ಇದೀಗ ಮಕ್ಕಳ ಲಾಲನೆ ಪಾಲನೆ ಅಂದ್ರೆ ಮೊದಲಿಗಿಂತ ಎಷ್ಟೋ ಪಟ್ಟು ಕಷ್ಟಪಡಬೇಕು, ಅಷ್ಟೇ ಅಲ್ಲ, ಹಲವು ಪಟ್ಟು ಹಣ ಜಾಸ್ತಿ ಬೇಕು. ಹಿಂದೆಲ್ಲ ಮಕ್ಕಳು ಹೆಚ್ಚಿದ್ದರು, ಸಾಧನ ಕಡಿಮೆ ಇತ್ತು. ಆಗ ಮಕ್ಕಳು ತಾವೇ ಹೇಗೋ ಬೆಳೆಯುತ್ತಿದ್ದರು. ಅವರ ಊಟತಿಂಡಿ, ಸುರಕ್ಷತೆಯ ಕೆಲಸ ಹೇಗೋ ನಡೆಯುತ್ತಿತ್ತು. ಮುಂದೆ ಅವರ ಭವಿಷ್ಯನ್ನು ಅವರ ಪಾಲಿಗೇ ಬಿಡಲಾಗುತ್ತಿತ್ತು. ಮಗು ಅಂದ್ರೆ ಬಯಕೆಯ ಫಲ, ಯಾವುದೋ ದೈಹಿಕ ಸಮಾಗಮದ ಪರಿಣಾಮ ಅಲ್ಲ. ಅತಿಯಾದ ಪ್ಲಾನ್ ಮಾಡಿ ಮಗು ಹುಟ್ಟಿಸಿಕೊಳ್ಳುವುದು, ಸರ್ಕಾರ ಎಷ್ಟೋ ಕಾನೂನು ಕಟ್ಟಳೆ ವಿಧಿಸಿದ್ದರೂ ಹೇಗೋ ಬೇಕಾದಂಥ ಮಗುವನ್ನೇ ಪಡೆಯುವುದು.
ಆದರೆ ಈ 15-20 ವರ್ಷಗಳ ಕಸರತ್ತಿನ ಪರಿಣಾಮ ಇದೀಗ ಕಾಣುತ್ತಿದೆ. ಮಗುವಿನ ಹುಟ್ಟೇ ಒಂದು ಪ್ಲಾನ್, ನಂತರ ಅವರೇನು ಓದಬೇಕು, ಎಲ್ಲಿ, ಹೇಗೆ, ಮುಂದಿನ ಭವಿಷ್ಯ….. ಇತ್ಯಾದಿ ಎಲ್ಲವನ್ನೂ ಮೊದಲೇ ಟೈಂ ಟೇಬಲ್ ಹಾಕಿಡಲಾಗುತ್ತದೆ. ಹೀಗಾಗಿ ಮಗುವಿನ ಬಗ್ಗೆ ಸಾವಿರಾರು ಆಸೆಗಳನ್ನು ಬೆಳೆಸಿಕೊಳ್ಳುತ್ತಾರೆ, ಅದಕ್ಕೆಂದೇ ಹಣ ಹೂಡಿಕೆ ನಡೆಯುತ್ತಿರುತ್ತದೆ. ಇದರ ಪರಿಣಾಮ, ಹೆತ್ತವರು ಅಪಾರ ಟೆನ್ಶನ್ ಗೆ ಒಳಗಾಗುತ್ತಾರೆ, ಮಕ್ಕಳು ಸಹ ಅದೇ ಪ್ರೆಶರ್ ಕುಕ್ಕರ್ ಒತ್ತಡವನ್ನು ತಾಳಲಾರದೆ ಹಿಂಸೆಗೆ ಒಳಗಾಗುತ್ತವೆ.
ಕಳೆದ ತಿಂಗಳಷ್ಟೇ ಲಖ್ನೌನ ಡೀ ಫಾರ್ಮಾ ರಿಸ್ಟ್ ಪ್ರಕಟವಾದಾಗ, ಅಲ್ಲಿನ ಒಬ್ಬ ವಿದ್ಯಾರ್ಥಿ ಆಶುತೋಷ್ ತನ್ನ ಕೋಣೆಯ ಫ್ಯಾನಿಗೆ ನೇಣು ಹಾಕಿಕೊಂಡಿದ್ದ. ಅವನು ಬರೆದಿದ್ದ ನೋಟ್ ನಲ್ಲಿ, “ನನಗಂತೂ ನಾನು ಏನೂ ಮಾಡಲಾರೆ ಅಂತ ಅನ್ಸುತ್ತೆ. ಮಮ್ಮಿ ಡ್ಯಾಡಿ ಕನಸು ನನಸಾಗಿಸಲಾರೆ….. ನನ್ನನ್ನು ಕ್ಷಮಿಸಿಬಿಡಿ….”
