೆ, ಅದು ಖಂಡಿತಾ ಬಲವಂತ ಅಲ್ಲ. ತಮ್ಮ ಖಾಸಗಿ ಖುಷಿಗಾಗಿ ಅವರು ಹೀಗೆ ಮಾಡುತ್ತಾರೆ, ಇದಕ್ಕೆ ಅವರೇ ಜವಾಬ್ದಾರರು. ಇದನ್ನು ದೊಡ್ಡ ಫೇವರ್‌ ಮಾಡಿದಂತೆ ಎಂದು ಭಾವಿಸಲೇಬಾರದು. ದೈಹಿಕ ಹಸಿವನ್ನು ಹಿಂಗಿಸಿಕೊಳ್ಳಲು ಇದು ಸಹಜ ಮಾರ್ಗ ಎನಿಸಿದೆ.

ಪ್ರಿಯಾಂಕಾ ಯಾದವ್

ಸರ್ವೆ ಏನು ಹೇಳುತ್ತದೆ?

ನ್ಯಾಷನಲ್ ಫ್ಯಾಮಿಲಿ ಹೆಲ್ಚ್ ಸರ್ವೆ 2015-16ರ ಪ್ರಕಾರ, ಭಾರತದಲ್ಲಿ ಸುಮಾರು 90% ಮಂದಿ, 30 ವರ್ಷಕ್ಕೆ ಮೊದಲೇ ಸೆಕ್ಸ್ ಮುಗಿಸಿರುತ್ತಾರೆ. ಇದರ ಪ್ರಕಾರ ಬಹುತೇಕ ಹುಡುಗರು 20-24, ಹುಡುಗಿಯರು 15-19ರ ಹರೆಯದಲ್ಲೇ ತಮ್ಮ ಮೊದಲ ಸೆಕ್ಸ್ ಎಂಜಾಯ್‌ ಮಾಡಿರುತ್ತಾರೆ.

ಸಂಸ್ಥೆಯ ಡೇಟಾ ಪ್ರಕಾರ, ಭಾರತೀಯ ಗಂಡಸರಿಗೆ ಹೋಲಿಸಿದಾಗ, ಹೆಂಗಸರೇ ಬೇಗ ಲೈಂಗಿಕವಾಗಿ ಸಕ್ರಿಯರಾಗುತ್ತಾರೆ. 15ರ ಹರೆಯದಲ್ಲಿ ಹುಡುಗರಿಗಿಂತ ಹೆಚ್ಚಾಗಿ ಹುಡುಗಿಯರು ಸೆಕ್ಸ್ ಅನುಭವ ಹೊಂದುವ ಅವಕಾಶ ಹೆಚ್ಚು. ಇಲ್ಲಿ 25-49ರ ಹೆಂಗಸರನ್ನು  ಈ ಕುರಿತು ಕೇಳಿದಾಗ, 11% ಹೆಂಗಸರು ತಾವು 15ರ ಹರೆಯದಲ್ಲೇ ಅದನ್ನು ಮುಗಿಸಿದ್ದಾಗಿ ಹೇಳಿದರು. ಆದರೆ ಈ ನಿಟ್ಟಿನಲ್ಲಿ ಗಂಡಸರ ಸಂಖ್ಯೆ 1% ಆಗಿತ್ತು! ಹಾಗಾದರೆ ಸೆಕ್ಸ್ ಫೇರ್ರಾ ಅಂದ್ರೆ ಖಂಡಿತಾ ಇಲ್ಲ, ಇದು ಅವರವರ ಇಷ್ಟಾನಿಷ್ಟಕ್ಕೆ ಬಿಟ್ಟ ಖಾಸಗಿ ವಿಷಯ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