22ರ ಹರೆಯದ ಈ ಹುಡುಗ ಇಷ್ಟು ಹೊತ್ತಿಗೆ ಆ ಕುಟುಂಬದ ಗಳಿಸುವವನಾಗಿರುತ್ತಿದ್ದ. ಆದರೆ ಅವನು ಮನೆಗೆ ಭಾರವಾದ, ಅತ್ಯಧಿಕ ಒತ್ತಡದಲ್ಲಿ ಅವನು ಸಹಜವಾಗಿ ಓದಿನಲ್ಲಿ ಹಿಂದುಳಿದ.
ಹೀಗಾಗಿ ಸಮಾಜ ಚಿಂತಕರು ಇಂದಿನ ತಾಯಿ ತಂದೆಯರಿಗೆ ಮಕ್ಕಳ ಮೇಲೆ ಓದಿಗಾಗಿ ಹೆಚ್ಚಿನ ಒತ್ತಡ ಹೇರಬೇಡಿ ಎಂದು ಹೇಳುತ್ತಿರುತ್ತಾರೆ. ಅವರಿಗೆ ಇಷ್ಟವಾದ ಕೆಲಸ ಮಾಡಲಿ ಅಂತಾರೆ. ಜನಪ್ರಿಯ ಚಿತ್ರ `3 ಈಡಿಯಟ್ಸ್’ನ ಮುಖ್ಯ ಗುರಿ ಇದೇ ಆಗಿತ್ತು. ಫುಲ್ ಡಿಗ್ರಿ ಪಡೆದು ಅಧಿಕ ಸಂಬಳ ಗಳಿಸುವುದೇ ಜೀವನವಲ್ಲ ಎಂದು ಇದು ಸಾರಿತ್ತು. ಜೀವನದಲ್ಲಿ ಬೇರೆ ಏನೇನೋ ಮಾಡಿ ಖಂಡಿತಾ ಯಶಸ್ಸು ಗಳಿಸಬಹುದು. ಹೆತ್ತವರು ತಮ್ಮ ಮಗುವಿನ ಕಡೆ ಹೆಚ್ಚು ಮಮತೆ ಹರಿಸುತ್ತಾರೆ, ಅವರನ್ನು ಅತಿ ಖ್ಯಾತಿವೆತ್ತ ದುಬಾರಿ ಶಾಲೆಗಳಿಗೆ ಸೇರಿಸುತ್ತಾರೆ. ಅವರಿಗಾಗಿ ನೀರಿನಂತೆ ಹಣ ಖರ್ಚು ಮಾಡುತ್ತಾರೆ. ಕೋಚಿಂಗ್ ಕ್ಲಾಸುಗಳಿಗೆ ಹಣ ಸುರಿಯುತ್ತಾರೆ, ಹೀಗಾಗಿ ಮಕ್ಕಳ ಬಗ್ಗೆ ಅತಿ ಹೆಚ್ಚಿನ ನಿರೀಕ್ಷೆ ಇರುತ್ತದೆ. ಇದು ಇಂದಿನ ಯುವಜನತೆಗೆ ತೂಗುಗತ್ತಿಯಾಗಿದೆ. ಕನಸು ನನಸಾಗಲೇಬೇಕು ಇಲ್ಲ ಸರ್ವನಾಶ ಆಗಿಹೋಗಬೇಕು ಎಂದಾಗಿದೆ!
ಮಕ್ಕಳ ಬಗ್ಗೆ ನಿರೀಕ್ಷೆ ತಪ್ಪೇನಲ್ಲ, ಏಕೆಂದರೆ ಮುಕ್ಕಾಲು ಪಾಲು ಜನ ಹೀಗೆಯೇ ಯಶಸ್ಸು ಕಾಣುವುದು. ಒತ್ತಡ ಹೆಚ್ಚದಿದ್ದರೆ ಅವರಿಂದ ಹೊಸ ಕೆಲಸ ಆಗದು. ಅಂದಿನ ಕಾಲದ ಈಜಿಪ್ಟ್ನಲ್ಲಿ ಕಂದಾಚಾರಿಗಳ ಅಪಾರ ಒತ್ತಡಕ್ಕೆ ಮಣಿದು ಅಲ್ಲಿನ ಫ್ಯಾರೋ ಪಿರಮಿಡ್ ಮಾಡಿಸಿದ್ದಂತೆ. ಇದನ್ನು ಕಂಡು ಇಂದಿನ ಆಧುನಿಕ ಎಂಜಿನಿಯರ್ ಸಹ ಬೇಸ್ತು ಬೀಳುವಂತಿದೆ.
ಹೆಚ್ಚಿನ ಒತ್ತಡದಿಂದಾಗಿಯೇ, ಮಾನವರು ಆಫ್ರಿಕಾದ ದಟ್ಟ ಕಾಡುಗಳಲ್ಲಿ ಸುಳಿದು ಬೆಟ್ಟಗುಡ್ಡ ಹತ್ತಿಳಿದು, ನದಿಸಾಗರ ದಾಟಿ, ವಿಶ್ವದ ಹೊಸ ಹೊಸ ಮಾರ್ಗ ಕಂಡುಹಿಡಿದರು. ಆ ಕಾಲದ ಮಾನವರು ಇಂಥ ರೋಮಾಂಚನಕಾರಿ ಪ್ರವಾಸಕ್ಕಾಗಿ ತಮ್ಮ ಹುಟ್ಟೂರಿನಿಂದ 100-200 ಕಿ.ಮೀ. ಕೇವಲ 8-10 ದಿನಗಳಲ್ಲೇ ಪೂರೈಸುತ್ತಿದ್ದರು, ಅದೂ ಕಡು ಕಷ್ಟದಿಂದ.
ಇಂದಿನ ತಾಯಿ ತಂದೆಯರ ಮೇಲೆ ದೋಷ ಹೇರಿ ಅವರಿಗೆ ಗಿಲ್ಟ್ ಫೀಲ್ ಆಗಿಸುವುದು ಸರಿಯಲ್ಲ. ಇದರ ಹಿಂದಿನ ಭ್ರಾಂತಿ ಎಂದರೆ ಪ್ರತಿಯೊಬ್ಬರ ಅದೃಷ್ಟ ಮೊದಲೇ ಹಣೆಬರಹದ ರೂಪದಲ್ಲಿ ಬರೆಯಲ್ಪಟ್ಟಿರುತ್ತದೆ ಅಂತ. ಆದರೆ ಇಂದಿನ ಕಾಲದಲ್ಲಿ ನಾವು ಟೆಕ್ನಾಲಜಿ ಕಂಡಿದ್ದೇವೆ, ಅದರ ಸುಖ ಕಂಡಿದ್ದೇವೆ, ಪರಿಶ್ರಮಗುರಿ ನಮ್ಮ ಪ್ರಯತ್ನದ ಪರಿಣಾಮ ಆಗಿದೆ.
ಕೊರೋನಾ ವ್ಯಾಕ್ಸಿನ್ ನ ತಯಾರಿಗೆ ಸಾವಿರಾರು ವೈದ್ಯರು ಹಗಲೂರಾತ್ರಿ ದುಡಿದು ಯಶಸ್ಸು ಕಂಡರು. ವಿಶ್ವವಿಡೀ ಕ್ಯಾನ್ಸರ್ ವಿರುದ್ಧ ಜಯ ಗಳಿಸಲು ಹೋರಾಟ ಇನ್ನೂ ಮುಂದುವರಿದಿದೆ. ಸೋಲಾರ್ ಪವರ್ ಬಳಕೆ ದಿನೇ ದಿನೇ ಹೆಚ್ಚುತ್ತಿದೆ, ಆಗ ಕಾರ್ಬನ್ ಫುಟ್ ಪ್ರಿಂಟ್‌ಎಷ್ಟೇ ಕಡಿಮೆ ಆಗುತ್ತದೆ.
ಇಂದಿನ ತಾಯಿ ತಂದೆ ತಾವೇ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುತ್ತಿರುವ ದೋಷಿಗಳು ಎಂಬ ಗಿಲ್ಟ್ ನಿಂದ ಖಂಡಿತಾ ಮುಕ್ತರಾಗಬೇಕು. ದೋಷ ಖಂಡಿತಾ ಬೇರೆಲ್ಲೋ ಇದೆ! ಇದು ಖಂಡಿತಾ ಧರ್ಮದ್ದೇ, ಪೂಜಾ ವಿಧಾನಗಳಿಂದ ಮಕ್ಕಳ ಮೇಲೆ ಒತ್ತಡ ಉಂಟಾಗಿದೆ. ಇಂಟರ್ ನೆಟ್ ನಿಂದ ಮೊಬೈಲ್ ಒದಗಿಸುವ ಭ್ರಾಂತಿಕಾರಕ ಮಹಾಪೂರದ ಮಾಹಿತಿಗಳ ಒತ್ತಡ ಇರಬಹುದು. ಶಾಲೆಗಳ ಪ್ರಬಂಧಕರು ತಮ್ಮ ಕೋಚಿಂಗ್ ಬಿಸ್ ನೆಸ್ ಸುಧಾರಿಸಲು ಮಕ್ಕಳ ಗಂಟೆಗಟ್ಟಲೆ ಅಮೂಲ್ಯ ಸಮಯ ಹಾಳು ಮಾಡುತ್ತಿರುವ ಒತ್ತಡ ಇರಬಹುದು. ಕೋಚಿಂಗ್ ಕ್ಲಾಸ್ ಗಳ ಜಾಹೀರಾತಿನ ಮೂಲಕ ಗ್ರಾಹಕರ ಮೇಲೆ ಆಮಿಷದ ಒತ್ತಡ ಇರಬಹುದು. ಒಮ್ಮೆ ಇವರ ಜಾಲಕ್ಕೆ ಸಿಕ್ಕವರು ಒದ್ದಾಡುತ್ತಿದ್ದರೆ, ಅವರು ಹೊಸ ಮೀನಿನ ಬೇಟೆಯಲ್ಲಿರುತ್ತಾರೆ.
22ರ ಆಶುತೋಶ್ ತಾನು ಯಾವ ಕನಸನ್ನು ನನಸಾಗಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆನೋ ಇದು ಎಷ್ಟು ಸರಿ ಎಂದು ಮತ್ತೆ ಮತ್ತೆ ಯೋಚಿಸಬೇಕಿತ್ತು. ಅವನು ಸತ್ತ ಮಾತ್ರಕ್ಕೆ ಅವನ ತಾಯಿ ತಂದೆಯರ ಆಶೋತ್ತರ ಈಡೇರದು. ಇವನು ಬದುಕಿದ್ದಿದ್ದರೆ, ಆ ತಾಯಿ ತಂದೆಗೆ ಈಗಿನ ದುಃಖದ ಸ್ಥಿತಿ ಎಷ್ಟೋ ಕಡಿಮೆ ಆಗಿರುತ್ತಿತ್ತು. ಕನಸು ಕಾಣುತ್ತಿರುವ ಹೆತ್ತವರದೂ ಇದು ದೋಷವಲ್ಲ. ತಮ್ಮ ಕೈಲಾದ ಪ್ರಯತ್ನ ಮಾಡಿದ್ದೇವೆ ಎಂಬ ತೃಪ್ತಿ ಮುಖ್ಯ.
ವಿಚ್ಛೇದನ ಒಂದೇ ಪರಿಹಾರ ಅಲ್ಲ
ಪತಿಪತ್ನಿ ತಮ್ಮ ಸಂಬಂಧ ಜೋಡಿಸುವುದೇ ಪರಸ್ಪರರ ಸುರಕ್ಷತೆ, ಸಾಂಗತ್ಯ, ದಾಂಪತ್ಯ, ಮಕ್ಕಳ ಜವಾಬ್ದಾರಿ ನಿರ್ವಹಿಸಲು. ಹೀಗಾಗಿಯೇ ಮದುವೆ ಇಬ್ಬರು ಯೌವನಸ್ಥರ ಮಧ್ಯೆ ನಡೆಯುತ್ತದೆ. ಆ ಸಮಯದಲ್ಲಿ ಅವರ ಬಳಿ ತಮ್ಮದೇ ಆದ ಸ್ವಂತ ಮನೆ ಇರುವುದಿಲ್ಲ ಎಂಬುದು ವ್ಯಾವಹಾರಿಕ, ಹೀಗಾಗಿ ಹಿರಿಯರ ಜೊತೆ ವಾಸಿಸುತ್ತಾರೆ. ಆ ಮನೆಗೆ ಬಂದ ಹೆಣ್ಣು ಆ ಕುಟುಂಬದ ಗೌರವಾದರಕ್ಕೆ ತನ್ನ ಸಹಯೋಗ ನೀಡುತ್ತಾಳೆ.
ಮದುವೆಯ ಷರತ್ತಿನಲ್ಲಿ ಅತ್ತೆ ಮಾವಂದಿರ ಸೇವೆ ಅನಿವಾರ್ಯವೇ? ಇತ್ತೀಚೆಗೆ ಹುಡುಗಿಯ ಹೆತ್ತವರೂ ಸಹ ಈ ಸೇವೆ ಬಯಸುತ್ತಿದ್ದಾರೆ, ಅದರಲ್ಲೂ ಒಬ್ಬಳೇ ಮಗಳಿರುವ ಹೆತ್ತವರು. ಸೊಸೆ ಅತ್ತೆ ಮಾವನ ಸೇವೆ ಮಾಡುವಂತೆ ಅಳಿಯನೂ ತನ್ನ ಅತ್ತೆ ಮಾವನ ಸೇವೆ ಮಾಡಬೇಕೇ?
ಇತ್ತೀಚೆಗೆ ಕೋಲ್ಕತಾದ ಹೈಕೋರ್ಟ್ ನಲ್ಲಿ ಇಂಥ ತೀರ್ಪು ಹೊರಬಿತ್ತು. ಮಗ ಆದವನು ತನ್ನ ತಾಯಿ ತಂದೆಯರ ಹಿತರಕ್ಷಣೆಗಾಗಿ ಮನೆ ನೀಡಿ, ಸೇವೆ ಮಾಡಬೇಕು ಅಂತ. ಇಂಥ ಮಗನ ಪತ್ನಿ, ಅವನನ್ನು ಹೆತ್ತವರಿಂದ ಅಗಲಿಸಲು ಪ್ರಯತ್ನಿಸಿದರೆ, ಆ ಪತಿ ಅವಳಿಂದ ವಿಚ್ಛೇದನ ಹೊಂದಬಹುದಂತೆ! ಭಾರತೀಯ ಸಂಸ್ಕೃತಿಯ ಹೆಸರಲ್ಲಿ ಆ ಕೋರ್ಟಿನ ಜಡ್ಜ್ ಕೇವಲ ಆ ಪತ್ನಿಗೆ ಮಾತ್ರವಲ್ಲದೆ, ಇಡೀ ಸಮಾಜಕ್ಕೇ ಒಂದು ಉಪದೇಶ ನೀಡಿದ್ದಾರೆ. ಪತಿ ಹಾಗೂ ಆತನ ತಾಯಿ ತಂದೆಯರ ಸೇವೆ ಮಾಡದಿದ್ದರೆ ಅದು ವೈವಾಹಿಕ ಅಪರಾಧ ಅಂತ. ಇದು ಪತ್ನಿಯ ಕ್ರೂರತೆಯಾಗಿ, ವಿಚ್ಛೇದನಕ್ಕೆ ದಾರಿ ಆಗುತ್ತದೆ.
ಪತಿಪತ್ನಿಯರಲ್ಲಿ ಸಾಮರಸ್ಯ ಉಳಿಯದೇ ಹೋದಾಗ, ಅವರಿಬ್ಬರ ಮಧ್ಯೆ ವಿಚ್ಛೇದನ ಅನಿವಾರ್ಯ. ಇವರಿಬ್ಬರ ಮಧ್ಯೆ ಸಹಜ ಪ್ರೇಮ ಇಲ್ಲದಿದ್ದಾಗ ಕಾನೂನು, ಸಮಾಜ, ಕೋರ್ಟುಗಳು ದಾಂಪತ್ಯ ಮುಂದುವರಿಸುವಂತೆ ಹೇಗೆ ಒತ್ತಡ ಹೇರಲು ಸಾಧ್ಯ? ವೈವಾಹಿಕ ಜೀವನ ಇಡೀ ಜೀವನಪೂರ್ತಿ ನಡೆಸುವಂಥದ್ದು, ಮುಂದಿನ ಜನ್ಮಕ್ಕೂ ಒದಗುವಂಥದ್ದು ಎಂದೆಲ್ಲ ಹೇಳುವುದೇ ಮಹಾ ತಪ್ಪು. ಇದನ್ನು ಸಮಾಜ ಅಥವಾ ಕಾನೂನು ಇಂದಿನ ಯುವ ದಂಪತಿ ಮೇಲೆ ಹೇರುವಂತಿಲ್ಲ.
ಆಧುನಿಕ ಪತ್ನಿ ತನ್ನ ಪತಿಯ ಹೆತ್ತವರ ಜೊತೆ ವಾಸಿಸಲು ಬಯಸದಿದ್ದರೆ, ಪತಿ ಹೆತ್ತವರನ್ನು ಬಿಡಲಾರೆ ಎಂದರೆ, ಆ ಕಾರಣವಾಗಿ ಈ ಪತಿಪತ್ನಿಯರ ಸಂಬಂಧ ಮುರಿದರೆ, ಆಗ ವಿಚ್ಛೇದನ ಒಂದೇ ದಾರಿ ಆಗುತ್ತದೆ. ಕೋರ್ಟಿನ ಕಟಕಟೆ ಹತ್ತಿದ ಮೊದಲ ವಿಚಾರಣೆಯಲ್ಲೇ ಇದನ್ನು ಕ್ಲಿಯರ್ ಆಗಿಸಬೇಕು. ಈ ಪತಿಪತ್ನಿಯರ ಹೆತ್ತವರಿಗೆ, ಇವರನ್ನು ಹೊತ್ತು ಹೆತ್ತು ಸಾಕಿದ್ದೇವೆ ಎಂಬುದಕ್ಕಾಗಿ ವಯಸ್ಸಾದ ಕಾಲದಲ್ಲಿ ತಮ್ಮನ್ನು ಅವರು ನೋಡಿಕೊಳ್ಳಬೇಕು ಎಂದು ಬಯಸುವುದು, ತಾವು ಸಾಕ್ಕಿದ್ದಕ್ಕೆ ಕೂಲಿ ಕೇಳಿದಂತೆ! ಇದಕ್ಕೆ ಯಾವುದೇ ಸಾಮಾಜಿಕ, ನೈತಿಕ, ಕಾನೂನಿನ ಹಕ್ಕು ಅಡ್ಡಿ ಆಗಬಾರದು. ಬದಲಿಗೆ, ಯುವ ಜೋಡಿ ತಾನಾಗಿ ಈ ಹಿರಿಯರ ಜೊತೆ ಒಂದೇ ಮನೆಯಲ್ಲಿ ವಾಸಿಸಿದರೆ, ಅವರನ್ನು ಹಿರಿಯರೇ ಸಂತಸದಿಂದ ಇರಿಸಿಕೊಂಡು, ತಮ್ಮ ಖರ್ಚಿನಲ್ಲೇ ಮನೆ ನಡೆಸುತ್ತಾ, ಷರತ್ತು ಅನ್ವಯಿಸ ಬಯಸಿದರೆ ಅದು ಬೇರೆ ಮಾತು. ಆಗ ಈ ಯುವ ಜೋಡಿ ಏನೂ ಅಡ್ಡಿ ಮಾಡುವಂತಿಲ್ಲ.
ಭಾರತೀಯ ಸಂಸ್ಕತಿಯಲ್ಲಿ, ಪತಿ ತನ್ನ ಪತ್ನಿಗೆ ಕೌಟುಂಬಿಕ ಯಾವ ಧಾರ್ಮಿಕ ನೆಪವೊಡ್ಡಿ ಶಿಕ್ಷಿಸುವುದು ಸಾವಿರಾರು ಪ್ರಕರಣಗಳಲ್ಲಿ ಕಂಡು ಬಂದಿದೆ. ಸತಿ ಸಹಗಮನ, ವಿಧವೆಗೆ ಕೇಶಮುಂಡನ, ಬಿಳಿ ಸೀರೆ ಉಡಿಸುವುದು…. ಇವೆಲ್ಲದರ ಪರಿಣಾಮ. ಗಂಡನ ಆಯುಸ್ಸಿಗಾಗಿ ವ್ರತ, ಉಪವಾಸ, ಪೂಜೆ ಪುನಸ್ಕಾರ ಇದೇ ಮಾದರಿಯವು. ಇಲ್ಲಿ ಪತ್ನಿ ಸಾಮಾಜಿಕ ಗುಲಾಮಳೇ ಸರಿ. ಇಂಥ ಸಾವಿರಾರು ಕಥೆಗಳು ನಮ್ಮ ಗ್ರಂಥದಲ್ಲಿದೆ. ಈ ಗ್ರಂಥಗಳ ಮಹಿಮೆ ಹಾಡುವವರೇ ಯಾವ ರೀತಿ ಪತ್ನಿಯನ್ನು ದೂರವಿರಿಸಿದ್ದಾರೆ ಎನ್ನುವುದೂ ಜಗಜ್ಜಾಹೀರು.
ಪತಿಪತ್ನಿ ತಮ್ಮ ಅತ್ತೆ ಮಾವಂದಿರ ಸೇವೆ ಮಾಡುವುದು ಬಿಡುವುದು ಅವರವರಿಗೇ ಬಿಟ್ಟದ್ದು. ಜವಾಬ್ದಾರಿಯುತ ದಂಪತಿ ಇದರಿಂದ ಹಿಮ್ಮೆಟ್ಟುವುದಿಲ್ಲ. ಸಂಸ್ಕೃತಿಯ ನೆಪವೊಡ್ಡಿ ಬಲವಂತವಾಗಿ ಸೇವೆ ಬಯಸುವುದು ತಪ್ಪು. ಕೋಲ್ಕತಾ ಹೈಕೋರ್ಟ್ ವಿಚ್ಛೇದನ ಕೊಡಿಸಿದ್ದೇನೋ ಸರಿ, ಆದರೆ ಸಂಪ್ರದಾಯ ಸಂಸ್ಕೃತಿಗಳನ್ನು ನಡುವೆ ಎಳೆತಂದು, ಆ ಪತ್ನಿಯನ್ನು ಅಪರಾಧಿ ಮಾಡಿದ್ದು ಖಂಡಿತಾ ಸರಿಯಲ್ಲ.
ಲೂಟಿ ಮಾಡಬಹುದಾದರೆ ಮಾಡಿಕೊಳ್ಳಿ
ಧರ್ಮ ಎಂಬುದು ಒಂದು ಲೂಟಯ ದಂಧೆ. ಇದನ್ನು ದಶಕಗಳಿಂದ ಇಲ್ಲಿ ಚರ್ಚಿಸಲಾಗಿದೆ, ಆದರೆ ಧರ್ಮಾಂಧ ಭಕ್ತರು ಕಿವಿಗೊಟ್ಟರೆ ತಾನೇ? ಧರ್ಮದ ಹೆಸರಲ್ಲಿ ಅಡಿಗಡಿಗೆ ತಮ್ಮ ಲೂಟಿ ಆಗುತ್ತಿದೆ ಎಂದು ಗೊತ್ತಿದ್ದೂ, ಆ ಧರ್ಮದ ಬ್ರೇನ್ ವಾಶ್ ಗೆ ಶರಣಾಗುತ್ತಾರೆ. ಧರ್ಮದ ಈ ಲೂಟಿಯನ್ನೇ ಅದೃಷ್ಟದ ಫಲ ಎಂದು ಭಾವಿಸುತ್ತಾರೆ. ಆಕಸ್ಮಿಕವಾಗಿ ತಾನು ಮಾಡಿದ ಪೂಜೆಗಳ ನಂತರ ತನಗೆ ಬೇಕಾಗಿದ್ದು ಏನೋ ನಡೆಯಿತು ಎಂದಾಗ ಅದು ಧರ್ಮದ ವರಪ್ರಸಾದ ಎಂದೇ ನಂಬುತ್ತಾರೆ.
ಈ ನಿಟ್ಟಿನಲ್ಲಿ ಚಾರ್ ಧಾಮ್ ತೀರ್ಥಯಾತ್ರೆಗಳ ಪ್ರಚಾರ ಬೇಕಾದಷ್ಟು ಜೋರಾಗಿ ನಡೆಯಿತು. ಈ ಮೂಲಕ ಲಕ್ಷಾಂತರ ಕಂದಾಚಾರಿಗಳ ಹಣವನ್ನು ಪ್ರವಾಸ, ಪೂಜೆ ಪುನಸ್ಕಾರದ ಹೆಸರಲ್ಲಿ ಲೂಟಿ ಮಾಡಲಾಯಿತು. ಇಷ್ಟು ಮಾತ್ರವಲ್ಲ, ಚಾರ್ ಧಾಮ್ ಹೆಸರಲ್ಲಿ ಈ ಕಂಪ್ಯೂಟರ್ ಯುಗದಲ್ಲೂ ಅವರನ್ನು ಮರುಳು ಮಾಡಿ ಅಲ್ಲಿಗೆ ಹೊರಡಿಸಲಾಗುತ್ತಿದೆ. ಆ ಯಾತ್ರಾ ಸ್ಥಳಗಳ ಅಂತರ್ಯಾಮಿ ದೇವರು ಸಹ ಈ ಲೂಟಿಯನ್ನು ನಿಲ್ಲಿಸಲು ಅಸಮರ್ಥನಾಗಿದ್ದಾನೆ.
ಸೈಬರ್ ಠಕ್ಕರು ಈ ಯಾತ್ರಾ ಸ್ಥಳಗಳ ಪ್ರವಾಸದ ಬುಕ್ಕಿಂಗ್ ಗಾಗಿ ನಕಲಿ ವೆಬ್ ಸೈಟ್ ಕ್ರಿಯೇಟ್ ಮಾಡಿರುತ್ತಾರೆ. ಗೂಗಲ್ ನವರಿಗೆ ಲಂಚ್ ನೀಡಿ ಇದನ್ನು ಅಗ್ರ ಶ್ರೇಣಿಗೆ ಬರಿಸಿಕೊಳ್ಳುತ್ತಾರೆ. ಮೂಢಜನತೆ ಈ ವೆಬ್ ಸೈಟ್ ಗಳ ಸೌಲಭ್ಯ, ಪರ್ಫೆಕ್ಟ್ ಬುಕ್ಕಿಂಗ್, ಟೈಂ, ಬೆಲೆ, ಜಾಗಗಳ ವಿವರ ಪಡೆದು, ಖಂಡಿತಾ ನಂಬಿಕೆ ಬೆಳೆಸಿಕೊಳ್ಳುತ್ತಾರೆ. ನೆಟ್ ವರ್ಕಿಂಗ್ ಯಾ ಕ್ರೆಡಿಟ್ ಕಾರ್ಡ್ ನಿಂದ ಹಣ ತೆರುತ್ತಾರೆ.
ಈ ಕಿಲಾಡಿ ಜನ ಹೆಲಿಕಾಪ್ಟರ್ ಬುಕ್ಕಿಂಗ್, ಮಂದಿರದ ಟಿಕೆಟ್ ಬುಕ್ಕಿಂಗ್, ಪುರೋಹಿತರ ಖರ್ಚು, ಟ್ರಾವೆಲ್ ಬುಕ್ಕಿಂಗ್, ಹೋಟೆಲ್, ಆರೋಗ್ಯ ಸೇವೆ ಇತ್ಯಾದಿಗಳ ಹೆಸರಲ್ಲಿ ಹಣ ಕೀಳುತ್ತಾರೆ. ಆರಂಭದಲ್ಲಿ ಸೇವೆ ಪಡೆದದ್ದಕ್ಕೆ ಬಹಳ ವಿಚಾರಣೆಯೂ ನಡೆಯುತ್ತದೆ. ಹಣ ಅವರ ಪಾಲಾದಾಗ, ಈ ಭಕ್ತಾದಿಗಳು ಮಾಡುವ ಎಲ್ಲಾ ಕರೆಗಳೂ ಸ್ಥಗಿತಗೊಳ್ಳುತ್ತವೆ. ಈ ರೀತಿ ಅಪ್ರಾಮಾಣಿಕತೆ ತಾಂಡವವಾಡುತ್ತದೆ. ಇವೆಲ್ಲ ಗೊತ್ತಿದ್ದೂ ಧರ್ಮದ ಅಂಧ್ರಶ್ರದ್ಧೆಯಲ್ಲಿ ಜನ ಲೂಟಿಗೆ ಶರಣಾಗುತ್ತಾರೆ. ಹಣ, ಆರೋಗ್ಯ, ಪುಣ್ಯ, ಉನ್ನತಿ ನೀಡಬೇಕಾದ ಧರ್ಮ ಇವರನ್ನು ಸಾಲದ ಮಡುವಿಗೆ ತಳ್ಳುತ್ತದೆ. ಧರ್ಮದ ಹೆಸರಲ್ಲಿ ಇಂಥ ಸ್ವಾರ್ಥಿ ಲೂಟಿಕೋರರು ತಮ್ಮ ಧಂಧೆ ಬೆಳೆಸುತ್ತಲೇ ಇರುತ್ತಾರೆ. ಈ ರೀತಿ ಧರ್ಮ ಜನರನ್ನು ದಾರಿ ತಪ್ಪಿಸುತ್ತದೆ.
ಇದು ಕೇವಲ ನಮ್ಮ ದೇಶದ್ದು ಮಾತ್ರವಲ್ಲ. ವಿಶ್ವವಿಡೀ ಭವ್ಯ ಚರ್ಚು, ಮಸೀದಿ, ಬೌದ್ಧ ವಿಹಾರ, ಗುರುದ್ವಾರ, ಜೈನಮಂದಿರಗಳು ಕೇವಲ ಈ ಭಕ್ತಾದಿಗಳ ಶ್ರಮದ ಹಣವನ್ನು ನುಂಗಿ ನೀರು ಕುಡಿದು ತಾವು ಮೆರೆಯುತ್ತವೆ. ಈ ರೀತಿ ದಾನ ನೀಡಿ ಕಾಲ್ಪನಿಕ ಪುಣ್ಯ ಕಟ್ಟಿಕೊಳ್ಳಿ ಎನ್ನುತ್ತವೆ. ವಿಶ್ವದ ಪ್ರತಿಯೊಂದು ಧರ್ಮದಲ್ಲೂ ಇಂಥ ಕಪಟ, ವಂಚನೆ, ಮೋಸ, ದಗಾ ಕಟ್ಟಿಟ್ಟ ಬುತ್ತಿ. ಹೀಗಾಗಿ ಧರ್ಮದ ಸತ್ಯದರ್ಶನ ದೈವನಿಂದೆ ಎಂಬ ಅಪಖ್ಯಾತಿ ಗಳಿಸಿದೆ. ಆಯಾ ಕಾಲಕ್ಕೆ ಅಧಿಕಾರದಲ್ಲಿರುವವರನ್ನು ಹಿಡಿದು ದೈವನಿಂದೆಯನ್ನು ಅಪರಾಧ ಎಂದು ಘೋಷಿಸಿ ನಾಸ್ತಿಕರನ್ನು ಶಿಕ್ಷಿಸಲಾಗುತ್ತದೆ.
ಯಾ ವೆಬ್ ಸೈಟ್ ಗಳು ಇಂಥ ಮೋಸದ ಜಾಲದಿಂದ ಹಣ ಲೂಟಿ ಮಾಡುತ್ತಿವೆಯೋ, ಅಸಲಿಗೆ ಇಲ್ಲಿಂದಲೇ ಚಂದಾ, ದಾನದ ಹಣ ಸಂಗ್ರಹಿಸುತ್ತಿವೆ. 10 ಸಾವಿರ ನೀಡಿ, ಅಗತ್ಯ ಸಂತಾನಪ್ರಾಪ್ತಿ ಎಂದು ನಂಬಿಸುತ್ತವೆ. ಕೋರ್ಟ್ ಕಛೇರಿ ವ್ಯವಹಾರ, ಷೇರು ಮಾರ್ಕೆಟ್ ದರ ಹೆಚ್ಚಳ, ಸಕಾಲಕ್ಕೆ ವಿವಾಹ ಇತ್ಯಾದಿಗಳ ಕನಸು ತೋರಿಸುತ್ತಾರೆ. ಎಲ್ಲಾ ಕಡೆಯೂ ಲಭ್ಯವಿರುವ ಗೈಡ್ ಗಳು ಧಾರ್ಮಿಕ ವಂಚನೆಗೇ ಮೀಸಲಾಗಿದ್ದಾರೆ. ಏನೇ ಆದರೂ ಭಕ್ತಾದಿಗಳು ಹಣ ಕಳೆದುಕೊಳ್ಳುವುದಂತೂ ಗ್ಯಾರಂಟಿ. ಅದು ದೇವರ ಮುಂದೆ ಗುಡಿಯಲ್ಲಾದರೂ ಸರಿ, ಮಂದಿರಕ್ಕೆ ಹೋಗದೇ ಇಲ್ಲಿದ್ದರೂ ಸರಿ! ಧರ್ಮಾಂಧ ಏಜೆಂಟರ ಜಾಲ ಹಾಗಿದೆ.